ಬಾಲಿವುಡ್ ಹಿರಿಯ ನಕ್ಷತ್ರ ನವಾಬನ ಮಗಳು ಕುಂಕುಂ(86) ನೆನಪು ಮಾತ್ರ

Published : Jul 28, 2020, 10:07 PM ISTUpdated : Jul 28, 2020, 10:13 PM IST
ಬಾಲಿವುಡ್ ಹಿರಿಯ ನಕ್ಷತ್ರ ನವಾಬನ ಮಗಳು ಕುಂಕುಂ(86) ನೆನಪು ಮಾತ್ರ

ಸಾರಾಂಶ

ಬಾಲಿವುಡ್ ಅಗಲಿದ ಹಿರಿಯ ನಟಿ ಕುಂಕುಂ /  'ಮೇರೆ ಮೆಹಬೂಬ್ ಕಯಾಮತ್ ಹೋಗಿ'  ಈ ಹಾಡಿನ ಸಾಲು ಮರೆಯಲು ಸಾಧ್ಯವೇ?/  'ಮದರ್ ಇಂಡಿಯಾ' ಮತ್ತು 'ನಯಾ ದೌರ್' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು

ಮುಂಬೈ(ಜು. 28)  'ಮದರ್ ಇಂಡಿಯಾ' ಮತ್ತು 'ನಯಾ ದೌರ್' ಚಿತ್ರಗಳಲ್ಲಿ ಕಾಣಿಸಿಕೊಂಡ ಹಿರಿಯ ನಟಿ ಕುಂಕುಂ ( 86) ಮುಂಬೈನ ಬಾಂದ್ರಾದ ನಿವಾಸದಲ್ಲಿ ನಿಧನರಾಗಿದ್ದಾರೆ.  ಹಿರಿಯ ನಟಿಗೆ ಬಾಲಿವುಡ್ ದಿಗ್ಗಜರು ನಮನ ಸಲ್ಲಿಸಿದ್ದಾರೆ.

ಬಿಹಾರದ ಶೇಖ್ ಪುರ್ ಹುಸೇನ್ ಬಾದ್ ನವಾಬರಾರ ಮಗಳಾಗಿದ್ದ ಕುಂಕುಂ ಚಿತ್ರರಂಗಕ್ಕೆ ಬಂದಿದ್ದು ಒಂದು ಆಕಸ್ಮಿಕ.  ಹಿರಿಯ ನಟಿ ನಿಧನಕ್ಕೆ ತವರಿನಲ್ಲೂ ಅಭಿಮಾನಿಗಳು, ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ.

ಬಾಲಿವುಡ್ ನಿಂದ ಒಂದೇ ದಿನ ಮರೆಯಾದ ನಟ-ನಟಿ

ಕುಂಕುಂ  1954 ರಲ್ಲಿ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಅವರು 'ಆರ್ ಪಾರ್' ಚಿತ್ರದ  'ಕಬಿ ಆರ್ ಕಭಿ ಪಾರ್'  ಹಾಡಿನಲ್ಲಿ ಡ್ಯಾನ್ಸರ್ ಆಗಿ ಮೊದಲಿಗೆ ಕಾಣಿಸಿಕೊಂಡರು. 'ಮದರ್ ಇಂಡಿಯಾ' ಮತ್ತು 'ನಯಾ ದೌರ್', 'ಕೊಹಿನೂರ್', 'ಉಜಲಾ', 'ಮಿಸ್ಟರ್ ಎಕ್ಸ್ ಇನ್ ಬಾಂಬೆ', 'ಶ್ರೀಮನ್ ಫುಂಟೂಶ್', 'ಗಂಗಾ ಕಿ ಲಹರೆನ್', 'ರಾಜ ಔರ್ ರುಂಖ್ ',' ಆಂಖೇನ್ ',' ಲಲ್ಕಾರ್ 'ಮತ್ತು' ಗೀತ್ 'ಸಿನಿಮಾಗಳ ಮೂಲಕ ಅಂದಿನ ಕಾಲದ ಜನಪ್ರಿಯ ನಟಿಯಾದರು. 

ಕುಂಕುಂ ಮೊಟ್ಟ ಮೊದಲ ಭೋಜ್‌ಪುರಿ ಚಿತ್ರದಲ್ಲೂ ನಟಿಸಿದ್ದಾರೆ. 'ಗಂಗಾ ಮಾಯ್ಯ ತೋಹೆ ಪಿಯಾರಿ ಚಾಧೈಬೊ' ಎಂಬ ಶೀರ್ಷಿಕೆಯೊಂದಿಗೆ ಇದು 1963 ರಲ್ಲಿ ಬಿಡುಗಡೆಯಾಗಿ ಯಶಸ್ಸು ಸಾಧಿಸಿತ್ತು. ಅಭಿಮಾನಿಗಳು ಕುಂಕುಂ  ನಟನೆಯ ಹಾಡುಗಳನ್ನು ಶೇರ್ ಮಾಡಿಕೊಂಡು ನಮನ ಸಲ್ಲಿಸುತ್ತಿದ್ದಾರೆ. 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!