ಸದಾ ನನ್ನೊಂದಿಗೆ ನಗಲು ನೀನಿರುವೆ; ಪುತ್ರಿ Sitara ಬಗ್ಗೆ ಮಹೇಶ್ ಬಾಬು- ನಮ್ರತಾ ಮಾತು!

Published : Sep 26, 2022, 11:47 AM IST
ಸದಾ ನನ್ನೊಂದಿಗೆ ನಗಲು ನೀನಿರುವೆ; ಪುತ್ರಿ Sitara ಬಗ್ಗೆ ಮಹೇಶ್ ಬಾಬು- ನಮ್ರತಾ ಮಾತು!

ಸಾರಾಂಶ

ಪುತ್ರಿಯರ ದಿನ ಮಗಳ ಕ್ಯೂಟ್ ಫೋಟೋ ಹಂಚಿಕೊಂಡ ಮಹೇಶ್ ಬಾಬು - ನಮ್ರತಾ ಶಿರೋಡ್ಕರ್....

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮತ್ತು ನಟಿ ನಮ್ರತಾ ಶಿರೋಡ್ಕರ್ ಪುತ್ರಿ ಸೋಷಿಯಲ್ ಮೀಡಿಯಾ ಮೂಲಕ ತಮ್ಮದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಸೆಲೆಬ್ರಿಟಿಗಳನ್ನು ಸಂದರ್ಶನ ಮಾಡುತ್ತಾ ತಮ್ಮ ಜೀವನ ಶೈಲಿ ಹೇಗಿದೆ ಎಂದೆಲ್ಲಾ ಯುಟ್ಯೂಬ್‌ನಲ್ಲಿ ವಿಡಿಯೋ ಮಾಡುತ್ತಾರೆ. ಮತ್ತೊಂದು ಅಚ್ಚರಿ ವಿಚಾರ ಏನೆಂದರೆ ಸಿತಾರಾ ಇನ್‌ಸ್ಟಾಗ್ರಾಂನಲ್ಲಿ 9 ಲಕ್ಷ 25 ಸಾವಿರ ಫಾಲೋವರ್ಸ್‌ನ ಹೊಂದಿದ್ದು ಅಕೌಂಟ್‌ ವೆರಿಫೈಡ್ ಮಾಡಿಸಿಕೊಂಡಿದ್ದಾರೆ.

ಪುತ್ರಿಯರ ದಿನ:

'ನನ್ನೊಂದಿಗೆ ನಗಲು ನೀನಿರುವೆ ಎಂದು ನನಗೆ ಖುಷಿಯಾಗಿದೆ. ಮತ್ತು ಜೀವನವು ತರುವ ಪ್ರತಿಯೊಂದರಲ್ಲೂ ಏನು ವಿಶೇಷವಾಗಿದೆ ಎಂಬುದನ್ನು ನನಗೆ ತೋರಿಸಲು ನೀನಿರುವೆ. ಹ್ಯಾಪಿ ಡಾಟರ್ಸ್‌ ಡೇ ನನ್ನ ಸೈನಿಂಗ್ ಸ್ಟಾರ್' ಎಂದು ನಮತ್ರಾ ಬರೆದುಕೊಂಡಿದ್ದಾರೆ. 

'ನನ್ನ ಪ್ರಪಂಚವನ್ನು ಬೆಳಗಿರುವ ಹೃದಯ. ಹ್ಯಾಪಿ ಡಾಟರ್ಸ್‌ ಡೇ ನನ್ನ ಪುಟ್ಟ ಕಂದಮ್ಮ' ಎಂದು ಮಹೇಶ್ ಬಾಬು ವಿಶ್ ಮಾಡಿದ್ದಾರೆ. 

ಮೊದಲ ಸಲ ಟಿವಿಯಲ್ಲಿ:

ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್‌ ಇಂಡಿಯಾ ಡ್ಯಾನ್ಸ್‌ ತೆಲುಗು ರಿಯಾಲಿಟಿ ಶೋನಲ್ಲಿ ಪ್ರಿನ್ಸ್ ಮಹೇಶ್ ಬಾಬು ಮತ್ತು ಪುತ್ರಿ ಸಿತಾರಾ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಬ್ಯೂಟಿಫುಲ್ ಕ್ಷಣದ ವಿಡಿಯೋವನ್ನು ಮಹೇಶ್ ಬಾಬು ಹಂಚಿಕೊಂಡಿದ್ದರು. 

' ಸಿತಾರಾ ಮೊದಲ ಸಲ ಟಿವಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು. ನಾವಿಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಮೊದಲ ಶೋ ಇದು. ಇದಕ್ಕಿಂತ ಮತ್ತೊಂದು ಖುಷಿ ಇಲ್ಲ. ನಾನ್ ಸ್ಟಾಪ್ ನಗು, ಎಲ್ಲರೊಟ್ಟಿಗೆ ಆಕೆ ಮಾತನಾಡುವ ರೀತಿ ಮತ್ತು ಧೈರ್ಯದಿಂದ ವೇದಿಕೆ ಮೇಲೆ ಹೆಚ್ಚೆ ಹಾಕಿದ ಕ್ಷಣ ಪ್ರತಿಯೊಂದು ನನಗೆ ಹಮ್ಮೆ ತಂದಿದೆ. ಜೀವನದಲ್ಲಿ ಮರೆಯಲಾಗ ಕ್ಷಣವಿದು' ಎಂದು ಮಹೇಶ್ ಬಾಬು ಬರೆದುಕೊಂಡಿದ್ದಾರೆ.

ಸಿತಾರಾಗೆ ಸಮಂತಾ ಸ್ನೇಹಿತೆ:

'Brahmotsavam ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಮಹೇಶ್ ಬಾಬು ಪುತ್ರಿ ಕೂಡ ಸೆಟ್‌ಗೆ ಭೇಟಿ ನೀಡುತ್ತಿದ್ದರು. ಈ ವೇಳೆ ನಟಿ ಸಮಂತಾಗೆ ತುಂಬಾನೇ ಕ್ಲೋಸ್ ಆಗಿದ್ದಾರೆ. 'ಸಮಂತಾ ಅಂಟಿ ನನಗೆ ಬೆಸ್ಟ್‌ ಫ್ರೆಂಡ್. ಅವರು ನನ್ನ ತಂದೆ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಪ್ರತಿ ಸಲ ನಾನು ಸೆಟ್‌ಗೆ ಭೇಟಿ ಕೊಟ್ಟಾಗ ಆಂಟಿ ನನ್ನ ಜೊತೆ ಆಟವಾಡುತ್ತಿದ್ದರು. ಆಕೆ awesome' ಎಂದು ಸಿತಾರಾ ಹೇಳಿದ್ದರು.

 

ಸಿತಾರಾ ಸಿನಿಮಾ:

Sarkaru Vaari Paata ಸಿನಿಮಾ ಮೂಲಕ ಸಿತಾರಾ ಬೆಳ್ಳಿ ಪರದೆಗೆ ಕಾಲಿಟ್ಟಿದ್ದಾರೆ. 9 ವರ್ಷದ ಮಗಳು ಹೇಗೆ ಮೀಡಿಯಾ, ಫೇಮ್ ಮತ್ತು ವಿದ್ಯಾಭ್ಯಾಸ ಮ್ಯಾನೇಜ್ ಮಾಡುತ್ತಾರೆಂದು ನಮ್ರತಾ ಮಾತನಾಡಿದ್ದಾರೆ. 'ಆಕೆ ಬಗ್ಗೆ ನಮಗೆ ಯಾವ ಭಯನೂ ಇಲ್ಲ. ಆಕೆ ಏನೆಲ್ಲಾ ಇಷ್ಟ ಯಾವುದೆಲ್ಲಾ ಖುಷಿ ಕೊಡುತ್ತದೆ ಅದನ್ನು ಮಾಡಲು ನಾವು ಸಪೋರ್ಟ್ ಮಾಡುತ್ತೀವಿ. ಅಕೆ 9 ವರ್ಷ ಹುಡುಗಿ ಆಗಿರುವ ಕಾರಣ ನಾವು ತುಂಬಾ ಕಂಡಿಷನ್‌ಗಳು ಮತ್ತು ಲಿಮಿಟ್‌ಗಳನ್ನು ಹಾಕುತ್ತೀವಿ. ನಮ್ಮ ಗೈಡೆನ್ಸ್‌ ಅವರಿಗೆ ಅಗತ್ಯವಿಲ್ಲ ಅನಿಸುತ್ತದೆ ಆದರೂ ನಾವು ಗೈಡ್ ಮಾಡಬೇಕು. ನಾನು ಮಹೇಶ್ ಹಾಗೆ ಇರುವುದು...ಸರಿಯಾದ ರೀತಿಯಲ್ಲಿ ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿ ಹೇಗೆ ಕೆಲಸ ಮಾಡಬೇಕು ಅನ್ನೋದು ತಿಳಿಸಿದ್ದೀವಿ' ಎಂದು ನಮತ್ರಾ ಹೇಳಿದ್ದಾರೆ.

ಸಿನಿಮಾ ಮಾಡ್ತಾರಾ ಮಹೇಶ್ ಬಾಬು, ಪತ್ನಿ ನಮ್ರತಾ ಶಿರೋಡ್ಕರ್!

ತನಗಿಂತ ಕಿರಿಯ ನಟನ ಮದುವೆಯಾದ ನಮ್ರತಾ:

90ರ ದಶಕದ ಖ್ಯಾತ ರೂಪದರ್ಶಿ ಹಾಗೂ ನಟಿ ನಮ್ರತಾ ಶಿರೋಡ್ಕರ್ ಇಂದು ತಮ್ಮ 50ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರು ದಕ್ಷಿಣ ಭಾರತದ ಉದ್ಯಮದ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರೊಂದಿಗೆ ಜೀವನದ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ.  ಸಿನಿಮಾವೊಂದರ ಸಂದರ್ಭದಲ್ಲಿ ಮಹೇಶ್ ಬಾಬು ಅವರನ್ನು ಭೇಟಿಯಾದರು. ನಂತರ ಪ್ರೀತಿಸಿ ಮದುವೆಯಾದರು. ಮದುವೆ ನಂತರ ನಮ್ರತಾ ಸಿನಿಮಾಗಳಿಗೆ ಗುಡ್ ಬೈ ಹೇಳಿದ್ದಾರೆ.ಮೊದಲ ಸಿನಿಮಾದಲ್ಲೇ ಮಹೇಶ್ ಬಾಬು ನಮ್ರತಾಗೆ ಮನಸೋತಿದ್ದರು. ನಟಿ ಮಹೇಶ್ ಬಾಬು ಅವರಿಗಿಂತ ನಾಲ್ಕು ವರ್ಷ ದೊಡ್ಡವರು. ಇದರ ಹೊರತಾಗಿಯೂ, ಮಹೇಶ್ ಬಾಬು ನಮ್ರತಾ ಅವರನ್ನು ತುಂಬಾ ಪ್ರೀತಿಸುತ್ತಿದ್ದರು. ಇಬ್ಬರ ಸ್ನೇಹದಿಂದ ಶುರುವಾದ ಕಥೆ ನಂತರ ಪ್ರೀತಿಗೆ ತಿರುಗಿತ್ತು.4 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ, ಇಬ್ಬರೂ 10 ಫೆಬ್ರವರಿ 2005 ರಂದು ವಿವಾಹವಾದರು. ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಮದುವೆಯ ನಂತರ ನಮ್ರತಾ ಚಿತ್ರರಂಗದಿಂದ ದೂರವಾದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್