ಸಾಮಿ ಸಾಮಿ ಡಾನ್ಸ್​ ಇನ್ನು ಮಾಡೋಲ್ಲ ಎಂದ Rashmika Mandanna: ಕಾರಣ ಕೇಳಿ ಫ್ಯಾನ್ಸ್ ಸುಸ್ತು!

By Suvarna News  |  First Published Mar 22, 2023, 11:00 AM IST

ಪುಷ್ಪಾ ಸಿನಿಮಾದ ಸಾಮಿ ಸಾಮಿ ಹಾಡಿನಿಂದ ಖ್ಯಾತಿ ಪಡೆದಿರೋ ನಟಿ ರಶ್ಮಿಕಾ ಮಂದಣ್ಣ ಇನ್ನು ಮುಂದೆ ಈ ಹಾಡಿಗೆ ನೃತ್ಯ ಮಾಡಲ್ಲ ಎಂದಿದ್ದಾರೆ. ಕಾರಣವೇನು?
 


ಹೆಚ್ಚಾಗಿ ನೆಗೆಟಿವ್​ ಸುದ್ದಿಗಳಿಂದಲೇ ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ ನಟಿ ರಶ್ಮಿಕಾ ಮಂದಣ್ಣ ಸುದ್ದಿಯಲ್ಲಿದ್ದಾರೆ. ನ್ಯಾಷನಲ್​ ಕ್ರಷ್​ ಎಂದು ಎನಿಸಿಕೊಂಡಿರೋ ಈ ಬೆಡಗಿ ಅದ್ಯಾಕೋ ಇತ್ತೀಚಿನ ದಿನಗಳಲ್ಲಿ  ಅತ್ಯಂತ ಕಡಿಮೆ ಉಡುಪು ತೊಟ್ಟು, ಒಳ ಉಡುಪು ಧರಿಸದೇ... ಹೀಗೆ ಹಲವು ವೇಷಗಳಲ್ಲಿ ದೊಡ್ಡ ದೊಡ್ಡ ವೇದಿಕೆಯ ಮೇಲೆ ಕಾಣಿಸಿಕೊಂಡು ಟ್ರೋಲ್​ ಆಗುತ್ತಿದ್ದಾರೆ. ಬಾಲಿವುಡ್ (Bollywood) ಅಂಗಳದ ನೀರು ಕುಡಿದ ಮೇಲೆ ಇದೀಗ ರಶ್ಮಿಕಾ ಮತ್ತಷ್ಟು ಬೋಲ್ಡ್ ಆಗಿದ್ದಾರೆ. ಸದಾ ಒಂದಲ್ಲಾ ಒಂದು ಫೋಟೋಶೂಟ್‌ನಿಂದ ಪಡ್ಡೆಹುಡುಗರ ನಿದ್ದೆ ಕದಿಯುತ್ತಿದ್ದಾರೆ.  ಅಭಿಮಾನಿಗಳ (Fans)ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಒಳ್ಳೊಳ್ಳೆ ಆಫರ್​ಗಳು ಸಿಗುತ್ತಿವೆ. ಅತ್ಯಂತ ಕಡಿಮೆ ಅವಧಿಯಲ್ಲಿ ಸ್ಯಾಂಡಲ್‌ವುಡ್‌, ಟಾಲಿವುಡ್‌, ಕಾಲಿವುಡ್‌, ಬಾಲಿವುಡ್‌... ಹೀಗೆ ವಿಭಿನ್ನ ಭಾಷಾ ಚಿತ್ರಗಳಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ ನಟಿ. ಸ್ಯಾಂಡಲ್‍ವುಡ್ ಸಾನ್ವಿ, ಟಾಲಿವುಡ್ ಶ್ರೀವಲ್ಲಿ (Tollywood Shreevalli) ನಟಿ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್‍ನಲ್ಲಿ ಗುರುತಿಸಿಕೊಂಡಿದ್ದಾರೆ. ಹಿಂದಿ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ ಕಲಾವಿದರ ಜೊತೆ ಸಿನಿಮಾ ಮಾಡ್ತಾ ಇದ್ದಾರೆ. 

ಇವರು ಭಾರಿ ಫೇಮಸ್​ ಆಗಿದ್ದು, ಅವರ 'ಪುಷ್ಪಾ' (Pushpa) ಸಿನಿಮಾದ ಸೂಪರ್‌ ಹಿಟ್‌ ಹಾಡು 'ಸಾಮಿ ಸಾಮಿ'ಯಿಂದಾಗಿ. ಸುಕುಮಾರ್ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ 'ಪುಷ್ಪ', ಅಲ್ಲು ಅರ್ಜುನ್ ನಾಯಕನಾಗಿ ನಟಿಸಿದ್ದು, ಡಿಸೆಂಬರ್ 17, 2021 ರಂದು ಬಿಡುಗಡೆಯಾಗಿತ್ತು. ಈ ಚಿತ್ರದ ಸಾಮಿ ಸಾಮಿ ಹಾಡು ದಾಖಲೆ ಬರೆದಿತ್ತು. ಈ ಹಾಡಿನ ಪೂರ್ಣ ವಿಡಿಯೋ ಯೂಟ್ಯೂಬ್‌ನಲ್ಲಿ 100 ಮಿಲಿಯನ್ ವೀಕ್ಷಣೆಯೊಂದಿಗೆ ದಾಖಲೆಯನ್ನು ಮಾಡಿದೆ. ಈ ಸಿನಿಮಾದ ಇತರ ಹಾಡುಗಳಿಗೂ ಬಹುತೇಕ ಅದೇ ರೇಂಜ್ ರೆಸ್ಪಾನ್ಸ್ ಸಿಕ್ಕಿತ್ತು. ಈ ಹಾಡು ಸಕತ್​ ಹಿಟ್​ ಆದ ಬಳಿಕ ಜಾಲತಾಣಗಳ ರೀಲ್ಸ್​ನಲ್ಲಿ ಇದರ ಹಾಡಿನ ರೀಲ್ಸ್​ಗಳೇ ತುಂಬಿ ಹೋಗಿದ್ದವು. ಚಿತ್ರ ತಾರೆಯರೂ ಸ್ಟೆಪ್​ ಹಾಕುವಷ್ಟರ ಮಟ್ಟಿಗೆ ಈ ಹಾಡು ಹಿಟ್​ ಆಯಿತು. ಖುದ್ದು ರಶ್ಮಿಕಾ ಮಂದಣ್ಣ ಅವರೇ ಹಲವು ಬಾರಿ ಹಾಡಿಗೆ ಡಾನ್ಸ್​ ಮಾಡಿದರು. ಅವರ ಅಭಿಮಾನಿಗಳೂ ಹೋದಲ್ಲಿ, ಬಂದಲ್ಲಿ ಈ ಹಾಡನ್ನೇ ಅವರಿಂದ ಕೇಳುತ್ತಿದ್ದರು.

Tap to resize

Latest Videos

ಜಪಾನೀಸ್‌ ಫ್ಯಾಷನ್‌ ಬ್ರಾಂಡ್‌: ದೇಶದಲ್ಲೇ ಮೊದಲ ಬಾರಿಗೆ Rashmika Mandanna ರಾಯಭಾರಿ

ಆದರೆ ಈಗ ರಶ್ಮಿಕಾ ಮಂದಣ್ಣ ಹೇಳಿಕೆಯೊಂದನ್ನು ನೀಡಿ ಅಭಿಮಾನಿಗಳಿಗೆ ಶಾಕ್​ ಕೊಟ್ಟಿದ್ದಾರೆ. ಅದೇನೆಂದರೆ ಸಾಮಿ ಸಾಮಿ ಹಾಡಿಗೆ ಇನ್ನು ಮುಂದೆ ಹೆಜ್ಜೆ ಹಾಕುವುದಿಲ್ಲ ಎಂದಿದ್ದಾರೆ. ಅಷ್ಟಕ್ಕೂ ಅವರು ಎಲ್ಲಿ, ಯಾವಾಗ ಹೀಗೆ ಹೇಳಿದರು ಎನ್ನುವ ಕುತೂಹಲವೆ? ಈಗ ಚಿತ್ರ ನಟ-ನಟಿಯರ ಒಂದು ಟ್ರೆಂಡ್​ ಶುರುವಾಗಿದೆ. ಫ್ಯಾನ್ಸ್​ ಬಳಗವನ್ನು ಹೆಚ್ಚು ಮಾಡಿಕೊಳ್ಳುವ ತಂತ್ರ ಅದು. ಇದಾಗಲೇ ಶಾರುಖ್​  ಸೇರಿದಂತೆ ಕೆಲ ನಟ-ನಟಿಯರು ಇದನ್ನು ಶುರುಮಾಡಿದ್ದಾರೆ. ಅದೇನೆಂದರೆ, ಟ್ವಿಟ್ಟರ್‌ನಲ್ಲಿ ನಡೆದ 'ಆಸ್ಕ್‌ ಮಿ ಎನಿಥಿಂಗ್‌' ಸೆಷನ್‌ ನಡೆಸುವುದು, ಅಲ್ಲಿ ಅಭಿಮಾನಿಗಳಿಗೆ ಪ್ರಶ್ನೆ ಕೇಳಲು ಅವಕಾಶ ಕೊಟ್ಟು ಅದಕ್ಕೆ ಉತ್ತರಿಸುವುದು.
 
ರಶ್ಮಿಕಾ ಮಂದಣ್ಣ ಅವರೂ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಅಭಿಮಾನಿಯೊಬ್ಬರು  ನಾನು ನಿಮ್ಮೊಂದಿಗೆ ಸಾಮಿ ಸಾಮಿ (Sami Sami) ಹಾಡಿಗೆ ಹೆಜ್ಜೆ ಹಾಕಬೇಕು ಎಂದಿದ್ದರು. ಅದಕ್ಕೆ ರಶ್ಮಿಕಾ, ಅದು ಸಾಧ್ಯವೇ ಇಲ್ಲ, ನಾನು ಇನ್ನುಮುಂದೆ ಈ ನೃತ್ಯ ಮಾಡಲ್ಲ ಎಂದಿದ್ದಾರೆ. ಅದಕ್ಕೆ ಕಾರಣ ನೀಡಿರುವ ಅವರು, 'ನಾನು ಈಗಾಗಲೇ ಈ ಹಾಡಿಗೆ ಹಲವಾರು ಬಾರಿ ನೃತ್ಯ ಮಾಡಿಯಾಗಿದೆ, ಅಲ್ಲದೆ ಈ ಹಾಡಿಗೆ ನಾನು ಎಷ್ಟು ನೃತ್ಯ ಬಾರಿ ಮಾಡಿದ್ದೇನೆ ಎಂದರೆ ವಯಸ್ಸಾದ ಮೇಲೆ ನನಗೆ ಬೆನ್ನು ನೋವು ಕಾಣಿಸಬಹುದು, ಅಷ್ಟು ಕುಣಿದಿದ್ದೇನೆ. ಅದಕ್ಕೆ ಇನ್ಮುಂದೆ ಜಪ್ಪಯ್ಯ ಎಂದರೂ ಇದಕ್ಕೆ ಡಾನ್ಸ್​ ಮಾಡಲ್ಲ'  ಎಂದು ಚಟಾಕಿ ಹಾರಿಸಿದ್ದಾರೆ.

ಶುಭ್‌ಮನ್ ಗಿಲ್‌ಗೆ ರಶ್ಮಿಕಾ ಮೇಲೆ ಕ್ರಶ್: ಹೀಗಂತ ಎಲ್ಲಿ ಹೇಳಿದೆ ಕೇಳಿದ ಕ್ರಿಕೆಟಿಗ

ಟ್ವಿಟ್ಟರ್‌ನಲ್ಲಿ ಅಭಿಮಾನಿಗಳ ಜೊತೆ ಸಂವಾದ ನಡೆಸಿದ ರಶ್ಮಿಕಾ, ಇನ್ನು ಹಲವಾರು ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.  ಸದ್ಯದಲ್ಲೇ ದಳಪತಿ ವಿಜಯ್‌ ಜೊತೆ ಇನ್ನೊಂದು ಸಿನಿಮಾ ಮಾಡುವುದಾಗಿಯೂ ಹಿಂಟ್‌ ನೀಡಿದ್ದಾರೆ. ಅಲ್ಲದೆ ಈ ಚಿತ್ರದ ಬಗ್ಗೆ ಶೀಘ್ರದಲ್ಲಿ ತಿಳಿಸುವುದಾಗಿಯೂ ಹೇಳಿದ್ದಾರೆ.  ನಾಯಿಯ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು,  ಪ್ರಸ್ತುತ ಶೂಟಿಂಗ್‌ ಕಾರಣದಿಂದಾಗಿ ಮುಂಬೈನಲ್ಲಿದ್ದೇನೆ. ನಾಯಿಯನ್ನು ಮಿಸ್​  ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.
 

click me!