
ಯಾರೂ ಕೂಡ ಅಕ್ರಮ ಸಂಬಂಧ ಇತ್ತು, ತಪ್ಪು ಮಾಡಿದೆ ಎಂದು ಹೇಳೋದಿಲ್ಲ. ಆದರೆ ಅಪರೂಪಕ್ಕೆ ಕೆಲವರು ತಪ್ಪು ಮಾಡಿದ ಬಳಿಕ ಹೇಳೋದುಂಟು. ಈಗ ನಟರೊಬ್ಬರು ಈ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದಾರೆ.
ಮಲಯಾಳಂ ನಟ ಜನಾರ್ದನನ್ ಇತ್ತೀಚೆಗೆ ಮಲಯಾಳಂ ಮ್ಯಾಗಜಿನ್ ವನಿತಾಗೆ ನೀಡಿದ ವಿಡಿಯೋ ಸಂದರ್ಶನವೊಂದರಲ್ಲಿ “ನಾನು 18 ವರ್ಷಗಳ ಹಿಂದೆ ಬೇರೆ ಮಹಿಳೆ ಜೊತೆ ವಿವಾಹೇತರ ಸಂಬಂಧ ಅಥವಾ ಅಕ್ರಮ ಸಂಬಂಧ ಹೊಂದಿದ್ದೆ” ಎಂದಿದ್ದಾರೆ. ಜನಾರ್ಧನನ್ ಅವರಿಗೆ ಈಗ 79 ವರ್ಷ ವಯಸ್ಸು. ಅಷ್ಟೇ ಅಲ್ಲದೆ ಈ ವಿಷಯ ನನ್ನ ಪತ್ನಿಗೂ ಗೊತ್ತಿತ್ತು ಎಂದು ಹೇಳಿದ್ದಾರೆ.
"18 ವರ್ಷಗಳ ಹಿಂದೆ, ನಾನು ಬೇರೆ ಮಹಿಳೆ ಜೊತೆ ಸಂಬಂಧ ಹೊಂದಿದ್ದೆ. ಆ ಮಹಿಳೆ ನನ್ನ ಕೈಯಲ್ಲಿ ಏನಾಗತ್ತೋ ಅದೆಲ್ಲವನ್ನು ಮಾಡಿದೆ. ನನ್ನ ಪತ್ನಿಗೆ ಇದರ ಬಗ್ಗೆ ಗೊತ್ತಿತ್ತು" ಎಂದು ಜನಾರ್ದನನ್ ಹೇಳಿದ್ದಾರೆ. ನಿಮ್ಮ ಜೀವನದಲ್ಲಿ ಪಶ್ಚಾತ್ತಾಪ ಪಡುವ ಯಾವುದೇ ವಿಷಯಗಳಿವೆಯಾ ಎಂದು ಕೇಳಿದಾಗ ಅವರು ಹೀಗೆ ಹೇಳಿದ್ದರು.
ಮಲಯಾಳಂ ಸಿನಿಮಾದಲ್ಲಿ 1970 ರಿಂದ ಜನಾರ್ಧನನ್ ಅವರು ಕಾಮಿಡಿ, ವಿಲನ್ ಪಾತ್ರಗಳಲ್ಲಿ ನಟಿಸುತ್ತಿದ್ದರು. ಅವರು ತಮ್ಮ ಸಂಬಂಧಿಯಾಗಿರೋ ವಿಜಯಲಕ್ಷ್ಮೀಯನ್ನು ಮದುವೆಯಾಗಿದ್ದಾರೆ. ಬಾಲ್ಯದಿಂದಲೂ ಈ ಜೋಡಿಗೆ ಪರಿಚಯ ಇತ್ತು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
“ನನ್ನ ಪತ್ನಿ ದೈಹಿಕ ಸಂಬಂಧದಲ್ಲಿ ಆಸಕ್ತಿ ಕಳೆದುಕೊಂಡಿದ್ದಳು. ಅದಕ್ಕಾಗಿಯೇ ನಾನು ಅಕ್ರಮ ಸಂಬಂಧ ಹೊಂದಿದ್ದೆ. ನಾನು ಮನುಷ್ಯ. ನಾನು ಸುಮಾರು 18 ವರ್ಷಗಳ ಕಾಲ ಆ ಮಹಿಳೆ ಜೊತೆ ಇದ್ದೆ. ಸಮಾಜಕ್ಕೆ ಹೆದರಿ, ಏನಾದರೂ ಕಳಂಕ ಬರುವುದಾ ಎಂದು ಅವಳೇ ಹೆದರಿ ಸಂಬಂಧವನ್ನು ಮುರಿದುಕೊಂಡಳು" ಎಂದು ಹೇಳಿದ್ದಾರೆ.
“ಇದನ್ನು ಬಿಟ್ಟು, ನನ್ನ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ. ನನ್ನ ಕುಟುಂಬದಲ್ಲಿ ಈ ಸಂಬಂಧದಿಂದಾಗಿ ಯಾರಿಗೂ ತೊಂದರೆಯಾಗಿಲ್ಲ. ನನ್ನ ಲೈಫ್‌ನಲ್ಲಿ ಈಗ ಕಳೆದುಕೊಳ್ಳೋಕೆ ಏನೂ ಇಲ್ಲ. ಹೀಗಾಗಿ ಈಗ ಮಾತನಾಡಿರುವೆ" ಎಂದು ಹೇಳಿದ್ದಾರೆ.
“ನನ್ನ ಪತ್ನಿ ತುಂಬ ಚೆನ್ನಾಗಿ ಅಡುಗೆ ಮಾಡ್ತಾಳೆ, ಅವಳ ವ್ಯಕ್ತಿತ್ವವೂ ಸುಂದರವಾಗಿದೆ” ಎಂದು ಕೂಡ ಅವರು ಹೇಳಿದ್ದಾರೆ. ಮತ್ತು
ಕೇರಳದ ಕೊಟ್ಟಾಯಂ ಜಿಲ್ಲೆಯ ವೈಕಂನಲ್ಲಿರುವ ಒಂದು ಹಳ್ಳಿಯಲ್ಲಿ ಹುಟ್ಟಿದ್ದೇನೆ, ಆಮೇಲೆ ಮದುವೆ ಆಗುವಾಗಲೂ ಕೂಡ ಸಮಸ್ಯೆ ಬಂದಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.
‘ಒರು ಸಿಬಿಐ ಡೈರಿ ಕುರಿಪ್ಪು' ,ಮೇಲೆಪರಂಬಿಲ್ ಆನ್ವೀಡು', ಮನ್ನಾರ್ ಮಥಾಯಿ ಸ್ಪೀಕಿಂಗ್', ತುಪಂಜಾಬಿ ಹೌಸ್' ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೋಹನ್‌ಲಾಲ್ ನಟನೆಯ `ಹೃದಯಪೂರ್ವಂ' ಸಿನಿಮಾದಲ್ಲಿಯೂ ಅವರು ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.