ಸ್ಟಾರ್ ನಟನ ಮಗನಿಂದ ಕಿರುಕುಳ ವದಂತಿ: ಕೃತಿ ಶೆಟ್ಟಿ ಕೆಂಡಾಮಂಡಲ

Published : Jul 07, 2023, 01:16 PM IST
ಸ್ಟಾರ್ ನಟನ ಮಗನಿಂದ ಕಿರುಕುಳ ವದಂತಿ: ಕೃತಿ ಶೆಟ್ಟಿ ಕೆಂಡಾಮಂಡಲ

ಸಾರಾಂಶ

ಸ್ಟಾರ್ ನಟನ ಮಗ ಕಿರುಕುಳ ನೀಡುತ್ತಿದ್ದಾನೆ ಎನ್ನುವ ವದಂತಿಗೆ ನಟಿ ಕೃತಿ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಇದೆಲ್ಲ ಸುಳ್ಳು ಸುದ್ದಿ ಎಂದು ಹೇಳಿದ್ದಾರೆ. 

ಕರ್ನಾಟಕ ಮೂಲದ ತೆಲುಗು ನಟಿ ಕೃತಿ ಶೆಟ್ಟಿ ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಬೇಡಿಕೆಯ ನಟಿಯಾಗಿದ್ದಾರೆ. ಉಪ್ಪೇನಾ ಸಿನಿಮಾ ಮೂಲಕ ಮೊದಲ ಬಾರಿಗೆ ತೆರೆಮೇಲೆ ಮಿಂಚಿದ ಕೃತಿ ಚೊಚ್ಚಲ ಸಿನಿಮಾದಲ್ಲೇ ಅಭಿಮಾನಿಗಳ ಹೃದಯ ಗೆದ್ದರು. ಕೃತಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಕೃತಿ ಬಗ್ಗೆ ಕಿರುಕುಳ ಸುದ್ದಿಯೊಂದು ವೈರಲ್ ಆಗಿದೆ. ಸ್ಟಾರ್ ನಟನ ಮಗರೊಬ್ಬರು ಕೃತಿ ಶೆಟ್ಟಿಗೆ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಕೃತಿ ಪ್ರತಿಕ್ರಿಯೆ ನೀಡಿದ್ದು ವದಂತಿ ಹಬ್ಬಿಸಿದವರ ವಿರುದ್ಧ ಗರಂ ಆಗಿದ್ದಾರೆ.  

ಸಾಮಾಜಿಕ ಜಾಲತಾಣದಲ್ಲಿ  ಪೋಸ್ಟ್ ಶೇರ್ ಮಾಡಿರುವ ಕೃತಿ ಈ ರೀತಿಯ ಸುದ್ದಿ ಹಬ್ಬಿಸುವುದನ್ನು ನಿಲ್ಲಿಸಿ ಎಂದು ಹೇಳಿದ್ದಾರೆ. 'ದಯವಿಟ್ಟು ಇಂಥ ಸುದ್ದಿ ಹಬ್ಬಿಸುವುದನ್ನು ನಿಲ್ಲಿಸಿ. ಸುಳ್ಳು ಮಾಹಿತಿಗಳನ್ನು ಹರಡಿಸಬೇಡಿ' ಎಂದು ಹೇಳಿದ್ದಾರೆ. ಪೋಸ್ಟ್ ಶೇರ್ ಮಾಡಿ ಕೈ ಮುಗಿಯುವ ಇಮೋಜಿ ಹಾಕಿದ್ದಾರೆ.

ಏನಿದು ಸುದ್ದಿ 

ಸ್ಟಾರ್ ಹೀರೋ ಮಗನೊಬ್ಬ ಕೃತಿ ಶೆಟ್ಟಿ ಹಿಂದೆ ಬಿದ್ದಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಹೇಗಾದರೂ ಮಾಡಿ ಕೃತಿ ಶೆಟ್ಟಿ ಜೊತೆ ಸ್ನೇಹ ಬೆಳೆಸುವಂತೆ ಕಿರುಕುಳ ನೀಡುತ್ತಿದ್ದಾನೆ, ಪ್ರತಿ ಕಾರ್ಯಕ್ರಮದಲ್ಲೂ ಕೃತಿ ಶೆಟ್ಟಿ ಜೊತೆಯೇ ಓಡಾಡಿ ತೊಂದರೆ ಕೊಡುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೆ ಕೃತಿ ಶೆಟ್ಟಿಗೆ ಫೋನ್ ಮಾಡಿ ಶೂಟಿಂಗ್ ನಿಲ್ಲಿಸಿ ಬರುವಂತೆ ಒತ್ತಾಯ ಮಾಡಿದ್ದರಂತೆ. ಎಷ್ಟು ಕೋಟಿ ಬೇಕಾದರೂ ಕೊಡುತ್ತೇನೆ ಪಾರ್ಟಿಗೆ ಬರುವಂತೆ ಚಿತ್ರಹಿಂಸೆ ನೀಡಿದ್ದರಂತೆ. 

ಮೊದಲ ಬಾರಿಗೆ ದೇಹ ಸಿರಿ ತೋರಿಸಲು ಮುಂದಾದ ಕರಾವಳಿ ಬೆಡಗಿ Krithi Shetty?

ಆದರೆ ಕೃತಿ ಯಾವುದೇ ಪಾರ್ಟಿಗೂ ಹೋಗಲ್ಲ ಎಂದು ಫೋನ್ ಕಟ್ ಮಾಡಿ ಸೈಲೆಂಟ್ ಆದರು. ಕೃತಿ ಶೆಟ್ಟಿಗೆ ಟಾರ್ಚರ್ ಮಾಡುತ್ತಿರುವ ಸ್ಟಾರ್ ಹೀರೋ  ಮಗ ಯಾರು? ತೆಲುಗು ನಟನ ಮಗನ ಅಥವಾ ತಮಿಳು ನಟನ ಮಗನ ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದರು. ಕೃತಿಯನ್ನು ಬೆಂಬಿಡದೇ ಕಾಡುತ್ತಿರುವ ಆ ವ್ಯಕ್ತಿ ಯಾರು ಎಂದು ತಿಳಿದುಕೊಳ್ಳಲು ಅಭಿಮಾನಿಗಳು ಹರಸಾಹಸ ಪಡುತ್ತಿದ್ದರು. ಆದರೀಗ ಈ ಎಲ್ಲಾ ವದಂತಿಗೆ ಕೃತಿ ಬ್ರೇಕ್ ಹಾಕಿದ್ದಾರೆ. 

ಎಷ್ಟು ಕೋಟಿ ಬೇಕಾದ್ರು ಕೊಡ್ತೀನಿ ಬಾ; ಸ್ಟಾರ್ ನಟನ ಮಗನಿಂದ ಕರಾವಳಿ ಸುಂದರಿ ಕೃತಿ ಶೆಟ್ಟಿಗೆ ಕಿರುಕುಳ

ಸಿನಿಮಾಗಳು 

ಉಪ್ಪೇನಾ ಬಳಿಕ ಬಂದ ಕೃತಿ ಸಿನಿಮಾಗಳು ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಆದರೂ ಕೃತಿಗೆ ಬೇಡಿಕೆ ಕಡಿಮೆಯಾಗಿಲ್ಲ. ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಕೃತಿ ಮತ್ತೊಂದು ದೊಡ್ಡ ಸಕ್ಸಸ್‌ಗಾಗಿ ಕಾಯುತ್ತಿದ್ದಾರೆ. ಕೊನೆಯದಾಗಿ ನಾಗ ಚೈತನ್ಯ ಜೊತೆ ಕಸ್ಟಡಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು ಕೃತಿ. ಸದ್ಯ ಎರಡು ಸಿನಿಮಾಗಳಲ್ಲಿ ಕೃತಿ ಬ್ಯುಸಿಗಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!
ಜಗಳದ ಕಾರಣದಿಂದ ನಾವು ದೂರವಾಗಲು ಬಯಸಲಿಲ್ಲ, ಜಗಳವನ್ನೇ ದೂರಮಾಡಲು ಬಯಸಿದ್ದೇವೆ; ಸೋನಾಕ್ಷಿ ಸಿನ್ಹಾ!