ಸುಶಾಂತ್ ಸಿಂಗ್ ಸಾವಿನ ಪ್ರಕರಣ/ ವಿಡಿಯೋ ಸಂದೇಶದ ಮೂಲಕ ಪ್ರತ್ಯಕ್ಷವಾದ ರಿಯಾ ಚಕ್ರವರ್ತಿ/ ಸತ್ಯಕ್ಕೆ ಜಯವಾಗಲಿದೆ ಎಂದ ನಟಿ/ ಹೆಚ್ಚಿಗೆ ಏನನ್ನೂ ಮಾತನಾಡುವುದಿಲ್ಲ
ಮುಂಬೈ(ಜು. 31) ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದ ಸುಶಾಂತ್ ಗೆಳತಿ ರಿಯಾ ಇದೀಗ ವಿಡಿಯೋ ಸಂದೇಶದ ಮೂಲಕ ಪ್ರತ್ಯಕ್ಷವಾಗಿದ್ದಾರೆ. ನಮ್ಮ ಸುತ್ತಲೂ ಕೆಟ್ಟ ಸಂಗತಿಗಳು ನಡೆಯುತ್ತಿದ್ದು ಸತ್ಯಕ್ಕೆ ಜಯವಾಗಲಿದೆ ಎಂದಿದ್ದಾರೆ.
ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಂಪೂರ್ಣ ನಂಬಿಕೆ ಇದೇ. ನನಗೆ ನ್ಯಾಯ ಸಿಗುವ ವಿಶ್ವಾಸವಿದೆ. ಪ್ರಕರಣ ಕೋರ್ಟ್ ನಲ್ಲಿದ್ದು, ಈ ಕುರಿತು ನಾನು ಹೆಚ್ಚಿಗೆ ಏನನ್ನು ಹೇಳಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಇದ್ದಕ್ಕಿದ್ದಂತೆ ಮುಂಬೈನಿಂದ ನಾಪತ್ತೆಯಾದ ರಿಯಾ ಚಕ್ರವರ್ತಿ
ಮಾಧ್ಯಮಗಳಲ್ಲಿ ಸಾಕಷ್ಟು ಸಂಗತಿಗಳನ್ನು ಹೇಳಲಾಗುತ್ತಿದ್ದು, ನಾನು ನನ್ನ ವಕೀಲರ ಸಲಹೆಯ ಮೇರೆಗೆ ಹೆಚ್ಚಿಗೆ ಏನನ್ನು ಮಾತನಾಡಲ್ಲ. ಸತ್ಯವೇ ಕೊನೆಗೆ ಉಳಿಯಲಿದೆ, ಸತ್ಯಮೇವ ಜಯತೆ ಎಂದು ಹೇಳಿ ಸಂದೇಶ ಮುಗಿಸಿದ್ದಾರೆ.
ಇನ್ನೊಂದು ಕಡೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಹಾಗೂ ಅವರ ಸಹೋದರ ಶೋವಿಕ್ ಚಕ್ರವರ್ತಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿದ್ದಾರೆ. ಸುಶಾಂತ್ ಸಿಂಗ್ ತಂದೆ ಸಹ ರಿಯಾ ವಿರುದ್ಧ ದೂರು ನೀಡಿದ್ದಾರೆ.
ಸುಶಾಂತ್ ಸಿಂಗ್ ಸಾವಿನ ನಂತರ ಒಂದೆಲ್ಲಾ ಒಂದು ಬೆಳವಣಿಗೆ ನಡೆಯುತ್ತಲೇ ಇದೆ. ಬಿಹಾರ ಪೊಲೀಸರು ಬಂದಾಗ ರಿಯಾ ಮುಂಬೈನಿಂದ ನಾಪತ್ತೆಯಾಗಿದ್ದರು ಎನ್ನಲಾಗಿತ್ತು.