ದಳಪತಿ ವಿಜಯ್ ದಾಂಪತ್ಯ ಅಂತ್ಯಕ್ಕೆ ತ್ರಿಷಾ ಕಾರಣನಾ? ಹೊಸ ಜಯಲಲಿತಾ ಆಗ್ತಾರಾ ನಟಿ ತ್ರಿಷಾ? ನಿಗೂಢ ಪೋಸ್ಟ್​ ಬಗ್ಗೆ ಬಿಸಿ ಬಿಸಿ ಚರ್ಚೆ!

Published : Mar 04, 2026, 04:44 PM IST
Trisha Krishnan

ಸಾರಾಂಶ

ದಳಪತಿ ವಿಜಯ್ ದಾಂಪತ್ಯವು ವಿಚ್ಛೇದನದ ಅಂಚಿನಲ್ಲಿದ್ದು, ಇದಕ್ಕೆ ನಟಿ ತ್ರಿಷಾ ಜೊತೆಗಿನ ಅವರ ಸಂಬಂಧವೇ ಕಾರಣ ಎಂದು ಹೇಳಲಾಗುತ್ತಿದೆ. ಈ ಊಹಾಪೋಹಗಳ ಮಧ್ಯೆ, ವಿಜಯ್ ಅವರೊಂದಿಗೆ ತ್ರಿಷಾ ಕೂಡ ರಾಜಕೀಯಕ್ಕೆ ಪ್ರವೇಶಿಸಿ, ಜಯಲಲಿತಾ ಅವರಂತೆ ಆಗುತ್ತಾರೆಯೇ ಎಂಬ ಚರ್ಚೆ ತಮಿಳುನಾಡಿನಲ್ಲಿ ತೀವ್ರಗೊಂಡಿದೆ.

ದಳಪತಿ ವಿಜಯ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರೋ ವಿಷ್ಯ ಗೊತ್ತೇ ಇದೆ. ವಿಜಯ್ ದಾಂಪತ್ಯ ಮುರಿದು ಬೀಳೋದಕ್ಕೆ ತ್ರಿಷಾ ಜೊತೆಗಿನ ನಂಟು ಕಾರಣ ಅನ್ನೋ ಗಾಸಿಪ್ ಹರಿದಾಡ್ತಾ ಇದೆ. ಈ ನಡುವೆ ವಿಜಯ್ ಜೊತೆಗೆ ತ್ರಿಷಾ ಕೂಡ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಮತ್ತೊಬ್ಬ ಜಯಲಲಿತಾ ಆಗ್ತಾರಾ ಅನ್ನೋ ಚರ್ಚೆನೂ ಶುರುವಾಗಿದೆ.

ದಳಪತಿ ದಾಂಪತ್ಯ ಅಂತ್ಯಕ್ಕೆ ತ್ರಿಷಾ ಕಾರಣನಾ..?

ಯೆಸ್ ಕಾಲಿವುಡ್ ಸ್ಟಾರ್ ನಟ, ಟಿವಿಕೆ ಪಾರ್ಟಿ ಸಂಸ್ಥಾಪಕ ವಿಜಯ್ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿರೋದು ಗೊತ್ತೇ ಇದೆ. ವಿಜಯ್ ಪತ್ನಿ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದು ಬರೊಬ್ಬರಿ 27 ವರ್ಷಗಳ ದಾಂಪತ್ಯ ಜೀವನವನ್ನ ಕೊನೆಗೊಳಿಸೋದಕ್ಕೆ ಮುಂದಾಗಿದ್ದಾರೆ. ಈ ನಡುವೆ ವಿಜಯ್ ದಾಂಪತ್ಯ ಮುರಿದು ಬೀಳೋದಕ್ಕೆ ವಿಜಯ್-ತ್ರಿಷಾರ ನಂಟೇ ಕಾರಣ ಅಂತ ಸುದ್ದಿಯಾಗ್ತಾ ಇದೆ. ವಿಜಯ್ ರಾಜಕೀಯ ವಿರೋಧಿಗಳು ಇವರ ಸಂಬಂಧದ ಬಗ್ಗೆ ಓಪನ್ ಆಗೇ ಟೀಕೆ ಮಾಡ್ತಾ ಇದ್ದಾರೆ.

ಅಸಲಿಗೆ ತ್ರಿಶಾ ಅಂಡ್ ವಿಜಯ್ ನಂಟು ದಶಕಗಳಷ್ಟು ಹಳೆಯದ್ದು. 2004ರಲ್ಲೇ ಈ ಇಬ್ಬರೂ ಮೊದಲ ಬಾರಿ ಗಿಲ್ಲಿ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ರು. ಗಿಲ್ಲಿ ಮೂವಿ ಸೂಪರ್ ಡೂಪರ್ ಹಿಟ್ ಆಗಿ ಇವರದ್ದು ಹಿಟ್ ಪೇರ್ ಅನ್ನಿಸಿಕೊಂಡಿತ್ತು. ಮುಂದೆ 4 ಚಿತ್ರಗಳಲ್ಲಿ ಈ ಇಬ್ಬರೂ ನಾಯಕ ನಾಯಕಿಯಾಗಿ ಮಿಂಚಿದ್ರು. ಇತ್ತೀಚಿಗೆ 15 ವರ್ಷಗಳ ನಂತರ ಮತ್ತೆ ಲಿಯೋ ಸಿನಿಮಾದಲ್ಲಿ ಇಬ್ಬರೂ ಜೊತೆ ಜೊತೆಯಾಗಿ ಕಾಣಿಸಿಕೊಂಡಿದ್ರು.

ವಿಜಯ್ ರಾಜಕೀಯಕ್ಕೆ ಬಂದ ಮೇಲೆ ಇವರ ಸಂಬಂಧದ ಬಗ್ಗೆ ರಾಜಕಾರಣಿಗಳು ಕೊಂಕು ನುಡಿಯೋದಕ್ಕೆ ಶುರುಮಾಡಿದ್ರು. ಈಗ ನೋಡಿದ್ರೆ ವಿಜಯ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಮೇಲೆ ಇವರ ಸಂಬಂಧದ ಬಗ್ಗೆ ಮತ್ತೆ ಗಾಸಿಪ್ ಶುರುವಾಗಿದೆ.

ತ್ರಿಶಾ ನಿಗೂಢ ಪೋಸ್ಟ್​ ಬಗ್ಗೆ ಬಿಸಿ ಬಿಸಿ ಚರ್ಚೆ..!

ವಿಜಯ್ ಡಿವೋರ್ಸ್ ವಿಷ್ಯ ಬಹಿರಂಗವಾದ ಬೆನ್ನಲ್ಲೇ ತ್ರಿಷಾ ಒಂದು ಪೋಸ್ಟ್ ಹಾಕಿದ್ರು. ಆ ಪೋಸ್ಟ್​ನಲ್ಲಿ, ಏನೇ ಆಗಲಿ, ಎಷ್ಟೇ ವಿರೋಧ ಎದುರಾಗಲಿ ನಾವು ಎದುರಿಸೋಣ. ಒಂದು ವೇಳೆ ಇಡೀ ಜಗತ್ತು ನಿನ್ನ ವಿರುದ್ಧ ನಿಂತರೆ, ನಾನೆಂದಿಗೂ ನಿನ್ನನ್ನು ಬಿಟ್ಟುಕೊಡುವುದಿಲ್ಲ ಅಂತ ಬರೆಯಲಾಗಿತ್ತು.. ತ್ರಿಷಾ ಇದನ್ನ ವಿಜಯ್​ ಗೋಸ್ಕರ ಹಾಕಿದ್ದಾರೆ ಅಂತ ಗುಸು ಗುಸು ಶುರುವಾಗಿದೆ.

ವಿಜಯ್ ಜೊತೆ ರಾಜಕೀಯಕ್ಕೂ ಬರ್ತಾರಾ ತ್ರಿಷಾ?

ಯೆಸ್ ಇದೇ ವರ್ಷ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೀತಾ ಇದ್ದು, ವಿಜಯ್ ಅವರ ಟಿವಿಕೆ ಪಾರ್ಟಿ ದೊಡ್ಡ ಸದ್ದು ಮಾಡೋ ನಿರೀಕ್ಷೆ ಇದೆ. ಈ ನಡುವೆ ವಿಜಯ್ ಜೊತೆ ತ್ರಿಷಾ ಕೂಡ ಪಾಲಿಟಿಕ್ಸ್‌ಗೆ ಎಂಟ್ರಿ ಕೊಡ್ತಾರಾ? ಈ ಹಿಂದೆ ಎಂ.ಜಿಆರ್ ಜೊತೆ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಸಿಎಂ ಆಗಿ ಮೆರೆದ ಜಯಲಲಿತಾರಂತೆ ಆಗಿಬಿಡ್ತಾರಾ ಅನ್ನೋ ಚರ್ಚೆ ಕೂಡ ಶುರುವಾಗಿದೆ. ಎನಿವೇ ಸದ್ಯ ವಿಜಯ್-ತ್ರಿಷಾ ವಿಷ್ಯ ಇಡೀ ತಮಿಳುನಾಡು ತುಂಬಾ ಸದ್ದು ಮಾಡ್ತಾ ಇದೆ.

ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೋರ್ಟ್ ಸಮಯ ಹಾಳು ಮಾಡುತ್ತಿರೋ ಡಿ ಗ್ಯಾಂಗ್; ದಾಸನ ಬೇಡಿಕೆಗೆ SPP ಗುನ್ನ, ಮುಗಿಯಲ್ಲ ಗ್ರಹಣ..!
ಪತಿ ರಾಹುಲ್ ಜೊತೆ ಕುಕ್ಕೆ ದೇವಸ್ಥಾನಕ್ಕೆ ಬಂದು, ಊಟ ಮಾಡಿ ಮಣ್ಣಿನ ನಂಟಿದೆ ಎಂದ ಆತಿಯಾ ಶೆಟ್ಟಿ