
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ತೆಲುಗು, ತಮಿಳು, ಹಿಂದೆಯಲ್ಲಿ ಅದೆಷ್ಟೇ ಪ್ರಸಿದ್ಧಿಯಾಗಿರಲಿ, ಪ್ಯಾನ್ ಇಂಡಿಯಾ ಲೆವಲ್ ನಲ್ಲಿ ಹೆಸರು ಮಾಡಿರಲಿ, ಅವ್ರ ವೃತ್ತಿ ಜೀವನ ಆರಂಭವಾಗಿದ್ದು ಸ್ಯಾಂಡಲ್ವುಡ್ ನಿಂದ. ರಶ್ಮಿಕಾ ಮಂದಣ್ಣ ಮೊದಲ ಚಿತ್ರ ಕಿರಿಕ್ ಪಾರ್ಟಿ ಅಂತಾನೆ ಎಲ್ಲ ಫ್ಯಾನ್ಸ್ ನಂಬಿದ್ದಾರೆ. ದೊಡ್ಡ ತೆರೆ ಮೇಲೆ ರಶ್ಮಿಕಾರನ್ನು ಅಭಿಮಾನಿಗಳು ನೋಡಿದ್ದು ಕಿರಿಕ್ ಪಾರ್ಟಿ ಸಿನಿಮಾದಲ್ಲಿ. ಆದ್ರೆ ರಶ್ಮಿಕಾ ಮಂದಣ್ಣ ಮಾತ್ರ ಕಿರಿಕ್ ಪಾರ್ಟಿ ನನ್ನ ಮೊದಲ ಸಿನಿಮಾ ಅಲ್ಲ ಅಂತಿದ್ದಾರೆ. ಕಿರಿಕ್ ಪಾರ್ಟಿ ರಶ್ಮಿಕಾಗೆ ಸಿಕ್ಕ ಎರಡನೇ ಸಿನಿಮಾವಂತೆ. ಹಾಗಿದ್ರೆ ಮೊದಲ ಸಿನಿಮಾ ಯಾವ್ದು? ಕಿರಿಕ್ ಪಾರ್ಟಿ ಬಗ್ಗೆ ರಶ್ಮಿಕಾ ಹೇಳಿದ್ದೇನು?
ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ರಿಲೀಸ್ ಆಗ್ತಿವೆ. ಹಿಂದಿ, ತಮಿಳು, ತೆಲುಗು ಅಂತ ಒಂದಾದ್ಮೇಲೆ ಒಂದು ಸಿನಿಮಾ ಮಾಡ್ತಿರುವ ರಶ್ಮಿಕಾ ಮಂದಣ್ಣ, ವೃತ್ತಿ ಶುರುಮಾಡಿ 9 ವರ್ಷ ಕಳೆದಿದೆ. ಈ 9 ವರ್ಷಗಳಲ್ಲಿ ರಶ್ಮಿಕಾ ಮಾಡಿದ್ದು ಬರೋಬ್ಬರಿ 25 ಸಿನಿಮಾ. ಎನ್ ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿದ ರಶ್ಮಿಕಾ ಮಂದಣ್ಣ ತಮ್ಮ ಮೊದಲ ಸಿನಿಮಾ ಹಾಗೂ ಕಿರಿಕ್ ಪಾರ್ಟಿ ತೆರೆಗೆ ಬಂದಾಗಿನ ತಮ್ಮ ಮನಸ್ಥಿತಿಯನ್ನು ಹಂಚಿಕೊಂಡಿದ್ದಾರೆ.
ಗುಡ್ ಫ್ರೆಂಡ್ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಂಡಷ್ಟು ಖುಷಿ ಆಗಿದೆ: Manisha Kandkur Interview
ರಶ್ಮಿಕಾ ಮಂದಣ್ಣ ಪ್ರಕಾರ ಕಿರಿಕ್ ಪಾರ್ಟಿ ಅವರ ಫಸ್ಟ್ ಸಿನಿಮಾ ಅಲ್ವೇ ಅಲ್ಲ. ಅದಕ್ಕೂ ಮೊದಲೇ ರಶ್ಮಿಕಾಗೆ ನಟಿಸುವ ಅವಕಾಶ ಸಿಕ್ಕಿತ್ತು. ಸಿನಿಮಾ ಆಫರ್ ಬಂದಿತ್ತು. ʻʻಗೆಳೆಯರೇ ಗೆಳತಿಯರೇʼʼ ಹೆಸರಿನ ಸಿನಿಮಾಕ್ಕೆ ರಶ್ಮಿಕಾ ಆಯ್ಕೆ ಆಗಿದ್ರು. ಚಿತ್ರಕ್ಕಾಗಿ ನಾಲ್ಕೈದು ತಿಂಗಳು ತಯಾರಿ ಕೂಡ ಮಾಡಲಾಗಿತ್ತು. ರಿಹರ್ಸಲ್ ನಡೆದಿತ್ತು. ಆದ್ರೆ ಶೂಟಿಂಗ್ ಆರಂಭವಾಗುವ ಮೊದಲೇ ಸಿನಿಮಾ ಬಂದ್ ಆಗಿತ್ತು. ಹಾಗಾಗಿ ನನಗೆ ಸಿಕ್ಕ ಮೊದಲ ಸಿನಿಮಾ ಕಿರಿಕ್ ಪಾರ್ಟಿ ಅಲ್ಲ. ಗೆಳೆಯರೇ ಗೆಳತಿಯರೇ ಅಂತ ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
ಕಿರಿಕ್ ಪಾರ್ಟಿಯಲ್ಲಿ ನಾನು ಮಾಡಿದ ಕ್ಯಾರೆಕ್ಟರ್ ನನ್ನನ್ನು ಇನ್ನಷ್ಟು ಮತ್ತಷ್ಟು ಸಿನಿಮಾ ಮಾಡಲು ಪ್ರೋತ್ಸಾಹಿಸಿದೆ ಎಂಬುದನ್ನು ರಶ್ಮಿಕಾ ಒಪ್ಪಿಕೊಂಡಿದ್ದಾರೆ. ಕಿರಿಕ್ ಪಾರ್ಟಿ ಪ್ರಿಮಿಯಮ್ ಶೋ ದಿನ, ಇಡೀ ಆಡಿಟೋರಿಯಂನಲ್ಲಿದ್ದ ವೀಕ್ಷಕರು, ಕಿರಿಕ್ ಪಾರ್ಟಿಯ ರಶ್ಮಿಕಾ ಕ್ಯಾರೆಕ್ಟರ್ ಸಾನ್ವಿ ಜೋಸೆಫ್ ಹೆಸರನ್ನು ಕೂಗುತ್ತಿದ್ದರಂತೆ. ಅದೊಂದೇ ಕ್ಷಣ ನನ್ನನ್ನು ಕೆಲ್ಸ ಮಾಡಲು ಪ್ರೋತ್ಸಾಹ ನೀಡ್ತು. ಕಿರಿಕ್ ಪಾರ್ಟಿ ಪ್ರೇಕ್ಷಕರೇ ನನಗೆ ಪ್ರೋತ್ಸಾಹ ನೀಡಿದ್ರು. ಇನ್ನಷ್ಟು ಬೇಕು, ಇದು ಸಾಕಾಗೋದಿಲ್ಲ, ಇನ್ನಷ್ಟು ಬೇಕು ಎನ್ನುವ ಕ್ರೇವಿಂಗ್ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
ನಟ ದರ್ಶನ್ ಪುತ್ರ ವಿನೀಶ್ ಬರ್ತ್‌ಡೇ ಸಂಭ್ರಮ; ದರ್ಶನ್ ಜೊತೆಗಿನ ಫೋಟೋ ಫೋಸ್ಟ್ ಮಾಡಿದ ವಿಜಯಲಕ್ಷ್ಮೀ
ರಶ್ಮಿಕಾ ಮಾತಿಗೆ ಉರಿದುಕೊಂಡ ಕನ್ನಡಿಗರು :
ರಶ್ಮಿಕಾ ಮಂದಣ್ಣ ಏನೇ ಮಾತನಾಡಿದ್ರೂ, ಮಾಡಿದ್ರೂ ಟ್ರೋಲ್ ಆಗೋದು ಗ್ಯಾರಂಟಿ. ಈಗ ಕಿರಿಕ್ ಪಾರ್ಟಿ, ಗೆಳೆಯರೇ ಗೆಳತಿಯರೆ ಸಿನಿಮಾ ಬಗ್ಗೆ ಮಾತನಾಡಿ ಟ್ರೋಲ್ ಆಗಿದ್ದಾರೆ. ಸಿನಿಮಾ ಶೂಟಿಂಗ್ ಆಗಿಲ್ಲ, ತೆರೆಗೆ ಬಂದಿಲ್ಲ ಅಂದ್ಮೇಲೆ ಅದು ಹೇಗೆ ಫಸ್ಟ್ ಸಿನಿಮಾ ಆಗುತ್ತೆ? ಕಿರಿಕ್ ಪಾರ್ಟಿಯಿಂದ್ಲೇ ಎಲ್ಲ ಆಗಿದ್ದು ಅನ್ನೋದನ್ನು ರಶ್ಮಿಕಾಗೆ ಒಪ್ಪಿಕೊಳ್ಳುವ ಮನಸ್ಸಿಲ್ಲ, ಅವರು ಸ್ಯಾಂಡಲ್ವುಡ್ ಗೆ ಮತ್ತೆ ಅವಮಾನ ಮಾಡ್ತಿದ್ದಾರೆ, ಬೆಂಗಳೂರಿನಿಂದ ಅವರನ್ನು ಬ್ಯಾನ್ ಮಾಡಿ ಅಂತ ಛೀಮಾರಿ ಹಾಕ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.