'ಕರೆಂಟು ಹೋದ ಟೈಂ'ನಲ್ಲಿ ಕಿಸ್ ಕೊಡುವ ನಾಯಕ; ಪೋಲಿ 'ಪೆದ್ದಿ'ಯ ಹಸಿಬಿಸಿ ದೃಶ್ಯಗಳು ಕಟ್ ಆಗೋಯ್ತು!

Published : Jun 10, 2026, 08:56 PM IST
Buchi babu sana Janhvi Kapoor

ಸಾರಾಂಶ

ಅಷ್ಟೆಲ್ಲಾ ವಿವಾದ ಆದ ಮೇಲೆ ಅಂತೂ ಇಂತೂ ಆ ಸೀನ್ಸ್​ಗಳಿಗೆ ಕತ್ತರಿ ಬಿದ್ದಿದೆ. ಸದ್ಯಕ್ಕೇನೋ ಸೀನ್ಸ್ ಕಟ್ ಮಾಡಿ ವಿವಾದಕ್ಕೆ ಬ್ರೇಕ್ ಹಾಕಲಾಗಿದೆ. ಆದ್ರೆ ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಅನ್ನುವಂತೆ , ಅಶ್ಲೀಲ ದೃಶ್ಯ ಇಟ್ಟು ಈಗ ಕಟ್ ಮಾಡಿದ್ರೆ ಏನ್ ಬಂತು ಪ್ರಯೋಜನ ಅಂತಿದ್ದಾರೆ ಜಾನು ಫ್ಯಾನ್ಸ್..!

ಕರೆಂಟು ಹೋದ ಟೈಮಲಿ ಮತ್ತು ಕೊಡುವ ನಾಯಕ!

ಪೆದ್ದಿ ಸಿನಿಮಾದಲ್ಲಿ ನಾಯಕ ನಟಿ ಜಾಹ್ನವಿಯನ್ನ ಹೈಪರ್ ಸೆಕ್ಷುವಲೈಸ್ ಆಗಿ ತೋರಿಸಲಾಗಿದೆ ಅನ್ನೋ ಆರೋಪ ಇತ್ತೀಚಿಗೆ ಸಿನಿದುನಿಯಾದಲ್ಲಿ ದೊಡ್ಡದಾಗಿ ಸದ್ದು ಮಾಡಿತ್ತು. ಈ ಬಗ್ಗೆ ನಿರ್ದೇಶಕ ಬುಚ್ಚಿಬಾಬು ಕ್ಷಮೆ ಕೂಡ ಕೇಳಿದ್ರು. ಇದೀಗ ಫೈನಲಿ ಪೆದ್ದಿ ಸಿನಿಮಾದಲ್ಲಿ ನಾಯಕಿಯನ್ನ ಕೆಟ್ಟದಾಗಿ ತೋರಿಸಿದ ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ.

ಪೆದ್ದಿ ಚಿತ್ರದ ಆಕ್ಷೇಪಾರ್ಹ ಸೀನ್ಸ್​​ಗಳಿಗೆ ಬಿತ್ತು ಕತ್ತರಿ; ಜಾನು ಕ್ಷಮೆ ಕೇಳಿ ದೃಶ್ಯ ಕಟ್ ಮಾಡಿದ ನಿರ್ದೇಶಕ..!

ಯೆಸ್ ಪೆದ್ದಿ ಸಿನಿಮಾ ಬಂದಾಗಿಂದ ಆ ಸಿನಿಮಾ ಹೇಗಿದೆ ಅನ್ನೋದಕ್ಕಿಂತ ಹೆಚ್ಚಾಗಿ . ಅದ್ರಲ್ಲಿ ನಾಯಕಿ ಜಾಹ್ನವಿಯನ್ನ ತೋರಿಸಿದ ರೀತಿಯ ಬಗ್ಗೆನೇ ಹೆಚ್ಚು ಚರ್ಚೆಯಾಗಿದೆ. ನಿರ್ದೇಶಕ ಬುಚ್ಚಿಬಾಬು ನಾಯಕಿಯನ್ನ ಹೈಪರ್ ಸೆಕ್ಷುವಲ್ ಆಗಿ ಬಿಂಬಿಸಿದ್ದಾರೆ. ಕಾಮದ ಗೊಂಬೆಯಂತೆ ಚಿತ್ರಿಸಿದ್ದಾರೆ ಅಂತ ಪ್ರೇಕ್ಷಕರಿಂದ ಆಕ್ರೋಶ ವ್ಯಕ್ರವಾಗಿತ್ತು.

ಈ ನಡುವೆ ಜಾಹ್ನವಿ ಚಿತ್ರದ ಶೂಟಿಂಗ್ ಟೈಂನಲ್ಲೇ ತಮಗೆ ಮುಜುಗರ ಆಗಿತ್ತು. ಈ ವಿಚಾರವಾಗಿ ತಾನು ಕಣ್ಣೀರು ಹಾಕಿದ್ದೆ ಅಂತ ಜಾಹ್ನವಿ ಆಪ್ತರ ಬಳಿ ಹಂಚಿಕೊಂಡ ಚಾಟ್ಸ್ ಕೂಡ ವೈರಲ್ ಆಗಿದ್ವು.

ಇಷ್ಟೆಲ್ಲಾ ಅವಾಂತರ ಆದ ಮೇಲೆ ನಿರ್ದೇಶಕ ಬುಚ್ಚಿ ಬಾಬು ಜಾಹ್ನವಿ ಮತ್ತು ಸಿನಿಪ್ರಿಯರಿಗೆ ಸೋಷಿಯಲ್ ಮಿಡಿಯಾ ಮೂಲಕವೇ ಕ್ಷಮೆ ಕೇಳಿದ್ರು. ಅಷ್ಟೇ ಅಲ್ಲ ಈಗ ಚಿತ್ರದಲ್ಲಿನ ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಕೂಡ ಹಾಕಲಾಗಿದೆ.

ಕರೆಂಟು ಹೋದ ಟೈಮಲಿ ಮತ್ತು ಕೊಡುವ ನಾಯಕ; ಪೋಲಿ ಪೆದ್ದಿಯ ಎರಡು ಹಸಿಬಿಸಿ ದೃಶ್ಯಗಳು ಕಟ್..!

ಹೌದು ಪೆದ್ದಿ ಚಿತ್ರ ಬಿಡುಗಡೆಯಾದ ನಂತರ ಮುಖ್ಯವಾಗಿ ಎರಡು ದೃಶ್ಯಗಳು ತೀವ್ರ ಚರ್ಚೆ ಹುಟ್ಟಿಹಾಕಿದ್ವು.. ಅಚಿಯಮ್ಮ ಮತ್ತು ಪೆದ್ದಿ ನಡುವಿನ ಪ್ರಣಯದ ದೃಶ್ಯಗಳು ಪ್ರೇಕ್ಷಕರಿಗೆ ಮುಜುಗರ ತರಿಸುವಂತಿದ್ದವು.

ನಾಯಕಿಗೆ ಇಷ್ಟವಿಲ್ಲದಿದ್ದರೂ ನಾಯಕ ಬಲವಂತವಾಗಿ ಪ್ರೀತಿ ವ್ಯಕ್ತಪಡಿಸುವ ದೃಶ್ಯಗಳು, ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ—ಕರೆಂಟ್ ಹೋದ ಟೈಂನಲ್ಲಿ ನಾಯಕಿಗೆ ಬಲವಂತವಾಗಿ ಮುತ್ತಿಡುವ ದೃಶ್ಯದ ವಿರುದ್ಧ ಮಹಿಳಾ ಪ್ರೇಕ್ಷಕರು ಹಾಗೂ ಸಿನಿರಸಿಕರು ತೀವ್ರ ಅಸಮಾಧಾನ ಹೊರಹಾಕಿದ್ದರು. ನಾಯಕಿಯ ವ್ಯಕ್ತಿತ್ವಕ್ಕೆ ಭಾವನೆಗಳಿಗೆ ಪ್ರಾಮುಖ್ಯತೆ ನೀಡುವ ಬದಲು, ಆಕೆಯನ್ನ ಕೇವಲ ಒಂದು ಗ್ಲಾಮರ್ ವಸ್ತುವಿನಂತೆ ಬಿಂಬಿಸಲಾಗಿದೆ ಅಂತ ನೆಟ್ಟಿಗರು ಕಿಡಿಕಾರಿದ್ದರು. ಕಮರ್ಷಿಯಲ್ ಸಿನಿಮಾಗಳ ಹೆಸರಲ್ಲಿ ಇಂತಹ ಬಲವಂತದ ದೃಶ್ಯಗಳನ್ನು ವೈಭವೀಕರಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ದೊಡ್ಡದಾಗಿ ಎದ್ದಿತ್ತು.

ಸೋ ಅಷ್ಟೆಲ್ಲಾ ವಿವಾದ ಆದ ಮೇಲೆ ಅಂತೂ ಇಂತೂ ಆ ಸೀನ್ಸ್​ಗಳಿಗೆ ಕತ್ತರಿ ಬಿದ್ದಿದೆ. ಸದ್ಯಕ್ಕೇನೋ ಸೀನ್ಸ್ ಕಟ್ ಮಾಡಿ ವಿವಾದಕ್ಕೆ ಬ್ರೇಕ್ ಹಾಕಲಾಗಿದೆ. ಆದ್ರೆ ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಅನ್ನುವಂತೆ , ಅಶ್ಲೀಲ ದೃಶ್ಯ ಇಟ್ಟು ಈಗ ಕಟ್ ಮಾಡಿದ್ರೆ ಏನ್ ಬಂತು ಪ್ರಯೋಜನ ಅಂತಿದ್ದಾರೆ ಜಾನು ಫ್ಯಾನ್ಸ್..!

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Pawan Kalyan: ಓಜಿ 2 ಕಥೆಯಲ್ಲಿ ಸುಭಾಷ್ ಚಂದ್ರ ಬೋಸ್ ಟ್ವಿಸ್ಟ್? ಹಿಟ್ ಆದ್ರೆ ರೆಕಾರ್ಡ್ ಬ್ರೇಕ್ ಪಕ್ಕಾ!
Raveena Tandon: 'ನಾನು ರಾಶಾಳ ಅಮ್ಮ'... ಕೆಜಿಎಫ್‌ನ ರಮಿಕಾ ಸೇನ್ ಹೀಗೆ ಹೇಳಿದ್ದೇಕೆ?