
ದಳಪತಿ ವಿಜಯ್ ಮತ್ತು ವಿಜಯ್ ಸೇತುಪತಿ ಅಭಿನಯಿಸಿರೋ ಮಾಸ್ಟರ್ ಹಿಂದಿ ರಿಮೇಕ್‌ಗಾಗಿ ಸಜ್ಜಾಗುತ್ತಿದೆ. ಕಬೀರ್ ಸಿಂಗ್ ನಿರ್ಮಾಪಕ ಮುರಾದ್ ಖೇತಾನಿ ಮತ್ತು ಎಂಡೆಮೋಲ್ ಶೈನ್ ಈ ಚಿತ್ರವನ್ನು ಬಾಲಿವುಡ್‌ನಲ್ಲಿ ನಿರ್ಮಿಸಲಿದ್ದಾರೆ.
ಹಿಂದಿ ಸಿನಿಮಾದಲ್ಲಿ ಮಾಸ್ಟರ್ ಮತ್ತು ಬ್ಯಾಡ್ಡಿ ಭವಾನಿ ಅವರ ಪ್ರಮುಖ ಪಾತ್ರಕ್ಕೆ ಕಾಲಿಡಲು ಮಾಸ್ಟರ್ ತಂಡವು ನಟರನ್ನು ಸಂಪರ್ಕಿಸಲು ಪ್ರಾರಂಭಿಸಿದೆ ಎನ್ನಲಾಗಿದೆ. ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರನ್ನು ಚಿತ್ರಕ್ಕೆ ಸೇರಿಸಲು ಟೀಮ್ ಮಾಸ್ಟರ್ ಉತ್ಸುಕರಾಗಿದ್ದಾರೆ. ಮುರಾದ್ ಮತ್ತು ಎಂಡೆಮೋಲ್ ತಂಡವು ಕಳೆದ 30 ದಿನಗಳಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ಮಾಸ್ಟರ್ ರಿಮೇಕ್ ಬಗ್ಗೆ ಚರ್ಚಿಸಲು ಒಂದೆರಡು ಮೀಟಿಂಗ್ ಮಾಡಿದ್ದಾರೆ.
ಸ್ಕರ್ಟ್-ಬ್ಲೌಸ್ ಮಾತ್ರ, ಸೀರೆಯೇ ಇಲ್ಲ: ಮಾಸ್ಟರ್ ಚೆಲುವೆಯ ಹಾಟ್ ಲುಕ್
ಸಲ್ಮಾನ್ ಚಿತ್ರದ ಪರಿಕಲ್ಪನೆಯನ್ನು ಇಷ್ಟಪಟ್ಟಿದ್ದಾರೆ, ಮತ್ತು ತೀವ್ರ ಆಸಕ್ತಿಯನ್ನು ತೋರಿಸಿದ್ದಾರೆ, ಆದರೂ ತಮಿಳು ಮೂಲದ ಬಹಳಷ್ಟು ಅಂಶಗಳನ್ನು ಸರಿಹೊಂದುವಂತೆ ತಿರುಚಬೇಕಾಗಿರುವುದರಿಂದ ಮಾಸ್ಟರ್ ತಂಡವು ಹಿಂದಿಯಲ್ಲಿ ಬೌಂಡ್ ಸ್ಕ್ರಿಪ್ಟ್‌ನೊಂದಿಗೆ ತನ್ನ ಬಳಿಗೆ ಬರಲು ಕಾಯುತ್ತಿದೆ ಎನ್ನಲಾಗಿದೆ.
ಕೊರೋನಾ ನಂತರ ಥಿಯೇಟರ್‌ನಲ್ಲಿ ರಿಲೀಸ್ ಆದ ಮೊದಲ ಬಿಗ್ ಬಜೆಟ್ ಸಿನಿಮಾ ಮಾಸ್ಟರ್ ಸಿಕ್ಕಾಪಟ್ಟೆ ಕಲೆಕ್ಷನ್ ಮಾಡಿದೆ. ಎಲ್ಲ ಕಡೆಯಲ್ಲೂ ಸಿನಿಮಾ ಸಿಕ್ಕಾಪಟ್ಟೆ ಸುದ್ದಿ ಮಾಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.