Samantha About Pregnancy: ಕ್ಯೂಟ್, ಎಕ್ಸೈಟೆಡ್ ಎಂದ ಸಮಂತಾ

By Suvarna News  |  First Published Jan 9, 2022, 12:31 PM IST
  • Pregnancy Love: ಸಮಂತಾ ಸಿಹಿ ಮಾತುಗಳು
  • ಪ್ರೆಗ್ನೆನ್ಸಿ ಬಗ್ಗೆ ಎಕ್ಸೈಟೆಡ್ ಎಂದ ಸಮಂತಾ ರುಥ್ ಪ್ರಭು

ಸಮಂತಾ ಈ ಹಿಂದೆ ನಾಗಚೈತನ್ಯ ಜೊತೆ ಮಗು ಹೊಂದಲು ಪ್ಲಾನ್ ಮಾಡಿದ್ದಾಗಿ ಹೇಳಿದ್ದರು. ಆದರೆ ಅಷ್ಟೊತ್ತಿಗಾಗಲೇ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟಾಗಿತ್ತು. ಮಗು ಹೊಂದುವ ಸಮಂತಾ ಕನಸು ಅಲ್ಲಿಯೇ ಮುದುಡಿತ್ತು. ವಿಚ್ಚೇದಿತರಾಗದೆ ಇದ್ದಲ್ಲಿ ಪುಟ್ಟ ಕಂದನ ಸ್ವಾಗತಿಸುವ ತಯಾರಿಯಲ್ಲಿರುತ್ತಿದ್ದರು ಸಮಂತಾ. ಆದರೆ ನಾಗ ಚೈತನ್ಯ ಹಾಗೂ ಸಮಂತಾ ಅಕ್ಟೋಬರ್ 2ರಂದು ತಮ್ಮ ವಿಚ್ಚೇದನೆ ಎನೌನ್ಸ್ ಮಾಡಿದರು. ಆದರೆ ಈಗ ನಟಿ ಪ್ರೆಗ್ನೆನ್ಸಿ ಬಗ್ಗೆ ಎಕ್ಸೈಟೆಡ್ ಆಗಿರೋದಾಗಿ ಹೇಳಿದ್ದಾರೆ.

ಸೌತ್ ನಟಿ ಕಾಜಲ್ ಅಗರ್ವಾಲ್ ಗರ್ಭಿಣಿ. ಪತಿ ಗೌತಮ್ ಕಿಚ್ಲು ಜೊತೆ ಮೊದಲ ಮಗುವನ್ನು ಸ್ವಾಗತಿಸೋಕೆ ರೆಡಿಯಾಗಿರೋ ನಟಿ ಇತ್ತೀಚೆಗಷ್ಟೇ ಈ ವಿಚಾರವನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಪ್ರೆಗ್ನೆನ್ಸಿ ಜರ್ನಿ ಬಗ್ಗೆ ನಟಿ ಕಾಜಲ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಇದಕ್ಕೆ ನಟಿ ಸಮಂತಾ ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋ ಜಾಹೀರಾತು ಸಂಬಂಧಿಸಿದ್ದು. ಆದರೆ ಗೆಳತಿ ಕಾಜಲ್ ಅಮ್ಮನಾಗ್ತಿರೋ ವಿಷಯ ತಿಳಿದು ಸಮಂತಾ ಅವರು ಫುಲ್ ಎಕ್ಸೈಟ್ ಆಗಿರುವಂತಿದೆ. ಇದೇ ವಿಚಾರವನ್ನು ಅವರ ಕಮೆಂಟ್‌ನಲ್ಲಿ ಸ್ಪಷ್ಟವಾಗಿ ಕಾಣಬಹುದು.

Tap to resize

Latest Videos

undefined

Awww ಕ್ಯೂಟ್, ನಿಮ್ಮಲ್ಲಿ ಹೊಸ ಹೊಳಪಿದೆ. ಲಾಟ್ಸ್ ಆಫ್ ಲವ್, ನಿಮ್ಮ ಬಗ್ಗೆ ಸಾಕಷ್ಟು ಎಕ್ಸೈಡೆಟ್ ಆಗಿದ್ದೇನೆ ಎಂದು ನಟಿ ಸಮಂತಾ ಕಮೆಂಟ್ ಮಾಡಿದ್ದಾರೆ. ಈ ಹಿಂದೆ ಸಮಂತಾ ವಿಚ್ಛೇದನವನ್ನು ಘೋಷಿಸಿದಾಗ ಕೆಲವು ಮಾಧ್ಯಮಗಳು ಅವರು ಮಗು ಹೊಂದಲು ಬಯಸದ ಕಾರಣ ಅದುವೇ ವಿಚ್ಚೇದನೆಗೆ ಕಾರಣವಾಗಿತ್ತು ಎಂದಿದ್ದರು. ಸಮಂತಾ ಪತಿಯ ಮನೆಯಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದರೆ ನಟಿಗೆ ಪ್ರೆಗ್ನೆಂಟ್ ಆಗೋದು ಇಷ್ಟವಿರಲಿಲ್ಲ ಎನ್ನಲಾಗಿತ್ತು. ಆದರೆ ಈಗ ಕಾಜಲ್ ಅವರ ಗರ್ಭಧಾರಣೆಯ ಬಗ್ಗೆ ಸಮಂತಾ ಎಷ್ಟು ಉತ್ಸುಕರಾಗಿದ್ದಾರೆಂದು ನೋಡಿದರೆ, ಅವರು ಆ ಸ್ಥಳದಲ್ಲಿದ್ದರೆ ಎಷ್ಟು ಉತ್ಸುಕರಾಗಿರುತ್ತಿದ್ದರು ಎಂಬುದನ್ನು ಊಹಿಸಬಹುದು.

ಅಮ್ಮನಾಗ್ತಿದ್ದಾರೆ ಕಾಜಲ್, ಸಿಹಿಸುದ್ದಿ ಹೇಳಿದ ಗೌತಮ್

ಟಾಲಿವುಡ್ ಸುಂದರಿ ಕಾಜಲ್ ಹೊಸ ವರ್ಷದ ಮೊದಲ ದಿನ ಸಿಹಿಸುದ್ದಿ ಕೊಟ್ಟಿದ್ದರು. ಸೌತ್‌ನ ಸ್ಟಾರ್ ನಟಿ ಕಾಜಲ್ ಅಗರ್ವಾಲ್(Kajal Aggarwal) ಅಮ್ಮನಾಗುತ್ತಿದ್ದಾರೆ. ಈ ವಿಚಾರವನ್ನು ಅವರ ಪತಿ ಗೌತಮ್ ಕಿಚ್ಲು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಕಾಜಲ್ ಅಗರ್ವಾಲ್ ಮತ್ತು ಗೌತಮ್ ಕಿಚ್ಲು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಎನೌನ್ಸ್ ಮಾಡಿದ್ದರು.  ಶನಿವಾರದಂದು ತಮ್ಮ ಇನ್‌ಸ್ಟಾಗ್ರಾಮ್(Instagram) ಹ್ಯಾಂಡಲ್‌ನಲ್ಲಿ ಗೌತಮ್ ಕಾಜಲ್ ಅವರ ಫೊಟೋವನ್ನು ಶೇರ್ ಮಾಡಿ, ನಿಮ್ಮನ್ನು ನೋಡುತ್ತಿದ್ದಾರೆ 2022 ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಶೀರ್ಷಿಕೆಯ ನಂತರ ಗರ್ಭಿಣಿ(Pregnant) ಮಹಿಳೆಯ ಎಮೋಜಿ ಅಭಿಮಾನಿಗಳ ಗಮನ ಸೆಳೆದಿದೆ.

ಅಭಿಮಾನಿಗಳು ತಕ್ಷಣ ಕಾಮೆಂಟ್ ವಿಭಾಗಗಳಲ್ಲಿ ದಂಪತಿಗಳಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ನಿಮ್ಮಿಬ್ಬರ ಜೀವನದ ಅತ್ಯಂತ ಸುಂದರ ಕ್ಷಣ ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಜೂನಿಯರ್ ಗೌತಮ್ ಅಥವಾ ಜೂನಿಯರ್ ಕಾಜಲ್ ಬರಲಿದ್ದಾರೆ ಎಂದು ಮತ್ತೊಬ್ಬರು ಕಮೆಂಟಿಸಿದ್ದಾರೆ.

ಖುಷಿ ಮತ್ತು ಭಯ, ಅಮ್ಮನಾಗೋ ಬಗ್ಗೆ ಕಾಜಲ್ ಮಾತು

ವಿಚ್ಛೇದನದ ನಂತರ ತಾನು ಸಾಕಷ್ಟು ಆಘಾತಕ್ಕೆ ಒಳಗಾಗಿದ್ದೇನೆ ಎಂದು ಸಮಂತಾ ಈಗಾಗಲೇ ಬಹಿರಂಗಪಡಿಸಿದ್ದರು. ಈಗ ಅವರು ತಮ್ಮ ವೃತ್ತಿಜೀವನದ ಹೊಸ ಹಂತದತ್ತ ಗಮನ ಹರಿಸುತ್ತಿದ್ದಾರೆ. ಅವರು ವಿವಿಧ ಹಂತಗಳಲ್ಲಿ ಬೆರಳೆಣಿಕೆಯಷ್ಟು ಅತ್ಯಾಕರ್ಷಕ ಯೋಜನೆಗಳನ್ನು ಪೂರೈಸಿದ್ದಾರೆ.

ಮದುವೆಯಾಗಿ 6 ತಿಂಗಳಿಗೇ ಮಗು ಬಯಸಿದ್ದ ನಟಿ

ಮದುವೆಯಾಗಿ ನಾಲ್ಕು ವರ್ಷಗಳನ್ನು ಪೋರೈಸಲು ಕೆಲವೇ ದಿನಗಳಿದ್ದಾಗ ಸಮಂತಾ ಮತ್ತು ನಾಗ ಚೈತನ್ಯ ವಿಚ್ಚೇದನೆ ಪಡೆದು ಬೇರೆಯಾಗಿದ್ದಾರೆ. ಇಬ್ಬರೂ ಆ ವಿಚ್ಚೇದನಾ ನಂತರದ ದಿನಗಳಲ್ಲಿ ಹಾದು ಹೋಗುತ್ತಿದ್ದಾರೆ. 2018 ರಲ್ಲಿ ಅವರು ಮದುವೆಯಾಗಿ ಆರು ತಿಂಗಳಾದಾಗ, ಮಗುವನ್ನು ಹೊಂದಲು ಟೈಮ್‌ಲೈನ್ ಅಂತಿಮಗೊಳಿಸುವ ಬಗ್ಗೆ ಸಮಂತಾ ಮಾತನಾಡಿದ್ದರು. ಮದುವೆಯಾಗಿ ಆರೇ ತಿಂಗಳಿಗೆ ನಾಗ ಚೈತನ್ಯ ಅವರ ಮಗುವಿಗೆ ಅಮ್ಮನಾಗೋ ಬಗ್ಗೆ ಎಕ್ಸೈಟ್ ಆಗಿ ಮಾತನಾಡಿದ್ದರು ಸೌತ್ ನಟಿ. ಫಿಲ್ಮ್ ಕಂಪ್ಯಾನಿಯನ್‌ಗೆ ನೀಡಿದ ಸಂದರ್ಶನದಲ್ಲಿ ಸಮಂತಾ ತಾನು ಭಾರೀ ಒಳ್ಳೆಯ ಬಾಲ್ಯವನ್ನು ಹೊಂದಿರದ ಕಾರಣ ತನ್ನ ಮಗು ತನಗೆ ಸರ್ವಸ್ವ ಎಂದು ಹೇಳಿದ್ದರು. ದುರದೃಷ್ಟವಶಾತ್, ಸಮಂತಾ ಮತ್ತು ನಾಗ ಚೈತನ್ಯ ರಾಜಿ ಮಾಡಿಕೊಳ್ಳಲಾಗದ ಭಿನ್ನಾಭಿಪ್ರಾಯಗಳಿಂದ ಬೇರ್ಪಟ್ಟಾಗಿದೆ.

click me!