ಹಿರಿಯರು ಟಾಲಿವುಡ್‌ನ ಹೆಮ್ಮೆ; 'ಅಕ್ಕಿನೇನಿ ತೊಕ್ಕಿನೇನಿ' ಎಂದ ಬಾಲಯ್ಯ ವಿರುದ್ಧ ನಾಗಚೈತನ್ಯ ಸಹೋದರರ ಅಸಮಾಧಾನ

Published : Jan 24, 2023, 04:37 PM IST
ಹಿರಿಯರು ಟಾಲಿವುಡ್‌ನ ಹೆಮ್ಮೆ; 'ಅಕ್ಕಿನೇನಿ ತೊಕ್ಕಿನೇನಿ' ಎಂದ ಬಾಲಯ್ಯ ವಿರುದ್ಧ ನಾಗಚೈತನ್ಯ ಸಹೋದರರ ಅಸಮಾಧಾನ

ಸಾರಾಂಶ

ನಂದಮೂರಿ ಬಾಲಕೃಷ್ಣ ಹೇಳಿಕೆಗೆ ನಾಗ ಚೈತನ್ಯ ಮತ್ತು ಅಖಿಲ್ ಅಕ್ಕಿನೇನಿ ಬೇಸರ ಹೊರಹಾಕಿದ್ದಾರೆ. ಹಿರಿಯರನ್ನು ಅಗೌರವಿಸಬಾರದು ಎಂದು ಹೇಳಿದ್ದಾರೆ.  

ತೆಲುಗು ಸಿನಿಮಾರಂಗದ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಸಿನಿಮಾಗಿಂತ ಹೆಚ್ಚಾಗಿ ಬೇರೆ ವಿಚಾರಗಳ ಮೂಲಕವೇ ಸುದ್ದಿಯಲ್ಲಿ ಇರುತ್ತಾರೆ. ಒಂದಲ್ಲೊಂದು ಹೇಳಿಕೆಗಳನ್ನು ನೀಡಿ ವಿವಾದ ಮೈ ಮೇಲೆ ಎಳೆದುಕೊಳ್ಳುತ್ತಾರೆ.  ಬಾಲಯ್ಯ ನೇರವಾಗಿ ಮಾತನಾಡುತ್ತಾರೆ, ಬೈಯುತ್ತಾರೆ. ಆದರೆ ಕೆಲವೊಮ್ಮೆ ಅವರ ನಡೆ ಮತ್ತು ನುಡಿ ಬೇರೆಯರಿಗೆ ನೋವು ಉಂಟುಮಾಡುತ್ತಿದೆ. ಇದೀಗ ಬಾಲಯ್ಯ ಆಡಿದ ಒಂದು ಮಾತು ಅಕ್ಕಿನೇನಿ ಕುಟುಂಬದ ಬೇಸರಕ್ಕೆ ಕಾರಣವಾಗಿದೆ. ನಾಗಚೈತನ್ಯ ಮತ್ತು ಅಖಿಲ್ ಅಕಿಲ್ ಅಕ್ಕಿಕೇನಿ ಇಬ್ಬರೂ ಬೇಸರ ಹೊರಹಾಕಿದ್ದಾರೆ. 

ಇತ್ತೀಚಿಗಷ್ಟೆ ಹೈದರಾಬಾದನಲ್ಲಿ ಬಾಲಕೃಷ್ಣ ಅಭಿನಯದ ವೀರಸಿಂಹ ರೆಡ್ಡಿ ಚಿತ್ರದ ಸಕ್ಸಸ್ ಮೀಟ್ ಮಾಡಲಾಯಿತು. ಈವೆಂಟ್ ನಲ್ಲಿ ಬಾಲಯ್ಯ ತಮ್ಮ ಭಾಷಣದಲ್ಲಿ ಲೆಜೆಂಡರಿ ಎಸ್‌ವಿ ರಂಗರಾವ್ ಗಾರು ಮತ್ತು ಅಕ್ಕಿನೇನಿ ನಾಗೇಶ್ವರ ರಾವ್ ಅವರ ಬಗ್ಗೆ ಕೆಲವು ಕಾಮೆಂಟ್‌ಗಳನ್ನು ಮಾಡಿದರು. ಇದು ಅಕ್ಕಿನೇನಿ ಅಭಿಮಾನಿಗಳನ್ನು ಕೆರಳಿಸಿದೆ. ಅಲ್ಲದೇ ಅಕ್ಕಿನೇನಿ ಕುಟುಂಬಕ್ಕೂ ಬಾಲಯ್ಯ ಮಾತು ಬೇಸರ ಮೂಡಿಸಿದೆ. ಈ ಸಂಬಂಧ ನಾಗ ಚೈತನ್ಯ ಹಾಗೂ ಅಖಿಲ್ ಅಕ್ಕಿನೇನಿ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು ವೈರಲ್ ಆಗಿದೆ. 

ವೀರ ಸಿಂಹ ರೆಡ್ಡಿ ಕಾರ್ಯಕ್ರಮದಲ್ಲಿ ಬಾಲಕೃಷ್ಣ ಅವರು ತಮ್ಮ ಭಾಷಣದಲ್ಲಿ ‘ಅಕ್ಕಿನೇನಿ ತೊಕ್ಕಿನೇನಿ’ ಎಂದು ಕಾಮೆಂಟ್ ಮಾಡಿದ್ದರು. ಈ ಮಾತು ಈಗ ವೈರಲ್ ಆಗಿದ್ದು ಬಾಲಯ್ಯ ವಿರುದ್ದ ಅನೇಕರು ಕಿಡಿ ಕಾರುತ್ತಿದ್ದಾರೆ. ಇತರ ನಟರನ್ನು ಅಗೌರವಗೊಳಿಸುವುದು, ಗೌರವ ಕಡಿಮೆ ಮಾಡುವುದು ಸೂಕ್ತವಲ್ಲ ಮತ್ತು ಅಂತಹ ನಡವಳಿಕೆಯನ್ನು ಸಹಿಸಬಾರದು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸಾರ್ವಜನಿಕ ವ್ಯಕ್ತಿಗಳು ಯಾವಾಗಲೂ ವೃತ್ತಿಪರವಾಗಿ ಮತ್ತು ಗೌರವಯುತವಾಗಿ ನಡೆದುಕೊಳ್ಳುವುದು ಮುಖ್ಯ ಎಂದು ಹೇಳುತ್ತಿದ್ದಾರೆ. 

ಮಲಗಿದ್ದ ಪುಟ್ಟ ಕಂದನಿಗೆ ಜೋರಾಗಿ ಹೊಡೆದ ಬಾಲಯ್ಯ; ವಿಡಿಯೋ ವೈರಲ್

ಬಾಲಯ್ಯ ಹೇಳಿಕೆ ಬಗ್ಗೆ ಅಕ್ಕಿನೇನಿ ಕುಟುಂಬ ಬೇಸರ ವ್ಯಕ್ತಪಡಿಸಿದೆ. 'ಅವರನ್ನು ಕೀಳಾಗಿ ನೋಡುವುದು ನಮ್ಮನ್ನು ನಾವು ಕೀಳಾಗಿ ನೋಡಿದ್ದಂತೆ' ಎಂದು ಹೇಳಿದ್ದಾರೆ. ನಟ ನಾಗ ಚೈತನ್ಯ ಮತ್ತು ಅಖಿಲ್ ಅಕ್ಕಿನೇನಿ ಇಬ್ಬರೂ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಡೇಟಿಂಗ್ ವದಂತಿ ಬೆನ್ನಲ್ಲೇ ಶೋಭಿತಾ ಜೊತೆ ನಾಗ ಚೈತನ್ಯ ಫೋಟೋ ವೈರಲ್; ಕನ್ಫರ್ಮ್ ಎಂದ ನೆಟ್ಟಿಗರು

'ಹಿರಿಯರಾದ ನಂದಮೂರಿ ತಾರಕ ರಾಮರಾವ್, ಅಕ್ಕಿನೇನಿ ನಾಗೇಶ್ವರ ರಾವ್ ಮತ್ತು ಎಸ್.ವಿ.ರಂಗರಾವ್ ಅವರು ತೆಲುಗು ಸಿನಿಮಾರಂಗದ ಹೆಮ್ಮೆ. ಅವರಿಗೆ ಅಗೌರವ ತೋರುವುದು ನಮ್ಮನ್ನು ನಾವೇ ಕೀಳಾಗಿ ಮಾಡಿಕೊಂಡಂತೆ' ಎಂದು ಅವರು ಹೇಳಿದ್ದಾರೆ. ನಾಗ್ ಚೈತನ್ಯ ಮತ್ತು ಅಖಿಲ್ ಅಕ್ಕಿನೇನಿ ಹೇಳಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರ ಪರ ಕಾಮೆಂಟ್ ಮಾಡುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!
Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ