ರಾಮಾಯಣ ಚಿತ್ರದಲ್ಲಿ ರಾವಣನ ಪಾತ್ರಕ್ಕೆ ಸಂಭಾವನೆ ಬೇಡವೆಂದಿದ್ದಾರಂತೆ ಯಶ್, ಹಾಗಿದ್ದರೆ ಮಾಡಿಕೊಂಡಿರುವ ಡೀಲ್ ಏನು? ಇಲ್ಲಿದೆ ವಿವರ...
ರಾಮಾಯಣವನ್ನು ಆಧರಿಸಿ ಇದಾಗಲೇ ಕೆಲವು ಚಿತ್ರಗಳು ಬಂದಿದ್ದು, ಇದೀಗ ಮತ್ತೊಂದು ರಾಮಾಯಣ ಚಿತ್ರದ ಶೂಟಿಂಗ್ ನಡೆಯುತ್ತಿದೆ. ನಿತೇಶ್ ತಿವಾರಿ ಮಹಾಗ್ರಂಥವನ್ನು ತೆರೆಮೇಲೆ ತರುವುದಕ್ಕೆ ಹೊರಟಿರುವುದು ಅನೇಕ ತಿಂಗಳುಗಳಿಂದ ಸದ್ದು ಮಾಡುತ್ತಲೇ ಇತ್ತು. ರಣ್‌ಬೀರ್ ಕಪೂರ್ ರಾಮನಾಗಿ ನಟಿಸುತ್ತಿದ್ದರೆ, ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಬಿಡುಗಡೆ ಕನ್ನಡಿಗರ ಪಾಲಿಗೆ ಬಹುನಿರೀಕ್ಷಿತವಾಗಿದೆ. ಇದಕ್ಕೆ ಕಾರಣ, ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಯಶ್ ಅವರು ನಟಿಸುತ್ತಿರುವುದು. ಕೆಲವು ಮೂಲಗಳ ಪ್ರಕಾರ ಸಿನಿಮಾ ಮೂರು ಭಾಗಗಳಲ್ಲಿ ಬರಲಿದ್ದು, ರಾವಣನ ಎಂಟ್ರಿ ಎರಡನೇ ಪಾರ್ಟ್ನಲ್ಲಿ ಆಗಲಿದೆಯಂತೆ. ಈಗ ಸೆಟ್ನ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿವೆ. ಇದರ ನಡುವೆಯೇ ರಾಮಾಯಣಕ್ಕೆ ನಟರು ಪಡೆಯುತ್ತಿರುವ ಸಂಭಾವನೆ ಕುರಿತು ಸಾಕಷ್ಟು ಚರ್ಚೆಯಾಗಿತ್ತು. ಅದರಲ್ಲಿಯೂ ಯಶ್ ಅವರು ರಾವಣನ ಪಾತ್ರಕ್ಕಾಗಿ ಯಶ್ ಸುಮಾರು 100 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂದೇ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡುತ್ತಿ. ರಾಮಾಯಣ ಸಿನಿಮಾ ಮೂರು ಭಾಗಗಳಲ್ಲಿ ಬರುತ್ತಿದ್ದು ಅದಕ್ಕಾಗಿ ಯಶ್ ಸಾಕಷ್ಟು ತಯಾರಿ ನಡೆಸಬೇಕು. ಜೊತೆಗೆ ಕಾಲ್‌ಶೀಟ್ ಕೊಡಬೇಕು ಆದ ಕಾರಣ ಯಶ್ ಅಷ್ಟು ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ ಎಂದೂ ಹೇಳಲಾಗಿತ್ತು.
ಆದರೆ ಇದೀಗ ಇನ್ನೊಂದು ವಿಷಯ ಬೆಳಕಿಗೆ ಬಂದಿದೆ. ಅದೇನೆಂದರೆ, ಯಶ್ ರಾಮಾಯಣ ಚಿತ್ರಕ್ಕೆ ಸಂಭಾವನೆನೇ ಪಡೆಯುತ್ತಿಲ್ಲ ಎನ್ನುವುದು! ಹೌದು. ಯಶ್ ಅವರು ಪಡೆಯುತ್ತಿದ್ದಾರೆ ಎನ್ನಲಾದ ಭಾರಿ ಸಂಭಾವನೆ ಕುರಿತು ಚರ್ಚೆಯ ನಡುವೆಯೇ ಈ ವಿಷಯವೀಗ ಬಹಿರಂಗಗೊಂಡಿದೆ. ಹಾಗೆಂದು ಸಂಭಾವನೆ ಪಡೆಯದೇ ಪುಕ್ಕಟೆ ಕೆಲಸ ಮಾಡುತ್ತಾರೆ ಎಂದು ಅರ್ಥವಲ್ಲ, ಬದಲಿಗೆ ಇಲ್ಲೊಂದು ಟ್ವಿಸ್ಟ್ ಇದೆ ಎನ್ನಲಾಗುತ್ತಿದೆ. ಅದೇನೆಂದರೆ ಯಶ್ ಅವರು, ಸಂಭಾವನೆ ಬದಲು ಚಿತ್ರದ ನಿರ್ಮಾಪಕರಾಗುತ್ತಿದ್ದಾರೆ ಎನ್ನುವುದು. ಅಷ್ಟಕ್ಕೂ ಯಶ್ ಅವರಿಗೆ ಇದಾಗಲೇ 80 ಕೋಟಿ ರೂಪಾಯಿಗಳನ್ನು ಕೊಡಲು ನಿರ್ಮಾಪಕರೂ ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡಿತ್ತು. ಆದರೆ ಇದೀಗ ಬಂದಿರುವ ಸುದ್ದಿಯಂತೆ ಯಶ್, ಸಂಭಾವನೆ ಬದಲು ಸಹ ನಿರ್ಮಾಪಕರಾಗಿ ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ.
ಯಶ್, ರಣಬೀರ್-ಸಾಯಿ ಪಲ್ಲವಿ ನಟನೆಯ ರಾಮಾಯಣ ಶೂಟಿಂಗ್ ಸೆಟ್ ಹೀಗಿದೆ ನೋಡಿ: ವಿಡಿಯೋ ವೈರಲ್
ತಮಗೆ ಕೊಡಬೇಕಿರುವ 80 ಕೋಟಿ ರೂಪಾಯಿನ ಸಿನಿಮಾ ಮೇಲೆ ಹೂಡಿಕೆ ಮಾಡುವಂತೆ ಯಶ್ ಕೋರಿದ್ದು, ಈ ಮೂಲಕ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಇದರ ಒಂದು ಪ್ರಯೋಜನವೆಂದರೆ, ಸಿನಿಮಾ ಏನಾದ್ರೂ ಸಕತ್ ಹಿಟ್ ಆಗಿ ಬ್ಲಾಕ್ಬಸ್ಟರ್ ಆದರೆ, ಸಹ ನಿರ್ಮಾಪಕರಿಗೂ ಒಳ್ಳೆಯ ಲಾಭ ಸಿಗಲಿದೆ. ರಾಮಾಯಣದ ಕುರಿತು ಇದಾಗಲೇ ಸಾಕಷ್ಟು ಚಿತ್ರಗಳು ಬಂದು ಹೋಗಿದ್ದರೂ ಈ ಚಿತ್ರ ಸೂಪರ್ಹಿಟ್ ಆಗಲಿದೆ ಎನ್ನುವ ಆಶಾ ಭಾವನೆ ಹೊಂದಿರುವ ಕಾರಣ, ಯಶ್ ಅವರು ಸಂಭಾವನೆ ಬದಲು ಈ ರೀತಿಯ ಡೀಲ್ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಹಾಗೆಂದು ಈ ರೀತಿ ಸಹ ನಿರ್ಮಾಪಕರಾಗಿ ಲಾಭ ಪಡೆದುಕೊಳ್ಳುವುದು ಹೊಸ ವಿಷಯವಲ್ಲ. ಈ ಹಿಂದೆ ರಣಬೀರ್ ಕಪೂರ್ ಕೂಡ ಇದೇ ರೀತಿ ಮಾಡಿದ್ದರು. ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಇವರು ಸಂಭಾವನೆಯನ್ನು ಸಿನಿಮಾ ಮೇಲೆ ಹೂಡಿಕೆ ಮಾಡಿದ್ದರು. ಸಿನಿಮಾ ಗೆದ್ದ ಬಳಿಕ ಬಂದ ಲಾಭದಲ್ಲಿ ಪಾಲು ಪಡೆದಿದ್ದರು. ಹಾಗೆಂದು ಎಲ್ಲರೂ ಹೀಗೆಯೇ ಮಾಡುತ್ತಾರೆ ಎಂದೇನಲ್ಲ. ದುರದೃಷ್ಟವಶಾತ್ ಸಿನಿಮಾ ಸೋತರೆ ಹೀಗೆ ಹೂಡಿಕೆ ಮಾಡಿದವರಿಗೂ ನಷ್ಟವೇ. ಸಿನಿಮಾದ ಮೇಲೆ ಅಷ್ಟು ವಿಶ್ವಾಸವಿದ್ದರೆ ಮಾತ್ರ ಹೀಗೆ ಹೂಡಿಕೆ ಮಾಡಲು ಸಾಧ್ಯ.
ಸೀರಿಯಲ್ ತಾರೆಯರ ಯುಗಾದಿ ಸಂಭ್ರಮದ ಶೂಟಿಂಗ್ ಹೇಗಿತ್ತು? ತೆರೆಮರೆಯ ಝಲಕ್ ಇಲ್ಲಿದೆ ನೋಡಿ...