ಸ್ಟಾರ್‌ ನಟಿಯರ ನಡುವೆ ತಂದಿಡುವ ಕೆಲ್ಸ ಮಾಡ್ಬೇಡಿ; ರಶ್ಮಿಕಾ ಮಂದಣ್ಣ ಬಗ್ಗೆ ಸಮಂತಾ ಹೇಳಿಕೆ

Published : Mar 29, 2023, 11:40 AM IST
ಸ್ಟಾರ್‌ ನಟಿಯರ ನಡುವೆ ತಂದಿಡುವ ಕೆಲ್ಸ ಮಾಡ್ಬೇಡಿ; ರಶ್ಮಿಕಾ ಮಂದಣ್ಣ ಬಗ್ಗೆ ಸಮಂತಾ ಹೇಳಿಕೆ

ಸಾರಾಂಶ

 ನಾವಿರುವುದೇ ಕಡಿಮೆ ಜನ, ಮತ್ತೊಬ್ಬರಿಗೆ ಸಹಾಯ ಮಾಡಿದರೆ ಮಾತ್ರ ನಮ್ಮ ಪರವಾಗಿ ನಿಲ್ಲುತ್ತಾರೆ ಎಂದು ಸಿಸ್ಟರ್‌ಹುಡ್‌ ಬಗ್ಗೆ ಮಾತನಾಡಿದ ಸಮಂತಾ. 

ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ದೊಡ್ಡ ಬದಲಾವಣೆ ಕಾಣಬಹುದು. ಸ್ಟಾರ್ ನಾಯಕಿಯರು ಹೊಸಬ್ಬರಿಗೆ ಹಾಗೂ ಮತ್ತೊಬ್ಬ ಸ್ಟಾರ್ ನಟಿಗೆ ಸಪೋರ್ಟ್ ಮಾಡುತ್ತಿದ್ದಾರೆ. ತಮ್ಮ ಮಾರ್ಕೆಟ್ ಕಡಿಮೆ ಆಗಿದ್ದರೂ ಕೇರ್ ಮಾಡದೆ ನಿಮ್ಮ ಸಿನಿಮಾ ಹಿಟ್ ಆಗಲಿ ನಿಮ್ಮ ಪ್ರಾಜೆಕ್ಟ್‌ಗೆ ಹೆಸರು ಬರಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ಸಮಂತಾ ಆರೋಗ್ಯ ವಿಚಾರದಲ್ಲಿ ತುಂಬಾ ಏರುಪೇರು ಕಂಡಾಗ ಪ್ರತಿಯೊಬ್ಬರೂ ಸಪೋರ್ಟ್‌ಗೆ ಬಂದು ನಿಂತರು. ಎಷ್ಟೇ ಬ್ಯುಸಿ ಇದ್ದರೂ ಸಮಂತಾಳನ್ನು ಸಂಪರ್ಕಿಸಿ ಆರೋಗ್ಯದ ಬಗ್ಗೆ ವಿಚಾರಿಸಿಕೊಂಡಿದ್ದಾರೆ ಹಾಗೂ ಧೈರ್ಯ ತುಂಬಿದ್ದಾರೆ. 

ಸಮಂತಾ ಮತ್ತು ಅಲ್ಲು ಅರ್ಹಾ ಅಭಿನಯಿಸಿರುವ ಶಾಕುಂತಲಂ ಸಿನಿಮಾ ಏಪ್ರಿಲ್ 14ರಂದು ಬಿಡುಗಡೆ ಕಾಣುತ್ತಿದೆ. ಪ್ರಚಾರದಲ್ಲಿ ಭಾಗಿಯಾಗಿರುವ ನಟಿ ಬಾಲಿವುಡ್‌ ಬಬಲ್ ಸಂದರ್ಶನದಲ್ಲಿ ವುಮೆನ್‌ ಸಪೋರ್ಟ್‌ ಬಗ್ಗೆ ಮಾತನಾಡಿದ್ದಾರೆ. 'ರಶ್ಮಿಕಾ ಮಂದಣ್ಣ ಹಾಗೂ ತಮನ್ನಾರನ್ನು ಭೇಟಿ ಮಾಡಿದಾಗ ಸಿನಿಮಾ ವಿಚಾರಕ್ಕಿಂತ ಹೆಚ್ಚಾಗಿ ಸಮಂತಾಳ ಬಗ್ಗೆ ಮಾತನಾಡಿದ್ದಾರೆ. ಸಮಂತಾ ವಿಚಾರದಲ್ಲಿ ನಾನು ತುಂಬಾ ಪೋಸೆಸಿವ್ ಅಗಿರುವೆ ಆಕೆ ಚೆನ್ನಾಗಿರಬೇಕು ಎಂದು ಬಯಸುತ್ತಾರೆ. ಹೀಗಾಗಿ ನಿಮಗೆ ಈ ಸಿಸ್ಟರ್‌ಹುಡ್‌ ಬಗ್ಗೆ ಅಭಿಪ್ರಾಯ ಏನು?' ಎಂದು ನಿರೂಪಕ ನಯನದೀಪ್ ರಕ್ಷಿತ್ ಪ್ರಶ್ನಿಸಿದ್ದಾರೆ.

8 ತಿಂಗಳಲ್ಲಿ ನನ್ನ ಜೀವನ ಬದಲಾಗಿದೆ; Myositis ಕಾಯಿಲೆ ಬಗ್ಗೆ ಮೌನ ಮುರಿದ ಸಮಂತಾ

'ನಾನು ಚಿತ್ರರಂಗಕ್ಕೆ ಕಾಲಿಟ್ಟ ಆರಂಭದಲ್ಲಿ ನನ್ನ ಬಗ್ಗೆ ಸಾಕಷ್ಟು ನೆಗೆಟಿವ್ ಆರ್ಟಿಕಲ್ ಹರಿದಾಡುತ್ತಿತ್ತು ಅದರಲ್ಲಿ ಒಬ್ಬ ನಾಯಕಿಗೆ ಮತ್ತೊಬ್ಬ ನಾಯಕಿ ಕಂಡ್ರೆ ಆಗಲ್ಲ ಅನ್ನೋ ರೀತಿ ಬರೆಯುತ್ತಿದ್ದರು. ಈ ಆರ್ಟಿಕಲ್‌ನಿಂದ ಇಬ್ಬರು ನಾಯಕಿಯರು ಚೆನ್ನಾಗಿದ್ದರೂ ಕೋಲ್ಡ್‌ ವಾರ್ ಕ್ರಿಯೇಟ್ ಮಾಡಿತ್ತು. ಯಾಕೆ ಈ ರೀತಿ ನಾಯಕಿಯರ ನಡುವೆ ಜಗಳ ಸೃಷ್ಟಿ ಮಾಡುತ್ತಾರೆ ಎಂದು ಯೋಚನೆ ಮಾಡುತ್ತಿದ್ದೆ. ಈ ಸುಳಿಯಲ್ಲಿ ನಾನು ಇರಬಾರದು ಎಂದು ತೀರ್ಮಾನ ಮಾಡಿಕೊಂಡು ಬಹಿರಂಗವಾಗಿ ಮತ್ತೊಬ್ಬ ನಟಿಗೆ ಸಪೋರ್ಟ್ ಮಾಡಲು ಮುಂದಾದೆ. ಹೀಗೆ ಮಾಡುತ್ತಿರುವುದರಿಂದ ನನಗೆ ತುಂಬಾ ಖುಷಿ ಕೊಟ್ಟಿದೆ. ಈ ನಾಯಕಿಯರನ್ನು ಭೇಟಿ ಮಾಡಿರುವೆ ಅವರು ವಂಡರ್‌ಫುಲ್‌ ಸ್ವೀಟ್‌ ಹಾಗೂ ಮನಸ್ಸು ಬಿಚ್ಚಿ ಮಾತನಾಡುತ್ತಾರೆ. ಇಂಡಸ್ಟ್ರಿಯಲ್ಲಿ ಇರುವುದು ಕಡಿಮೆ ನಾಯಕಿಯರು ಪ್ರತಿಯೊಬ್ಬರಲ್ಲೂ ಪ್ರತಿಭೆ ಇದೆ ಹೀಗಾಗಿ ಯಾಕೆ ನಾವು ಸಪೋರ್ಟ್ ಮಾಡುವ ಮನಸ್ಥಿತಿ ಬೆಳಸಿಕೊಳ್ಳಬಾರದು? ಕೊನೆಯಲ್ಲಿ ನಮ್ಮ ಪರವಾಗಿ ಹೆಣ್ಣು ಮಕ್ಕಳು ಮಾತ್ರ ನಿಲುವು ತೆಗೆದುಕೊಳ್ಳುವುದು' ಎಂದು ಸಮಂತಾ ಮಾತನಾಡಿದ್ದಾರೆ. 

ಅಲ್ಲು ಅರ್ಜುನ್ ಮಗಳು ಇಂಗ್ಲಿಷ್ ಮಾತನಾಡಲ್ಲ ಅಪ್ಪಟ್ಟ ತೆಲುಗು ಪ್ರೇಮಿ; ಅರ್ಹಾ ಬಗ್ಗೆ ಸಮಂತಾ ಹೇಳಿಕೆ

'ಕಳೆದ 2 ವರ್ಷದಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ನಾನು ತುಂಬಾ ಬದಲಾಗಿರುವೆ. ನನಗೆ ಎದುರಾಗುತ್ತಿರುವ ಪ್ರತಿಯೊಂದು ಚಾಲೆಂಜ್‌ನ ನಾನು ಸ್ವೀಕರಿಸಿ ಜೀವನ ಕಟ್ಟಿಕೊಳ್ಳುತ್ತಿರುವೆ. ನಾನು ಇನ್ನು ಗೆಲ್ಲುತ್ತಿರುವೆ. ಜೀವನದಲ್ಲಿ ಎಲ್ಲಾ ನಾರ್ಮಲ್ ಅಗಿದ್ದರೆ ಬಳವಣಿಗೆಗೆ ಜಾಗವಿಲ್ಲ. ಪ್ರತಿ ಸಲ ನಾನು ಸೋತ ನಂತರ ಜೀವನದಲ್ಲಿ ಖುಷಿ ಕಂಡಿರುವುದು. ಈ ಕಷ್ಟಗಳು ಮುಂದೆ ಬರುವ ಚಾಲೆಂಜ್‌ಗಳನ್ನು ಖುಷಿಯಿಂದ ಸ್ವೀಕರಿಸಲು ಸಹಾಯ ಮಾಡುತ್ತದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಾರುಖ್ ಜೊತೆ ಡಾನ್ಸ್ ನಿರಾಕರಿಸಿದ ವಧು, ಅಸಮಾಧಾನಗೊಂಡ ಫ್ಯಾನ್ಸ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!