
ಮಾಲಿವುಡ್ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಸದ್ಯ ತಮ್ಮ ತೆಲುಗು ಸಿನಿಮಾ ಚೆಕ್ನ ಮೂಲಕ ಸುದ್ದಿಯಲ್ಲಿದ್ದಾರೆ. ಒರು ಅಡಾರ್ ಲವ್ ಸಿನಿಮಾ ಸಾಂಗ್ ಮೂಲಕ ವೈರಲ್ ಆದ ಚೆಲುವೆ ಬ್ಯಾಲೆನ್ಸ್ ತಪ್ಪಿ ಬಿದ್ದಿದ್ದಾರೆ.
ಅದೃಷ್ಟವಶಾತ್ ನಟಿಗೆ ಗಾಯಗಳೇನೂ ಆಗಿಲ್ಲ. ಕಣ್ಸನ್ನೆ ಚೆಲುವೆ ಪ್ರಿಯಾ ಚೆಕ್ ಸಿನಿಮಾ ಮೂಲಕ ನಿತಿನ್ಗೆ ಹಿರೋಯಿನ್ ಆಗಿ ನಟಿಸುತ್ತಿದ್ದಾರೆ. ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದ್ದು, ಇದಕ್ಕೆ ಸಿಕ್ಕಾಪಟ್ಟೆ ಲೈಕ್ಸ್ ಬಂದಿದೆ.
ಟಾಲಿವುಡ್ ಹುಡುಗನ ಜೊತೆ ಕಣ್ಸನ್ನೆ ಹುಡುಗಿ: ವಿಡಿಯೋ ಮತ್ತೊಮ್ಮೆ ವೈರಲ್
ಇದೀಗ ನಟಿ ಹೊಸದೊಂದು ವಿಡಿಯೋ ರಿಲೀಸ್ ಮಾಡಿದ್ದಾರೆ. ಇದು ಸಿನಿಮಾದ ಹಾಡಿನ ಶೂಟಿಂಗ್ನ ವಿಡಿಯೋ. ಇದರಲ್ಲಿ ನಟಿ ಬ್ಯಾಲೆನ್ಸ್ ತಪ್ಪಿ ನೆಲಕ್ಕೆ ಬಿದ್ದಿದ್ದು, ನಿತಿನ್ ಕೂಡಾ ಹಿಡಿದುಕೊಳ್ಳಲು ಸಾಧ್ಯವಾಗಿಲ್ಲ.
ಪ್ರತಿಬಾರಿ ಬಿದ್ದಾಗ ನಾನು ಅಷ್ಟೇ ಆತ್ಮವಿಶ್ವಾಸದಲ್ಲಿ ಎದ್ದು ನಿಲ್ಲುತ್ತೇನೆ. ನಾನು ಇದೇ ದಾರಿಯಲ್ಲಿ ಮುಂದುವರಿಯುತ್ತೇನೆ ಎಂದು ವಿಡಿಯೋ ಶೇರ್ ಮಾಡಿ ಕ್ಯಾಪ್ಶನ್ ಬರೆದಿದ್ದಾರೆ
ಡೀಪ್ ನೆಕ್ ಬ್ಲೌಸ್: ಕಣ್ಸನ್ನೆ ಚೆಲುವೆಗೆ ಕ್ಲಾಸ್ ತಗೊಂಡ ನೆಟ್ಟಿಗರು
ಚಂದ್ರಶೇಖರ್ ಯೆಲೇಟಿ ಪ್ರಿಯಾ ಪ್ರಕಾಶ್ ವಾರಿಯರ್ ನಟನೆಯ ಚೆಕ್ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ನಿತಿನ್ ಖೈದಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.