ಆಲಿಯಾ ಕಪೂರ್​ ಮಗಳು ಸಿನಿಮಾಕ್ಕೆ ಬರ್ತಾಳಾ? ನಟಿ ಹೇಳಿದ್ದೇನು? ಫ್ಯಾನ್ಸ್​ ಹೇಳ್ತಿರೋದೇನು?

Published : Jul 25, 2023, 10:41 AM IST
ಆಲಿಯಾ ಕಪೂರ್​ ಮಗಳು ಸಿನಿಮಾಕ್ಕೆ ಬರ್ತಾಳಾ? ನಟಿ ಹೇಳಿದ್ದೇನು? ಫ್ಯಾನ್ಸ್​ ಹೇಳ್ತಿರೋದೇನು?

ಸಾರಾಂಶ

ನಟಿ ಆಲಿಯಾ ಕಪೂರ್​ ಮತ್ತು ರಣಬೀರ್​ ಕಪೂರ್​ ಅವರ ಪುತ್ರಿ ರಾಹಾ ಸಿನಿಮಾಕ್ಕೆ ಬರ್ತಾಳಾ? ಮಗಳ ಬಗ್ಗೆ ಆಲಿಯಾ ಕಂಡಿರೋ ಕನಸೇನು?   

ಬಾಲಿವುಡ್ ಬ್ಯೂಟಿ ಆಲಿಯಾ ಭಟ್ (Alia Bhatt) ಅವರು ಸದ್ಯ ರಣ್‌ವೀರ್ ಸಿಂಗ್ ಜೊತೆಗಿನ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.  ಈ ಜೋಡಿ ನಟನೆಯ ಗಲ್ಲಿ ಬಾಯ್ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿತ್ತು. ಇಬ್ಬರ ಕೆಮಿಸ್ಟ್ರಿ ಕೂಡ ಅಭಿಮಾನಿಗಳ ಹೃದಯ ಗೆದ್ದಿತ್ತು. ಬಳಿಕ ಮತ್ತೆ ಅಲಿಯಾ ಮತ್ತು ರಣವೀರ್​ ಸಿಂಗ್ ಒಟ್ಟಿಗೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.  ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾ ಮೂಲಕ ಅಲಿಯಾ ಭಟ್ ಮತ್ತು ರಣವೀರ್​ ಸಿಂಗ್ (Ranveer Singh) ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಸದ್ಯ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಇಬ್ಬರೂ ರೊಮ್ಯಾಟಿಂಕ್ ಆಗಿ ಕಾಣಿಸಿಕೊಂಡಿದ್ದಾರೆ.  ಜುಲೈ 28ಕ್ಕೆ ತೆರೆಗೆ ಬರೋದಕ್ಕೆ ಸಜ್ಜಾಗಿದೆ. ಟೀಸರ್, ಪ್ರೋಮೋ, ಎಲ್ಲವೂ ಟ್ರೆಂಡಿಗ್‌ನಲ್ಲಿದೆ. ರಣ್‌ವೀರ್-ಆಲಿಯಾ ಕೆಮಿಸ್ಟ್ರಿಗೆ ಫ್ಯಾನ್ಸ್ ಈಗಾಗಲೇ ಫಿದಾ ಆಗಿದ್ದಾರೆ. ಇನ್ನು ನಿಜ ಜೀವನದಲ್ಲಿ ಆಲಿಯಾ ಮತ್ತು ರಣಬೀರ್​ ಕಪೂರ್​ ಜೋಡಿಯ ಲವ್​ ಸ್ಟೋರಿ, ಮದ್ವೆ ಸ್ಟೋರಿ ಚಿತ್ರ ಪ್ರೇಮಿಗಳಿಗೇನೂ ಹೊಸತಲ್ಲ. ಇವರ ಮದುವೆ ಕಥೆ ಬಹುತೇಕ ಎಲ್ಲರಿಗೂ ತಿಳಿದಿದೆ.  ಕಳೆದ ಏಪ್ರಿಲ್‌ನಲ್ಲಿ ಮದುವೆಯಾಗಿದ್ದ ಜೋಡಿಗೆ ನವೆಂಬರ್‌ನಲ್ಲಿ ಹೆಣ್ಣು ಮಗು ಜನಿಸಿತ್ತು.  ಮಗಳಿಗೆ ರಾಹಾ ಎಂದು ಹೆಸರಿಡಲಾಗಿದೆ.

ಗರ್ಭಿಣಿಯಾಗಿದ್ದಾಗ ಮತ್ತು ಮಗಳು ಹುಟ್ಟಿದ ಮಗಳು ಹುಟ್ಟಿದ ಕೆಲ ಸಮಯದವರೆಗೆ ಸಿನಿಮಾದಿಂದ ದೂರವಿದ್ದ ಆಲಿಯಾ,  ಮತ್ತೆ ತೂಕ ಇಳಿಸಿ ಆಲಿಯಾ ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಾಗಲೇ ಮಗಳು ರಾಹಾಳ ಫೋಟೋ ಹಲವು ಬಾರಿ ದಂಪತಿ ರಿವೀಲ್​  ಮಾಡಿದ್ದಾರೆ. ಮಗಳ ಬಗ್ಗೆ ಹೇಳಿಕೊಂಡಿದ್ದ ಆಲಿಯಾ ಭಟ್​, 'ರಾಹಾ (Raha Kapoor) ಸದಾ ಖುಷಿಯಾಗಿರುವ ಮಗು.  ನಾವು ಆಕೆಯನ್ನು ನೋಡಿ ನಕ್ಕರೆ ಸಾಕು ಹೇಳದೆ ಕೇಳದೆ ತಿರುಗಿ ಹತ್ತಷ್ಟು ನಗು ವಾಪಸ್ ಕೊಡುತ್ತಾಳೆ. ಈಗಷ್ಟೇ ಸಣ್ಣ ಪುಟ್ಟ ಸೌಂಡ್ ಮಾಡಲು ಶುರು ಮಾಡಿದ್ದಾಳೆ.ಏನಾದರೂ ಹೇಳುವುದಕ್ಕೂ ಪ್ರಯತ್ನ ಪಟ್ಟಾಗ ಸೌಂಡ್ ಮಾಡುತ್ತಾಳೆ. ಅದನ್ನು ಕೇಳಿಸಿಕೊಂಡು ನಾವು ಆಕೆಗೆ ಚೀತಾ (ಚಿರತೆ) ಎಂದು ಕರೆಯುತ್ತೀವಿ. ಕೆಲಸ ಮುಗಿಸಿಕೊಂಡು ಮನೆಗೆ ಬಂದು ಎಷ್ಟು ಸುಸ್ತಾಗಿರುತ್ತದೆ ಒಮ್ಮೆ ಆಕೆ ಮುಖ ನೋಡಿದರೆ ಎಲ್ಲವೂ ಮಾಯವಾಗುತ್ತದೆ. ಸಮಯ ಸಿಕ್ಕಾಗ ಆಕೆಯನ್ನು ನನ್ನ ಮಡಿಲಿನಲ್ಲಿ ಮಲಗಿಸಿಕೊಳ್ಳುವೆ ...ಏಕೆಂದರೆ ದೊಡ್ಡವರಾಗುತ್ತ ಓಡಾಡಬೇಕು ಒಂದು ಕಡೆ ಕೂರುವುದಿಲ್ಲ ಆಗ ನನ್ನ ಮಡಿಲಿನಲ್ಲಿ ಮಲಗಬೇಕು ಅಂದ್ರೆ ಒಪ್ಪಿಕೊಳ್ಳುವುದಿಲ್ಲ' ಎಂದು ಆಲಿಯಾ ಭಟ್ ಈಚೆಗೆ ವೋಗ್ ಸಂದರ್ಶನಲ್ಲಿ  ಮಾತನಾಡಿದ್ದರು.

ಬ್ಲೌಸ್ ಹಾಕದೆ ಸೀರೆ ಧರಿಸಿದ ಆಲಿಯಾ ಭಟ್; ರಣವೀರ್‌ ಸಿಂಗ್ ಜೊತೆ ಫೋಟೋ ಲೀಕ್!

ಅದಾದ ಬಳಿಕ ಮಗಳು ಭವಿಷ್ಯದ ಕುರಿತೂ ಇದಾಗಲೇ  ನಟಿ ಮಾತನಾಡಿದ್ದಾರೆ. ಆಲಿಯಾ ಭಟ್​ ಸ್ಟಾರ್​ ಕಿಡ್​. ಇದೇ ಕಾರಣಕ್ಕೆ ಆಕೆಗೆ ಸಹಜವಾಗಿ ಸಿನಿಮಾದಲ್ಲಿ ಅವಕಾಶ ಸಿಕ್ಕಿವೆ ಎಂದೇ ಹೇಳಲಾಗುತ್ತದೆ. ಅದೇ ರೀತಿ ಆಲಿಯಾ ಮತ್ತು ರಣವೀರ್​ ಜೋಡಿಯ ಸ್ಟಾರ್​ ಪುತ್ರಿ ರಾಹಾ ಭವಿಷ್ಯದಲ್ಲಿ ಏನಾಗಬೇಕು ಎಂದು ಇವರು ಈಗಲೇ ನಿರ್ಧರಿಸಿದ್ದಾರೆ. ನಟ-ನಟಿಯರ ಮಕ್ಕಳು ನಟನೆಗೆ ಬರುವುದು ಹೊಸ ವಿಷಯವೇನಲ್ಲ. ಅದೇ ರೀತಿ ತಮ್ಮ ಪುತ್ರಿಯನ್ನು ಸಿನಿಮಾ ರಂಗಕ್ಕೆ ಕರೆತರುವ ಆಸೆ ಈ ಅಪ್ಪ-ಅಮ್ಮನಿಗೆ ಇದೆಯೋ, ಇಲ್ಲವೋ ಎಂಬ ಬಗ್ಗೆ ತಿಳಿದುಕೊಳ್ಳುವ ಹಂಬಲ ಅವರ ಫ್ಯಾನ್ಸ್​ಗೆ. ಈ ವಿಷಯವಾಗಿ ಆಲಿಯಾ ಭಟ್​ ಮಾತನಾಡಿದ್ದಾರೆ. 

ಹೊಸ ಸಿನಿಮಾ ಪ್ರಚಾರದಲ್ಲಿ ಭಾಗಿ ಆಗಿದ್ದ ವೇಳೆ ಆಲಿಯಾಗೆ ಮಗಳ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿ ನಟಿ,  'ನನ್ನ ಮಗಳನ್ನು ನಾನು ನಟಿಯಾಗಿ ನೋಡಲು ಬಯಸುತ್ತಿಲ್ಲ' ಎಂದಿದ್ದಾರೆ.  ಮಗಳು ನನ್ನ ರೀತಿ ಚಿತ್ರರಂಗಕ್ಕೆ (Film Industry) ಬರೋದು ನನಗೆ ಇಷ್ಟವಿಲ್ಲ ಎಂದಿದ್ದಾರೆ ಆಲಿಯಾ. ನಾನು ನನ್ನ ಮಗಳನ್ನು ನೋಡಿದಾಗಲೆಲ್ಲಾ ನೀನು ವಿಜ್ಞಾನಿ ಆಗುತ್ತೀಯಾ ಎಂದು ಕೇಳುತ್ತೇನೆ. ಯಾಕೆಂದರೆ ನಾನು ವಿಜ್ಞಾನಿ ಆಗಬೇಕು ಎಂದು ಬಯಸಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ಅದನ್ನು ಮಗಳಲ್ಲಿ ನೋಡಲು ಬಯಸುತ್ತೇನೆ ಎಂದಿದ್ದಾರೆ ಆಲಿಯಾ. ಆಲಿಯಾ ಅವರ ಮಾತು ಸಕತ್​ ವೈರಲ್​ ಆಗಿದೆ. ಆಲಿಯಾ ಅವರನ್ನು ಸಿನಿಮಾಕ್ಕೆ ಪರಿಚಯಿಸಿದ್ದು ನಿರ್ಮಾಪಕ ಕರಣ್​ ಜೋಹರ್​. ಇದೇ ಕಾರಣಕ್ಕೆ ಈಗ ಆಲಿಯಾ ಅವರನ್ನು ಟ್ರೋಲ್​  ಮಾಡುತ್ತಿರುವ ಹಲವು ನೆಟ್ಟಿಗರು, ನಿಮ್ಮ ಆಸೆ ಈಡೇರತ್ತೆ ಮೇಡಂ. ಕರಣ್​ ಜೋಹರ್​ ಅವರು ನಿಮ್ಮ ಮಗಳಿಗಾಗಿ ಸೈಂಟಿಸ್ಟ್​ ಎನ್ನೋ ಸಿನಿಮಾ  ಮಾಡ್ತಾರೆ ಬಿಡಿ ಎನ್ನುತ್ತಿದ್ದಾರೆ. 

ಆಲಿಯಾಳನ್ನು ರಣಬೀರ್​ ಸಿಂಗ್ ತಬ್ಬಿಕೊಂಡ್ರೆ ಫ್ಯಾನ್ಸ್​ ಹೀಗ್ ಹೇಳೋದಾ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪ್ರೀತಿಸಿದ ಹುಡುಗಿ ಮೋಸ ಮಾಡಿದ್ರೆ ತಿರುಗಿ ನೋಡದ ಹುಡುಗರು; ದ್ರೋಹ ಮಾಡಿದೋಳ ಹಿಂದೆ ಹೋದ Bigg Boss ಸ್ಪರ್ಧಿ
ರಾಮ್ ಚರಣ್ ಮೇಲೆ ದೇಶದಾಚೆಗಿನ ಪ್ರೀತಿ.. ಮೆಗಾ ಪವರ್ ಸ್ಟಾರ್‌ಗಾಗಿ ಭಾರತಕ್ಕೆ ಬಂದ ಆ ವಿದೇಶಿ ಫ್ಯಾನ್ಸ್!