Ganesh Chaturthi 2025: ಈ ಬಾರಿ ಗಣೇಶೋತ್ಸವದಲ್ಲಿ ಶಿಲ್ಪಾ ಶೆಟ್ಟಿ ಡಾನ್ಸ್ ಮಿಸ್ ಮಾಡ್ಕೊಳ್ತಾರೆ ಫ್ಯಾನ್ಸ್

Published : Aug 25, 2025, 04:46 PM IST
Shilpa Shetty

ಸಾರಾಂಶ

Ganesh Chaturthi: ಗಣೇಶ ಚತುರ್ಥಿಗೆ ಭರ್ಜರಿ ತಯಾರಿ ಶುರುವಾಗಿದೆ. ಪ್ರತಿ ಬಾರಿ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡ್ತಿದ್ದ ನಟಿ ಶಿಲ್ಪಾ ಶೆಟ್ಟಿಈ ಬಾರಿ ಹಬ್ಬ ಮಾಡ್ತಿಲ್ಲ. ಕಾರಣ ಇಲ್ಲಿದೆ. 

ಆಗಸ್ಟ್ 27ರಂದು ದೇಶದಾದ್ಯಂತ ಗಣೇಶ ಚತುರ್ಥಿ (Ganesha Chaturthi) ಸಡಗರ ಮನೆ ಮಾಡಲಿದೆ. ಮನೆ ಮನೆಯಲ್ಲೂ ಗಣೇಶನ ಪೂಜೆ, ಪ್ರಾರ್ಥನೆ ನಡೆಯಲಿದೆ. ಮುಂಬೈನಲ್ಲಿ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತೆ. ಬಾಲಿವುಡ್ ಸ್ಟಾರ್ಸ್ ತಮ್ಮ ಮನೆಯಲ್ಲಿ ಗಣೇಶನ ಮೂರ್ತಿ ಸ್ಥಾಪನೆ ಮಾಡೋದಲ್ದೆ, ಪ್ರಸಿದ್ಧ ಪೆಂಡಾಲ್ ಗಳಿಗೆ ಭೇಟಿ ನೀಡಿ, ತಮ್ಮ ಭಕ್ತಿಯ ಮಳೆ ಸುರಿಸ್ತಾರೆ. ಬಾಲಿವುಡ್ ದಬಾಂಗ್ ಸಲ್ಮಾನ್ ಖಾನ್ ಮನೆಯಿಂದ ಹಿಡಿದು ಶಿಲ್ಪಾ ಶೆಟ್ಟಿ (Shilpa Shetty)ಯವರೆಗೆ ಬಹುತೇಕ ಪ್ರಸಿದ್ಧ ಸ್ಟಾರ್ ಮನೆಯಲ್ಲಿ ಗಣೇಶೋತ್ಸವ ಅದ್ಧೂರಿಯಾಗಿ ನಡೆಯುತ್ತೆ. ಪರಸ್ಪರರ ಮನೆಗಳಿಗೆ ಭೇಟಿ ನೀಡಿ ಹಬ್ಬದ ಸಂಭ್ರಮವನ್ನು ಡಬಲ್ ಮಾಡ್ತಾರೆ. ಅಷ್ಟೇ ಅಲ್ಲ, ಗಣೇಶ ವಿಸರ್ಜನೆ ವೇಳೆ ವಾದ್ಯಗಳ ಜೊತೆ ಡಾನ್ಸ್ ಮಾಡುವ ಸ್ಟಾರ್ಸ್, ಮೆರವಣೆಗೆ ಮೆರಗು ನೀಡ್ತಾರೆ. ತಮ್ಮ ಆರೋಗ್ಯಕರ ಜೀವನ ಶೈಲಿಯಿಂದ್ಲೇ ಲಕ್ಷಾಂತರ ಅಭಿಮಾನಿಗಳನ್ನು ಹಿಡಿದಿಟ್ಟುಕೊಂಡಿರುವ ಶಿಲ್ಪಾ ಶೆಟ್ಟಿ ಈ ಬಾರಿ ಅಭಿಮಾನಿಗಳಿಗೆ ಬೇಸರದ ಸುದ್ದಿ ನೀಡಿದ್ದಾರೆ. ಈ ಬಾರಿ ಶಿಲ್ಪಾ ಶೆಟ್ಟಿ ಮನೆಯಲ್ಲಿ ಗಣಪತಿ ಸ್ಥಾಪನೆ ಮಾಡಲಾಗ್ತಿಲ್ಲ.

ಸೋಶಿಯಲ್ ಮೀಡಿಯಾ ಇನ್ಸ್ಟಾಗ್ರಾಮ್ ನಲ್ಲಿ ಶಿಲ್ಪಾ ಶೆಟ್ಟಿ ಈ ವಿಷ್ಯವನ್ನು ಹಂಚಿಕೊಂಡಿದ್ದಾರೆ. ಕುಟುಂಬದಲ್ಲಿ ಸಾವಾಗಿರುವ ಕಾರಣ, ಶಿಲ್ಪಾ ಶೆಟ್ಟಿ ಕುಟುಂಬಕ್ಕೆ ಸೂತಕ. 13 ದಿನಗಳ ಕಾಲ ಯಾವುದೇ ಕಾರ್ಯ ಮಾಡುವಂತಿಲ್ಲ.

ಕುಟುಂಬದಲ್ಲಿ ಉಂಟಾದ ದುಃಖದ ಕಾರಣ ಈ ವರ್ಷ ಗಣೇಶ ಚತುರ್ಥಿ ಆಚರಣೆಯನ್ನು ತಾನು ಮತ್ತು ತನ್ನ ಕುಟುಂಬ ಮಾಡ್ತಿಲ್ಲ ಎಂದು ಶಿಲ್ಪಾ ಪೋಸ್ಟ್ ಹಂಚಿಕೊಂಡಿದ್ದಾರೆ. ಆದ್ರೆ ಯಾರ ಸಾವಾಗಿದೆ ಎಂಬ ಬಗ್ಗೆ ಅವರು ಮಾಹಿತಿ ನೀಡಿಲ್ಲ. ಅಷ್ಟೇ ಅಲ್ಲ ಪಾಪರಾಜಿಗಳ ಜೊತೆ ಮಾತನಾಡ್ತಾ ಶಿಲ್ಪಾ ಇದೇ ವಿಷ್ಯವನ್ನು ಹೇಳಿದ್ದಾರೆ. ಈ ಬಾರಿ ನಿಮ್ಮನ್ನು ಮಿಸ್ ಮಾಡಿಕೊಳ್ತೇನೆ. ಗಣಪತಿ ಡಾನ್ಸ್ ಮಾಡೋದಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.

ಶಿಲ್ಪಾ ಶೆಟ್ಟಿ ತಮ್ಮ ಮನೆಯಲ್ಲಿ ಪ್ರತಿ ವರ್ಷ ಗಣೇಶ ಉತ್ಸವವನ್ನು ವೈಭವದಿಂದ ಆಚರಿಸುತ್ತಿದ್ದರು. ಅವರು ಗಣಪತಿಯನ್ನು ವೈಭವದಿಂದ ಮನೆಗೆ ಕರೆತರುತ್ತಾರೆ. ಸುಂದರವಾದ ಮಂಟಪವನ್ನು ಅಲಂಕರಿಸಿ, ಅದ್ರಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡ್ತಾರೆ. ಗಣೇಶ ಮೂರ್ತಿ ವಿಸರ್ಜನೆ ಸಮಯದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚುವ ಶಿಲ್ಪಾ ಶೆಟ್ಟಿ, ಡಾನ್ಸ್ ಕೂಡ ಮಾಡ್ತಾರೆ. ಹಿಂದಿನ ಬಾರಿ ಪತಿ ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ಮಾಡಿದ್ದ ಡಾನ್ಸ್ ವೈರಲ್ ಆಗಿತ್ತು.

ಸದ್ಯ ಶಿಲ್ಪಾ ಶೆಟ್ಟಿ ಸಿನಿಮಾ, ರಿಯಾಲಿಟಿ ಶೋದಲ್ಲಿ ಬ್ಯುಸಿಯಿದ್ದಾರೆ. ಸುನಿಲ್ ಜೋಶಿ ನಿರ್ದೇಶನದ ಸುಖಿ ಚಿತ್ರದಲ್ಲಿ ಶಿಲ್ಪಾ ಕಾಣಿಸಿಕೊಂಡಿದ್ದರು. ಅಮಿತ್ ಸಾಧ್, ದಿಲ್ನಾಜ್ ಇರಾನಿ, ಕುಶಾ ಕಪಿಲಾ ಮತ್ತು ಪವ್ಲೀನ್ ಗುಜ್ರಾಲ್ ನಟಿಸಿದ್ದರು. 2023 ರಲ್ಲಿ ಬಿಡುಗಡೆಯಾದ ಈ ಚಿತ್ರ ಹೆಚ್ಚು ಸಕ್ಸಸ್ ಕಾಣಲಿಲ್ಲ. ಈಗ ಕನ್ನಡದ ಸಿನಿಮಾದಲ್ಲಿ ಶಿಲ್ಪಾ ಕಾಣಿಸಿಕೊಳ್ತಿದ್ದಾರೆ. ಪ್ರೇಮ್ ನಿರ್ದೇಶನದ ಕೆಡಿ ದಿ ಡೆವಿಲ್ ಅವರ ಮುಂಬರುವ ಚಿತ್ರ. ಧ್ರುವ ಸರ್ಜಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕನ್ನಡ ಆಕ್ಷನ್ ಡ್ರಾಮಾ ಚಿತ್ರ ಇದಾಗಿದ್ದು, ಶಿಲ್ಪಾ ಜೊತೆ ಸಂಜಯ್ ದತ್, ವಿ ರವಿಚಂದ್ರನ್, ರಮೇಶ್ ಅರವಿಂದ್, ರೇಷ್ಮಾ ನಾನಯ್ಯ ಮತ್ತು ನೋರಾ ಫತೇಹಿ ಕಾಣಿಸಿಕೊಳ್ತಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 4 ರಂದು ಬಿಡುಗಡೆಯಾಗುತ್ತಿದೆ. ಇದರ ಟ್ರೇಲರ್ ಜುಲೈನಲ್ಲಿ ಬಿಡುಗಡೆಯಾಗಿತ್ತು. ಸಿನಿಮಾ ಜೊತೆ ಶಿಲ್ಪಾ ತಮ್ಮ ಫಿಟ್ನೆಸ್ ಗೆ ಹೆಚ್ಚು ಆದ್ಯತೆ ನೀಡ್ತಾರೆ. 50ನೇ ವಯಸ್ಸಿನಲ್ಲೂ ಬಳುಕುವ ಬಳ್ಳಿಯಂತಿರುವ ಶಿಲ್ಪಾ ಫಿಟ್ನೆಸ್ ರಹಸ್ಯ ಯೋಗದ ಜೊತೆ ಆರೋಗ್ಯಕರ ಡಯಟ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಐಎಂಡಿಬಿ 2025 ಪಟ್ಟಿಯಲ್ಲಿ ದಾಖಲೆ: ಮೂವರು ಕನ್ನಡದ ತಾರೆಗಳಿಗೆ ಟಾಪ್‌ 10ರಲ್ಲಿ ಸ್ಥಾನ!
ಟಾಕ್ಸಿಕ್‌ನಿಂದ ಅನಿರುದ್ಧ್ ರವಿಚಂದರ್ ಔಟ್‌.. ಕನ್ನಡಿಗನಿಗೆ ಆ ಅವಕಾಶ ಕೊಟ್ಟ ರಾಕಿಂಗ್ ಸ್ಟಾರ್ ಯಶ್!