ಇನ್ನೂ RRR ಸಿನಿಮಾ ನೋಡಿಲ್ವಂತೆ ಪ್ರಿಯಾಂಕಾ ಚೋಪ್ರಾ: ರಾಮ್ ಚರಣ್ ಬಗ್ಗೆ ಹೇಳಿದ್ದೇನು?

Published : May 16, 2023, 02:42 PM ISTUpdated : May 16, 2023, 02:46 PM IST
ಇನ್ನೂ RRR ಸಿನಿಮಾ ನೋಡಿಲ್ವಂತೆ ಪ್ರಿಯಾಂಕಾ ಚೋಪ್ರಾ: ರಾಮ್ ಚರಣ್ ಬಗ್ಗೆ ಹೇಳಿದ್ದೇನು?

ಸಾರಾಂಶ

ಇನ್ನೂ ಆರ್ ಆರ್ ಆರ್ ಸಿನಿಮಾ ನೋಡಿಲ್ಲ ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ. ರಾಮ್ ಚರಣ್ ಅವರನ್ನು ಹಾಡಿಹೊಗಳಿದ್ದಾರೆ. 

ತೆಲುಗಿನ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಸಾರಥ್ಯದಲ್ಲಿ ಮೂಡಿಬಂದ ಆರ್ ಆರ್ ಆರ್ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಅಂತಾರಾಷ್ಟ್ರೀಯ ಮಟ್ಟದ ಗಮನ ಸೆಳೆದಿರುವ ಆರ್ ಆರ್ ಆರ್ ಸಿನಿಮಾ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ನಾಟು ನಾಟು ಹಾಡನ್ನು ಕೇವಲ ಭಾರತೀಯರು ಮಾತ್ರವಲ್ಲದೇ ವಿದೇಶಿಗರು ಕೂಡ ಸಖತ್ ಎಂಜಾಯ್ ಮಾಡಿದ್ದಾರೆ. ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಆರ್ ಆರ್ ಆರ್ ಸಿನಿಮಾವನ್ನು ಪ್ರೇಕ್ಷಕರು ಮಾತ್ರಲ್ಲದೇ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಗಣ್ಯರು ಸಹ ಹಾಡಿಹೊಗಳಿದ್ದಾರೆ. 

ಗೋಲ್ಡನ್ ಗ್ಲೋಬ್, ಆಸ್ಕರ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಆರ್ ಆರ್ ಆರ್ ಸಿನಿಮಾವನ್ನು ನೋಡಿಲ್ಲ ಎಂದು ಪ್ರಿಯಾಂಕಾ ಚೋಪ್ರಾ ಬಹಿರಂಗ ಪಡಿಸಿದ್ದಾರೆ. ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭ ಹೋಸ್ಟ್ ಮಾಡಿದ್ದ ಪ್ರಿಯಾಂಕಾ ಆರ್ ಆರ್ ಆರ್ ತಂಡಕ್ಕೆ ಬೆಂಬಲ ನೀಡಿದ್ದರು. ಆದರೀಗ ಸಿನಿಮಾ ನೋಡಿಲ್ಲ ಎಂದು ಹೇಳಿದ್ದಾರೆ. ಆದರೆ ಆರ್ ಆರ್ ಆರ್ ಸ್ಟಾರ್ ರಾಮ್ ಚರಣ್ ಅವರನ್ನು ಹಾಡಿಹೊಗಳಿದ್ದಾರೆ. ಭಾರತದ ಬ್ರಾಡ್ ಪಿಟ್ ಎಂದು ಹೇಳಿದ್ದಾರೆ.  

ಪ್ರಿಯಾಂಕಾ ಚೋಪ್ರಾ ಇತ್ತೀಚೆಗಷ್ಟೆ ನೀಡಿದ ಸಂದರ್ಶನದಲ್ಲಿ ಆರ್ ಆರ್ ಆರ್ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ವ್ಯಾನಿಟಿ ಫೇರ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ, ರಾಮ್ ಚರಣ್ ನಟನೆಯ ಮೊದಲ ಹಿಂದಿ ಸಿನಿಮಾ ಜಂಜೀರ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು ಆದರೆ ಆಗಿಲ್ಲ ಎಂದು ಹೇಳಿದರು. ಇದೇ ಸಮಯದಲ್ಲಿ ಆರ್ ಆರ್ ಆರ್ ಸಿನಿಮಾ ವೀಕ್ಷಿಸಿದ್ದೀರಾ ಎನ್ನುವ ಪ್ರಶ್ನೆ ಎದುರಾಯಿತು. 'ಇಲ್ಲ' ಎಂದು ಹೇಳಿದರು. ಯಾಕೆ ಎಂದು ಕೇಳಿದ ಪ್ರಶ್ನೆಗೆ ಸಮಯ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಹೆಚ್ಚು ಚಲನಚಿತ್ರಗಳನ್ನು ನೋಡುವುದಿಲ್ಲ, ಆದರೆ ಬಹಳಷ್ಟು ಟಿವಿ ಕಾರ್ಯಕ್ರಮಗಳನ್ನು ನೋಡುವುದಾಗಿ ಹೇಳಿದರು. 

ಪ್ರಿಯಾಂಕಾ 'ಮಿಸ್ ವರ್ಲ್ಡ್' ಗೆದ್ದಾಗ ನಿಕ್ ಜೋನಸ್ ಏನ್ಮಾಡ್ತಿದ್ರು? 22 ವರ್ಷದ ಹಿಂದಿನ ಘಟನೆ ಬಿಚ್ಚಿಟ್ಟ ನಟಿ

ರಾಮ್ ಚರಣ್ ಭಾರತದ ಬ್ರಾಡ್ ಪಿಟ್ ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ. ರಾಮ್ ಚರಣ್ ಚಾರ್ಮಿಂಗ್ ಇರುವ ನಟ. ನನಗೆ ಬ್ರಾಡ್ ಪಿಟ್ ಬಗ್ಗೆ ಜಾಸ್ತಿ ಗೊತ್ತಿಲ್ಲ ಆದರೆ ರಾಮ್ ಚರಣ್ ತುಂಬಾ ಒಳ್ಳೆಯ ವ್ಯಕ್ತಿ' ಎಂದು ಹೇಳಿದ್ದಾರೆ. ಬ್ರಾಡ್ ಪಿಟ್ ಮತ್ತು ರಾಮ್ ಚರಣ್ ಇಬ್ಬರಲ್ಲಿ ಯಾರ ತುಂಬಾ ಸುಂದರವಾಗಿ ಇದ್ದಾರೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕಾ, ಬ್ರಾಡ್ ಪಿಕ್ ಮೇಲೆ ಕ್ರಶ್ ಇದೆ ಅವರನ್ನು ನೋಡಿ ಬೆಳೆದಿರುವೆ. ಹಾಗಾಗಿ ಈ ಪ್ರಶ್ನೆ ಕೇಳಿದ್ರೆ ರಾಮ್ ಚರಣ್‌ಗೆ ಅನ್ಯಾಯವಾಗುತ್ತೆ ಎಂದು ಹೇಳಿದರು. 

ಫಸ್ಟ್ ಡೇಟ್‌ನಲ್ಲೇ ಸೆಕ್ಸ್ ಓಕೆ; ಲೈಂಗಿಕಾಸಕ್ತಿ ಬಗ್ಗೆ ಮನಬಿಚ್ಚಿ ಮಾತನಾಡಿದ ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ ಕೊನೆಯದಾಗಿ ಸಿಟಾಡೆಲ್ ಸೀರಿಸ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸಿಟಾಡೆಲ್ ಅಭಿಮಾನಿಗಳ ಹೃದಯ ಗೆದ್ದಿದೆ. ಈ ಸೀರಿಸ್ ಮೂಲಕ ಪ್ರಿಯಾಂಕಾ ಹಾಲಿವುಡ್‌ನಲ್ಲಿ ಮತ್ತಷ್ಟು ಖ್ಯಾತಿಗಳಿಸಿದ್ದಾರೆ. ಸದ್ಯ ಲವ್ ಎಗೇನ್ ಸಿನಿಮಾದಲ್ಲಿ ಪ್ರಿಯಾಂಕಾ ನಟಿಸುತ್ತಿದ್ದಾರೆ. ಬಾಲಿವುಡ್‌ನಲ್ಲಿ ಕೊನೆಯದಾಗಿ ಪ್ರಿಯಾಂಕಾ ದಿ ವೈಟ್ ಟೈಗರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?
ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?