ಕಪಿಲ್ ಶರ್ಮಾ ಶೋ ಶೂಟಿಂಗ್ ಸ್ಛಗಿತ, ಸೆಟ್‌ಲ್ಲಿ ಅಸ್ವಸ್ಥಗೊಂಡ ಪರಿಣಿತಿ ಚೋಪ್ರಾ ಅತ್ತೆ ಆಸ್ಪತ್ರೆ ದಾಖಲು

Published : Jul 20, 2025, 05:50 PM IST
Raghav Chadha At The Great Indian Kapil Show

ಸಾರಾಂಶ

ಪರಿಣಿತಿ ಚೋಪ್ರಾ ಜೊತೆ ಕಪಿಲ್ ಶರ್ಮಾ ಶೂ ಶೂಟಿಂಗ್‌ನಲ್ಲಿ ಪಾಲ್ಗೊಂಡ ಅತ್ತೆ ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ಹೀಗಾಗಿ ಆಸ್ಪತ್ರೆ ದಾಖಲಿಸಲಾಗಿದೆ. ಇತ್ತ ಕಪಿಲ್ ಶರ್ಮಾ ಶೋ ಸ್ಥಗಿತಗೊಂಡಿದೆ.

ಮುಂಬೈ (ಜು.20) ಕಪಿಲ್ ಶರ್ಮಾ ಶೂಟಿಂಗ್ ಸೆಟ್‌ನಲ್ಲಿ ತೀವ್ರ ಅಸ್ವಸ್ಥಗೊಂಡ ಪರಿಣಿತಿ ಚೋಪ್ರಾ ಅತ್ತೆ ತೀವ್ರ ಅಸ್ವಸ್ಥಗೊಂಡ ಘಟನೆ ನಡೆದಿದೆ. ಹೀಗಾಗಿ ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇತ್ತ ರಾಘವ್ ಚಡ್ಡಾ ಹಾಗೂ ಪರಿಣಿತಿ ಚೋಪ್ರಾ ಕೂಡ ತುರ್ತು ಕಾರಣದಿಂದ ತೆರಳಿದ ಕಾರಣ ಕಪಿಳ್ ಶರ್ಮಾ ಶೋ ಶೂಟಿಂಗ್ ಸ್ಛಗಿತಗೊಂಡಿದೆ. ಈ ಕುರಿತು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪರಿಣಿತಿ ಚೋಪ್ರಾ, ರಾಘವ್ ಚಡ್ಡಾ ಅತಿಥಿ

ಸೆಲೆಬ್ರೆಟಿ ಜೋಟಿಗಳಾಗಿರುವ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ಪತಿ, ಆಪ್ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅತಿಥಿಗಳಾಗಿ ಕಪಿಲ್ ಶರ್ಮಾ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು. ದುಬೈನಿಂದ ಬಂದಿಳಿದ ಕಪಿಲ್ ಶರ್ಮಾ ಕಾಮಿಡಿ ಶೋ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತ ಪರಿಣಿತಿ ಚೋಪ್ರಾ, ರಾಘವ್ ಚಡ್ಡಾ ಜೊತೆ ಆಪ್ತರು, ಕುಟುಂಬಸ್ಥರು ಆಗಮಿಸಿದ್ದಾರೆ. ಈ ಪೈಕಿ ರಾಘವ್ ಚಡ್ಡ ತಾಯಿ ಕೂಡ ಶೂಟಿಂಗ್ ನೋಡಲು ಆಗಮಿಸಿದ್ದಾರೆ. ಆದರ ಶೂಟಿಂಗ್ ನಡುವೆ ರಾಘವ್ ಚಡ್ಡಾ ತಾಯಿ ಅಸ್ವಸ್ಥಗೊಂಡಿದ್ದಾರೆ.

ಅಸ್ವಸ್ಥಗೊಂಡ ತಾಯಿಯನ್ನು ತಕ್ಷಣ ಆಸ್ಪತ್ರೆ ದಾಖಲು

ಶೂಟಿಂಗ್ ನೋಡಲು ಆಗಮಿಸಿದ್ದ ರಾಘವ್ ಚಡ್ಡಾ ತಾಯಿ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದರು. ಕಪಿಲ್ ಶರ್ಮಾ ಶೋ ಎಂದಿನಂತೆ ಕಾಮಿಡಿಗಳ ಮೂಲಕ ಸಾಗಿತ್ತು. ಮನಸಾರೆ ನಗುತ್ತಿದ್ದ ರಾಘವ್ ಚಡ್ಡಾ ತಾಯಿ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದಾರೆ. ಆರಂಭದಲ್ಲಿ ಗಂಭೀರವಲ್ಲ ಎಂದುಕೊಂಡಿದ್ದರು. ಆದರೆ ತಾಯಿ ತೀವ್ರ ಅಸ್ವಸ್ಥಗೊಳ್ಳುತ್ತಿದ್ದಂತೆ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಹೊಸ ದಿನಾಂಕ ಶೀಘ್ರದಲ್ಲೇ ಘೋಷಣೆ

ತಾಯಿ ಅಸ್ವಸ್ಥಗೊಂಡ ಕಾರಣ ರಾಘವ್ ಚಡ್ಡಾ ಹಾಗೂ ಪರಿಣಿತಿ ಚೋಪ್ರಾ ಇಬ್ಬರೂ ತಾಯಿ ಚೊತೆಗೆ ಆಸ್ಪತ್ಪೆಗೆ ತೆರಳಿದ್ದಾರೆ. ಇತ್ತ ನಡೆಯುತ್ತಿದ್ದ ಶೂಟಿಂಗ್ ಅರ್ಧಕ್ಕೆ ನಿಲ್ಲಿಸಲಾಯಿತು. ಇದೀಗ ಪ್ರೊಡಕ್ಷನ್ ತಂಡ, ಪರಿಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ಸಂಪರ್ಕಿಸಿ ಮುಂದಿನ ಶೂಟಿಂಗ್ ದಿನಾಂಕ ನಿಗದಿಪಡಿಸಲಾಗುತ್ತದೆ ಎಂದಿದ್ದಾರೆ. ಸದ್ಯ ಪರಿಣಿತಿ ಹಾಗೂ ರಾಘವ್ ಚಡ್ಡಾಆಸ್ಪತ್ರೆಯಲ್ಲಿ ತಾಯಿ ಆರೈಕೆಯಲ್ಲಿದ್ದಾರೆ. ಹೀಗಾಗಿ ಅವರಿಗೆ ಕೆಲ ದಿನಗಳ ಸಮಯದ ಅವಶ್ಯಕತೆ ಇದೆ. ಸೆಲೆಬ್ರೆಟಿ ಜೋಡಿಗಳ ಸಂಪರ್ಕಿಸಿ ದಿನಾಂಕ ಘೋಷಿಸುವುದಾಗಿ ಪ್ರೊಡಕ್ಷನ್ ತಂಡ ಹೇಳಿದೆ.

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?