ಮುಂಬೈ(ಜು.23): ಅಶ್ಲೀಲ ಸಿನಿಮಾ ದಂಧೆ ಪ್ರಕರಣದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ಕುಂದ್ರಾ ಬಂಧನದ ಬಳಿಕ ಪೋರ್ನ್ ಇಂಡಸ್ಟ್ರಿ ಕುರಿತ ಒಂದೊಂದು ಮಾಹಿತಿಗಳು ಹೊರಬರುತ್ತಿದೆ. ಇತ್ತ ರಾಜ್ ಕುಂದ್ರಾ ಸಂಕಷ್ಟ ಹೆಚ್ಚಾಗುತ್ತಿದೆ. ಈ ಪ್ರಕರಣದ ವಿಚಾರಣೆ ನಡುವೆ ಇದೀಗ ಮುಂಬೈ ಪೊಲೀಸರು ಶಿಲ್ಪಾ ಶೆಟ್ಟಿ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಪತಿ ರಾಜ್ ಕುಂದ್ರಾ ಅರೆಸ್ಟ್ ನಂತರ ಶಿಲ್ಪಾ ಶೆಟ್ಟಿ ಮೊದಲ ಪೋಸ್ಟ್
ಮುಂಬೈನ ಜುಹುಲ್ಲಿರುವ ಶಿಲ್ಪಾ ಶೆಟ್ಟಿ ಮನೆಗೆ ಮುಂಬೈ ಪೊಲೀಸರು ರಾಜ್ ಕುಂದ್ರಾ ಜೊತೆ ಆಗಮಿಸಿದ್ದಾರೆ. ಮೂಲಗಳ ಪ್ರಕಾರ ಶಿಲ್ಪಾ ಶೆಟ್ಟಿಯನ್ನು ಮುಂಬೈ ಪೊಲೀಸರು ಪಶ್ನಿಸಲಿದ್ದಾರೆ.
ರಾಜ್ ಕುಂದ್ರಾ ನಡೆಸುತ್ತಿರುವ ವಿಯಾನ್ ಕಂಪನಿ ಈ ಅಶ್ಲೀಲ ಸಿನಿಮಾ ದಂಧೆ ನಡೆಸುತ್ತಿದೆ. ಇತ್ತೀಚೆಗೆ ಮುಂಬೈ ಪೊಲೀಸರು ಅಂಧೇರಿ ವೆಸ್ಟ್‌ನಲ್ಲಿರುವ ವಿಯಾನ್ ಕಂಪನಿ ಕಚೇರಿಗೆ ದಾಳಿ ನಡೆಸಿ ಅಶ್ಲೀಲ ಚಲನಚಿತ್ರಗಳ ಬೃಹತ್ ಡೇಟಾವನ್ನು ವಶಪಡಿಸಿಕೊಂಡಿದೆ. ಈ ವಿಯಾನ್ ಕಂಪನಿ ನಿರ್ದೇಶಕರಲ್ಲಿ ಶಿಲ್ಪಾ ಶೆಟ್ಟಿ ಕೂಡ ಒಬ್ಬರಾಗಿದ್ದಾರೆ.
ಅರೆಸ್ಟ್ ಆಗೋದ್ರಿಂದ ಪಾರಾಗಲು ಪೊಲೀಸ್ ಅಧಿಕಾರಿಗೆ 25 ಲಕ್ಷ ಕೊಟ್ಟಿದ್ದ ಕುಂದ್ರಾ!
ಮುಂಬೈ ಪೊಲೀಸ್ ದಾಳಿಗೂ ಮುನ್ನ ವಿಯಾನ ಕಂಪನಿ ಹಲವು ವಿಡಿಯೋಗಳನ್ನು ಡಿಲೀಟ್ ಮಾಡಿದೆ. ಇದೀಗ ಫೋರೆನ್ಸಿಕ್ ಲ್ಯಾಬ್ ನೆರವಿನಿಂದ ಎಲ್ಲಾ ದಾಖಲೆಗಳನ್ನು ತೆಗೆದು ಪರಿಶೀಲನೆ ನಡೆಸುತ್ತಿದೆ.