2ನೇ​ ಪತ್ನಿಯ ಜೊತೆ ಮೊದಲ ಬಾರಿ ನಟ Prabhu Deva ದರ್ಶನ

By Suvarna News  |  First Published Apr 29, 2023, 6:01 PM IST

ಮೊದಲ ಪತ್ನಿಗೆ ವಿಚ್ಛೇದನ ನೀಡಿ ಸೀಕ್ರೆಟ್​ ಆಗಿ ಮತ್ತೊಂದು ಮದುವೆಯಾಗಿರುವ ನಟ ಪ್ರಭುದೇವ ಅವರ ಜೊತೆ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. 
 


ಇಂಡಿಯನ್ ಮೈಕೆಲ್ ಜಾಕ್ಸನ್ (Indian Michael Jackson) ಎಂದೇ ಪ್ರಸಿದ್ಧ ಪಡೆದಿರುವ ನಟ ಪ್ರಭುದೇವ (Prabhudeva) ಅವರು ತಮ್ಮ ವೈಯಕ್ತಿಕ ಬದುಕಿನ ವಿಚಾರವಾಗಿ ಆಗಾಗ್ಗೆ ಸುದ್ದಿಯಲ್ಲಿ ಇರುತ್ತಾರೆ. ವೈಯಕ್ತಿಕ ಜೀವನ ಹಾಗೂ ಔದ್ಯೋಗಿಕ ಜೀವನದ ಮಧ್ಯೆ ದೊಡ್ಡ ಅಂತರ ಇಡಲು ಬಯಸುವ ನಟರಲ್ಲಿ  ಪ್ರಭುದೇವ ಕೂಡ ಒಬ್ಬರು. ಆದರೆ ನಟ-ನಟಿಯರು ಎಂದ ಮೇಲೆ ಕೇಳಬೇಕೆ? ಅವರ ಪ್ರತಿಯೊಂದು ಹೆಜ್ಜೆಯೂ ಮಹತ್ವದ್ದಾಗಿರುತ್ತದೆ. ಅದರಲ್ಲಿಯೂ ಸಂಬಂಧ, ಡೇಟಿಂಗ್​, ವೈವಾಹಿಕ ಜೀವನದ ಮೇಲೆ ಸದಾ ಕಣ್ಣಿರುತ್ತದೆ. ಅದೇ ರೀತಿ ಪ್ರಭುದೇವ್​ ತಮ್ಮ ವೈಯಕ್ತಿಕ ಜೀವನದಿಂದ ಜನರನ್ನು ಎಷ್ಟೇ ದೂರ  ಇಡಲು ಬಯಸಿದರೂ ಅದು ಸಾಧ್ಯವಿಲ್ಲ.  ಚಿತ್ರರಂಗದಲ್ಲಿ ನೃತ್ಯ ಸಂಯೋಜಕನಾಗಿ, ನಟನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಪ್ರಭುದೇವ ವಿವಾಹ ಬಂಧನಕ್ಕೆ ಒಳಗಾಗಿದ್ದು 1995ರಲ್ಲಿ. ರಾಮ್‌ಲತ್ (ಲತಾ) ಎಂಬುವರನ್ನ 1995ರಲ್ಲಿ ಪ್ರಭುದೇವ ಮದುವೆಯಾದರು. ರಾಮ್‌ಲತ್ ಮತ್ತು ಪ್ರಭುದೇವ ದಂಪತಿಗೆ ಮೂವರು ಮಕ್ಕಳು. ಆದರೆ ಮೊದಲ ಮಗ ವಿಶಾಲ್ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. 2011ರಲ್ಲಿ ರಾಮ್‌ಲತ್ ಮತ್ತು ಪ್ರಭುದೇವ ವಿಚ್ಛೇದನ ಪಡೆದರು.

ಇದಾದ ಮೇಲೆ ಈ ಖ್ಯಾತ ನಟನ ಪರ್ಸನಲ್​ ಲೈಫ್​ ಬಗ್ಗೆ ಅಭಿಮಾನಿಗಳಿಗೆ ಯಾವತ್ತೂ ಆಸಕ್ತಿ ಇದ್ದೇ ಇತ್ತು. ನಂತರ ಇವರು, ಹಿಮಾನಿ ಸಿಂಗ್ (Himani Singh) ಎನ್ನುವ ವೈದ್ಯೆಯನ್ನು ಸೀಕ್ರೆಟ್ ಆಗಿ ಮದುವೆಯಾಗಿದ್ದರು. 2020ರಲ್ಲಿ ಇವರಿಬ್ಬರ ವಿವಾಹ ರಹಸ್ಯವಾಗಿ ನಡೆದಿತ್ತು. ಲಾಕ್‌ಡೌನ್‌ನಲ್ಲಿ ಈ ಮದುವೆ ನಡೆದ ಕಾರಣ ಈ ಮದುವೆ ರಹಸ್ಯವಾಗಿಯೇ ಉಳಿದಿತ್ತು. ಆದರೆ ನಟರ ಪ್ರೈವೇಟ್​ ಲೈಫ್​ ಬಗ್ಗೆ ರಹಸ್ಯವಾಗಿ ಬಹಳ ಕಾಲ ಉಳಿಯುವುದು ಕಷ್ಟವೇ. ಇವರ ಈ ಮದುವೆಯ ಬಗ್ಗೆ ಖುಲ್ಲಂ ಖುಲ್ಲಾ  ಆಗಿತ್ತು. ಆದರೆ ಅವರು ಪತ್ನಿಯನ್ನು ಮಾತ್ರ ಎಲ್ಲಿಯೂ ಒಟ್ಟಿಗೇ ಕರೆತಂದಿರಲಿಲ್ಲ.

Tap to resize

Latest Videos

undefined

20 ದಿನಗಳಲ್ಲಿ ಮೂರು ಮಕ್ಕಳ ತಂದೆಯಾದ ಯುಟ್ಯೂಬರ್​ Armaan Malik!

ಇದೀಗ,  ಮೊದಲ ಬಾರಿಗೆ 2ನೇ ಪತ್ನಿ ಜೊತೆ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.   ಪತ್ನಿ ಸಮೇತರಾಗಿ ಮೊದಲ ಬಾರಿಗೆ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ (Balaji Temple) ಭೇಟಿ ಕೊಟ್ಟ ಫೋಟೋ ಇದಾಗಿದೆ.  ತಮ್ಮ ಪತ್ನಿಯ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ಹೋಗಿದ್ದ ಫೋಟೋ ವೈರಲ್​ ಆಗಿದೆ.  ಜನಸಂದಣಿಗೆ ಇದ್ದಂತಹ ದೇವಸ್ಥಾನದಲ್ಲಿ ಪತ್ನಿಯ ಸುರಕ್ಷತೆಗಾಗಿ ಪತ್ನಿಯ ಕೈಯನ್ನು ಬಲವಾಗಿ ಹಿಡಿದುಕೊಂಡಿದ್ದರು. ಜನಸಂದಣಿಗೆ ಇದ್ದಂತಹ ದೇವಸ್ಥಾನದಲ್ಲಿ ಪತ್ನಿಯ ಸುರಕ್ಷೆಗಾಗಿ ನಟ ಪತ್ನಿಯ ಕೈಯನ್ನು ಬಲವಾಗಿ ಹಿಡಿದುಕೊಂಡಿದ್ದರು. ಈ ಜೋಡಿಯ ಫೋಟೋ ವೈರಲ್ ಆಗಿದ್ದು ಅವರಿಬ್ಬರನ್ನೂ ಜೊತೆಯಲ್ಲಿ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಪ್ರಭುದೇವ ಅವರ ಎರಡನೇ ಮದುವೆ ಬಗ್ಗೆ ಅವರ ಅಣ್ಣನೇ ಮೊದಲ ಬಾರಿಗೆ ಮಾಹಿತಿ ಕೊಟ್ಟಿದ್ದರು. ರಾಜಾ ಸುಂದರಂ ಅವರು ತಮ್ಮನ ಎರಡನೇ ಮದುವೆ ಬಗ್ಗೆ ಮಾತನಾಡಿ ಅದನ್ನು ದೃಢಪಡಿಸಿದ್ದರು. ಸಂದರ್ಶನವೊಂದರಲ್ಲಿ ಈ ವಿಚಾರ ರಿವೀಲ್ ಮಾಡಿದ್ದರು. ಪ್ರಭುದೇವ ಅವರು ಕೊನೆಯಬಾರಿಗೆ ಭಗೀರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದನ್ನು ಆಧಿಕ್ ರವಿಚಂದ್ರನ್ ನಿರ್ದೇಶಿಸಿದ್ದಾರೆ. ಆದರೆ ಸಿನಿಮಾ ನಿರೀಕ್ಷಿಸಿದ ಮಟ್ಟಿಗೆ ಸಕ್ಸಸ್ ಆಗಲಿಲ್ಲ. ಆದರೆ ನಟ ತನ್ನ ಸಿನಿಮಾ ಕೆರಿಯರ್​ನಲ್ಲಿಯೇ ಮೊದಲ ಬಾರಿಗೆ ಮೂವಿಗಾಗಿ ತಲೆ ಬೋಳಿಸಿಕೊಂಡಿದ್ದರು.

ಸ್ವರಾ ಭಾಸ್ಕರ್ ಇಷ್ಟು ಸಣ್ಣ ಹೆಲ್ಪ್‌ ಕೇಳಿದ್ದಕ್ಕೆ ಹೀಗೆಲ್ಲಾ ಕಮೆಂಟ್​ ಮಾಡೋದಾ ನೆಟ್ಟಿಗರು?

ಈಚೆಗೆ ಪ್ರಭುದೇವ್​ ಅವರು ‘ವೀಕೆಂಡ್ ವಿತ್ ರಮೇಶ್ ಸೀಸನ್ 5’ (Weekend with Ramesh) ಕಾರ್ಯಕ್ರಮದ   ಅತಿಥಿಯಾಗಿ  ಭಾಗವಹಿಸಿದ್ದರು. ಪ್ರಭುದೇವ ಅವರ ಬಾಲ್ಯದ ಜೀವನ, ಸ್ಕೂಲ್ ಲೈಫ್, ಸಿನಿ ಜರ್ನಿಯನ್ನ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಲಾಯಿತು. ತಮ್ಮ ಮಗನ ಫೋಟೋ ಕಂಡ ಪ್ರಭುದೇವ ಕಣ್ಣೀರು ಹಾಕಿದ್ದರು. ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಮನ ಗೆದ್ದವರು ಪ್ರಭುದೇವ್​. 

 

Prabhudeva & his wife Dr Himani. pic.twitter.com/JdXvI03Yys

— Christopher Kanagaraj (@Chrissuccess)
click me!