Dhurandhar 2: ಧುರಂಧರ್ 2 ಬಗ್ಗೆ ಇಂಥ ಭವಿಷ್ಯ ನುಡಿದ ರಾಮ್ ಗೋಪಾಲ್ ವರ್ಮಾ.. ಜಗತ್ತೇ ಶಾಕ್!

Published : Jan 18, 2026, 07:16 PM IST
Ram Gopal Varma Ranveer Singh

ಸಾರಾಂಶ

ಈಗಾಗಲೇ 'ಧುರಂಧರ್ 2' ಚಿತ್ರದ ಬಿಡುಗಡೆ ದಿನಾಂಕವೂ ಘೋಷಣೆಯಾಗಿದೆ. 2026ರ ಮಾರ್ಚ್ 19ರಂದು ಈ ಬಹುನಿರೀಕ್ಷಿತ ಸೀಕ್ವೆಲ್ ತೆರೆಗೆ ಬರಲಿದೆ. ಮೊದಲ ಭಾಗವೇ ಇಷ್ಟೊಂದು ಸಂಚಲನ ಮೂಡಿಸಿರುವಾಗ, ಎರಡನೇ ಭಾಗವು ಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಿಸಬಹುದು.. 

ಭಾರತೀಯ ಚಿತ್ರರಂಗದ ಸಿನಿದುನಿಯಾದಲ್ಲಿ ಸಂಚಲನ ಮೂಡಿಸಿದ ರಾಮ್ ಗೋಪಾಲ್ ವರ್ಮಾ ಭವಿಷ್ಯ!

ಬಾಲಿವುಡ್ ಅಂಗಳದಲ್ಲಿ ಈಗ ಎಲ್ಲೇ ಕೇಳಿದರೂ ರಣವೀರ್ ಸಿಂಗ್ Ranveer Singh) ಮತ್ತು ಆದಿತ್ಯ ಧರ್ (Aditya Dhar) ಕಾಂಬಿನೇಷನ್‌ನ 'ಧುರಂಧರ್' (Dhaurandhar 2) ಚಿತ್ರದದ್ದೇ ಮಾತು. ಕಳೆದ ಕೆಲವು ವಾರಗಳಿಂದ ಈ ಆಕ್ಷನ್ ಡ್ರಾಮಾ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೃಷ್ಟಿಸಿರುವ ಸುನಾಮಿ ಅಷ್ಟಿಷ್ಟಲ್ಲ. ಕೇವಲ ಒಂದು ಹಿಟ್ ಸಿನಿಮಾ ಎನಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ, 'ಧುರಂಧರ್' ಬಾಲಿವುಡ್ ಚಿತ್ರರಂಗಕ್ಕೆ ಹೊಸ ಚೈತನ್ಯ ನೀಡಿದೆ. ದಕ್ಷಿಣ ಭಾರತದ ಸಿನಿಮಾಗಳ ಅಬ್ಬರದ ನಡುವೆ ಬಾಲಿವುಡ್ ಕೂಡ ಕಮ್ಮಿ ಇಲ್ಲ ಎಂದು ಈ ಚಿತ್ರ ಸಾಬೀತುಪಡಿಸಿದೆ. ಈ ಅಭೂತಪೂರ್ವ ಯಶಸ್ಸಿನ ನಡುವೆ, ವಿವಾದಾತ್ಮಕ ಹಾಗೂ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (RGV) ನೀಡಿರುವ ಒಂದು ಹೇಳಿಕೆ ಈಗ ಇಡೀ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.

ಆರ್‌ಜಿವಿ ಭವಿಷ್ಯ: "ಧುರಂಧರ್ 2" ಇತಿಹಾಸ ನಿರ್ಮಿಸಲಿದೆ!

ಯಾವಾಗಲೂ ಹಸಿಬಿಸಿ ಹೇಳಿಕೆಗಳಿಗೆ ಹೆಸರಾದ ರಾಮ್ ಗೋಪಾಲ್ ವರ್ಮಾ, 'ಧುರಂಧರ್' ಚಿತ್ರದ ಯಶಸ್ಸನ್ನು ಕಂಡು ಬೆರಗಾಗಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿರುವ ಅವರು, "ಸಿನಿಮಾ ಇತಿಹಾಸದಲ್ಲೇ 'ಧುರಂಧರ್ 2' ಅತಿದೊಡ್ಡ ಮಲ್ಟಿಸ್ಟಾರರ್ ಚಿತ್ರವಾಗಲಿದೆ" ಎಂದು ಭವಿಷ್ಯ ನುಡಿದಿದ್ದಾರೆ.

ಅದಕ್ಕೆ ಕಾರಣವನ್ನೂ ನೀಡಿರುವ ವರ್ಮಾ, "ಮೊದಲ ಭಾಗದಲ್ಲಿ ನಟಿಸಿದ ಪ್ರತಿಯೊಂದು ಪಾತ್ರವೂ ಈಗ ಪ್ರೇಕ್ಷಕರ ಮನಸ್ಸಿನಲ್ಲಿ ಬೃಹತ್ ಆಗಿ ಬೆಳೆದು ನಿಂತಿದೆ. ಚಿತ್ರದ ಪ್ರತಿಯೊಬ್ಬ ನಟನ ಮೌಲ್ಯ ಮತ್ತು ಪ್ರಭಾವ ಈಗ ಜನಸಾಮಾನ್ಯರ ಮೇಲೆ ಗಾಢವಾಗಿ ಬೀರಿದೆ. ಮೊದಲ ಭಾಗದಲ್ಲಿ ಆ ಪಾತ್ರಗಳು ಸಣ್ಣದಿರಲಿ ಅಥವಾ ದೊಡ್ಡದಿರಲಿ, ಈಗ ಅವರೆಲ್ಲರೂ ಪ್ರೇಕ್ಷಕರ ಪಾಲಿಗೆ ಸೂಪರ್ ಸ್ಟಾರ್‌ಗಳಾಗಿದ್ದಾರೆ. ಹೀಗಾಗಿ, ಇದರ ಸೀಕ್ವೆಲ್ ಅತಿದೊಡ್ಡ ಮಲ್ಟಿಸ್ಟಾರರ್ ಸಿನಿಮಾ ಆಗುವುದರಲ್ಲಿ ಸಂಶಯವಿಲ್ಲ" ಎಂದಿದ್ದಾರೆ.

ಚಿತ್ರರಂಗಕ್ಕೆ ಎಚ್ಚರಿಕೆ ನೀಡಿದ ವರ್ಮಾ!

ಇಷ್ಟಕ್ಕೇ ನಿಲ್ಲದ ಆರ್‌ಜಿವಿ, ಬಾಲಿವುಡ್‌ನ ಇತರ ನಿರ್ಮಾಪಕ ಮತ್ತು ನಿರ್ದೇಶಕರಿಗೆ ಚಾಟಿ ಬೀಸಿದ್ದಾರೆ. "ಯಾವಾಗ ಧುರಂಧರ್‌ನಂತಹ ಕ್ರಾಂತಿಕಾರಿ ಹಿಟ್ ಚಿತ್ರಗಳು ಬರುತ್ತವೆಯೋ, ಆಗ ಚಿತ್ರರಂಗದ ಇತರ ಮಂದಿ ಅದನ್ನು ನಿರ್ಲಕ್ಷಿಸಲು ಪ್ರಯತ್ನಿಸುತ್ತಾರೆ. ಏಕೆಂದರೆ ಅಂತಹ ಗುಣಮಟ್ಟದ ಸಿನಿಮಾವನ್ನು ನೀಡಲು ತಮಗೆ ಸಾಧ್ಯವಿಲ್ಲ ಎಂಬ ಅರಿವು ಅವರಿಗಿರುತ್ತದೆ. ಅವರಿಗೆ ಈ ಸಿನಿಮಾ ಒಂದು ದುಸ್ವಪ್ನದಂತೆ ಕಾಣುತ್ತಿದೆ. ಈಗ ನಿರ್ಮಾಣ ಹಂತದಲ್ಲಿರುವ ದೊಡ್ಡ ದೊಡ್ಡ ಪ್ಯಾನ್-ಇಂಡಿಯಾ ಸಿನಿಮಾಗಳು ಧುರಂಧರ್ ಬರುವ ಮುನ್ನವೇ ಹಳೆಯ ಮಾದರಿಯಲ್ಲಿ ಸಿದ್ಧವಾಗಿವೆ. ಆದರೆ ಧುರಂಧರ್ ಇವೆಲ್ಲವನ್ನೂ ಮೀರಿ ನಿಂತಿದೆ. ಕಳೆದ 50 ವರ್ಷಗಳಲ್ಲಿ ಅತಿ ಹೆಚ್ಚು ಚರ್ಚೆಯಾದ ಸಿನಿಮಾ ಇದಾಗಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳ ಮಳೆ!

'ಧುರಂಧರ್' ಚಿತ್ರದ ಅಂಕಿಅಂಶಗಳನ್ನು ನೋಡಿದರೆ ವರ್ಮಾ ಅವರ ಮಾತು ಅಕ್ಷರಶಃ ಸತ್ಯ ಎನಿಸುತ್ತದೆ. ಬಿಡುಗಡೆಯಾದ ಕೇವಲ 45 ದಿನಗಳಲ್ಲಿ ಈ ಚಿತ್ರ ಭಾರತದಲ್ಲಿ ಬರೋಬ್ಬರಿ 821 ಕೋಟಿ ರೂಪಾಯಿಗಳನ್ನು ಕಲೆಕ್ಷನ್ ಮಾಡಿದೆ. ಈ ಮೂಲಕ ಹಿಂದಿ ಚಿತ್ರರಂಗದ ಸಾರ್ವಕಾಲಿಕ ದಾಖಲೆಗಳನ್ನು ಈ ಚಿತ್ರ ಪುಡಿಪುಡಿ ಮಾಡಿದೆ. ವಿದೇಶದಲ್ಲೂ ಈ ಚಿತ್ರದ ಹವಾ ಜೋರಾಗಿದ್ದು, ಉತ್ತರ ಅಮೆರಿಕಾದಲ್ಲಿ 184.30 ಕೋಟಿ ರೂಪಾಯಿ ಗಳಿಸುವ ಮೂಲಕ ಅತಿ ಹೆಚ್ಚು ಗಳಿಕೆ ಕಂಡ ಎರಡನೇ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ತಾರಾಗಣ ಮತ್ತು ಸೀಕ್ವೆಲ್ ಸಂಭ್ರಮ

ರಣವೀರ್ ಸಿಂಗ್ ಅವರ ಅಬ್ಬರದ ನಟನೆಯ ಜೊತೆಗೆ ಈ ಚಿತ್ರದಲ್ಲಿ ಸಂಜಯ್ ದತ್, ಅರ್ಜುನ್ ರಾಂಪಾಲ್, ಆರ್. ಮಾಧವನ್, ಗೌರವ್ ಗೇರಾ, ರಾಕೇಶ್ ಬೇಡಿ ಮತ್ತು ಸಾರಾ ಅರ್ಜುನ್ ಅವರಂತಹ ಪ್ರತಿಭಾವಂತ ತಾರಾಗಣವಿದೆ. ಪ್ರತಿಯೊಂದು ಪಾತ್ರಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇರುವುದು

ಚಿತ್ರದ ಪ್ಲಸ್ ಪಾಯಿಂಟ್.

ಈಗಾಗಲೇ 'ಧುರಂಧರ್ 2' ಚಿತ್ರದ ಬಿಡುಗಡೆ ದಿನಾಂಕವೂ ಘೋಷಣೆಯಾಗಿದೆ. 2026ರ ಮಾರ್ಚ್ 19ರಂದು ಈ ಬಹುನಿರೀಕ್ಷಿತ ಸೀಕ್ವೆಲ್ ತೆರೆಗೆ ಬರಲಿದೆ. ಮೊದಲ ಭಾಗವೇ ಇಷ್ಟೊಂದು ಸಂಚಲನ ಮೂಡಿಸಿರುವಾಗ, ಎರಡನೇ ಭಾಗವು ಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಿಸಬಹುದು ಎಂಬುದು ಸಿನಿ ಪಂಡಿತರ ಲೆಕ್ಕಾಚಾರವಾಗಿದೆ. ಒಟ್ಟಿನಲ್ಲಿ, ರಾಮ್ ಗೋಪಾಲ್ ವರ್ಮಾ ಅವರ ಮಾತುಗಳು ಸಿನಿರಂಗದಲ್ಲಿ ಹೊಸ ಚರ್ಚೆಯನ್ನಂತೂ ಹುಟ್ಟುಹಾಕಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಧ್ಯಾತ್ಮದ ಬದುಕಿನ ದಾರಿ ಹಿಡಿದ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ನಾಯಕಿ! 'ಬ್ರೈನ್‌ ವಾಶ್' ಮಾಡಿದ್ದು ಯಾರು?
2025ರ ಭಾರತೀಯ ಚಿತ್ರರಂಗದ 'ಕೋಟಿ' ಸುಂದರಿಯರು: ಪ್ರಿಯಾಂಕಾ ನಂಬರ್ 1, ರಶ್ಮಿಕಾ ಮಂದಣ್ಣಗೆ ದಕ್ಕಿದ ಸ್ಥಾನವೆಷ್ಟು?