ವಿವಾಹ ವಾರ್ಷಿಕೋತ್ಸವ ಒಟ್ಟಿಗೆ ಆಚರಿಸಿದ ಪ್ರಶಾಂತ್ ನೀಲ್- Jr. NTR ಕುಟುಂಬ; ಫೋಟೋ ವೈರಲ್

Published : May 06, 2022, 02:07 PM IST
ವಿವಾಹ ವಾರ್ಷಿಕೋತ್ಸವ ಒಟ್ಟಿಗೆ ಆಚರಿಸಿದ ಪ್ರಶಾಂತ್ ನೀಲ್- Jr. NTR ಕುಟುಂಬ; ಫೋಟೋ ವೈರಲ್

ಸಾರಾಂಶ

ಜೂ.ಎನ್ ಟಿ ಆರ್ ಮತ್ತು ಪ್ರಶಾಂತ್ ನೀಲ್ ಅವರ ಮದುವೆ ವಾರ್ಷಿಕೋತ್ಸವ ಒಂದೇ ದಿನ. ಇಬ್ಬರ ಮದುವೆ ದಿನಾಂಕ ಮೇ 5. ಹಾಗಾಗಿ ಎರಡು ಕುಟುಂಬದವರು ಒಟ್ಟಿಗೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡು ಸಂಭ್ರಮಿಸಿದ್ದಾರೆ.

ಸ್ಯಾಂಡಲ್ ವುಡ್‌ನ ಬ್ಲಾಕ್ ಬಸ್ಟರ್ ನಿರ್ದೇಶಕ ಪ್ರಶಾಂತ್ ನೀಲ್(Prashanth Neel) ಮತ್ತು ಟಾಲಿವುಡ್ ಸ್ಟಾರ್ ನಟ ಜೂ.ಎನ್ ಟಿ ಆರ್(Jr NTR) ಇಬ್ಬರು ಸಕ್ಸಸ್‌ನ ಅಲೆಯಲ್ಲಿ ತೇಲುತ್ತಿದ್ದಾರೆ. ಪ್ರಶಾಂತ್ ನೀಲ್ ಕೆಜಿಫ್-2(KGF 2) ಸೂಪರ್ ಸಕ್ಸಸ್‌ನಲ್ಲಿದ್ದರೆ ಜೂ.ಎನ್ ಟಿ ಆರ್ ಆರ್ ಆರ್ ಆರ್(RRR) ಸಿನಿಮಾದ ಗೆಲುವಿನ ಸಂಭ್ರಮದಲ್ಲಿದ್ದಾರೆ. ಇದೇ ಖುಷಿಯಲ್ಲಿ ಇಬ್ಬರೂ ಕುಟುಂಬದವರು ಮದುವೆ ವಾರ್ಷಿಕೋತ್ಸವವನ್ನು ಒಟ್ಟಿಗೆ ಸೆಲೆಬ್ರೇಟ್ ಮಾಡಿದ್ದಾರೆ. ಹೌದು, ಜೂ.ಎನ್ ಟಿ ಆರ್ ಮತ್ತು ಪ್ರಶಾಂತ್ ನೀಲ್ ಅವರ ಮದುವೆ ವಾರ್ಷಿಕೋತ್ಸವ ಒಂದೇ ದಿನ. ಇಬ್ಬರ ಮದುವೆ ದಿನಾಂಕ ಮೇ 5. ಹಾಗಾಗಿ ಎರಡು ಕುಟುಂಬದವರು ಒಟ್ಟಿಗೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡು ಸಂಭ್ರಮಿಸಿದ್ದಾರೆ.

ಪ್ರಶಾಂತ್ ನೀಲ್ ಮತ್ತು ಪತ್ನಿ ಹಾಗೂ ಜೂ.ಎನ್ ಟಿ ಆರ್ ಹಾಗು ಅವರ ಪತ್ನಿ ಒಟ್ಟಿಗೆ ಇರುವ ಫೋಟೋವನ್ನು ಶೇರ್ ಮಾಡಿ ಪ್ರಶಾಂತ್ ನೀಲ್ ಮತ್ತು ಜೂ.ಎನ್ ಟಿ ಆರ್ ವಿವಾಹ ವಾರ್ಷಿಕೋತ್ಸವಕ್ಕೆ ಪರಸ್ಪರ ವಿಶ್ ಮಾಡಿಕೊಂಡಿದ್ದಾರೆ. ಎರಡು ಕುಟುಂಬ ಒಟ್ಟಿಗೆ ಸೇರಿ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿದ ಸಂಭ್ರಮದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಭಿಮಾನಿಗಳು ಸಹ ಸ್ಟಾರ್ ಜೋಡಿಗಳಿಗೆ ಶುಭಾಶಯ ತಿಳಿಸಿ ಹಾರ್ಟ್ ಇಮೋಜಿ ಹಾಕುತ್ತಿದ್ದಾರೆ.

ಜೂ.ಎನ್ ಟಿ ಆರ್ ಫೋಟೋ ಶೇರ್ ಮಾಡಿ ಒಂದೇ ದಿನ ಮದುವೆ ವಾರ್ಷಿಕೋತ್ಸವ ಹಂಚಿಕೊಂಡಾಗ ಅದು ಸಂಭ್ರಮಾಚರಣೆ ಆಗಿರುತ್ತದೆ. ಹೊಸ ಆರಂಭ ಎಂದು ಕ್ಯಾಪ್ಷನ್ ನೀಡಿದ್ದಾರೆ. ಅಂದಹಾಗೆ ಎರಡು ಕುಟುಂಬವನ್ನು ಒಟ್ಟಿಗೆ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಪ್ರಶಾಂತ್ ನೀಲ್ ಮತ್ತು ಜೂ.ಎನ್ ಟಿ ಆರ್ ಕಾಂಬಿನೇಷನ್ ನ ಸಿನಿಮಾದ ಬಗ್ಗೆಯೂ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ. ಹೊಸ ಸಿನಿಮಾವನ್ನು ಯಾವಾಗ ಅನೌನ್ಸ್ ಮಾಡುತ್ತೀರಿ ಎಂದು  ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

Happy anniversary ಪ್ರಶಾಂತ್‌ ನೀಲ್‌: ಹೆಂಡ್ತಿ ಅಂದ್ರೆ ಈಗ್ಲೂ ನಾಚ್ಕೊಳ್ತಾರೆ ಕೆಜಿಎಫ್ ಡೈರೆಕ್ಟ್ರು!

ಪ್ರಶಾಂತ್ ನೀಲ್ ಮತ್ತು ಜೂ.ಎನ್.ಟಿ.ಆರ್ ಸಿನಿಮಾದ ಮೇಲೆ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಿದೆ. ದೊಡ್ಡ ಮಟ್ಟದ ಹಿಟ್ ನೀಡಿರುವ ನಿರ್ದೇಶಕ ಮತ್ತು ತೆಲುಗು ಸ್ಟಾರ್ ಜೋಡಿಯ ಸಿನಿಮಾ ಹೇಗಿರಲಿದೆ, ಯಾವಾಗ ಅಧಿಕೃತವಾಗಿ ಬಹಿರಂಗ ಪಡಿಸಲಿದ್ದಾರೆ ಎಂದು ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ.


ಹಿಂದಿಯಲ್ಲಿ ಅತಿ ಹೆಚ್ಚು ಗಳಿಕೆ ಕಂಡ 2ನೇ ಸಿನಿಮಾ ಕೆಜಿಎಫ್‌ 2!

 

ಕೆಜಿಎಫ್-2 ಮತ್ತು ಆರ್ ಆರ್ ಆರ್ ಸಿನಿಮಾ ಬಿಡುಗಡೆಯಾಗಿ 16 ದಿನಗಳಲ್ಲಿ 1000 ಕೋಟಿ ಕ್ಲಬ್ ಸೇರುತ್ತು. ಎರಡು ಸಿನಿಮಾಗಳು ಒಂದೇ ಅಂತರದಲ್ಲಿ 1000 ಕೋಟಿಯ ಗಡಿದಾಟಿದ್ದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತ್ತು. ಭಾರತೀಯ ಸಿನಿಮಾರಂಗದಲ್ಲಿ ದಕ್ಷಿಣ ಭಾರತದ ಸಿನಿಮಾಗಳ ಹವಾ ಜೋರಾಗಿದೆ. ಬಾಲಿವುಡ್ ಮಂದಿಯನ್ನು ಮಂಕಾಗಿಸಿರುವ ದಕ್ಷಿಣದ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ದೂಳ್ ಎಬ್ಬಿಸಿವೆ. ಮುಂದಿನ ದಿನಗಳಲ್ಲಿ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದ್ದು ಯಾವ ರೀತಿಯ ಸಿನಿಮಾಗಳು ಮೂಡಿಬರಲಿವೆ ಎಂದು ಕಾತರದಿಂದ ಕಾಯುತ್ತಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?