
'ಪವರ್' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್‌ಗೆ ಜೋಡಿಯಾಗಿ ಕಾಣಿಸಿಕೊಂಡ ಟಾಲಿವುಡ್ ನಟಿ ತ್ರಿಷಾ ಈಗ ಸಂಕಷ್ಟದಲ್ಲಿ ಸಿಲುಕಿ ಕೊಂಡಿದ್ದಾರೆ. ಫೆಬ್ರವರಿ 28ರಂದು ರಾಜ್ಯದ್ಯಾಂತ ತೆರೆ ಕಾಣಲು ಸಜ್ಜಾಗುತ್ತಿರುವ 'ಪರಮಪದಂ ವೆಲೈಯಾಟ್ಟು' ಚಿತ್ರದಲ್ಲಿ ತ್ರಿಷಾ ಮೆಘಾ ಸ್ಟಾರ್ ಚಿರಂಜೀವಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ, ಇದು ಚಿರಂಜೀವಿ 152ನೇ ಚಿತ್ರವಾದ ಕಾರಣ ಚಿತ್ರತಂಡ ಹೆಚ್ಚಿನ ನಿರೀಕ್ಷೆ ಇಟ್ಟಿಕೊಂಡಿದೆ.
ನಿರ್ಮಾಪಕರು ಹಣ ಕೇಳುತ್ತಿರುವುದೇಕೆ?
ತ್ರಿಷಾ ಈ ಚಿತ್ರದಲ್ಲಿ ನಟಿಸಲು ಹಾಗೂ ಪ್ರಚಾರದಲ್ಲಿ ಭಾಗಿಯಾಗಲು ನಿರ್ಮಾಪಕರಿಂದ ಹಣ ಪಡೆದುಕೊಂಡಿದ್ದಾರೆ. ಆದರೆ ಸಿನಿಮಾ ಮುಗಿಸಿದ ನಂತರ ಪ್ರಚಾರದಲ್ಲಿ ಪಾಲ್ಗೊಂಡಿಲ್ಲ. ಅಷ್ಟೇ ಅಲ್ಲದೇ ಇತ್ತೀಚಿಗೆ ಅದ್ಧೂರಿಯಾಗಿ ನಡೆದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿಯೂ ಚಿತ್ರತಂಡದ ಪ್ರತಿಯೊಬ್ಬ ಕಲಾವಿದರು ಭಾಗಿಯಾಗಿದ್ದರೂ ತ್ರಿಷಾ ಮಾತ್ರ ಕಾಣಿಸಿಕೊಂಡಿಲ್ಲ.
ಹೃದಯಕ್ಕೆಲ್ಲಿದೆ ಲಿಂಗ?: ನಟಿಯರಿಬ್ಬರ ಮದ್ವೆಗೆ ಬರದಿರಲಿ ಭಂಗ!
ಇದಕ್ಕೆ ಬೇಸರವಾದ ಚಿತ್ರತಂಡ ತ್ರಿಷಾ ಕೊನೆಯ ಹಂತದಲ್ಲಿ ಹೀಗೆಲ್ಲಾ ಮಾಡುತ್ತಿರುವುದು ಸರಿಯಲ್ಲ, ಪ್ರಚಾರಕ್ಕೆಂದು ಪಡೆದುಕೊಂಡಿರುವ ಹಣವನ್ನು ಹಿಂದುರಿಸಬೇಕೆಂದು ಹೇಳಿದ್ದಾರೆ. ಟಾಲಿವುಡ್‌ನಲ್ಲಿ ಇದು ಹೊಸದೇನಲ್ಲಾ ಈ ಹಿಂದೆ ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗೂ ಅಜಿತ್ ಸಿನಿಮಾ ಪ್ರಚಾರ ಮಾಡುವುದಿಲ್ಲವೆಂದು ಮೊದಲೇ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ. ಈಗ ಅದೇ ಹಾದಿಯಲ್ಲಿ ತ್ರಿಷಾ ಇದ್ದಾರೆಂದು ಚಿತ್ರರಂಗದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.