ವಾಟರ್ ಸ್ಕೂರ್ ಅಪಘಾತ; ಕೋಮಾಗೆ ಜಾರಿದ ನಟ ವಿಜಯ್ ಆಂಟೋನಿ?

By Vaishnavi ChandrashekarFirst Published Jan 24, 2023, 2:46 PM IST
Highlights

ಮಲೇಷ್ಯಾದಲ್ಲಿ ವಾಟರ್ ಸ್ಕೂರ್‌ನಿಂದ ಬಿದ್ದು ಪೆಟ್ಟು ಮಾಡಿಕೊಂಡ ನಟ ವಿಜಯ್ ಆರೋಗ್ಯ ಸ್ಥಿತಿ ಗಂಭೀರ..... 

ತಮಿಳು ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಕಂಡು ಈಗಷ್ಟೇ ಹೆಸರು ಮಾಡಲು ಆರಂಭಿಸಿದ ನಟ ವಿಜಯ್ ಆಂಟೋನಿ ಚಿತ್ರೀಕರಣ ಮಾಡುವ ವೇಳೆ ಬೀಕರ ಅಪಘಾತದಿಂದ ಪೆಟ್ಟು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ವಿಜಯ್ ಆರೋಗ್ಯದ ಬಗ್ಗೆ ನಿರ್ದೇಶಕ ಸುಸೀಂದ್ರನ್ ಮಾಹಿತಿ ಹಂಚಿಕೊಂಡಿದ್ದಾರೆ. 

ವಿಜಯ್ ಅಭಿನಯಿಸಿರುವ ಪಿಚೈಕ್ಕಾರನ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ನಿರೀಕ್ಷೆಗೂ ಮೀರಿದ ಕಲೆಕ್ಷನ್ ಮಾಡಿದೆ ಹೀಗಾಗಿ ಭಾಗ ಎರಡು ಮಾಡಲು ಚಿತ್ರತಂಡ ನಿರ್ಧರಿಸಿ ಮಲೇಷ್ಯಾದಲ್ಲಿ ಪಿಚೈಕ್ಕಾರನ್ 2 ಚಿತ್ರೀಕರಣ ಮಾಡುತ್ತಿದ್ದರು. ಈ ವೇಳೆ ಮಲೇಷ್ಯಾದ ಲಂಕಾವಿ ದ್ವೀಪದಲ್ಲಿ ವಾಟರ್ ಸ್ಕೂಟರ್‌ ಓಡಿಸುವಾಗ ಬ್ಯಾಲೆನ್ಸ್‌ ಮಾಡಲಾಗದೆ  ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ ಎಂದು ಕೆಲವರು ಹೇಳುತ್ತಾರೆ ಇನ್ನೂ ಕೆಲವರು ಬಂಡೆಗೆ ಹೊಡೆದು ಪೆಟ್ಟು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಘಟನೆ ನಡೆದ ತಕ್ಷಣವೇ ಅಲ್ಲಿದ್ದ ಅಸಿಸ್ಟೆಂಟ್ ಕ್ಯಾಮೆರಾ ಮ್ಯಾನ್‌ ಸಹಾಯ ಮಾಡಿ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. 

ಕೆಲವು ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ವಿಜಯ್ ಆಂಟೋನಿ ಕೋಮಾಗೆ ಜಾರಿದ್ದಾರೆ ಎನ್ನಲಾಗಿದೆ. ಆದರೆ ನಿರ್ದೇಶಕ ಸುಸೀಂದ್ರನ್ ನೀಡಿರುವ ಮಾಹಿತಿ ಪ್ರಕಾರ 'ವೈದ್ಯರು ವಿಜಯ್ ಆಂಟೋನಿ ಅವರಿಗೆ ಎರಡು ವಾರಗಳ ಕಾಲ ವಿಶ್ರಾಂತಿ ಪಡೆದುಕೊಳ್ಳಲು ಹೇಳಿದ್ದಾರೆ. ವಿಡಿಯೋ ಮೂಲಕ ಅಭಿಮಾನಿಗಳ ಜೊತೆ ಮಾತನಾಡುತ್ತಾರೆ. ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ ಹಾಗೂ ಸುಳ್ಳು ಸುದ್ದಿಗೆ ತಲೆ ಕೆಡಿಸಿಕೊಳ್ಳಬೇಡಿ' ಎಂದು ಬರೆದುಕೊಂಡಿದ್ದಾರೆ. 

ಭೀಕರ ಅಪಘಾತದಿಂದ ಮೂರ್ನಾಲ್ಕು ಅಪರೇಷನ್‌ಗೆ ಒಳಗಾದ ನಟಿ ನಭಾ ನಟೇಶ್

ಅಪಘಾತ ನಡೆದ ತಕ್ಷಣ ವಿಜಯ್ ಆಂಟೋನಿ ಅವರನ್ನು ಕೌಲಾಲಂಪುರ್ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ವಿಜಯ್ ಮುಖಕ್ಕೆ ಗಂಭೀರವಾಗಿ ಪೆಟ್ಟು ಬಿದ್ದಿರುವ ಕಾರಣ ಸರ್ಜರಿ ಮಾಡಬೇಕು ಎಂದು ವೈದ್ಯರು ಹೇಳುತ್ತಿದ್ದಾರಂತೆ. ಸ್ಥಳೀಯರ ಹೇಳುವ ಪ್ರಕಾರ ವಿಜಯ್ ಆಂಟೋನಿಗೆ ಸ್ವಿಮ್‌ ಮಾಡಲು ಬರುತ್ತಿರಲಿಲ್ಲ ನೀರಿಗೆ ಬಿದ್ದ ತಕ್ಷಣ ಸ್ವಿಮ್ ಮಾಡಬೇಕು ಅನ್ನೋದು ಅವರ ತಲೆಗೆ ಬರಲಿಲ್ಲ ಬದಲಿಗೆ ನೀರು ಕುಡಿದು ಮುಳುಗುತ್ತಿದ್ದರಂತೆ. 

ಸಿಎಸ್‌ ಅಮುಧನ್ ಟ್ವೀಟ್ ಮಾಡಿದ್ದಾರೆ. 'ನಾನು ವಿಜಯ್ ಆಂಟೋನಿ ಆಪ್ತರ ಜೊತೆ ಮಾತನಾಡಿರುವೆ. ಶೀಘ್ರದಲ್ಲಿ ವಿಜಯ್ ಚಿತ್ರೀಕರಣ ಆರಂಭಿಸಲಿದ್ದಾರೆ. ಕಮ್ ಬ್ಯಾಕ್ ಸ್ಟ್ರಾಂಗ್ ನಂಬಿ. ಈ ವರ್ಷ ನಿನ್ನ ವರ್ಷ ಒಳ್ಳೆಯದಾಗಲಿ' ಎಂದು ಟ್ವೀಟ್ ಮಾಡಿದ್ದರು. 

2006ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟು 15 ಸಿನಿಮಾಗಳಲ್ಲಿ ಅಭಿನಯಿಸಿರುವ ವಿಜಯ್ ಕೈಯಲ್ಲಿ ಇನ್ನೂ 6 ಸಿನಿಮಾಗಳಿದೆ.  ನಟನೆಯಲ್ಲಿ ಮಾತ್ರ ವಿಜಯ್ ಗುರುತಿಸಿಕೊಂಡಿಲ್ಲ 40ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ, 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಡು ಹಾಡಿದ್ದಾರೆ.

click me!