
ಶ್ರುತಿ ಹಾಸನ್ ಸೋಷಿಯಲ್ ಮಿಡಿಯಾದಲ್ಲಿ ಆಕ್ಟಿವ್ ನಟಿ. ಟಾಲಿವುಡ್ ಮತ್ತು ಕಾಲಿವುಡ್‌ನಲ್ಲಿ ಮಿಂಚುತ್ತಿರುವ ಚೆಲುವೆ ನಿನ್ನೆಯಷ್ಟೇ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ಈ ಬಾರಿ ನಟಿಯ ಜೊತೆಗಿದ್ದ ಆ ಸ್ಪೆಷಲ್ ಪರ್ಸನ್ ಯಾರು..?
35ನೇ ವರ್ಷದ ಹುಟ್ಟು ಹಬ್ಬ ಆಚರಿಸಿ ಫ್ಯಾನ್ಸ್‌ಗೆ ಥ್ಯಾಂಕ್ಸ್ ಹೇಳಿದ ನಟಿಯ ಫೋಟೊ ವೈರಲ್ ಅಗಿದೆ. ಟ್ಯಾಟೂ ಹಾಕ್ಕೊಂಡಿರೋ ಹ್ಯಾಂಡ್ಸಮ್ ಹುಡುಗನ ತೋಳಲ್ಲಿ ಶ್ರುತಿ ಹಾಸನ್ ನಗುವ ಫೋಟೋ ವೈರಲ್ ಆಗಿದೆ.
ಅಕ್ಕ ಜೈಲಿಂದ ಬಂದಿದ್ರೆ ಮಂಗಗಳ ಜೊತೆ ಫನ್ ಮಾಡ್ತಿದ್ದಾರೆ ತಂಗಿ
ಶಂತನು ಹಝಾರಿಕಾ ಎಂಬಾತ ಶ್ರುತಿ ಹಾಸನ್ ಜೊತೆಗಿನ ರೊಮ್ಯಾಂಟಿಕ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾನೆ. ಇದೀಗ ಈ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.
ಆತ್ಮೀಯ ಸ್ನೇಹಿತರು ಮತ್ತು ಆಪ್ತರಷ್ಟೇ ಶ್ರುತಿ ಬರ್ತ್‌ಡೇಯಲ್ಲಿ ಭಾಗಿಯಾಗಿದ್ದರು. ನಟಿಯ ಜೊತೆಗಿನ ಫೋಟೋ ಶೇರ್ ಮಾಡಿ ಹ್ಯಾಪಿ ಬರ್ತ್‌ಡೇ ಪ್ರಿನ್ಸಸ್ ಎಂದು ಬರೆದಿದ್ದಾರೆ ಶಂತನು.
ಸೋನುಗಾಗಿ 2 ಸಾವಿರ ಕಿಮೀ ಸೈಕಲ್ ಯಾನ: ಕಾರಣ ಇಂಟ್ರೆಸ್ಟಿಂಗ್
ಅಂದಹಾಗೆ ಈ ಶಂತನು ದೆಹಲಿ ಮೂಲದ ಡೂಡಲ್ ಆರ್ಟಿಸ್ಟ್. 2014ರ ಡೂಡಲ್ ಆರ್ಟ್ ಸ್ಪರ್ದೆಯಲ್ಲಿ ಬೆಸ್ಟ್ ಡೂಡಲ್ ಆರ್ಟಿಸ್ಟ್ ಅವಾರ್ಡ್‌ನ್ನು ಗೆದ್ದಿದ್ದಾನೆ ಈತ.
ಸದ್ಯ ಶ್ರುತಿ ಹಾಸನ್ ವಿಜಯ್ ಸೇತುಪತಿಯ ಲಾಬಂನಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಸಾಯಿ ಧನ್ಶಿಕಾ, ಜಗಪತಿ ಬಾಬು, ರಮೇಶ್ ತಿಲಕ್, ಶನ್ಮುಗ ರಾಜನ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.