ಸಹಾಯಕಿಯ ಮೇಲೆ ಎಗರಾಡಿದ ರಶ್ಮಿಕಾ ಮಂದಣ್ಣ; ಪ್ರಮೋಷನ್‌ಗೆ ಏನ್ಬೇಕಾದ್ರೂ ಮಾಡ್ತಾರೆ ಎಂದ ನೆಟ್ಟಿಗರು

By Shruthi KrishnaFirst Published May 26, 2023, 4:19 PM IST
Highlights

ಸಹಾಯಕಿಯ ಮೇಲೆ ಎಗರಾಡಿದ ರಶ್ಮಿಕಾ ಮಂದಣ್ಣ ವಿಡಿಯೋ ವೈರಲ್ ಆಗಿದೆ. ಪ್ರಮೋಷನ್‌ಗೆ ಏನ್ಬೇಕಾದ್ರೂ ಮಾಡ್ತಾರೆ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. 

ನಟಿ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಜೊತೆಗೆ ಅನೇಕ ಜಾಹೀರಾತುಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಈ ನಡುವೆ ರಶ್ಮಿಕಾ ತನ್ನ ಸಹಾಯಕಿ ಮೇಲೆ  ಎಗರಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮಗೆ ಮೇಕಪ್​ ಮಾಡಲು ಬಂದ ಸಹಾಯಕಿಯ ಮೇಲೆ ರಶ್ಮಿಕಾ ರೇಗಾಡಿದ್ದಾರೆ. ಸಿಟ್ಟು ಮಾಡಿಕೊಂಡು ಶೂಟಿಂಗ್ ಬಿಟ್ಟು ಹೊರಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ರಶ್ಮಿಕಾ,‘ಏನ್​ ನಡೀತಾ ಇದೆ? ಟ್ಯಾಲೆಂಟ್​ಗೆ ಇಲ್ಲಿ ಬೆಲೆಯೇ ಇಲ್ಲ. ಟ್ಯಾಲೆಂಟ್​ಗೆ ಎಲ್ಲಿ ಬೆಲೆ ಇದೆಯೋ ಅಲ್ಲಿಗೆ ನಾನು ಹೋಗುತ್ತೇನೆ’ ಎಂದು ಅವರು ಸಿಟ್ಟು ಮಾಡಿಕೊಂಡು ಹೊರಟು ಹೋಗಿದ್ದಾರೆ. 

ರಶ್ಮಿಕಾ ಸಿಟ್ಟಿನಿಂದ ಹೊರಟ ಬಳಿಕ ರೆಕಾರ್ಡಿಂಗ್ ನಿಲ್ಲಿಸುವಂತೆ ತಾಕಿತು ಮಾಡಿ ಎಲ್ಲಿಂದ ಎದ್ದು ಹೊರಬಂದು ಜರ್ಕಿ ಧರಿಸಿ ಹೊರಡುತ್ತಾರೆ. ಈ ವಿಡಿಯೋ ರಶ್ಮಿಕಾ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.  ರಶ್ಮಿಕಾ ತನ್ನ ಸಹಾಯಕಿ ಮೇಲೆ ಹೀಗೆಲ್ಲ ಕೂಗಾಡಿದ್ದು ಯಾಕೆ? ಅವರಿಗೆ ಕಿರಿಕಿರಿ ಆಗುವಂತಹ ಘಟನೆ ಏನಾಯಿತು ಎಂದು ಫ್ಯಾನ್ಸ್​ ತಲೆ ಕೆಡಿಸಿಕೊಂಡಿದ್ದಾರೆ. ಆದರೆ ಅಸಲಿ ವಿಚಾರ ಗೊತ್ತಾದ ಬಳಿಕ ನೆಟ್ಟಿಗರು ಪ್ರಚಾರಕ್ಕಾಗಿ ಏನ್ ಬೇಕಾದರೂ ಮಾಡ್ತಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅಂದಹಾಗೆ ರಶ್ಮಿಕಾ ಖಾಸಗಿ ಕಂಪನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಜಾಹೀರಾತಿನ ಪ್ರಚಾರಕ್ಕಾಗಿ ರಶ್ಮಿಕಾ ಇಂಥ ಡ್ರಾಮ ಮಾಡಿದ್ದಾರೆ. ಇದು ಗೊತ್ತಾದ ಬಳಿಕ ನೆಟ್ಟಿಗರು ಏನ್ ಡ್ರಾಮ ಎನ್ನುತ್ತಿದ್ದಾರೆ. 

ಶ್ರೀವಲ್ಲಿ ಬಗ್ಗೆ ಮಾತಾಡಿ ವಿವಾದ ಸೃಷ್ಟಿಸಿದ್ದ ನಟಿ ಐಶ್ವರ್ಯಾ; ಕೊನೆಗೂ ಪ್ರತಿಕ್ರಿಯೆ ನೀಡಿದ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಅನೇಕ ಜಾಹೀರಾತುಗಳಲ್ಲಿ ಮಿಂಚಿದ್ದಾರೆ. ಕೆಲವು ಜಾಹೀರಾತುಗಳು ವಿವಾದಕ್ಕೂ ಎಡೆಮಾಡಿ ಕೊಟ್ಟಿವೆ. ವಿಕ್ಕಿ ಕೌಶಲ್ ಜೊತೆ ಒಳ ಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡ ರಶ್ಮಿಕಾ ಸಖತ್ ಟ್ರೋಲ್ ಆಗಿದ್ದರು. ಆದರೆ ಟ್ರೋಲ್‌ಗಳು ರಶ್ಮಿಕಾಗೆ ಹೊಸದಲ್ಲ. ಹೆಚ್ಚು ತಲೆಕೆಡಿಸಿಕಳ್ಳದೆ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಬರ್ಗರ್ ಜಾಹೀರಾತಿನಲ್ಲಿ ಕಾಣಿಸಿಕೊಂಡು ನಾನ್ ವೆಜ್ ತಿಂದು ಅಭಿಮಾನಿಗಳ ಬಳಿ ತಗಲಾಕೊಂಡಿದ್ದರು. ಮಾಂಸಹಾಸ ಮಾಡಲ್ಲ ಎಂದಿದ್ದ ರಶ್ಮಿಕಾ ಜಾಹೀರಾತಿನಲ್ಲಿ ನಾನ್ ವೆಜ್ ತಿಂದಿದ್ದು ನೋಡಿ ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು.

Wt happened after this ??? mam 🥺🥺😁 pic.twitter.com/5DGQO6L0VK

— Rashmika Mandanna BLR Fc (@Rashmikamandan6)

ರಶ್ಮಿಕಾಗಿಂತ 'ಪುಷ್ಪ' ಸಿನಿಮಾಗೆ ನಾನೆ ಫಿಟ್ ಆಗ್ತಿದ್ದೆ; ನಟಿ ಐಶ್ವರ್ಯಾ ರಾಜೇಶ್ ಶಾಕಿಂಗ್ ಹೇಳಿಕೆ

ರಶ್ಮಿಕಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೌತ್ ಮತ್ತು ಬಾಲಿವುಡ್ ಅಂತ ಎರಡೂ ಕಡೆ ರಶ್ಮಿಕಾ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ರಶ್ಮಿಕಾ ಬಹುನಿರೀಕ್ಷೆಯ ಪುಷ್ಪ-2 ಸಿನಿಮಾ ಜೊತೆಗೆ ರೇನ್‌ಬೋ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈಗಾಗಲೇ ಈ  ಎರಡು ಸಿನಿಮಾಗಳ ಚಿತ್ರೀಕರಣ ಪ್ರಾರಂಭವಾಗಿದೆ. ಇನ್ನೂ ಬಾಲಿವುಡ್‌ನಲ್ಲಿ ಅನಿಮಲ್ ಸಿನಿಮಾದ ಶೂಟಿಂಗ್ ಮುಗಿಸಿರುವ ರಶ್ಮಿಕಾ ವಿಕ್ಕಿ ಕೌಶಲ್ ಜೊತೆ ಹೊಸ ಸಿನಿಮಾಗೆ ಸಹಿ ಹಾಕಿದ್ದಾರೆ ಎನ್ನುವ ಸುದ್ದಿ ಕೂಡ ಇದೆ. ಸದ್ಯದಲ್ಲೇ ಹಿಂದಿಯಲ್ಲಿ ಹೊಸ ಸಿನಿಮಾ ಅನೌನ್ಸ್ ಮಾಡುವ ಸಾಧ್ಯತೆ ಇದೆ.  

click me!