Shruti Haasan: 'ನಾನು ಕಮಲ್ ಹಾಸನ್ ಮಗಳಲ್ಲ, ನನ್ನ ಅಪ್ಪ ಡಾ. ರಾಮಚಂದ್ರನ್.. ನನ್ನ ಹೆಸರು ಪೂಜಾ ರಾಮಚಂದ್ರನ್'..!

Published : May 21, 2026, 10:33 AM IST
Shruti Haasan

ಸಾರಾಂಶ

ಚೆನ್ನೈನ ಗಲ್ಲಿ ಗಲ್ಲಿಯಲ್ಲೂ ನಟ ಕಮಲ್ ಹಾಸನ್ ಸಿನಿಮಾ ಪೋಸ್ಟರ್‌ಗಳು, ಜನಜಂಗುಳಿ. ಅಲ್ಲಿ ಶ್ರುತಿಗೆ ಸ್ವತಂತ್ರವಾಗಿ ಬದುಕಲು ಸಾಧ್ಯವೇ ಆಗುತ್ತಿರಲಿಲ್ಲ. ಸಾರಿಕಾ ಮತ್ತು ಕಮಲ್ ಹಾಸನ್ ಬೇರೆಯಾದಾಗ ಶ್ರುತಿ ಮುಂಬೈಗೆ ಶಿಫ್ಟ್ ಆದರು. ಅಲ್ಲಿ ಆಗಿದ್ದೇನು? ಅಪ್ಪನ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ ಶ್ರುತಿ ನೋಡಿ..

ಪೂಜಾ ರಾಮಚಂದ್ರನ್" ಸೀಕ್ರೆಟ್: ಕಮಲ್ ಹಾಸನ್ ಮಗಳು ಅಲ್ವಾ ಶ್ರುತಿ ಹಾಸನ್?

ದಕ್ಷಿಣ ಭಾರತದ ಸಿನಿಮಾ ಅಂದ್ರೆ ಅಲ್ಲಿ 'ಲೋಕನಾಯಕ' ಕಮಲ್ ಹಾಸನ್ (Kamal Haasan) ಅವರದ್ದೇ ಕಾರುಬಾರು. ಅವರ ಮನೆಯಲ್ಲಿ ಹುಟ್ಟಿದ ಮೇಲೆ ಕೇಳಬೇಕೆ? ಹುಟ್ಟುತ್ತಲೇ ಸೆಲೆಬ್ರಿಟಿ ಪಟ್ಟ ಗ್ಯಾರಂಟಿ. ಆದರೆ, ಇಡೀ ಜಗತ್ತು ಕಮಲ್ ಹಾಸನ್ ಅವರ ಅಭಿನಯಕ್ಕೆ ಫಿದಾ ಆಗಿದ್ದರೆ, ಅವರ ಸ್ವಂತ ಮಗಳು ಶ್ರುತಿ ಹಾಸನ್ (Shruti Haasan) ಮಾತ್ರ ಬಾಲ್ಯದಲ್ಲಿ "ನಾನು ಇವರ ಮಗಳಲ್ಲ" ಎಂದು ಸುಳ್ಳು ಹೇಳುತ್ತಾ ಓಡಾಡುತ್ತಿದ್ದರಂತೆ! ಇದೇನಪ್ಪಾ ಸಿನಿಮ್ಯಾಟಿಕ್ ಟ್ವಿಸ್ಟ್ ಅಂದುಕೊಂಡಿದ್ದೀರಾ? ಇಲ್ಲಿದೆ ಅಸಲಿ ಮ್ಯಾಟರ್.

ಅಪ್ಪನ ಸ್ಟಾರ್‌ಡಮ್ ನಡುವೆ ಕಳೆದುಹೋದ ಮಗುವಿನ ಅಳಲು!

ಶ್ರುತಿ ಹಾಸನ್ ಇಂದು ಬಹುಮುಖ ಪ್ರತಿಭೆ. ನಟಿ, ಗಾಯಕಿ, ಸಂಗೀತ ಸಂಯೋಜಕಿ - ಹೀಗೆ ಪ್ರತಿಯೊಂದರಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. ಆದರೆ ಚಿಕ್ಕವಳಿದ್ದಾಗ ಶ್ರುತಿಗೆ 'ಕಮಲ್ ಹಾಸನ್ ಮಗಳು' ಅನ್ನೋ ಟ್ಯಾಗ್ ಒಂದು ದೊಡ್ಡ ಭಾರದಂತೆ ಕಾಣುತ್ತಿತ್ತಂತೆ. ಎಲ್ಲೇ ಹೋದರೂ ಜನ "ಹೇ ನೋಡಿ, ಇವಳು ಕಮಲ್ ಹಾಸನ್ ಮಗಳು ಅಲ್ವಾ?" ಎಂದು ಬೆರಳು ಮಾಡಿ ತೋರಿಸುತ್ತಿದ್ದರೆ, ಪುಟಾಣಿ ಶ್ರುತಿಗೆ ಕಿರಿಕಿರಿ ಆಗ್ತಿತ್ತು. "ನನಗೂ ಒಂದು ಹೆಸರಿದೆ, ನಾನು ಶ್ರುತಿ" ಎಂದು ಕಿರುಚಾಡಬೇಕು ಅನಿಸುತ್ತಿತ್ತಂತೆ.

"ನಾನು ಪೂಜಾ ರಾಮಚಂದ್ರನ್": ಮಗಳ ಖತರ್ನಾಕ್ ಸುಳ್ಳು!

ಹೀಗೆ ಅಪ್ಪನ ಹೆಸರಿನಿಂದ ತಪ್ಪಿಸಿಕೊಳ್ಳಲು ಶ್ರುತಿ ಒಂದು ಪ್ಲಾನ್ ಮಾಡಿದರು. ಶಾಲೆಯಲ್ಲಾಗಲಿ ಅಥವಾ ಹೊರಗಡೆ ಯಾರೇ ಆದರೂ "ನೀನು ಕಮಲ್ ಹಾಸನ್ ಮಗಳಾ?" ಎಂದು ಕೇಳಿದರೆ, "ಅಯ್ಯೋ ಇಲ್ಲವೇ ಇಲ್ಲ, ನನ್ನ ಹೆಸರು ಪೂಜಾ ರಾಮಚಂದ್ರನ್, ನನ್ನ ಅಪ್ಪ ಡಾ. ರಾಮಚಂದ್ರನ್" ಎಂದು ಸಖತ್ ಕಾನ್ಫಿಡೆಂಟ್ ಆಗಿ ಸುಳ್ಳು ಹೇಳುತ್ತಿದ್ದರಂತೆ!

ಟ್ವಿಸ್ಟ್ ಅಂದ್ರೆ, ಈ ರಾಮಚಂದ್ರನ್ ಬೇರೆ ಯಾರೂ ಅಲ್ಲ, ಶ್ರುತಿಯ ಹಲ್ಲು ನೋವಿಗೆ ಟ್ರೀಟ್ಮೆಂಟ್ ಕೊಡುತ್ತಿದ್ದ ದಂತವೈದ್ಯರು! ಪಾಪ, ಆ ಡಾಕ್ಟರ್‌ಗೆ ತಾನು ಶ್ರುತಿ ಹಾಸನ್‌ಗೆ ಅಪ್ಪನಾಗಿ ಪ್ರಮೋಷನ್ ಪಡೆದಿದ್ದೇನೆ ಎಂಬ ವಿಷಯ ಗೊತ್ತೇ ಇರಲಿಲ್ಲ. ತನ್ನದೇ ಆದ ಐಡೆಂಟಿಟಿ ಕ್ರಿಯೇಟ್ ಮಾಡಿಕೊಳ್ಳಲು ಶ್ರುತಿ ಪಟ್ಟ ಈ ಪಾಡು ಈಗ ಕೇಳಲು ತಮಾಷೆ ಎನಿಸಿದರೂ, ಆವತ್ತು ಅದು ಅವರ ಅಸ್ತಿತ್ವದ ಪ್ರಶ್ನೆಯಾಗಿತ್ತು.

ಮುಂಬೈಗೆ ಪಲಾಯನ ಮತ್ತು ಅಪ್ಪನ ನೆರಳು!

ಚೆನ್ನೈನ ಗಲ್ಲಿ ಗಲ್ಲಿಯಲ್ಲೂ ಅಪ್ಪನ ಸಿನಿಮಾ ಪೋಸ್ಟರ್‌ಗಳು, ಜನಜಂಗುಳಿ. ಅಲ್ಲಿ ಶ್ರುತಿಗೆ ಸ್ವತಂತ್ರವಾಗಿ ಬದುಕಲು ಸಾಧ್ಯವೇ ಆಗುತ್ತಿರಲಿಲ್ಲ. ಸಾರಿಕಾ ಮತ್ತು ಕಮಲ್ ಹಾಸನ್ ಬೇರೆಯಾದಾಗ ಶ್ರುತಿ ಮುಂಬೈಗೆ ಶಿಫ್ಟ್ ಆದರು. "ಅಲ್ಲಿ ಕನಿಷ್ಠ ಪಕ್ಷ ನನ್ನನ್ನು ಯಾರೂ ಕಮಲ್ ಮಗಳು ಅಂತ ಪದೇ ಪದೇ ಕಿರಿಕಿರಿ ಮಾಡಲ್ಲ" ಅನ್ನೋದು ಅವರ ಪ್ಲಾನ್ ಆಗಿತ್ತು. ತನ್ನದೇ ದಾರಿಯನ್ನು ಕಂಡುಕೊಳ್ಳಲು, ಕಠಿಣ ಪರಿಶ್ರಮದಿಂದಲೇ ಇಂದು ಶ್ರುತಿ ಸಿನಿಮಾ ರಂಗದಲ್ಲಿ ಮಿಂಚುತ್ತಿದ್ದಾರೆ.

ಈಗಿನ ರಿಯಲೈಜೇಶನ್!

ಅಂದು ಅಪ್ಪನ ಹೆಸರಿನಿಂದ ಓಡಿ ಹೋಗುತ್ತಿದ್ದ ಶ್ರುತಿ, ಇಂದು ಬದಲಾಗಿದ್ದಾರೆ. "ಈಗ ಕಮಲ್ ಹಾಸನ್ ಹೆಸರಿಲ್ಲದ ಶ್ರುತಿಯನ್ನು ಕಲ್ಪಿಸಿಕೊಳ್ಳಲು ಕೂಡ ನನಗೆ ಸಾಧ್ಯವಿಲ್ಲ" ಎನ್ನುವ ಮೂಲಕ ಅಪ್ಪನ ಮೇಲಿರುವ ಗೌರವವನ್ನು ವ್ಯಕ್ತಪಡಿಸಿದ್ದಾರೆ.

ಕಮಲ್ ಹಾಸನ್ ಮತ್ತು ನಟಿ ಸಾರಿಕಾ ಅವರ ಹಠಮಾರಿ ಗುಣವೇ ಮಕ್ಕಳಿಗೆ ಬಂದಿರಬೇಕು. ಅದಕ್ಕೇ ಅಲ್ವಾ, ಇಂದಿಗೂ ಶ್ರುತಿ ಹಾಸನ್ ಯಾವ ಬ್ಯಾಕ್‌ಗ್ರೌಂಡ್ ಸಹಾಯವಿಲ್ಲದೆ ತನ್ನದೇ ಆದ 'ಹ್ಯಾಂಡ್ಸಮ್' ಕೆರಿಯರ್ ರೂಪಿಸಿಕೊಂಡಿರೋದು! ಒಟ್ಟಿನಲ್ಲಿ, ಅಪ್ಪನ ಸ್ಟಾರ್‌ಡಮ್‌ನಿಂದ ತಪ್ಪಿಸಿಕೊಳ್ಳಲು 'ಪೂಜಾ ರಾಮಚಂದ್ರನ್' ಆಗಿದ್ದ ಶ್ರುತಿ, ಇಂದು ಇಡೀ ಭಾರತವೇ ಹೆಮ್ಮೆಪಡುವ ಸ್ಟಾರ್ ನಟಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Trisha: 'ಮೇ ಮ್ಯಾಜಿಕ್, ಇನ್ನೊಂದು ಗೆಲುವಿಗೆ' ಎಂದ ತ್ರಿಷಾ.. 'ದಳಪತಿ' ಗೆಲುವಿಗೆ ಕನೆಕ್ಟ್ ಮಾಡಿಕೊಂಡು ನೆಟ್ಟಿಗರು ಹೇಳ್ತಿರೋದೇನು?
ಅವನ ಫ್ರೆಂಡ್ ಹುಡುಗಿ ತರ ದುಪಟ್ಟಾ ಹಾಕೊಂಡಿದ್ದ: ಬೀಚ್ ಘಟನೆ ಬಿಚ್ಚಿಟ್ಟ ನಟಿ ರಂಜಿನಿ!