ಎಂ.ಎಸ್ ಧೋನಿ ಪತ್ನಿ ಸಾಕ್ಷಿ ಈ ಸೌತ್‌ ಸ್ಟಾರ್ ನಟನ ಬಿಗ್ ಫ್ಯಾನ್ ಅಂತೆ: ಯಾರದು?

Published : Jul 25, 2023, 11:07 AM IST
ಎಂ.ಎಸ್ ಧೋನಿ ಪತ್ನಿ ಸಾಕ್ಷಿ ಈ ಸೌತ್‌ ಸ್ಟಾರ್ ನಟನ ಬಿಗ್ ಫ್ಯಾನ್ ಅಂತೆ: ಯಾರದು?

ಸಾರಾಂಶ

ಎಂ ಎಸ್ ಧೋನಿ ಪತ್ನಿ ಸಾಕ್ಷಿ ಧೋನಿ ತೆಲುಗು ಸ್ಟಾರ್ ಅಲ್ಲು ಅರ್ಜುನ್ ಅವರ ಬಿಗ್ ಫ್ಯಾನ್ ಎಂದು ಹೇಳಿದ್ದಾರೆ. ಧೋನಿ ಸದ್ಯ ನಿರ್ಮಾಪಕರಾಗಿ ಹೊಸ ಹೆಜ್ಜೆ ಇಟ್ಟಿದ್ದು ತಮ್ಮ ನಿರ್ಮಾಣದ ಮೊದಲ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ.  

ಖ್ಯಾತ ಕ್ರಿಕೆಟಿಗ ಎಂಎಸ್ ಧೋನಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಧೋನಿ ನಿರ್ಮಾಪಕರಾಗಿ ಹೊಸ ಜರ್ನಿ ಪ್ರಾರಂಭಿಸಿದ್ದಾರೆ. ಧೋನಿ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಮೊದಲ ಸಿನಿಮಾಗೆ 'ಎಲ್‌ಜಿಎಂ' ( ಲೆಟ್ಸ್ ಗೆಟ್ ಮ್ಯಾರೀಡ್) ಎಂದು ಟೈಟಲ್ ಇಡಲಾಗಿದ್ದು ಈಗಾಗಲೇ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ಧೋನಿ ಸಿನಿಮಾರಂಗದಲ್ಲಿ ಗುರುತಿಸಿಕೊಳ್ಳುತ್ತಿರುವ ಬೆನ್ನಲ್ಲೇ ಅವರ ಪತ್ನಿ ಸಾಕ್ಷಿ ತನ್ನಿಷ್ಟದ ಸ್ಟಾರ್ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಸದ್ಯ ಧೋನಿ ಮತ್ತು ತಂಡ 'ಎಲ್‌ಜಿಎಂ' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. 

ಇತ್ತೀಚಿಗಷ್ಟೆ 'ಎಲ್‌ಜಿಎಂ' ಸಿನಿಮಾತಂಡ ಹೈದರಾಬಾದ್‌ನಲ್ಲಿ ಈವೆಂಟ್ ಹಮ್ಮಿಕೊಂಡಿತ್ತು. ಆ ವೇಳೆ ಸಾಕ್ಷಿ ತೆಲುಗು ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ತೆಲುಗು ಸಿನಿಮಾಗಳನ್ನು ನೋಡುತ್ತಿದ್ದೆ ಎಂದು ಹೇಳಿದ್ದಾರೆ. ಆಗ ಅವರು ತನ್ನ ನೆಚ್ಚಿನ ಸ್ಟಾರ್ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಅಂದಹಾಗೆ ಸಾಕ್ಷಿ ನೆಚ್ಚಿನ ನಟ ಮತ್ಯಾರು ಅಲ್ಲ ತೆಲುಗಿನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್. ಹೌದು ಅಲ್ಲು ಅರ್ಜುನ್ ಎಂದರೆ ಸಾಕ್ಷಿಗೆ ತುಂಬಾ ಇಷ್ಟವಂತೆ.  

ಈ ಬಗ್ಗೆ ಮಾತನಾಡಿದ ಸಾಕ್ಷಿ, 'ನಾನು ಅಲ್ಲು ಅರ್ಜುನ್‌ ಅವರ ಎಲ್ಲಾ ಸಿನಿಮಾಗಳನ್ನು ನೋಡಿದ್ದೇನೆ' ಎಂದು ಹೇಳಿದರು. ಸಾಕ್ಷಿ ಹೀಗೆ ಹೇಳುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. 'ನೆಟ್‌ಫ್ಲಿಕ್ಸ್ ಅಥವಾ ಹಾಟ್‌ಸ್ಟಾರ್ ಇತ್ತು ಎಂದು ನಾನು ಭಾವಿಸುವುದಿಲ್ಲ. ಇದೆಲ್ಲವೂ ಯೂಟ್ಯೂಬ್‌ನಲ್ಲಿ, ಗೋಲ್ಡ್‌ಮೈನ್ ಪ್ರೊಡಕ್ಷನ್‌ನಲ್ಲಿತ್ತು. ಎಲ್ಲಾ ತೆಲುಗು ಚಲನಚಿತ್ರಗಳನ್ನು ಹಿಂದಿಯಲ್ಲಿ ಹಾಕುತ್ತಿದ್ದರು. ಹಾಗಾಗಿ ನಾನು ಅಲ್ಲು ಅರ್ಜುನ್‌ನ ಎಲ್ಲಾ ಸಿನಿಮಾಗಳನ್ನು ನೋಡಿದ್ದೇನೆ ಮತ್ತು ನಾನು ದೊಡ್ಡ ಅಭಿಮಾನಿಯಾಗಿದ್ದೇನೆ' ಎಂದು ಸಾಕ್ಷಿ ಧೋನಿ ಬಹಿರಂಗಪಡಿಸಿದ್ದಾರೆ. 

ಮತ್ತೆ ಒಂದಾಗಿದೆ ಬುಟ್ಟಾ ಬೊಮ್ಮಾದಿಂದಲೇ ಮೋಡಿ ಮಾಡಿದ ಅಲ್ಲು -ತ್ರಿವಿಕ್ರಿಮ ಜೋಡಿ!

ಅಲ್ಲು ಅರ್ಜುನ್ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ತೆಲುಗು ಮಾತ್ರವಲ್ಲದೇ ದೇಶ ವಿದೇಶಗಳಲ್ಲಿ ಅಲ್ಲು ಅರ್ಜುನ್ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಎಂ ಎಸ್ ಧೋನಿ ಪತ್ನಿ ಸಾಕ್ಷಿ ಕೂಡ ಅಲ್ಲು ಅರ್ಜುನ್ ಫ್ಯಾನ್ ಎನ್ನುವುದು ಗೊತ್ತಾಗಿ ಅಲ್ಲು ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಾಕ್ಷಿ ಮಾತನಾಡಿರುವ ವಿಡಿಯೋ ಶೇರ್ ಮಾಡಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

Jr NTR ಚಿತ್ರದಲ್ಲಿ ಅಲ್ಲು ಅರ್ಹಾ, 20 ಲಕ್ಷ ಸಂಭಾವನೆಗೆ ಒಪ್ಪಿಗೆ ಕೊಟ್ಟ ಅಲ್ಲು ಅರ್ಜುನ್? 

ಅಲ್ಲು ಅರ್ಜುನ್ ಸದ್ಯ ಪುಷ್ಪ-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮೊದಲ ಭಾಗ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡ ಕಾರಣ 2ನೇ ಭಾಗದ ಮೇಲೆ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಾಗಿದೆ. ದೊಡ್ಡ ಮಟ್ಟದಲ್ಲಿ ಪುಷ್ಪ-2 ಮೂಡಿ ಬರುತ್ತಿದೆ. ಈ ಸಿನಿಮಾದಲ್ಲಿ ಫಹಾದ್ ಫಾಸಿಲ್ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಅನೇಕ ಸ್ಟಾರ್ ಕಲಾವಿದರ ಹೆಸರು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಸಿನಿಮಾತಂಡ ಯಾವುದೇ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ. ಸದ್ಯದಲ್ಲೇ ಎಲ್ಲಾ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪ್ರೀತಿಸಿದ ಹುಡುಗಿ ಮೋಸ ಮಾಡಿದ್ರೆ ತಿರುಗಿ ನೋಡದ ಹುಡುಗರು; ದ್ರೋಹ ಮಾಡಿದೋಳ ಹಿಂದೆ ಹೋದ Bigg Boss ಸ್ಪರ್ಧಿ
ರಾಮ್ ಚರಣ್ ಮೇಲೆ ದೇಶದಾಚೆಗಿನ ಪ್ರೀತಿ.. ಮೆಗಾ ಪವರ್ ಸ್ಟಾರ್‌ಗಾಗಿ ಭಾರತಕ್ಕೆ ಬಂದ ಆ ವಿದೇಶಿ ಫ್ಯಾನ್ಸ್!