ಟ್ವಿಟರ್‌ನಲ್ಲಿ ನಿಷೇಧ | ಕಂಗನಾರನ್ನು ಸ್ವಾಗತಿಸಿದ ಕೂ ಆ್ಯಪ್
ದ್ವೇಷ ಪ್ರೇರೇಪಿಸೋ ಕುರಿತ ಟ್ವೀಟ್ ಮಾಡಿ ತನ್ನ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮಂಗಳವಾರ ಟ್ವಿಟರ್ ಕಂಗನಾ ರಣಾವತ್ ಅವರ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಿದೆ. ಇದೀಗ ಟ್ವಿಟರ್ ಪ್ರತಿಸ್ಪರ್ಧಿ ಆ್ಯಪ್ ಕೂ ಕ್ವೀನ್ ನಟಿಯನ್ನು ಸ್ವಾಗತಿಸಿದೆ. 'ಮೇಡ್ ಇನ್ ಇಂಡಿಯಾ' ಪ್ಲಾಟ್‌ಫಾರ್ಮ್ "ಮನೆ" ಯಂತಿದೆ ಮತ್ತು ಉಳಿದವುಗಳು ಎಷ್ಟಿದ್ದರೂ ಬಾಡಿಗೆಯವು ಎಂದು ನಾವು ನಂಬುವುದು ಸರಿ ಇದೆ ಎಂದು ಹೇಳಿದೆ.
ಫೆಬ್ರವರಿಯಲ್ಲಿ ಕಂಗನಾ ತನ್ನ ಮೊದಲ ಕೂನಲ್ಲಿ ಇದು "ಹೊಸ ಸ್ಥಳ" ಎಂದು ಹೇಳಿದ್ದು, ಪರಿಚಯ ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ ಎಂದಿದ್ದರು. ಬಾಡಿಗೆ ಮನೆ ಬಾಡಿಗೆಗೆ ಇದೆ, ಆದರೆ ಸ್ವಂತ ಮನೆ ಸ್ವಂತದ್ದಾಗಿದೆ ಎಂದು ಅವರು ಹೇಳಿದ್ದರು. ಕಂಗನಾಗೆ ಕೂನಲ್ಲಿ 4.48 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.
undefined
ಹಿಂಸಾಚಾರದ ಬಗ್ಗೆ ಮಾತು: ನಟಿ ಕಂಗನಾ ಟ್ವಿಟರ್ ಖಾತೆ ಸ್ಥಗಿತ!
ಕೂ ಸಹ ಸಂಸ್ಥಾಪಕ ಮಯಾಂಕ್ ಬಿಡಾವತ್ಕಾ ಅವರು ರಣಾವತ್ ಅವರನ್ನು ಕೂಗೆ ಸ್ವಾಗತಿಸಿದ್ದಾರೆ. ಅವರು ತಮ್ಮ ಅಭಿಪ್ರಾಯಗಳನ್ನು ವೇದಿಕೆಯಲ್ಲಿ ಹೆಮ್ಮೆಯಿಂದ ಹಂಚಿಕೊಳ್ಳಬಹುದು ಎಂದು ಹೇಳಿದ್ದಾರೆ.
ಕಂಗನಾ ರಣಾವತ್ ಅವರ ಖಾತೆ ಅಮಾನತು ಕುರಿತು ಟ್ವಿಟರ್ ಹೇಳಿಕೆ:
ಆಫ್‌ಲೈನ್ ಹಾನಿಗೆ ಕಾರಣವಾಗಬಹುದಾದ ಸಾಮರ್ಥ್ಯವನ್ನು ಹೊಂದಿರುವ ನಡವಳಿಕೆಯ ಮೇಲೆ ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಟ್ವಿಟರ್ ನಿಯಮಗಳ ಪುನರಾವರ್ತಿತ ಉಲ್ಲಂಘನೆಗಳಿಗಾಗಿ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗಿದೆ. ನಿರ್ದಿಷ್ಟವಾಗಿ ನಮ್ಮ ದ್ವೇಷಪೂರಿತ ನಡವಳಿಕೆ ನೀತಿ ಮತ್ತು ನಿಂದನಾತ್ಮಕ ವರ್ತನೆ ನೀತಿಯಿಂದ ಈ ರೀತಿ ಮಾಡಲಾಗಿದೆ ಎಂದು ಟ್ವಿಟರ್ ವಕ್ತಾರರು ತಿಳಿಸಿದ್ದಾರೆ.
ಕಂಗನಾ ರಣಾವತ್ ಟ್ವಿಟರ್‌ನಲ್ಲಿ ಆಕ್ಟಿವ್ ಆಗಿದ್ದು ಮೂರು ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದರು. ಈ ಹಿಂದೆ ಬಹಳಷ್ಟು ಸಲ ನಟಿಯ ವಿವಾದಾತ್ಮಕ ಟ್ವೀಟ್ ಬಗ್ಗೆ ಟ್ವಿಟರ್ ಎಚ್ಚರಿಸಿತ್ತು. ಆದರೆ ಈಗ ಸಂಪೂರ್ಣ ನಿಷೇಧ ಹೇರಿದೆ.