
ಸಕಲಕಲಾವಲ್ಲಭ ಕಮಲ್ ಹಾಸನ್(Kamal Haasan) ಸದ್ಯ ವಿಕ್ರಮ್(Vikram) ಸಿನಿಮಾದ ಸಕ್ಸಸ್‌ನಲ್ಲಿ ತೇಲುತ್ತಿದ್ದಾರೆ. ವಿಕ್ರಮ್ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸುತ್ತಿದೆ. ಕೋಟಿ ಕೋಟಿ ಕಲೆಕ್ಷನ್ ಮಾಡಿರುವ ವಿಕ್ರಮ್ ಈಗಾಗಲೇ ನಾಲ್ಕು ದಿನಗಳಲ್ಲಿ 175 ಕೋಟಿ ರೂಪಾಯಿ ಬಾಚಿಕೊಂಡಿದೆ. ಅಂದಹಾಗೆ ಸಿನಿಮಾ ರಿಲೀಸ್ ಆಗಿ 2ನೇ ದಿನಕ್ಕೆ ವಿಕ್ರಮ್ 100 ಕೋಟಿ ಕ್ಲಬ್ ಸೇರುವ ಮೂಲಕ ಅಚ್ಚರಿ ಮೂಡಿಸಿತ್ತು. ಇದೇ ಖುಷಿಯಲ್ಲಿ ಕಮಲ್ ಹಾಸನ್ ನಿರ್ದೇಶಕರಿಗೆ ದುಬಾರಿ ಗಿಫ್ಟ್ ನೀಡಿದ್ದಾರೆ.
ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿರುವ ವಿಕ್ರಮ್ ಸಿನಿಮಾಗೆ ಲೋಕೇಶ್ ಕನಗರಾಜ್(Lokesh kanagaraj) ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾ ಗೆದ್ದ ಖುಷಿಗೆ ಕಮಲ್ ಹಾಸನ್ ಲೋಕಶ್ ಅವರಿಗೆ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ನಟ ಕಮಲ್ ಹಾಸನ್ ನಿರ್ದೇಶಕ ಲೋಕೇಶ್ ಕನಗರಾಜ್ ಅವರಿಗೆ ಕೀ ಹಸ್ತಾಂತರಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಂದಹಾಗೆ ಕಮಲ್ ಹಾಸನ್ ನಿರ್ದೇಶಕ ಲೋಕೇಶ್ ಕನಗರಾಜ್ ಅವರಿಗೆ ಲೆಕ್ಸಸ್ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ. ಕಾರ್ ಗಿಫ್ಟ್ ಮಾಡುವ ಜೊತೆಗೆ ಲೋಕೇಶ್ ಅವರಿಗೆ ಪತ್ರವನ್ನು ಬರೆದಿದ್ದಾರೆ. ಕಮಲ್ ಹಾಸನ್ ಬರೆದ ಪತ್ರವನ್ನು ನಿರ್ದೇಶಕ ಲೋಕೇಶ್ ಕನಗರಾಜ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಎರಡು ಪುಟಗಳ ಪತ್ರವನ್ನು ಕಮಲ್ ನಿರ್ದೇಶಕರಿಗೆ ಬರೆದಿದ್ದಾರೆ. ಈ ಪತ್ರಕ್ಕೆ ಲೋಕೇಶ್ ಲೈಫ್ ಟೈಮ್ ಸೆಟಲ್‌ಮೆಂಟ್ ಪತ್ರ ಎಂದು ಕ್ಯಾಪ್ಷನ್ ನೀಡಿದ್ದಾರೆ. ಈ ಪತ್ರ ಓದಿ ನಾನು ಎಷ್ಟು ಭಾವುಕನಾಗಿದ್ದೇನೆ ಎಂಬುದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.ಈ ಪತ್ರಕ್ಕೆ ಅಭಿಮಾನಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ವಿಕ್ರಮ್ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾದ ಬಗ್ಗೆ ಕಮಲ್ ವಿಡಿಯೋ ಮಾಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಎಲ್ಲಾ ಭಾಷೆಯಲ್ಲೂ ಧನ್ಯವಾದ ತಿಳಿಸಿರುವ ಕಮಲ್ ಕನ್ನಡದಲ್ಲೂ ಮಾತನಾಡಿದ್ದಾರೆ. ಕನ್ನಡ ಪ್ರೇಕ್ಷಕರು ಒಳ್ಳೆಯ ಸಿನಿಮಾವನ್ನು ಯಾವಾಗಲು ಬೆಂಬಲಿಸುತ್ತಾ ಬಂದಿದ್ದಾರೆ. ಹಾಗೆಯೇ ಒಳ್ಳೆಯ ನಟರನ್ನು ಬೆಂಬಲಿಸಿದ್ದಾರೆ ಎಂದು ಕಾಲಿವುಡ್ ಸ್ಟಾರ್ ಕಮಲ್ ಹಾಸನ್ ವಿಕ್ರಮ್ ಸಿನಿಮಾದ ಸಕ್ಸಸ್ ಬಗ್ಗೆ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಹೃದಯ ಗೆದ್ದಿದ್ದಾರೆ.
'ವಿಕ್ರಮ್' ಸೂಪರ್ ಸಕ್ಸಸ್; ಕನ್ನಡದಲ್ಲಿಯೇ ಧನ್ಯವಾದ ತಿಳಿಸಿದ ನಟ ಕಮಲ್ ಹಾಸನ್
ವಿಕ್ರಮ್ ತಮಿಳು ನಾಡಿನಲ್ಲಿ ಈ ವರ್ಷ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳಲ್ಲಿ ಮೂರನೇ ಸಿನಿಮಾ ಇದಾಗಿದೆ. ಮಲಿಮೈ ಮತ್ತು ಬೀಸ್ಟ್ ಸಿನಿಮಾ ಬಳಿಕ ವಿಕ್ರಮ್ ಹೆಚ್ಚು ಗಳಿಕೆ ಮಾಡಿದೆ.ಇನ್ನು ವಿಶೇಷ ಎಂದರೆ 100 ಕೋಟಿ ಕ್ಲಬ್ ಸೇರಿದ ಕಮಲ್ ಹಾಸನ್ 3ನೇ ಸಿನಿಮಾ ಇದಾಗಿದೆ. ದಶಾವತಾರಮ್ ಮತ್ತು ವಿಶ್ವರೂಪಮ್ ಸಿನಿಮಾ ಬಳಿಕ ವಿಕ್ರಮ್ ಸಿನಿಮಾ ಅತೀ ಹೆಚ್ಚು ಗಳಿಕೆ ಮಾಡಿದೆ. ವಿದೇಶದಲ್ಲೂ ವಿಕ್ರಮ್ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಯುಎಸ್‌ಎನಲ್ಲೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ.
ಡಾ.ರಾಜ್-ಕಮಲ್ ಹಾಸನ್ ನಡುವೆ ಹೇಗಿತ್ತು ಸ್ನೇಹ? ಇಂಟ್ರಸ್ಟಿಂಗ್ ಘಟನೆ ಬಿಚ್ಚಿಟ್ಟ 'ವಿಕ್ರಮ್' ನಟ
ವಿಕ್ರಮ್ ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆಗೆ ದಕ್ಷಿಣ ಭಾರತದ ಖ್ಯಾತ ನಟರಾದ ಫಹಾದ್ ಫಾಸಿಲ್ ಮತ್ತು ವಿಜಯ್ ಸೇತುಪತಿ ಕೂಡ ನಟಿಸಿದ್ದಾರೆ. ಇನ್ನು ಕಾಲಿವುಡ್‌ನ ಸ್ಟಾರ್ ನಟ ಸುರ್ಯ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರತಿಯೊಬ್ಬರ ಪಾತ್ರಕ್ಕೂ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸುತ್ತಿರುವ ವಿಕ್ರಮ್ ಮತ್ತಷ್ಟು ಕೋಟಿ ಬಾಚಿಕೊಳ್ಳಲಿದೆ ಎಂದು ಕಾದುನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.