
ಹೋಮ ಕುಂಡದ ಮುಂದೆ ಭಜನೆ ಮಾಡುತ್ತಾ ಕುಳಿತ ಸಮಂತಾ(Samantha), ಹಣೆ ತುಂಬ ಚಂದನ, ಯಾತ್ರೆಯಲ್ಲಿ ನೋಮೇಕಪ್ ಲುಕ್. ಇದೆಲ್ಲವನ್ನೂ ನೀವು ನೋಡಿದರೆ ಅರೆ ಫ್ಯಾಮಿಲಿ ಮ್ಯಾನ್ 2ನಲ್ಲಿ ಬೋಲ್ಡ್ ಆಗಿ ನಟಿಸಿದಾಕೆ ಇವರೇನಾ ಅಂತ ಅಚ್ಚರಿಪಡುತ್ತೀರಿ ನೀವು. ಹೌದು. ನಟಿ ಸಮಂತಾ ವಿಚ್ಚೇದನೆ ನಂತರ ಯಾತ್ರೆ ಕೈಗೊಂಡಿದ್ದು, ನಟಿಯ ಮುಖದಲ್ಲಿ ಪ್ರಶಾಂತವಾದ ಪ್ರಸನ್ನೆಯನ್ನು ಕಾಣಬಹುದು.
ಸಮಂತಾ ರುತ್ ಪ್ರಭು ಅವರು ಹಿಮಾಲಯ ಪ್ರವಾಸದ ಕೊನೆಯ ಹಂತದಲ್ಲಿ ತಮ್ಮ ಚಾರ್ ಧಾಮ್ ಯಾತ್ರೆಯನ್ನು ಪೂರ್ಣಗೊಳಿಸಿದ್ದಾರೆ. ನಟಿ ತನ್ನ ಆಧ್ಯಾತ್ಮಿಕ ಟಚ್ ಇರೋ ಈ ವೆಕೇಷನ್ ಡೇಸ್‌ನಿಂದ ಹಲವು ಫೊಟೋಗಳನ್ನು ನಿಯಮಿತ ಹಂಚಿಕೊಳ್ಳುತ್ತಿದ್ದಾರೆ. ಅವರ ಅನುಭವವನ್ನು ಚಿಕ್ಕ ನೋಟ್ ಮೂಲಕ ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ.
ಗಂಗಾ ತೀರದಲ್ಲಿ ಸಮಂತಾ ಲಕ್ಷುರಿ ರೆಸಾರ್ಟ್: ವಿಚ್ಚೇದನೆ ನಂತರ ಆಶ್ರಮ ಭೇಟಿ
ಸಮಂತಾ ಶನಿವಾರ ತಮ್ಮ ಪ್ರಯಾಣದ ಗೆಳತಿ ಶಿಲ್ಪಾ ರೆಡ್ಡಿಯ ಜೊತೆ ಬದರಿನಾಥ ದೇವಸ್ಥಾನದ ಆಸುಪಾಸಿನಲ್ಲಿ ತಮ್ಮ ಚಾಪರ್ ಬಳಿ ಪೋಸ್ ನೀಡಿದ ಚಿತ್ರವನ್ನು ಹಂಚಿಕೊಂಡರು.
ಪ್ರಯಾಣವನ್ನು ಮುಕ್ತಾಯಗೊಳಿಸಿದ ನಟಿ Instagram ನಲ್ಲಿ ಅದ್ಭುತ ಪ್ರವಾಸದ ಅಂತ್ಯ. #CharDhamYatra #yamanotri #gangotri #kedarnath #badrinath. ನಾನು ಯಾವಾಗಲೂ ಹಿಮಾಲಯದಿಂದ ಆಕರ್ಷಿತಳಾಗಿದ್ದೇನೆ ... ನಾನು ಮಹಾಭಾರತವನ್ನು ಓದಿದಾಗಿನಿಂದ ಈ ಸ್ವರ್ಗಕ್ಕೆ ಭೇಟಿ ನೀಡುವ ಕನಸಾಗಿತ್ತು. ಭೂಮಿಯ ಮೇಲೆ, ಮಹಾನ್ ನಿಗೂಢ ಸ್ಥಳ .. ದೇವರುಗಳ ವಾಸಸ್ಥಾನವಿದು ಎಂದಿದ್ದಾರೆ.
ಅಯ್ಯೋ ಇದೇನಿದು? ಸಮಂತಾ ಈ ಪ್ಲೇಸಲ್ಲಿದ್ದಾರೇಕೆ?
ಶುಕ್ರವಾರ ಸಮಂತಾ ಅವರು ಗಂಗಾ ದಡದಲ್ಲಿರುವ ದೈತ್ಯ ಶಿವನ ಪ್ರತಿಮೆಯ ಮುಂದೆ ಹವನದಲ್ಲಿ ಭಾಗವಹಿಸಿದ ನೋಟವನ್ನು ಹಂಚಿಕೊಂಡಿದ್ದಾರೆ. ಅದಕ್ಕೂ ಮೊದಲು, ಅವರು ಬೀಟಲ್ಸ್ ಆಶ್ರಮ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಮಹರ್ಷಿ ಮಹೇಶ್ ಯೋಗಿಯ ಆಶ್ರಮಕ್ಕೆ ಭೇಟಿ ನೀಡಿದ್ದರು. ಏಕೆಂದರೆ ಪಾಪ್ ಗ್ರೂಪ್ ಅವರು ಸ್ಥಳದಲ್ಲಿದ್ದಾಗ ಅವರ 48 ಹಾಡುಗಳನ್ನು ಬರೆದಿದ್ದರು.
ಪತಿ ನಾಗ ಚೈತನ್ಯದಿಂದ ವಿಚ್ಚೇದನೆ ಘೋಷಿಸಿದ ಕೆಲವೇ ದಿನಗಳಲ್ಲಿ ಸಮಂತಾ ಹಿಮಾಲಯಕ್ಕೆ ತೆರಳಿದ್ದಾರೆ. ಅವರು ಋಷಿಕೇಶದಿಂದ ತನ್ನ ಪ್ರವಾಸವನ್ನು ಪ್ರಾರಂಭಿಸಿ ಬೆಟ್ಟಗಳಲ್ಲಿನ ತನ್ನ ರೆಸಾರ್ಟ್ ಮತ್ತು ಕೆಲವು ಆಶ್ರಮಗಳ ಫೋಟೋಗಳನ್ನು ಹಂಚಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.