Happy Birthday Suriya: ಗ್ರೇಟ್ ವಾರಿಯರ್ ಆದ 'ಸೂರ್ಯ', ಕಾಡ್ತಿದೆ 'ಕಂಗುವಾ'

Published : Jul 23, 2023, 05:19 PM ISTUpdated : Jul 24, 2023, 09:51 AM IST
Happy Birthday Suriya: ಗ್ರೇಟ್ ವಾರಿಯರ್ ಆದ 'ಸೂರ್ಯ', ಕಾಡ್ತಿದೆ 'ಕಂಗುವಾ'

ಸಾರಾಂಶ

ಕಾಲಿವುಡ್ ಸ್ಟಾರ್ ಸೂರ್ಯ ನಟನೆಯ ಬಹುನನಿರೀಕ್ಷೆಯ ಕಂಗುವ ಚಿತ್ರದ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿದೆ. ಸೂರ್ಯ ಹುಟ್ಟುಹಬ್ಬಕ್ಕೆ ಕಂಗುವ ತಂಡ ಗ್ಲಿಂಪ್ಸ್ ರಿಲೀಸ್ ಮಾಡುವ ಮೂಲಕ ಸರ್ಪ್ರೈಸ್ ನೀಡಿದೆ.

ತಮಿಳಿನ ಖ್ಯಾತ ನಟ 'ನಡಿಪ್ಪಿನ ನಾಯಗನ್' ಸೂರ್ಯ ಅವರಿಗೆ ಇಂದು (ಜುಲೈ 23) ಹುಟ್ಟುಹಬ್ಬದ ಸಂಭ್ರಮ. ಈ ಶುಭ ದಿನದಂದು ಬಹುನಿರೀಕ್ಷೆಯ 'ಕಂಗುವಾ' ಸಿನಿಮಾ ಟೀಂ ಸೂರ್ಯಗೆ ಬಿಗ್ ಸರ್ಪ್ರೈಸ್ ಕೊಟ್ಟಿದೆ. ಕಂಗುವಾ ಫಸ್ಟ್ ಲುಕ್ ಗ್ಲಿಂಪ್ಸ್ ರಿಲೀಸ್ ಮಾಡಿದ್ದು, ಅಭಿಮಾನಿಗಳ ಕಾತುರವನ್ನು ಮತ್ತಷ್ಟು ಹೆಚ್ಚಿಸಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಆಗ್ತಿರೋ ಕಂಗುವಾ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಹೀಗಾಗಿಯೇ ಈ ಸಿನಿಮಾ ಅಪ್ಡೇಟ್ಗಾಗಿ ಅಭಿಮಾನಿಗಳು ಕಾಯ್ತಿದ್ರು. ಇದೀಗ ಸೂರ್ಯ ಹುಟ್ಟುಹಬ್ಬದಂದು ಆ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ.

ಅಭಿಮಾನಿಗಳ ನಿರೀಕ್ಷೆಯಂತೆ ಸೂರ್ಯ, ಕಂಗುವಾ ಆಗಿ ಅಬ್ಬರಿಸಿದ್ದಾರೆ.  2.12 ನಿಮಿಷವಿರೋ ಗ್ಲಿಂಪ್ಸ್‌ನಲ್ಲಿ ಸೂರ್ಯ ಮಿಂಚಿದ್ದಾರೆ. ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ಸೂರ್ಯ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದಹಾಗೆ ಈ ಸಿನಿಮಾದಲ್ಲಿ ಸೂರ್ಯ ಒಬ್ಬ ಗ್ರೇಟ್ ವಾರಿಯರ್ ಆಗಿ ನಟಿಸಿದ್ದಾರೆ‌. ವೀಡಿಯೋ ಉದ್ದಕ್ಕೂ ಕಂಗುವಾ ಪಾತ್ರದ ಗುಣಗಾನ ಮಾಡಲಾಗಿದೆ. ಪ್ರಾಣಿಯ ಮುಖಗವಸು, ಹುಲಿ ಉಗುರು ತೊಟ್ಟ ಸೂರ್ಯ ಅವತಾರನ ಜನ ಕೊಂಡಾಡುತ್ತಿದ್ದಾರೆ.

Kanguva: ಕುತೂಹಲ ಹೆಚ್ಚಿಸಿದ ಸೂರ್ಯ ನಟನೆಯ ಹೊಸ ಸಿನಿಮಾದ ಟೈಟಲ್; ಟೀಸರ್ ವೈರಲ್

ಅಂದ್ಹಾಗೆ ಬಹುಕೋಟಿ ವೆಚ್ಚದ ಕಂಗುವಾ 10 ಭಾಷೆಗಳಲ್ಲಿ ರಿಲೀಸ್ ಆಗಲಿದ್ದು, 3D ಯಲ್ಲಿ ಮೂಡಿ ಬರಲಿದೆ. ‘ಸ್ಟುಡಿಯೋ ಗ್ರೀನ್​’ ಮೂಲಕ ಕೆ.ಇ. ಜ್ನಾನವೇಲ್ ರಾಜ ನಿರ್ಮಿಸುತ್ತಿರುವ ‘ಕಂಗುವ’ ಚಿತ್ರಕ್ಕೆ ಶಿವ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಕುರಿತು ಸೀಕ್ರೆಟ್ ಬಿಟ್ಟುಕೊಟ್ಟಿರೋ ನಿರ್ದೇಶಕ ಶಿವ, ಇದು 1500ಗಳ ಹಿಂದಿನ ಕಥೆ ಆಗಿದ್ದು, ನೈಜ ಘಟನೆಗಳಿಗೆ ಸಿನಿಮ್ಯಾಟಿಕ್ ಫೀಲ್ ಕೊಟ್ಟಿರುವುದಾಗಿ ತಿಳಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡ್ತಿರೋ ಸೂರ್ಯ, ಕಂಗುವಾದಲ್ಲೂ ಅಂಥದ್ದೇ ಮ್ಯಾಜಿಕ್ ಮಾಡಲಿದ್ದಾರೆ ಅನ್ನೋ ನಿರೀಕ್ಷೆ ಅಭಿಮಾನಿಗಳದ್ದಾಗಿದೆ.

ನೋ ಉಪ್ಪು ನೋ ಶುಗರ್, ಸಿಕ್ಕಾಪಟ್ಟೆ ವರ್ಕೌಟ್: ನಟ ಸೂರ್ಯ ಫಿಟ್ನೆಸ್ ಸೀಕ್ರೆಟ್ ರಿವೀಲ್

ಸೂರ್ಯ ಕೊನೆಯದಾಗಿ ಎತರ್ಕ್ಕುಂ ತುನಿಂಧವನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ನಿರೀಕ್ಷೆಯ ಗೆಲುವು ದಾಖಲಿಸಿಲ್ಲ. ಬಳಿಕ ವಿಕ್ರಮ್ ಮತ್ತು ರಾಕೆಟರಿ ಸಿನಿಮಾದಲ್ಲಿ ಗೆಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಕಂಗುವ ಮೂಲಕ ಅಭಿಮಾನಿಗಳ ಮುಂದೆ ಬರಲು ಭರ್ಜರಿ ತಯಾರಿ ನಡೆಸಿದ್ದಾರೆ. ವಿಭಿನ್ನ ಲುಕ್ ಮತ್ತು ಟೀಸರ್ ಮೂಲಕ ಸದ್ದು ಮಾಡುತ್ತಿರುವ ಕಂಗುವ ಹೇಗಿರಲಿದೆ ಎಂದು ನೋಡಬೇಕು ಅಂದರೆ ಇನ್ನೂ ಕೆಲವು ತಿಂಗಳು ಕಾಯಲೇ ಬೇಕು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಖಂಡ 2 ಪ್ರೀಮಿಯರ್ ಶೋಗಳು ರದ್ದು, ನಿರ್ಮಾಪಕರಿಗೆ ಸಂಕಷ್ಟ.. ಬಾಲಯ್ಯ ಸಿನಿಮಾ ರಿಲೀಸ್ ಕಥೆಯೇನು?
ಮೋಹನ್ ಬಾಬು ಮಾಡಿದ ಸಣ್ಣ ತಪ್ಪಿನಿಂದ ಸೌಂದರ್ಯ ಪ್ರಾಣ ಕಳೆದುಕೊಂಡ್ರಾ? ನಿರ್ದೇಶಕರು ಹೇಳಿದ ಸತ್ಯವೇನು?