ಶಾರುಖ್​ ತಯಾರಿಸಿದ ಪಿಜ್ಜಾ ತಿಂದು ಕುಣಿದಾಡಿದ ಮಾಡೆಲ್​ ನವಪ್ರೀತ್ ಕೌರ್​

By Suvarna News  |  First Published Apr 24, 2023, 4:44 PM IST

ಮಾಡೆಲ್ ನವಪ್ರೀತ್ ಕೌರ್ ಈಚೆಗೆ ನಟ ಶಾರುಖ್​ ಖಾನ್​ ಅವರ ಮನೆಗೆ ಭೇಟಿ ಕೊಟ್ಟಿದ್ದರು. ಈ ಸಂದರ್ಭದಲ್ಲಿ ಆದ ಅನುಭವವನ್ನು ಅವರು ಶೇರ್​ ಮಾಡಿದ್ದಾರೆ. 
 


ಫೆಮಿನಾ ಮಿಸ್ ಇಂಡಿಯಾದಲ್ಲಿ (Femina Miss India) ಅಗ್ರ ಐದರಲ್ಲಿ ಸ್ಥಾನ ಪಡೆದಿರುವ ಮಾಡೆಲ್ ನವಪ್ರೀತ್ ಕೌರ್ ಅವರ ದೊಡ್ಡ ಕನಸನ್ನು ನನಸಾಗಿಸುವ ಅವಕಾಶ ಪಡೆದುಕೊಂಡಿದ್ದದಾರೆ. ಮಿಸ್​ ಇಂಡಿಯಾದಲ್ಲಿ ಅಗ್ರ ಸ್ಥಾನ ಸಿಕ್ಕಿದುದಕ್ಕೆ ಅವರಿಗೆ ಎಷ್ಟು ಖುಷಿಯಾಯಿತೋ ಅದಕ್ಕಿಂತ ದುಪ್ಪಟ್ಟು ಖುಷಿಯಾದದ್ದು ಅವರು ಈಚೆಗೆ  ಶಾರುಖ್ ಖಾನ್ ಅವರ ಮನೆ 'ಮನ್ನತ್'ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ. ಹೌದು! ಶಾರುಖ್ ಖಾನ್ (Shahrukh Khan) ಅವರ ಮನೆಗೆ ನಿತ್ಯವೂ ಹಲವು ಫ್ಯಾನ್ಸ್​ ಬರುತ್ತಾರೆ. ಕೆಲವರಿಗೆ ನೋಡಲು ಅವಕಾಶ ಸಿಗುತ್ತದೆ, ಹಲವರು ಬರಿಗೈಲಿ ವಾಪಸಾಗುತ್ತಾರೆ. ಆದರೆ ಸೆಲೆಬ್ರಿಟಿಗಳ ಮನೆಗೆ ಸೆಲೆಬ್ರಿಟಿಗಳು ಹೋದರೆ ಅವರಿಗೆ ನಿರಾಸೆಯಂತೂ ಖಂಡಿತ ಆಗುವುದಿಲ್ಲ ಎನ್ನಿ. ಅದೇ ರೀತಿ ಮಾಡೆಲ್​ ನವಪ್ರೀತ್​ ಕೌರ್​ ಅವರ ದೊಡ್ಡ ಕನಸೂ ನನಸಾಗಿದ್ದು, ಈ ಕುರಿತು ಅವರು ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಶಾರುಖ್​ ಖಾನ್​ ಅವರನ್ನು ನೋಡುವ ತಮ್ಮ ಕನಸು ನನಸಾಗಿದೆ ಎಂದಿರುವ  ನವಪ್ರೀತ್ ಕೌರ್ ಅವರಿಗೆ ಅದಕ್ಕಿಂತಲೂ ಹೆಚ್ಚು ಖುಷಿಯಾಗಿದ್ದು,  ಮನ್ನತ್​ನಲ್ಲಿ (Mannath) ತನಗೆ ಸಿಕ್ಕ ಆತಿಥ್ಯದ ಕುರಿತು.  ಶಾರುಖ್ ಕುಟುಂಬವನ್ನು ಭೇಟಿ ಮಾಡಿದ ನವಪ್ರೀತ್​,  ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಅಲ್ಲಿ ಸಿಕ್ಕ ಆತಿಥ್ಯದ ಬಗ್ಗೆ ಕೊಂಡಾಡಿದ್ದಾರೆ.  ಅದರ ಖುಷಿಯನ್ನು ಹಂಚಿಕೊಂಡಿದ್ದಾರೆ.  ಶಾರುಖ್ ಅವರನ್ನು ಭೇಟಿ ಮಾಡುವ ನನ್ನ ಕನಸು ನನಸಾಗಿದೆ ಎಂದು ನವಪ್ರೀತ್ ಬರೆದುಕೊಂಡಿದ್ದಾರೆ. ಇದು ತಮ್ಮ ಜೀವನದ ಅತ್ಯುತ್ತಮ ದಿನ ಎಂದು ಬಣ್ಣಿಸಿದ್ದಾರೆ. 

Tap to resize

Latest Videos

Shah Rukh Khan: ಸೋಫಾ ಖರೀದಿಗೆ ದುಡ್ಡಿಲ್ಲದಾಗ ಗೌರಿ ಖಾನ್​ ಹೀಗೆ ಪಣ ತೊಟ್ಟಿದ್ದರಂತೆ!

ಈ ಸಂದರ್ಭದಲ್ಲಿ, ಶಾರುಖ್​ ಅವರ ಕೈಯಿಂದಲೇ ಮಾಡಲಾದ ಪಿಜ್ಜಾವನ್ನು ತಿಂದಿರುವ ಖುಷಿಯಲ್ಲಿ ನವಪ್ರೀತ್​ ಕೊಂಡಾಡಿದ್ದಾರೆ. ಶಾರುಖ್ ಖಾನ್ ಅವರೇ ಪಿಜ್ಜಾವನ್ನು (Pijja) ತಯಾರಿಸಿದರು ಹಾಗೂ ತಮ್ಮ ನ್ಯಾಪ್ಕಿನ್ ಮೇಲೆ ಶಾರುಖ್ ಆಟೋಗ್ರಾಫ್ ನೀಡಿದರು ಎಂದು ನವಪ್ರೀತ್ ಬರೆದುಕೊಂಡಿದ್ದಾರೆ.  ಈ ನೆನಪನ್ನು ಸದಾ ತನ್ನೊಂದಿಗೆ ಇಟ್ಟುಕೊಳ್ಳುವುದಾಗಿ ನಟಿ ಹೇಳಿದ್ದಾರೆ. ನಾನು ಇದನ್ನು ಎಂದಿಗೂ ಪೋಸ್ಟ್ ಮಾಡುವುದಿಲ್ಲ ಎಂದು ನಾನು ನನಗೆ ಭರವಸೆ ನೀಡಿದ್ದೆ, ಆದರೆ ಈ ನೆನಪನ್ನು ನನಗೆ ತುಂಬಾ ಅಮೂಲ್ಯವಾಗಿದೆ. ನಾನು ಮನ್ನತ್​ನಲ್ಲಿ ಅತ್ಯಂತ ಅಮೂಲ್ಯ ಕ್ಷಣಗಳನ್ನು ಕಳೆದಿದ್ದೇನೆ ಎಂದಿದ್ದಾರೆ.

ಬಾಲಿವುಡ್ ಕಿಂಗ್, ಶಾರುಖ್ ಖಾನ್ ಅವರೇ ನನಗಾಗಿ ಪಿಜ್ಜಾ ಮಾಡಿಸಿದರು. ಅದು ಕೂಡ ವೆಜ್, ಏಕೆಂದರೆ ಕೆಲ ಪಂಜಾಬಿಗಳು ವೆಜ್, ನಾನು ಅವರ ಮನೆಯಲ್ಲಿದ್ದಷ್ಟು ಕಾಲ, ನಾನು ಕನಸು ಕಾಣುತ್ತಿದ್ದೇನೆ ಎಂದುಕೊಂಡಿದ್ದೆ. ನಿಜಕ್ಕೂ ಅದು ಕನಸೇ ಎನ್ನಿಸುತ್ತಿದೆ, ಯಾರೋ ಬಂದು ನನ್ನನ್ನು ಎಬ್ಬಿಸಿದಂತೆ ಭಾಸವಾಗುತ್ತಿದೆ. ಶಾರುಖ್ ನೋಡಿದ ಮೇಲೆ ನಾನು ಕಳೆದು ಹೋದೆ. ಖಾನ್ ಕುಟುಂಬದೊಂದಿಗೆ ಡೈನಿಂಗ್ ಟೇಬಲ್ (Dining Table)ನಲ್ಲಿ ಕುಳಿತಿದ್ದೆ. ಪೂಜಾ ದದ್ಲಾನಿ (ಶಾರುಖ್ ಖಾನ್ ಅವರ ಮ್ಯಾನೇಜರ್) ಸಹ ನಮ್ಮೊಂದಿಗೆ ಇದ್ದರು. ನಾನು ವಾಶ್​ರೂಮ್​ಗೆ ದಾರಿ ಕೇಳಿದಾಗ, ಶಾರುಖ್ ಕುರ್ಚಿಯಿಂದ ಎದ್ದು  ಬಾಗಿಲ ಬಳಿ ಕರೆದೊಯ್ದರು. ಎಂಥಾ ವ್ಯಕ್ತಿತ್ವ ಅನಿಸಿತು ಎಂದು ಕೊಂಡಾಡಿದ್ದಾರೆ. ನಾನು ಶಾಂತವಾಗಿರಲು ನನ್ನ ಕೈಲಾದಷ್ಟು ಪ್ರಯತ್ನಿಸಿದ್ದೆ. ಆದರೆ  ಖುಷಿಯಿಂದ ಕುಣಿದಾಡಬೇಕು ಅನಿಸಿತು ಎಂದು ಮಾಡೆಲ್ ನವಪ್ರೀತ್ ಕೌರ್ ಇನ್​ಸ್ಟಾಗ್ರಾಮ್​ನಲ್ಲಿ ಹೇಳಿದ್ದಾರೆ.

Twinkle Khanna: ಹೊಟ್ಟೆಯೊಳಗೆ ಫುಲ್​ ಗ್ಯಾಸ್​ ಇದ್ದಾಗ್ಲೇ ಶಾರುಖ್​ ಎತ್ತಿಕೊಂಡು ಬಿಟ್ರಪ್ಪೋ...

ಗೌರಿ ಖಾನ್ ಹಾಗೂ ಅಬ್ರಾಮ್ ನನ್ನ ಹೊಸ ಉತ್ತಮ ಸ್ನೇಹಿತರಾಗಿದ್ದಾರೆ. ನಾನು ಶಾರುಖ್ ಖಾನ್ ಮನೆಗೆ ಮನ್ನತ್​ಗೆ ಹೋಗಿದ್ದೆ ಎಂದು ನನಗೆ ಇನ್ನೂ ನಂಬಲಾಗುತ್ತಿಲ್ಲ. ಇಲ್ಲಿಯವರೆಗೆ ನನಗೆ ಇದು ಕನಸಿನಂತೆ ತೋರುತ್ತದೆ ಎಂದು ಮಾಡೆಲ್​ ಹೇಳಿದ್ದಾರೆ. 

click me!