
ಸಾಮಾನ್ಯವಾಗಿ ಎಸ್‌ಪಿಬಿ ಯಾವುದೇ ಹಾಡಿನ ಶೂಟಿಂಗ್‌ಗೂ ಅರ್ಧ ದಿನಕ್ಕಿಂತ ಹೆಚ್ಚಿಗೆ ತೆಗೆದುಕೊಳ್ಳುತ್ತಿರಲಿಲ್ಲ. ಅವರು ಸ್ಟುಡಿಯೋಗೆ ಬರುತ್ತಿದ್ದರು, ಹಾಡಿನ ಕಾಪಿ ಪಡೆಯುತ್ತಿದ್ದರು. ಅದರ ಮೇಲೆ ಕಣ್ಣಾಡಿಸುತ್ತಿದ್ದರು. ಸಂಗೀತ ನಿರ್ದೇಶಕರ ಜತೆಗೆ ಒಂದು ಬಾರಿ ಮಾತನಾಡಿ ಟ್ಯೂನ್ ಖಚಿತಪಡಿಸಿಕೊಂಡು, ಒಮ್ಮೆ ಗಂಟಲು ಸರಿ ಆಡಿಕೊಂಡು ಹಾಡಲು ಶುರುಮಾಡುತ್ತಿದ್ದರು. ಸಾಮಾನ್ಯವಾಗಿ ಒಂದೆರಡು ಟೇಕ್‌ಗಳಲ್ಲಿ ಅದನ್ನು ಪರ್‌ಫೆಕ್ಟಾಗಿ ಹಾಡಿ ಮುಗಿಸಿ ಇನ್ನೊಂದು ಹಾಡಿಗೆ ಹೋಗುತ್ತಿದ್ದರು. ಆದರೆ ಒಂದು ಹಾಡಿಗೆ ಮಾತ್ರ ಅವರು 9 ದಿನ ತೆಗೆದುಕೊಂಡರಂತೆ. ಆ ಹಾಡು ಯಾವುದು ಗೊತ್ತೆ? ಕನ್ನಡದಲ್ಲಿ ಶಂಕರ್‌ನಾಗ್ ಮತ್ತು ಅಕ್ಷತಾ ರಾವ್ ಜತೆಯಾಗಿ ನಟಿಸಿದ 'ಗೀತಾ' ಫಿಲಂನ 'ಜೊತೆಯಲಿ ಜೊತೆ ಜೊತೆಯಲಿ ಹೀಗೆ ಎಂದೂ' ಪದ್ಯ! ಇಳಯರಾಜ ಇದರ ಸಂಗೀತ ನಿರ್ದೇಶಕರಾಗಿದ್ದರು. ಎಷ್ಟು ಸಲ ಹಾಡಿದರೂ ಎಸ್‌ಪಿಬಿಗೆ ಅದು ತೃಪ್ತಿ ತರಲಿಲ್ಲವಂತೆ. ''ಈ ಹಾಡಿಗೆ ನಾನು ನ್ಯಾಯ ಸಲ್ಲಿಸಿಲ್ಲ. ಇನ್ನೊಂದು ಟೇಕ್ ತೆಗೆದುಕೊಳ್ಳೋಣ'' ಎಂದು ಮತ್ತೊಮ್ಮೆ ಹಾಡಲು ಕೂತುಬಿಡುತ್ತಿದ್ದರಂತೆ. ಒಂದು ಹಂತದಲ್ಲಿ ಇಳಯರಾಜ ಅವರೇ ಸಾಕು ಬಿಡಿ ಎಂದು ಹೇಳಿದರೂ ಎಸ್‌ಪಿಬಿ ಸಮಾಧಾನಗೊಳ್ಳಲಿಲ್ಲ. ಒಂಬತ್ತನೇ ದಿನ ಹಾಡಿದ್ದು ಅವರಿಗೆ ಸಮಾಧಾನ ತಂದಿತಂತೆ.
ಎಸ್‌ಪಿಬಿ- ಇಳಯರಾಜ ಪ್ರೀತಿ ದ್ವೇಷದ ಸಂಬಂಧ
ಎಸ್‌ಪಿಬಿ ಹಾಗೂ ಸಂಗೀತ ನಿರ್ದೇಶಕ ಇಳಯರಾಜ ಅವರದು ಒಂಥರಾ ಪ್ರೀತಿ ದ್ವೇಷದ ಸಂಬಂಧ. ತಮ್ಮ ಫಿಲಂಗಳಲ್ಲಿ ಬಾಲಮುರಳಿಕೃಷ್ಣ, ಜೇಸುದಾಸ್ರಂಥವರನ್ನು ಹಾಡಿಸುತ್ತಿದ್ದ ಇಳಯರಾಜ ಮೊದಲು ಎಸ್‌ಪಿಬಿಗೆ ಟ್ರ್ಯಾಕ್ ಹಾಡು ಹಾಡಲು ಆಹ್ವಾನಿಸಿದರಂತೆ. ಆದರೆ ಟ್ರ್ಯಾಕ್ ಹಾಡಲು ಎಸ್‌ಪಿಬಿ ನಿರಾಕರಿಸಿದರು. ಯಾಕೆಂದರೆ ಅದು ಜೂನಿಯರ್‌ಗಳ ಕೆಲಸವಾಗಿತ್ತು. ತೆಲುಗಿನಲ್ಲಿ ಆಗಲೇ ತುಸು ಖ್ಯಾತಿ ಪಡೆದಿದ್ದ ಎಸ್‌ಪಿಬಿಗೆ ತಮಿಳಿನಲ್ಲಿ ಟ್ರ್ಯಾಕ್ ಹಾಡುವುದು ಮನಸ್ಸಿಗೆ ಇಷ್ಟವಿರಲಿಲ್ಲ. ಕಡೆಗೆ ಇಳಯರಾಜ ತಮ್ಮ ಫಿಲಂನಲ್ಲಿ ಎರಡು ಹಾಡನ್ನು ಬಾಲುಗೆ ನೀಡಿದರು. ಅದು ಹಿಟ್ ಆಯಿತು. ಅಲ್ಲಿಂದ ಇಬ್ಬರೂ ಹತ್ತಿರವಾದರು.
Oscars 2023ಗೆ ಅಧಿಕೃತ ಪ್ರವೇಶವಾಗದ RRR ಚಿತ್ರ: ಅಭಿಮಾನಿಗಳ ಆಕ್ರೋಶ
ಮುಂದೆ ಎಆರ್ ರೆಹಮಾನ್ ಪ್ರವರ್ಧಮಾನಕ್ಕೆ ಬರತೊಡಗಿದಾಗ, ರೆಹಮಾನ್ ಫಿಲಂಗಳಲ್ಲಿ ಹಾಡದಂತೆ ಬಾಲುಗೆ ಇಳಯರಾಜ ನಿರ್ಬಂಧ ಹಾಕಿದರು. ಆದರೆ ಅದನ್ನು ನಿರಾಕರಿಸಿ ಬಾಲು ಅವರು ರೆಹಮಾನ್ ಸಂಗೀತ ನಿರ್ಧೇಶನದ ರೋಜಾ ಫಿಲಂಗೆ ಹಾಡಿದರು. ಈ ಜೋಡಿ ಅದ್ಭುತ ಹಿಟ್ ಆಯಿತು. ಮುಂದೆ ಹಲವು ಫಿಲಂಗಳಲ್ಲಿ ಈ ಜೋಡಿ ಮಿಂಚಿತು. ಇಳಯರಾಜ, ಬಾಲು ಜತೆಗೆ ಮಾತು ಬಿಟ್ಟರು, ಮುಂದೆಂದೋ ಇಬ್ಬರೂ ಮತ್ತೆ ರಾಜಿಯಾದರು.
2017ರಲ್ಲಿ ಮತ್ತೆ ಜಗಳವಾಯಿತು, ತಮ್ಮ ನಿರ್ದೇಶನದ ಯಾವುದೇ ಹಾಡು ಹಾಡದಂತೆ ಬಾಲು ಮೇಲೆ ಇಳಯರಾಜ ಸ್ಟೇ ಆರ್ಡರ್ ತಂದರು. ಬಾಲು ಎದುರಾಡಲಿಲ್ಲ. ಜಗಳವಾಡುವ ಸ್ವಭಾವವೇ ಬಾಲು ಅವರದಾಗಿರಲಿಲ್ಲ. ಮುಂದೆ ಇಬ್ಬರೂ ಸರಿಹೋದರು.
ಮಗಳ ಜೊತೆಯ ಕ್ಯೂಟ್ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ!
ಓಡಿಸಿಕೊಂಡು ಹೋಗಿ ಮದುವೆಯಾದ ಬಾಲು
ಬಾಲು ಅವರ ಮದುವೆಯ ಹಿಂದೆ ಅಪಹರಣ(Kidnap)ದ ಕತೆಯಿದೆ. ಸಾವಿತ್ರಿ ಅವರನ್ನು ಬಾಲು ಪ್ರೀತಿಸಿದ್ದರು. ಎರಡೂ ಕುಟುಂಬಗಳಲ್ಲಿಯೂ ಈ ಮದುವೆ(Marriage)ಗೆ ವಿರೋಧ ಇತ್ತು. ಇಂಥ ಸಂದರ್ಭದಲ್ಲಿ ಸಾವಿತ್ರಿ ಬೆಂಗಳೂರಿನಲ್ಲಿರುವ ತಮ್ಮ ಸಹೋದರರ ಮನೆಗೆ ಬಂದಿದ್ದರು. ಇದೇ ಅವಕಾಶ ಬಳಸಿಕೊಂಡ ಬಾಲು ಗೆಳೆಯಯರಾದ ಮುರುಳಿ ಮತ್ತು ವಿಠ್ಠಲ್ ನೆರವಿನಿಂದ ಸಾವಿತ್ರಿಯವರನ್ನು ಕರೆದುಕೊಂಡು ಹೋಗಿ ಸಿಂಹಾಚಲಂನಲ್ಲಿ ಮದುವೆಯಾದರು. ಸುಬ್ರಮಣಿಯನ್ ಎಂಬ ಸ್ನೇಹಿತರು ಕನ್ಯಾದಾನ ನೆರವೇರಿಸಿದದರು. ಈ ಸಂದರ್ಭ ಸ್ನೇಹಿತರ ಗುಂಪಿನ ಬಳಿ ಇದ್ದಿದ್ದು ಕೇವಲ 500 ರೂ. ಒಬ್ಬರಿಗೆ ಒಬ್ಬರು ಹೇಗೋ ಸಹಕಾರಿಸಿಕೊಂಡು ಮದ್ರಾಸ್ ತಲುಪಿದರು. ಮದುವೆಯಾದ ಮೇಲೆ ಎರಡೂ ಕುಟುಂಬಗಳು ಸುಮಾರು ಎರಡು ವರ್ಷ ಕಾಲ ಎಸ್‌ಪಿಬಿ ದಂಪತಿಯನ್ನು ಮಾತನಾಡಿಸುತ್ತಿರಲಿಲ್ಲ. ಮಗಳು ಪಲ್ಲವಿ ಜನಿಸಿದ ಮೇಲೆ ನಿಧಾನಕ್ಕೆ ವಾತಾವರಣ ತಿಳಿಯಾಯಿತು.
ಮುಹಮ್ಮದ್ ರಫಿ ಕೋಟ್
ಹಂಸಲೇಖ ಸಂಗೀತ ನಿರ್ದೇಶನದ 'ಗಾನಯೋಗಿ ಪಂಚಾಕ್ಷರಿ ಗವಾಯಿ ಚಿತ್ರದ ಹಾಡಿಗೆ ಎಸ್‌ಪಿಬಿ ಅವರಿಗೆ ರಾಷ್ಟ್ರ ಪ್ರಶಸ್ತಿ(National Award) ಬಂತು. ಹಂಸಲೇಖ ಅವರಿಗೂ ಬಂತು. ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಂಸಲೇಖ ಹೋದಾಗ, ಒಳಗೆ ಎಸ್‌ಪಿಬಿ ಒಂದು ಕೋಟ್ ಹಾಕಿಕೊಂಡು ಧ್ಯಾನಸ್ಥರಾಗಿ ಕೂತಿದ್ದರು. 'ಕೇಳಿದಾಗ ಅವರು ಹೇಳಿದ್ದು- '‘ಇದು ರಫಿ ಅವರು ಹಾಕುತ್ತಿದ್ದಂಥದ್ದೇ ಬಟ್ಟೆಯಿಂದ ನಾನು ಹೊಲಿಸಿಕೊಂಡ ಕೋಟ್. ಕನ್ನಡದ ಹಾಡಿಗೆ ಪ್ರಶಸ್ತಿ ಬಂದರೆ ರಫಿ ಅವರ ಬಟ್ಟೆಯಿಂದ ಕೋಟ್ ಮಾಡಿಸಿಕೊಂಡು ಪ್ರಶಸ್ತಿ ಸ್ವೀಕರಿಸಬೇಕು ಅನ್ನುವುದು ನನ್ನ ಕನಸಾಗಿತ್ತು’ ಅಂದರಂತೆ.
ಹಂಸಲೇಖ ಹೇಳಿದ ಒಂದು ತಮಾಷೆ
ಒಮ್ಮೆ ಎಸ್‌ಪಿಬಿಯವರ ಗಂಟಲಿಗೆ ರೆಸ್ಟ್ (Rest) ಬೇಕಾಗಿತ್ತು. ಹಾಡುವುದು ನಿಲ್ಲಿಸಿ ಮನೆಯಲ್ಲಿದ್ದರು. ಹಂಸಲೇಖ ಅಲ್ಲಿಗೆ ಹೋದರು. ಎಸ್‌ಪಿಬಿ ಪುಸ್ತಕ ಓದುತ್ತಾ ಕುಳಿತಿದ್ರು. ’ಸೌಖ್ಯವೇ’ ಅಂತ ಸನ್ನೆ ಮಾಡಿ ಕೇಳಿದರು ಹಂಸ. ಬಾಲು ತಲೆ ಆಡಿಸಿದರು. 'ಹುಷಾರು ಸಾರ್' ಅಂತ ಹಂಸ ಮತ್ತೆ ಸನ್ನೆ ಮಾಡಿ ಹೇಳಿದರು. ಆಗ ಬಾಲು ಅವರು ಪಕ್ಕದಲ್ಲಿಟ್ಟುಕೊಂಡಿದ್ದ ಖಾಲಿ ನೋಟ್ ಬುಕ್(Note book) ನಲ್ಲಿ ಏನೋ ಬರೆದು ಹಂಸಲೇಖ ಮುಖಕ್ಕೆ ಹಿಡಿದರು. ಅದರಲ್ಲಿ ಹೀಗೆ ಬರೆದಿತ್ತು- ''ಕೆಟ್ಟಿರೋದು ನನ್ನ ಗಂಟಲು, ನಿನ್ನ ಗಂಟಲಿಗೇನಾಗಿದೆ?''
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.