
ಸಮಂತಾ ರುಥ್ ಪ್ರಭು(Samantha Ruth Prabhu) ಬ್ಯಾಕ್ ಟು ಬ್ಯಾಕ್ ಒಳ್ಳೊಳ್ಳೆ ಸಿನಿಮಾ ಆಫರ್‌ಗಳನ್ನು ಪಡೆಯುತ್ತಾ ಬ್ಯುಸಿಯಾಗಿದ್ದಾರೆ. ಡಿವೋರ್ಸ್ ಆದ ಮೇಲೆಯೂ ಈ ಜೋಡಿ ವೃತ್ತಿ ಜೀವನವನ್ನು ನೀಟಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಸಮಂತಾ ಅಂತೂ ಬಾಲಿವುಡ್, ಹಾಲಿವುಡ್‌ನಲ್ಲಿಯೂ(Hollywood) ಭರ್ಜರಿ ಆಫರ್‌ಗಳನ್ನು ಪಡೆಯುತ್ತಿದ್ದಾರೆ. ಆದರೆ ಇವರಿಬ್ಬರ ದಾಂಪತ್ಯ ಜೀವನದ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಸೌತ್‌ನ ಕಣ್ಮಣಿಗಳಾಗಿದ್ದ ಕ್ಯೂಟ್ ಜೋಡಿಯ ವಿಚ್ಚೇದನೆ ನಿಜಕ್ಕೂ ಶಾಕಿಂಗ್ ವಿಷಯವಾಗಿತ್ತು. ಆದರೆ ಈಗ ಇಬ್ಬರು ಬೇರೆಯಾಗಿ ತಮ್ಮ ತಮ್ಮ ಜೀವನದಲ್ಲಿ ಬ್ಯುಸಿಯಾಗಿದ್ದಾರೆ.
ಇಬ್ಬರೂ ರಾಮನಾಯ್ಡು ಸ್ಟುಡಿಯೋದಲ್ಲಿಯೇ ಶೂಟಿಂಗ್ ಮಾಡುತ್ತಿದ್ದರೂ ಪರಸ್ಪರ ಐ ಕಾಂಟ್ಯಾಕ್ಟ್ ಮಾಡುವುದನ್ನು ಅವಾಯ್ಡ್ ಮಾಡಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ರಾಮನಾಯ್ಡು ಸ್ಟುಡಿಯೋದಲ್ಲಿ ನಾಗ ಚೈತನ್ಯ ಬಂಗಾರರಾಜು ಸಿನಿಮಾ ಶೂಟಿಂಗ್ ಮಾಡುತ್ತಿದ್ದರು. ಇದೇ ವೇಳೆ ಸಮಂತಾ ಅವರು ಅದೇ ಲೊಕೇಷನ್‌ನಲ್ಲಿ ಯಶೋದಾಗಾಗಿ ಶೂಟ್ ಮಾಡುತ್ತಿದ್ದರು. ಆದರೆ ಇಬ್ಬರು ಸ್ಟಾರ್‌ಗಳೂ ಪರಸ್ಪರ ಮುಖಾಮುಖಿಯಾಗದಂತೆ ತಮ್ಮ ಸ್ಟಾಫ್‌ಗೆ ತಾಕೀತು ಮಾಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ವ್ಯವಸ್ಥಗಳನ್ನು ಮಾಡಲಾಗಿತ್ತು. ಹಾಗಾಗಿ ಇಬ್ಬರೂ ಶೂಟ್ ಮುಗಿಸಿ ತಮ್ಮಷ್ಟಕ್ಕೇ ತಾವು ಹಿಂದಿರುಗಿದ್ದಾರೆ.
ಜಂಟಲ್‌ಮ್ಯಾನ್‌ನಿಂದ 50 ಕೋಟಿ ದೋಚಿದ್ರಾ ಸಮಂತಾ ?
ಹಿಟ್ ಆಯ್ತು ಸಮಂತಾ ಐಟಂ ಸಾಂಗ್:
ಅದಿತ್ಯ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ 'ಊ ಅಂತಾವಾ ಮಾವಾ.. ಊಊ ಅಂತಾವಾ ಮಾವಾ' (Oo Antava..Oo Oo Antava) ಎಂಬ ಸಾಲಿನ ಲಿರಿಕಲ್ ಹಾಡು ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 2 ಮಿಲಿಯನ್‌ಗೂ ಹೆಚ್ಚು ವೀವ್ಸ್ ಪಡೆದು ಮುನ್ನುಗುತ್ತಿದೆ.
ಈ ಐಟಂ ಸಾಂಗ್ಗೆ ಸಿನಿಮಂದಿಯಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಟಾಲಿವುಡ್ ನಟಿ ಸಮಂತಾ (Samantha) ನೀಲಿ ಬಣ್ಣದ ಉಡುಗೆ ತೊಟ್ಟು ಸಖತ್ ಆಗಿ ಸೊಂಟ ಬಳುಕಿಸಿದ್ದಾರೆ. ವಿಶೇಷವಾಗಿ ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ಅದ್ಧೂರಿ ಸೆಟ್‌ನಲ್ಲಿ ಈ ವರ್ಷದ ರಾಕಿಂಗ್ ಹಾಡಿಗೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ಸಮಂತಾ ಹೆಜ್ಜೆ ಹಾಕಿದ್ದಾರೆ. ಈ ಪೆಪ್ಪಿ ಹಾಡಿಗೆ ಬಾಲಿವುಡ್‌ನ ಹೆಸರಾಂತ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ (Ganesh Acharya) ನೃತ್ಯ ಸಂಯೋಜಿಸಿದ್ದಾರೆ. ಇಂದ್ರಾವತಿ ಚೌಹಾಣ್ (Indravathi Chauhan) ದನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಚಂದ್ರಬೋಸ್ (Chandrabose) ಸಾಹಿತ್ಯ ಬರೆದಿದ್ದಾರೆ. ದೇವಿ ಶ್ರೀ ಪ್ರಸಾದ್ (Devi Sri Prasad) ಸಂಗೀತದ ಕಿಕ್ ಈ ಪೆಪ್ಪಿ ಹಾಡಿಗಿದೆ.
ಐಟಂ ಸಾಂಗ್ ಬಗ್ಗೆ ಸಮಂತಾ ಮಾತು:
ನಟಿ ಸಮಂತಾ ರುತ್ ಪ್ರಭು ಸೋಮವಾರ ತಮ್ಮ 'ಊ ಅಂತಾವಾ' ಹಾಡಿನ ಸ್ಟಿಲ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಸೆಕ್ಸಿಯಾಗಿರುವುದು ಕಠಿಣ ಕೆಲಸದ ಮುಂದಿನ ಹಂತದ ಎಂದು ನಟಿ ಬರೆದುಕೊಂಡಿದ್ದಾರೆ. ಐಟಂ ಸಾಂಗ್ ಅಲ್ಲು ಅರ್ಜುನ್ ಅಭಿನಯದ ತೆಲುಗು ಚಿತ್ರ 'ಪುಷ್ಪ: ದಿ ರೈಸ್' ನಿಂದ ಹಿಟ್ ಆಗಿದೆ. ಈ ಹಿಂದೆ ಪುರುಷರ ಸಂಘವು ಪುರುಷರನ್ನು ಕಾಮಪ್ರಚೋದಕ ಎಂದು ಆರೋಪಿಸಿ ಹಾಡಿನ ಮೇಲೆ ನಿಷೇಧಕ್ಕೆ ಒತ್ತಾಯಿಸಿದ್ದವು.
ಪುರುಷರ ಸಂಘದಿಂದ ಸಮಂತಾ ಅವರ ಸ್ಪೆಷಲ್ ಡ್ಯಾನ್ಸ್ ನಂಬರ್ ಊ ಅಂತಾವಾ ವಿರುದ್ಧ ಕೇಸ್(Case) ದಾಖಲಿಸಲಾಗಿದೆ. ವರದಿಯ ಪ್ರಕಾರ ಅದರ ಸಾಹಿತ್ಯ ಮತ್ತು ದೃಶ್ಯಗಳ ಮೂಲಕ ಪುರುಷರನ್ನು ಕಾಮಪ್ರಚೋದಕವಾಗಿ ಚಿತ್ರಿಸುವುದಕ್ಕಾಗಿ ಹಾಡಿನ ವಿರುದ್ಧ ಮೊಕದ್ದಮೆ ಹೂಡಲಾಗಿದೆ. ಪುರುಷರ ಸಂಘವು ಆಂಧ್ರಪ್ರದೇಶದ(Aandhra Pradesh) ನ್ಯಾಯಾಲಯದಲ್ಲಿ ಹಾಡನ್ನು ನಿಷೇಧಿಸುವಂತೆ ಒತ್ತಾಯಿಸಿದ್ದು, ನ್ಯಾಯಾಲಯವು ಪ್ರಕರಣವನ್ನು ಇತ್ಯರ್ಥಪಡಿಸಲು ಬಾಕಿಯಿದೆ. ಇದು ಸಮಂತಾ ರುತ್ ಪ್ರಭು ಅವರ ಮೊದಲ ಸ್ಪೆಷಲ್ ಡ್ಯಾನ್ಸ್. ದುರದೃಷ್ಟವಶಾತ್, ಅದರ ಸಾಹಿತ್ಯ ಮತ್ತು ದೃಶ್ಯಗಳಿಂದಾಗಿ ಇದು ವಿವಾದಕ್ಕೆ ಸಿಲುಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.