ಕತ್ರೀನಾ ಟವಲ್​ ತಂದ ಆಪತ್ತು? ಇಸ್ಲಾಮಿಕ್​ ದೇಶಗಳಲ್ಲಿ ಸಲ್ಮಾನ್​ ಖಾನ್​ ಟೈಗರ್​-3 ಚಿತ್ರ ಬ್ಯಾನ್​!

By Suvarna News  |  First Published Nov 11, 2023, 6:08 PM IST

ಕತ್ರೀನಾ ಟವಲ್​ ತಂದಿತಾ ಆಪತ್ತು? ಇಸ್ಲಾಮಿಕ್​ ದೇಶಗಳಲ್ಲಿ ಸಲ್ಮಾನ್​ ಖಾನ್​ ಟೈಗರ್​-3 ಚಿತ್ರ ಬ್ಯಾನ್​!
 


ಬಾಲಿವುಡ್‌ನಲ್ಲಿ ‘ಬಾಕ್ಸ್‌ ಆಫೀಸ್ ಟೈಗರ್’ ಎಂದೇ ಖ್ಯಾತಿ ಪಡೆದಿರುವ ನಟ ಸಲ್ಮಾನ್ ಖಾನ್ ಅವರ ಬಹು ನಿರೀಕ್ಷಿತ ಟೈಗರ್​-3 ಬಿಡುಗಡೆಗೆ ಸಿದ್ಧವಾಗಿದೆ. ನಾಳೆ ಅಂದರೆ ನವೆಂಬರ್​ 12ರಂದು ಹಿಂದಿಯ ಜೊತೆಗೆ ತಮಿಳು ಮತ್ತು ತೆಲಗು ಡಬ್ಬಿಂಗ್​ ವರ್ಷನ್​ ಬಿಡುಗಡೆಯಾಗಲಿದೆ. ಕಳೆದ ವಾರ ಇದರ ಟ್ರೇಲರ್​ ಬಿಡುಗಡೆಯಾಗಿತ್ತು. ಇದರಲ್ಲಿ ಕತ್ರಿನಾ ಕೈಫ್​ ನೋಡಿ ಫ್ಯಾನ್ಸ್​ ಉಫ್​ ಎಂದಿದ್ದರು. ಏಕೆಂದರೆ, ಆ್ಯಕ್ಷನ್​ ಚಿತ್ರಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕತ್ರಿಕಾ,  ಈ ಟ್ರೇಲರ್​ನಲ್ಲಿ   ಒಂದು ಹೆಜ್ಜೆ ಮುಂದೆಯೇ ಹೋಗಿದ್ದಾರೆ. ಚಿತ್ರದ ಟ್ರೇಲರ್​ ನೋಡಿದರೆ,  ಫ್ಯಾಮಿಲಿ ಕಥೆ ಎಂದು ಎನಿಸುತ್ತದೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ  ಆ್ಯಕ್ಷನ್ ಸೀನ್​ಗಳು ಟ್ರೇಲರ್​ ಉದ್ದಕ್ಕೂ ಇವೆ. ಇದರಲ್ಲಿ ಗಮನ ಸೆಳೆದಿರುವುದು ಕತ್ರಿನಾ ಕೈಫ್​ ಅವರು ಚಿಕ್ಕ ಟವಲ್​ ಧರಿಸಿ ಫೈಟಿಂಗ್​ ಮಾಡುವ ದೃಶ್ಯ! ಅಷ್ಟಕ್ಕೂ ಅವರು ಇನ್ನೋರ್ವ ನಟಿ ಮಿಚೆಲ್  ಜೊತೆ ಭರ್ಜರಿ ಫೈಟಿಂಗ್​ ಮಾಡಿದ್ದಾರೆ. ಆ ಯುವತಿ ಕೂಡ ಇವರಂತೆಯೇ ಚಿಕ್ಕ ಟವೆಲ್ ಸುತ್ತಿಕೊಂಡಿದ್ದಾರೆ. ಫೈಟಿಂಗ್​ ವೇಳೆ ಈ ಟವಲ್​ಗಳನ್ನು ಇಬ್ಬರೂ ಎಳೆದಾಡಿದ್ದಾರೆ!ಇದನ್ನು ನೋಡಿ ಉಫ್​ ಇನ್ನು ಈ ಕಣ್ಣಿನಿಂದ ಇನ್ನು ಏನೇನು ನೋಡಬೇಕೋ ಎಂದು ಸಿನಿ ಪ್ರಿಯರು ಹೇಳುತ್ತಿದ್ದರು. 

ಇದೀಗ ಈ ಟವಲ್​ ದೃಶ್ಯವೇ ಟೈಗರ್​-3 ಚಿತ್ರಕ್ಕೆ ಮುಳುವಾಯಿತಾ ಎನ್ನುವ ಸಂದೇಹ ಶುರುವಾಗಿದೆ. ಇದಕ್ಕೆ ಕಾರಣವೂ ಇದೆ. ಅದೇನೆಂದರೆ, ಓಮನ್, ಕುವೈತ್​ ಮತ್ತು ಕತಾರ್‌ನಲ್ಲಿ ನಿಷೇಧ ಹೇರಲಾಗಿದೆ. ಇದಕ್ಕೆ ಕಾರಣ ಕತ್ರೀನಾ ಅವರ ಟವಲ್​ ದೃಶ್ಯ ಎಂದೇ ಹೇಳಲಾಗುತ್ತಿದೆ. ಅದೇ ಇನ್ನೊಂದೆಡೆ,  ಟೈಗರ್‌ 3 ಸಿನಿಮಾದಲ್ಲಿ ಇಸ್ಲಾಮಿಕ್ ದೇಶಗಳನ್ನು ಮತ್ತು ಪಾತ್ರಗಳನ್ನು ಕೆಟ್ಟದಾಗಿ, ನೆಗೆಟಿವ್‌ ರೀತಿಯಲ್ಲಿ ಬಿಂಬಿಸಲಾಗಿದೆ ಎಂಬ ಕಾರಣಕ್ಕೆ ಅಲ್ಲಿನ ಸೆನ್ಸಾರ್‌ ಮಂಡಳಿ ಸಿನಿಮಾ ಪ್ರದರ್ಶನಕ್ಕೆ ನಿಷೇಧ ಹೇರಿವೆ ಎಂದೂ ವರದಿಯಾಗಿದೆ. ಕಾರಣ ಏನೇ ಇದ್ದರೂ ಇದು ದೊಡ್ಡ ಹೊಡೆತ ಬೀಳಲಿದೆ ಎಂದೇ ಟ್ರೇಡ್‌ ವಿಶ್ಲೇಷಕರು ಅಂದಾಜಿಸಿದ್ದಾರೆ. ಏಕೆಂದರೆ,  ಕಲೆಕ್ಷನ್‌ ವಿಚಾರದಲ್ಲಿ ಬಾಲಿವುಡ್‌ ಸಿನಿಮಾಗಳಿಗೆ ಅರಬ್‌ ರಾಷ್ಟ್ರಗಳು ಪ್ರಮುಖ ಮಾರುಕಟ್ಟೆ. ಇದೀಗ ಈ ಹೊಸ ಬೆಳವಣಿಗೆ ಸಿನಿಮಾದ ಕಲೆಕ್ಷನ್‌ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದಿದ್ದಾರೆ.

Tap to resize

Latest Videos

ಈ ರಣವೀರ್‌ ಸಿಕ್ರೂ ಆ ರಣವೀರ್‌ನ್ನು ಬಿಟ್ಟಿಲ್ವಾ ದೀಪಿಕಾ? ಆಲಿಯಾ ಪತಿ ಜೊತೆ ಇದೇನಪ್ಪಾ?
 
ಈ ಹಿಂದೆ,  ಅಕ್ಷಯ್ ಕುಮಾರ್ ಅವರ ಐತಿಹಾಸಿಕ 'ಸಾಮ್ರಾಟ್ ಪೃಥ್ವಿರಾಜ್' ಚಿತ್ರ ಸಹ ಕತಾರ್ ಮತ್ತು ಅಮಾನ್‌ನಲ್ಲಿ ನಿಷೇಧ ಎದುರಿಸಿತ್ತು. ಇದೀಗ ಸಲ್ಮಾನ್ ಖಾನ್ ಅವರ 'ಟೈಗರ್ 3' ಸಿನಿಮಾ ಸಹ ಅದೇ ಭಾಗದಲ್ಲಿ ನಿಷೇಧದ ಭೀತಿ ಎದುರಿಸುತ್ತಿದೆ.  ಸಲ್ಮಾನ್‌ ಖಾನ್‌, ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಟೈಗರ್‌ 3 ಸಿನಿಮಾ, ಈಗಾಗಲೇ ಟ್ರೇಲರ್‌ ಮೂಲಕವೇ ನಿರೀಕ್ಷೆ ಹೆಚ್ಚಿಸಿದೆ. ಮುಂಗಡ ಟಿಕೆಟ್‌ ಬುಕಿಂಗ್‌ ವಿಚಾರದಲ್ಲೂ ಭರ್ಜರಿ ಸದ್ದು ಮಾಡುತ್ತಿದೆ. ಹೀಗಿರುವಾಗಲೇ, ಇದೇ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಓಮನ್ ಮತ್ತು ಕತಾರ್‌ನಲ್ಲಿ ನಿಷೇಧ ಹೇರಿರುವುದು ಶಾಕ್​ಗೆ ಕಾರಣವಾಗಿದೆ.  

ಟೈಗರ್ ಫ್ರ್ಯಾಂಚೈಸಿಯ ಮೂರನೇ ಸಿನಿಮಾ ಇದಾಗಿದ್ದು, ಯಶ್‌ ರಾಜ್‌ ಫಿಲಂಸ್‌ ನಿರ್ಮಾಣದ ಈ ಚಿತ್ರ ಗೂಢಚಾರಿ ಕಥೆಯ ಹಿನ್ನೆಲೆಯಲ್ಲಿ ನಿರ್ಮಾಣವಾಗಿದೆ. ಭಾರತದಲ್ಲಿ ಈ ಚಿತ್ರವನ್ನು ಸ್ವಾಗತಿಸಲು, ಸಲ್ಮಾನ್‌ ಖಾನ್‌ ಫ್ಯಾನ್ಸ್‌ ಕಾತರದಲ್ಲಿದ್ದಾರೆ. 

ನಟಿ ಎಂದ್ಮೇಲೆ ಎಲ್ಲದ್ದಕ್ಕೂ ಸಿದ್ಧವಿರ್ಬೇಕು ಎಂದ ಬಿಗ್​ಬಾಸ್​ ತನಿಷಾ, ಪೂಜಾ ಗಾಂಧಿಗೂ ಲಿಪ್​ಲಾಕ್​ ಮಾಡಿದ್ರಂತೆ!

click me!