
ಸದ್ಯ ಕನ್ನಡಿಗರ ಪಾಲಿಗೆ ‘ತಮಿಳು ಹಾಸನ್’ ಆಗಿರುವ ಕಮಲ್ ಅವರ ‘ಥಗ್ ಲೈಫ್’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗುವ ಎಲ್ಲ ಸೂಚನೆಗಳೂ ಎದ್ದು ಕಾಣುತ್ತಿವೆ. ಕರ್ನಾಟಕ ಬಿಟ್ಟು ವಿಶ್ವಾದ್ಯಂತ ರಿಲೀಸ್ ಆಗಿರುವ ಸಿನಿಮಾಕ್ಕೆ ತವರು ನೆಲ ತಮಿಳ್ನಾಡಿನಲ್ಲೇ ಕಟುಟೀಕೆ ವ್ಯಕ್ತವಾಗುತ್ತಿದೆ. ‘ದುಡ್ಡು ಹಾಳು’, ‘ತಾಳ್ಮೆ ಪರೀಕ್ಷೆ’ ಎಂದು ಒಂದೇ ವಾಕ್ಯದಲ್ಲಿ ಸಿನಿಮಾದ ವಿಮರ್ಶೆ ಮಾಡಿ ಈ ಚಿತ್ರ ನೆಲಕ್ಕಚ್ಚುವ ಸೂಚನೆ ನೀಡಿದ್ದಾರೆ.
ತಮಿಳ್ನಾಡಿನ 550 ಸ್ಕ್ರೀನ್ ಹಾಗೂ ವಿಶ್ವಾದ್ಯಂತ ಒಟ್ಟು 2500 ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆ ಕಂಡಿದೆ. ಕಮಲ್ ಅವರ ಫ್ಲಾಪ್ ಸಿನಿಮಾಗಳಾದ ‘ಇಂಡಿಯನ್ 2’ಗಿಂತಲೂ ಮೊದಲ ದಿನದ ಕಲೆಕ್ಷನ್‌ನಲ್ಲಿ ಇಳಿಕೆ ಕಂಡುಬಂದಿದೆ ಎಂದು ತಜ್ಞರು ತಿಳಿಸಿದ್ದಾರೆ. ಅಡ್ವಾನ್ಸ್ ಬುಕಿಂಗ್‌ನಲ್ಲಿ ತಮಿಳುನಾಡಿನಲ್ಲಿ ಅಂದಾಜು ಮೂರೂವರೆ ಕೋಟಿಗಳಷ್ಟು ಆದಾಯ ಬಂದದ್ದೇ ಪ್ಲಸ್.
ಉಳಿದಂತೆ ಅತಿ ಹೆಚ್ಚು ಕಲೆಕ್ಷನ್ ಆಗಬೇಕಿದ್ದ ತಮಿಳುನಾಡಿನಲ್ಲೇ ಸಿನಿಮಾದ ಮೊದಲ ದಿನದ ಗಳಿಕೆ ಕೇವಲ 2.8 ಕೋಟಿಗಳಷ್ಟೇ ಇದೆ ಎನ್ನಲಾಗಿದೆ. ಇನ್ನುಳಿದ ಭಾಗಗಳಲ್ಲಿ ಪರಿಸ್ಥಿತಿ ಮತ್ತಷ್ಟು ಹೀನವಾಗಿದೆ. ಸಿನಿಮಾ ನೋಡಿದವರಲ್ಲಿ ಹೆಚ್ಚಿನವರು ‘ಥಗ್ ಲೈಫ್’ ಗೆ 1.5/5, 2.5/5 ರಷ್ಟು ಕಡಿಮೆ ರೇಟಿಂಗ್ ಕೊಟ್ಟಿದ್ದಾರೆ. ಇನ್ನೂ ಕೆಲವರು, ‘ಕಮಲ್ ಅವರ ಈವರೆಗಿನ ಸಿನಿಮಾಗಳಲ್ಲೇ ಇದು ಕಳಪೆ’ಎಂದು ನಿರಾಸೆ ವ್ಯಕ್ತಪಡಿಸಿದ್ದಾರೆ.
ನಿರೀಕ್ಷೆ ಹುಟ್ಟಿಸಿದ್ದ ಅಂಶಗಳು
- ನಾಯಗನ್ ಬಳಿಕ 38 ವರ್ಷಗಳ ನಂತರ ಕಮಲ್ - ಮಣಿರತ್ನಂ ಕಾಂಬಿನೇಶನ್ ಸಿನಿಮಾ
- ಕುತೂಹಲ ಮೂಡಿಸಿದ್ದ ಕಮಲ್ ಪಾತ್ರ ಪರಿಚಯದ ಟೀಸರ್
- ಒಂದೊಳ್ಳೆ ಕಥೆಯ ನಿರೀಕ್ಷೆ
- ಕಮಲ್ ಜೊತೆಗೆ ಸಿಂಬು, ತ್ರಿಶಾ ಕಾಂಬಿನೇಶನ್
- ಎ ಆರ್ ರೆಹಮಾನ್ ಸಂಗೀತ
- ಕಮಲ್, ಮಣಿರತ್ನಂ, ಉದಯನಿಧಿ ಸ್ಟಾಲಿನ್‌ನಂಥಾ ದಿಗ್ಗಜರ ನಿರ್ಮಾಣ
- ಅದ್ದೂರಿ ಮೇಕಿಂಗ್
ಹೊಡೆತ ನೀಡಿದ ಅಂಶಗಳು
- ಕಮಲ್ ಭಾಷೆಯ ಅಂದಾಭಿಮಾನದಲ್ಲಿ ಕರ್ನಾಟಕದಲ್ಲಿ ರಿಲೀಸ್‌ಗೆ ತಡೆಯಾದದ್ದು ಮೊದಲ ಹೊಡೆತ
- ತಪ್ಪು ಮಾತಿಗೆ ಕ್ಷಮೆ ಕೇಳಲಾರೆ ಎಂಬ ಕಮಲ್ ಉದ್ಧಟತನ
- ಕಮಲ್ ಮೊಂಡಾಟದಿಂದ ಅವರ ಅಭಿಮಾನಿಗಳಿಗೂ ಇರಿಸು ಮುರಿಸು
- ಕನ್ನಡಿಗರ ನಿರಾಸಕ್ತಿ
ಸಿನಿಮಾ ನೋಡಿದವರ ವಿಮರ್ಶೆ
- ಔಟ್‌ಡೇಟೆಡ್ ಕಥೆ, ದುರ್ಬಲ ಪಾತ್ರ ಚಿತ್ರಣ, ಭಾವಹೀನ ನಿರೂಪಣೆ
- ಇದನ್ನು ನೋಡಿದಮೇಲೆ ಅತಿ ಕೆಟ್ಟ ಸಿನಿಮಾ ಎನಿಸಿಕೊಂಡ ವಾರಿಸು ಸಹ ಚೆನ್ನಾಗಿದೆ ಅನಿಸುತ್ತೆ.
- ಸೂಪರ್ ಫ್ಲಾಪ್ ಸಿನಿಮಾ ಇಂಡಿಯನ್ 2 ಇದಕ್ಕಿಂತ ಬೆಟರ್
- ಅನಾವಶ್ಯಕ ಎಳೆತ, ಲವಲವಿಕೆಯ ಕೊರತೆ
- ಇಡೀ ಸಿನಿಮಾದಲ್ಲಿ ಕಮಲ್ ಪಾತ್ರಕ್ಕೆ ಅತಿಯಾದ ಪ್ರಾಧಾನ್ಯತೆ
- ಎಳೆದು ತಂದಂತೆ ತೋರುವ ತ್ರಿಶಾ ಪಾತ್ರ
- ನಾಯಗನ್‌ನಂತೆ ಮಣಿ ಕಮಲ್ ಮ್ಯಾಜಿಕ್ ನಡೆಯದೇ ನಿರೀಕ್ಷೆ ಟುಸ್ ಪಟಾಕಿ
10 ವರ್ಷಗಳಲ್ಲಿ ಕಮಲ್ ಸಿನಿಮಾಗಳ ಏಳು ಬೀಳು
1. ಉತ್ತಮ ವಿಲನ್ - ವಿವಾದಿತ ಚಿತ್ರ - ಸೋಲು
2. ಪಾಪನಾಸಂ - ವಿಮರ್ಶಕರಿಂದ ಮೆಚ್ಚುಗೆ- ಸಾಮಾನ್ಯ ಗಳಿಕೆ
3. ತೂಂಗಾ ವನಂ - ಮಿಶ್ರ ಪ್ರತಿಕ್ರಿಯೆ - ಸೋಲು
4. ವಿಶ್ವರೂಪಂ 2 - ಮೆಚ್ಚುಗೆ - ಗೆಲುವು
5. ವಿಕ್ರಂ - ಭರಪೂರ ಮೆಚ್ಚುಗೆ - ಬ್ಲಾಕ್ ಬಸ್ಟರ್ ಹಿಟ್
6. ಇಂಡಿಯನ್ 2 - ಕಟು ಟೀಕೆ - ಸೋಲು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.