
ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಹಾಗೂ ಮಿಹಿಕಾ ಬಜಾಜ್ ಆಗಸ್ಟ್ 8ರಂದು ವಿವಾಹಿತರಾಗಿದ್ದಾರೆ. ಕುಟುಂಬಸ್ಥರ ಮತ್ತು ಆಪ್ತರ ವಲಯದಲ್ಲಿ ನಡೆದ ಮದುವೆಗೆ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್‌ಗೆ ಆಮಂತ್ರಣ ಕೊಟ್ಟಿಲ್ವಾ..? ಅಂತೂ ಮದುವೆಯಲ್ಲಿ ಪ್ರಭಾಸ್ ಮತ್ತು ಅನುಷ್ಕಾ ಇರಲಿಲ್ಲ.
ರಾಮನಾಯ್ಡು ಸ್ಟುಡಿಯೋದಲ್ಲಿ ನಡೆದ ಮದುವೆಯಲ್ಲಿ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್, ರಾಮ್ ಚರಣ್, ನಾಗಚೈತನ್ಯ-ಸಮಂತಾ ಭಾಗಿಯಾಗಿದ್ದರಯ. ಪ್ರಭಾಸ್-ಅನುಷ್ಕಾ ಮಿಸ್ಸಿಂಗ್.
ಪತ್ನಿ ಜೊತೆ ರಾಣಾ ದಗ್ಗುಬಾಟಿ ಸತ್ಯನಾರಾಯಣ ಪೂಜೆ..! ಕಾಟನ್ ಪೋಷಾಕಿನಲ್ಲಿ ಫ್ಯಾಮಿಲಿ ಮಿಂಚಿಂಗ್
ವಿವಾಹದ ಬಹಳಷ್ಟು ಫೋಟೋಗಳೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲಗ ಆಗಿದ್ದು, ಯಾವುದೇ ಫೋಟೋದಲ್ಲಿ ಇವರಿಬ್ಬರು ಮಾತ್ರ ಕಾಣಿಸುತ್ತಿಲ್ಲ. ಮೂಲಗಳ ಪ್ರಕಾರ ಅನುಷ್ಕಾ ಹಾಗೂ ಪ್ರಭಾಸ್‌ಗೆ ಮದುವೆ ಆಮಂತ್ರಣ ಕಟ್ಟಿಲ್ವಂತೆ. ಇವರಿಬ್ಬರೇ ಅಲ್ಲ ಕೊರೋನಾದಿಂದಾಗಿ ಫಿಲ್ಮ್ ಇಂಡಸ್ಟ್ರಿಯ ಯಾರಿಗೂ ಆಮಂತ್ರಣ ಇರಲಿಲ್ಲ ಎನ್ನಲಾಗುತ್ತಿದೆ.
ಪರ್ಫೆಕ್ಟ್ ಫ್ಯಾಮಿಲಿ ಪಿಕ್: ರಾಣಾ ವೈಫ್‌ಗೆ ವೆಲ್‌ಕಮ್ ಎಂದ ಸಮಂತಾ..! ಇಲ್ನೋಡಿ ಫೋಟೋಸ್
ವಿವಾಹದ ಸಂದರ್ಭ ಮಿಹಿಕಾ ರಾಯಲ್ ಲೆಹಂಗಾ ಧರಿಸಿ ಮಿಂಚಿದ್ದರು. ಝಾರ್ಡೋಸಿ,ಚಿಕಂಕರಿ, ಗೋಲ್ಡ್ ಮೆಟಲ್ ವರ್ಕ್ ಇದ್ದ ಗ್ರ್ಯಾಂಡ್ ಲೆಹಂಗಾದಲ್ಲಿ ವಧು ಮಿಹಿಕಾ ಶೈನ್ ಆಗಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.