ಒಂದು ರಾತ್ರೀಲಿ ಜೀವನ ಬದಲಾಗೋದು ಅಂದ್ರೆ ಇದೇ... 16 ವರ್ಷದ ಆ ಹುಡುಗಿ ಕಥೆ!

Published : Feb 08, 2025, 07:38 PM ISTUpdated : Feb 08, 2025, 07:39 PM IST
ಒಂದು ರಾತ್ರೀಲಿ ಜೀವನ ಬದಲಾಗೋದು ಅಂದ್ರೆ ಇದೇ... 16 ವರ್ಷದ ಆ ಹುಡುಗಿ ಕಥೆ!

ಸಾರಾಂಶ

ಆ ಹದಿನಾರು ವರ್ಷದ ಹುಡುಗಿಯ ಕಥೆ ಎಷ್ಟು ಬೇಗ ಬದಲಾಗಿಹೋಯ್ತು ನೋಡಿ.. ಅದೃಷ್ಟ-ದುರಾದೃಷ್ಷ ಅನ್ನೋದಕ್ಕೆ ಇದು ಸೂಕ್ತ ಉದಾಹರಣೆಯಾ? ಅಥವಾ ಇನ್ನೇನಾದ್ರೂ ಹೇಳ್ತೀರಾ..? ನೀಲಿ ಮಿಶ್ರಿತ ಜೇನು ಬಣ್ಣದ ಕಣ್ಣು ಹೊಂದಿರುವ ಆಕೆ ತನ್ನ ವಿಭಿನ್ನ ಲುಕ್‌ನಿಂದ ಗಮನಸೆಳೆದು ಇಂದು...

ಸೋಷಿಯಲ್ ಮೀಡಿಯಾ ಇಂದಿನ ದಿನಮಾನದಲ್ಲಿ ಅದೆಷ್ಟು ಪವರ್‌ಫುಲ್ ಆಗಿದೆ ಅನ್ನೋದಕ್ಕೆ ಇದೊಂದೇ ಸಾಕ್ಷಿ ಸಾಕು. ಅಷ್ಟರಮಟ್ಟಿಗೆ ಸದ್ಯ ಈ ಹುಡುಗಿ ಸೆನ್ಸೇಷನ್ ಸೃಷ್ಟಿ ಮಾಡಿದ್ದಾಳೆ. ಯಾರು ಆ ಹುಡುಗಿ ಎಂಬುದನ್ನು ಮತ್ತೆ ಹೊಸದಾಗಿ ಹೇಳಬೇಕಿಲ್ಲ! ಹೌದು, ಮಣಿಪುರದ ಆ ಹುಡುಗಿ, ಮೊನಾಲಿಸಾ (Monalisa)  ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಯೂಟ್ಯೂಬರ್ ಒಬ್ಬರ ಕಣ್ಣಿಗೆ ಬಿದ್ದು ವೈರಲ್ ಆಗಿ ಸದ್ಯ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟವಳು!

ಹೌದು, ಮೊನಾಲಿಸಾ ಎಂಬ 16 ವರ್ಷದ ಆ ಹುಡುಗಿ ಇಂದು ಬಾಲಿವುಡ್ (Bollywood) ನಟಿಯಾಗಲು ಹೊರಟಿದ್ದಾಳೆ. 'ಡೈರಿ ಆಫ್ ಮಣಿಪುರ' ಹೆಸರಿನ (Diary of Manipura) ಹಿಂದಿ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಮೊನಾಲಿಸಾ. ತಮಮ್ ಹುಟ್ಟೂರು ಮಣಿಪುರದಿಂದ ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ (Uttara Pradesh Prayagraj) ಎಂಬಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ (Mahakumbha Mela) ರುದ್ರಾಕ್ಷಿ ಹಾಗೂ ಮಣಿಸರ ಮಾರಾಟ ಮಾಡಲು ತಮ್ಮ ಕುಟುಂಬದೊಂದಿಗೆ ಬಂದಿದ್ದ ಹುಡುಗಿ ಮೊನಾಲಿಸಾ. 

ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಕನ್ನಡದ ಬಿಗ್ ಸ್ಟಾರ್‌ ಚಿತ್ರದಲ್ಲಿ 'ಮಹಾಕುಂಭ ಮೇಳ'ದ ಮೊನಾಲಿಸಾ!

ನೀಲಿ ಮಿಶ್ರಿತ ಜೇನು ಬಣ್ಣದ ಕಣ್ಣು ಹೊಂದಿರುವ ಆಕೆ ತನ್ನ ವಿಭಿನ್ನ ಲುಕ್‌ನಿಂದ ಗಮನಸೆಳೆದು ಇಂದು ನಟಿಯಾಗುತ್ತಿದ್ದಾಳೆ. 
ಬಾಲಿವುಡ್‌ನ ಡೈರಿ ಆಫ್ ಮಣಿಪುರ ಸಿನಿಮಾದಲ್ಲಿ ಚಾನ್ಸ್ ಗಿಟ್ಟಿಸಿಕೊಂಡ ಆಕೆಗೆ ಮೊದಲ ಸಿನಿಮಾದಲ್ಲೇ 21 ಲಕ್ಷ ಸಂಭಾವನೆ ಕೊಡಲಾಗುತ್ತಿದೆಯಂತೆ. ಮಣಿಸರ ಮಾರಾಟದಿಂದ ಗಳಿಸುತ್ತಿದ್ದ ಹಣ ಈಗ ಆಕೆಯ ಪಾಲಿಗೆ ಚಿಲ್ಲರೆ ಕಾಸು ಎನ್ನಬಹುದು. ಒಂದೇ ದಿನದಲ್ಲಿ ಆಕೆಯ ನಸೀಬು ಬದಲಾಗಿದೆ, ಲಕ್ ಚೇಂಜ್ ಆಗಿ ಮಣಿಸರ ಮಾರುವ ಹುಡುಗಿ ನಟಿಯಾಗಿದ್ದಾಳೆ. 

ಇದೀಗ ಸೊಷಿಯಲ್ ಮೀಡಿಯಾಗಳಲ್ಲಿ ಈ ಮೊನಾಲಿಸಾ ಬಗ್ಗೆ ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಲೇ ಇರುತ್ತವೆ. ಇದೊಂದು ಪೋಸ್ಟ್ ಇತ್ತೀಚಿಗೆ ವೈರಲ್ ಆಗುತ್ತಿದೆ. 'ಒಂದು ರಾತ್ರಿಯಲ್ಲಿ ಜೀವನ ಬದಲಾಗೋದು ಅಂದ್ರೆ ಇದೇ.. 16 ವರ್ಷದ ಮೊನಾಲಿಸಾ ಡೈರಿ ಆಫ್ ಮಣಿಪುರ ಎಂಬ ಸಿನಿಮಾದಲ್ಲಿ ನಟಿಸಲು 21 ಲಕ್ಷ  ಸಂಭಾವನೆ ಪಡೆದಿದ್ದಾರೆ. 35 ಸಾವಿರ ಸಾಲ ಮಾಡಿ ಕುಂಭ ಮೇಳಕ್ಕೆ ಹೋಗಿದ್ದಳು. ಈಗ ಆ ಹಣದ ಹತ್ತು ಪಟ್ಟು ಸಂಪಾದನೆ ಆಗಿದೆ' ಎಂದು ಬರೆದಿರುವ ಆ ಪೋಸ್ಟ್ ಈಗ ಸಕತ್ ವೈರಲ್ ಆಗುತ್ತಿದೆ. ಅದಕ್ಕೆ ಸಾಕಷ್ಟು ವಿಭಿನ್ನ ಕಾಮೆಂಟ್‌ಗಳು ಹರಿದಾಡುತ್ತಿದೆ. 

ಅದೊಂದು ಫೋಟೋ ಬಗ್ಗೆ ಕ್ಲಾರಿಟಿ ಕೊಟ್ಟ ಚಂದನ್‌ ಶೆಟ್ಟಿ; Oho.. ಅದಲ್ಲ..., ಇದಂತೆ ವಿಷ್ಯ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಐಶ್ವರ್ಯಾ ರೈ ಮಗಳು ಆರಾಧ್ಯ ಬಾಲಿವುಡ್‌ಗೆ ಎಂಟ್ರಿ ಕೊಡೋದು ಯಾವಾಗ?
ಎದ್ದೇಳಿ ಹಿಂದೂಗಳೇ ಮೌನ ನಿಮ್ಮನ್ನು ರಕ್ಷಿಸುವುದಿಲ್ಲ, ಬಾಂಗ್ಲಾದೇಶ ಘಟನೆ ಖಂಡಿಸಿ ನಟಿ ಕಾಜಲ್ ಎಚ್ಚರಿಕೆ