ಬಾಲಿವುಡ್‌ ಸಿನಿಮಾಗಳಿಗೆ ಪೈಪೋಟಿ ಕೊಟ್ಟು 3 ದಿನದಲ್ಲಿ 14 ಕೋಟಿ ಗಳಿಸಿದ ಪ್ರಾದೇಶಿಕ ಚಿತ್ರ

Published : Jun 15, 2025, 08:21 PM IST
Saunkan Saunkanay

ಸಾರಾಂಶ

ಬಾಲಿವುಡ್ ಸಿನಿಮಾಗಳಿಗೆ ಪೈಪೋಟಿ ನೀಡಿದ ಚಿತ್ರವು ಮೂರೇ ದಿನಗಳಲ್ಲಿ 14 ಕೋಟಿ ಗಳಿಸಿ, ತನ್ನ ಬಜೆಟ್‌ಗಿಂತ ಹೆಚ್ಚಿನ ಲಾಭ ಗಳಿಸಿದೆ. ಯಾವುದು ಈ ಸಿನಿಮಾ ಎಂಬುದರ ಮಾಹಿತಿ ನೋಡೋಣ ಬನ್ನಿ.

ಚಂಡೀಗಢ: ಕೆಲವೊಮ್ಮೆ ಬಾಲಿವುಡ್‌ ಸ್ಟಾರ್ ನಟರಿಗೆ ಪ್ರಾದೇಶಿಕ ಅಥವಾ ಹೊಸಬರ ಸಿನಿಮಾಗಳು ಟಕ್ಕರ್ ನೀಡುತ್ತವೆ. ಇಂತಹ ಚಿತ್ರಗಳು ಜನರಿಂದ ಜನರ ಮೂಲಕವೇ ಪ್ರಚಾರ ಪಡೆದುಕೊಂಡು ಗೆಲ್ಲುತ್ತವೆ. ಈ ತಿಂಗಳ ಆರಂಭದಲ್ಲಿ ಬಾಲಿವುಡ್‌ನ 'ಭೂಲ್ ಚೂಕ್ ಮಾಫ್' ಮತ್ತು 'ಮಿಷನ್ ಇಂಪಾಸಿಬಲ್' ಸಿನಿಮಾಗಳಿಗೆ ಟಕ್ಕರ್ ನೀಡಿದೆ. ಈ ಚಿತ್ರ ಬಿಡುಗಡೆಯಾದ ಮೂರೇ ದಿನಕ್ಕೆ ಹಾಕಿದ ಬಂಡವಾಳ ನಿರ್ಮಾಪಕರಿಗೆ ಹಿಂದಿರುಗಿದೆ. ಮೂರು ದಿನದಲ್ಲಿ ಈ ಸಿನಿಮಾ ತನ್ನ ಬಜೆಟ್‌ಗಿಂತ ಹೆಚ್ಚಿನದನ್ನು ಗಳಿಸಿದೆ. ಹಾಗಾದ್ರೆ ಯಾವುದು ಈ ಸಿನಿಮಾ ಅಂತ ನೋಡೋಣ ಬನ್ನಿ. ಈ ಚಿತ್ರದಲ್ಲಿ ಆಮಿ ವಿರ್ಕ್, ಸರ್ಗುನ್ ಮೆಹ್ತಾ ಮತ್ತು ನಿಮ್ರತ್ ಖೇರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಕಾಮಿಡಿ ಜಾನರ್ ಹೊಂದಿರುವ 'ಸೋಂಕನ್ ಸೋನೆಕನ್ 2'ಸಿನಿಮಾ ಬಾಲಿವುಡ್‌ನ 'ಭೂಲ್ ಚೂಕ್ ಮಾಫ್' ಮತ್ತು 'ಮಿಷನ್ ಇಂಪಾಸಿಬಲ್' ನಡುವೆ ಗೆದ್ದು ಬೀಗಿದೆ. ಸೋಂಕನ್ ಸೋನೆಕನ್ ಚಿತ್ರದ ಮುಂದುವರಿದ ಎರಡನೇ ಭಾಗ ಇದಾಗಿದ್ದು, ಮೇ 29ರಂದು ಬಿಡುಗಡೆಯಾಗಿತ್ತು. ಮೂರು ದಿನದಲ್ಲಿ ಈ ಸಿನಿಮಾ ಒಟ್ಟು 14 ಕೋಟಿ ರೂಪಾಯಿ ಕೆಲಕ್ಷನ್ ಮಾಡಿದೆ,

ಪಂಜಾಬಿ ಚಿತ್ರವು ಕೇವಲ ಒಂದು ದಿನದಲ್ಲಿ ವಿಶ್ವಾದ್ಯಂತ ಬ್ಲಾಕ್ಬಸ್ಟರ್ ಆರಂಭವನ್ನು ಮಾಡಿದೆ. ಹಾಸ್ಯ ಚಿತ್ರ 'ಸೋಂಕನ್ ಸೋನೆಕನ್' ಕೂಡ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಈಗ ಅದರ ಮುಂದುವರಿದ ಭಾಗವೂ ಸಹ ಜನರಿಂದ ಇಷ್ಟವಾಗುತ್ತಿದೆ. ಪಂಜಾಬಿ ಚಿತ್ರವು ಕೇವಲ ಒಂದು ದಿನದಲ್ಲಿ ವಿಶ್ವಾದ್ಯಂತ ಬ್ಲಾಕ್ಬಸ್ಟರ್ ಆರಂಭವನ್ನು ಮಾಡಿದೆ, ಚಿತ್ರ ಎಷ್ಟು ಗಳಿಸಿದೆ ಮತ್ತು ಅದರ ಬಜೆಟ್ ಎಷ್ಟು ಎಂಬುದರ ಮಾಹಿತಿ ಇಲ್ಲಿದೆ.

3 ದಿನಗಳಲ್ಲಿ 14 ಕೋಟಿ ಗಳಿಕೆ

ಸೋಂಕನ್ ಸೋನೆಕನ್ 2 ಭಾರತ ಮತ್ತು ವಿಶ್ವಾದ್ಯಂತ ಉತ್ತಮ ಆರಂಭವನ್ನು ಪಡೆದುಕೊಂಡಿದೆ. ಹಾಸ್ಯಮಯ ಕಥೆಯನ್ನು ಹೊಂದಿರುವ ಈ ಚಿತ್ರವು ಜನರಿಂದ ಹೆಚ್ಚಿನ ಪ್ರೀತಿಯನ್ನು ಪಡೆಯುತ್ತಿದೆ. ಸಿನಿಮಾ ನೋಡಿದವರು ಚಿತ್ರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಿರ್ಮತ್, ಸರ್ಗುನ್ ಮತ್ತು ಆಮಿ ಈ ತ್ರಿಮೂರ್ತಿಗಳು ಮತ್ತೊಮ್ಮೆ ತಮ್ಮ ಉತ್ತಮವಾದ ನಟನೆ ಮತ್ತು ಹಾಸ್ಯ ಸಮಯದಿಂದ ಜನರನ್ನು ಮೆಚ್ಚಿಸಿದ್ದಾರೆ. ಈ ಚಿತ್ರವು ವಿಶ್ವಾದ್ಯಂತ 3 ದಿನಗಳಲ್ಲಿ 14.50 ಕೋಟಿ ರೂ. ಕಲೆಕ್ಷನ್ ಮಾಡಿದೆ. ಸೋಂಕನ್ ಸೋನೆಕನ್ 2 ಭಾರತದಲ್ಲಿ ಮೊದಲ ವಾರಾಂತ್ಯದಲ್ಲಿ 8 ಕೋಟಿ ರೂ. ಮತ್ತು ವಿದೇಶಗಳಲ್ಲಿ 6.50 ಕೋಟಿ ರೂ. (USD 750K) ಗಳಿಸಿದೆ.

ಈ ಚಿತ್ರ ತನ್ನ ಬಜೆಟ್‌ಗಿಂತ ಹೆಚ್ಚು ಗಳಿಕೆ

'ಸೋಂಕನ್ ಸೋನೆಕಾನೆ 2' ಚಿತ್ರವನ್ನು 10 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದು, ಈ ಚಿತ್ರವು ವಿಶ್ವಾದ್ಯಂತ 14 ಕೋಟಿ ಗಳಿಸಿದೆ ಎಂದು ವರದಿಯಾಗಿದೆ. ಬಿಡುಗಡೆಯಾದ ಮೂರು ದಿನಗಳಲ್ಲಿ ನಿರ್ಮಾಪಕರಿಗೆ ಹಣವನ್ನು ಹಿಂದಿರುಗಿಸಿ ಲಾಭವನ್ನು ನೀಡುತ್ತಿದೆ.ಗಳಲ್ಲಿ ಬಜೆಟ್ ಅನ್ನು ಮೀರಿಸಿದೆ. ಭಾರತದಲ್ಲಿ, 'ಸೋಂಕನ್ ಸೋನೆಕಾನೆ 2' ಚಿತ್ರವು ಈ 3 ದಿನಗಳಲ್ಲಿ 8 ಕೋಟಿ ಗಳಿಸಿದೆ.

  • ಮೊದಲ ದಿನ: 2.35 ಕೋಟಿ
  • ಎರಡನೇ ದಿನ: 2.35 ಕೋಟಿ
  • ಮೂರನೇ ದಿನ: 3.30 ಕೋಟಿ ರೂ.

 

 

9 ತಿಂಗಳ ಬರಗಾಲ ಅಂತ್ಯ

ಪಂಜಾಬಿ ಚಿತ್ರ 'ಅರ್ದಾಸ್ 3' ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿತು ಮತ್ತು ಬಿಡುಗಡೆಯಾದ ಸುಮಾರು 9 ತಿಂಗಳ ನಂತರ, ಈಗ 'ಸೋಂಕನ್ ಸೋನೆಕನ್ 2' ಮೊದಲ ಪಂಜಾಬಿ ಹಿಟ್ ಚಿತ್ರವಾಗಿದೆ. ಕಳೆದ ಕೆಲವು ವರ್ಷಗಳಿಂದ ವಿದೇಶಗಳಲ್ಲಿಯೂ ಪಂಜಾಬಿ ಸಿನಿಮಾಗಳು ಉತ್ತಮ ಮಾರುಕಟ್ಟೆಯನ್ನು ಹೊಂದಿವೆ. ಹಾಗಾಗಿ ಪಂಜಾಬಿ ಚಿತ್ರಗಳು ಮೊದಲೇ ದಿನವೇ ವಿದೇಶಗಳಲ್ಲಿಯೂ ರಿಲೀಸ್ ಆಗುವ ಮೂಲಕ ಉತ್ತಮ ಕಲೆಕ್ಷನ್ ಮಾಡುತ್ತಿವೆ. ಪಂಜಾಬಿ ಚಿತ್ರಗಳಿಗೆ ಗಳಿಕೆ ಇಲ್ಲ ಎಂಬ ಹಣೆಪಟ್ಟಿಯಿಂದ ಹೊರಬರಲಾರಂಭಿಸುತ್ತಿವೆ. ಈಗ 'ಸೋಂಕನ್ ಸೋನೆಕನ್ 2' ಉತ್ತಮ ಆರಂಭವನ್ನು ಕಂಡಿದೆ ಮತ್ತು ಈ ತಿಂಗಳ ಕೊನೆಯಲ್ಲಿ, ದಿಲ್ಜಿತ್ ದೋಸಾಂಜ್ ಅವರ ಸರ್ದಾರ್ಜಿ 3 ಕೂಡ ಬಿಡುಗಡೆಯಾಗುತ್ತಿದೆ, ಇದರಿಂದ ಬಹಳಷ್ಟು ನಿರೀಕ್ಷೆಗಳಿವೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?