
ಇಂಡಿಯನ್ ಐಡಲ್ ಜಡ್ಜ್ ನೇಹಾ ಕಕ್ಕರ್ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಪತಿ ಜೊತೆ ಇನ್‌ಸ್ಟಾಗ್ರಾಂ ರಿಲೀಸ್, ವಿಡಿಯೋ ಆಕ್ಟಿಂಗ್ ಮಾಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳನ್ನು ಮನೋರಂಜಿಸುತ್ತಿದ್ದಾರೆ. ಆದರೆ ಇತ್ತೀಚಿಗೆ ಅಪ್ಲೋಡ್ ಮಾಡಿದ ವಿಡಿಯೋದಲ್ಲಿ ಎಕ್ಸ್ ಕಾಲಿಂಗ್ ಹಾಡಿನ ಮೂಲಕ ರೋಹನ್ ಎಕ್ಸ್ ಗರ್ಲ್‌ಫ್ರೆಂಡ್‌ಗೆ ವಾರ್ನಿಂಗ್ ಮಾಡಿದ್ದಾರೆ.
ಎಕ್ಸ್ ಕಾಲಿಂಗ್ ಎಂಬ ಆಲ್ಬಂ ಹಾಡಿನಲ್ಲಿ ನೇಹಾ ಹಾಗೂ ರೋಹನ್ ಹೆಜ್ಜೆ ಹಾಕಿದ್ದಾರೆ. ಇದೇ ಹಾಡಿಗೆ ಲಿಪ್ ಸಿಂಕ್ ಮಾಡಿ 'ಎಕ್ಸ್ ಕಾಲಿಂಗ್, ಅಚ್ಚಾ ಕಾಲ್ ಮಾಡು ಆಗ ಹೇಳ್ತೀನಿ' ಎಂದು ಬರೆದು ಅಪ್ಲೋಡ್ ಮಾಡಿದ್ದಾರೆ. ತಕ್ಷಣವೇ ರೋಹನ್ 'ಯಾರೂ ಇಲ್ಲ ನೀವು ಕೋಪ ಮಾಡಿಕೊಳ್ಳಬೇಡಾ. ನಾನು ನಿನ್ನನ್ನು ಪ್ರೀತಿಸುತ್ತೇನೆ ಈ ಹಾಡು ಇಷ್ಟಪಟ್ಟಿದ್ದೀಯಾ' ಎಂದು ಹೇಳಿದ್ದಾರೆ. ಈ ಹಾಡಿಗೆ ಎಲ್ಲೆಡೆ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿದೆ ಆದರೆ ಕಮೆಂಟ್ಸ್ ಮೂಲಕ ನೆಟ್ಟಿಗರು ಮಜಾ ತೆಗೆದುಕೊಳ್ಳುತ್ತಿದ್ದಾರೆ.
ನೇಹಾ ಇಲ್ಲದೆ ಮ್ಯೂಸಿಕ್ ಇಂಡಸ್ಟ್ರಿ ಏನೂ ಅಲ್ಲ ಎಂದ ಖ್ಯಾತ ಡ್ಯಾನ್ಸರ್ ನೋರಾ..!
' ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮದುವೆಯಾದದ್ದು ಆಗಲೇ ಎಕ್ಸ್‌ಗಳ ಕಾಟ ಶುರುವಾಯ್ತಾ','ನೇಹಾ ನಿಮ್ಮ ಎಕ್ಸ್‌ಗೂ ರೋಹನ್ ಹೀಗೆ ಮಾಡಿದರೆ ಏನು ಮಾಡುತ್ತೀರಾ' ಎಂದು ಪ್ರಶ್ನೆ ಮಾಡಿದ್ದಾರೆ. ಸಾಮಾನ್ಯವಾಗಿ ನೇಹಾ ಯಾವ ಕಮೆಂಟ್‌ಗೂ ಪತ್ರಿಕ್ರಿಯೆ ನೀಡುವುದಿಲ್ಲ. ಆದರೂ ನೋಡಬಹುದು ಎಂಬ ಭಾವನೆಯಲ್ಲಿ ನೆಟ್ಟಿಗರು ಕಮೆಂಟ್ ಮಾಡುವುದನ್ನು ನಿಲ್ಲಿಸುವುದಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.