ಟಾಲಿವುಡ್ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜ್(Ram Charan) ಹುಟ್ಟುಹಬ್ಬದ(Birthday) ಸಂಭ್ರಮದಲ್ಲಿದ್ದಾರೆ. ಗೆಳೆಯ ರಾಮ್ ಚರಣ್ ಹುಟ್ಟುಹಬ್ಬವನ್ನು ಜೂ.ಎನ್ ಟಿ ಆರ್ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ.
ಟಾಲಿವುಡ್ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜ್(Ram Charan) ಹುಟ್ಟುಹಬ್ಬದ(Birthday) ಸಂಭ್ರಮದಲ್ಲಿದ್ದಾರೆ. ರಾಮ್ ಚರಣ್ ಅವರಿಗೆ ಇಂದು (ಮಾರ್ಚ್ 27) ಡಬಲ್ ಸಂಭ್ರಮ. ಭಾರಿ ನಿರೀಕ್ಷೆಯ ಆರ್ ಆರ್ ಆರ್ ಸಿನಿಮಾದ ಸೂಪರ್ ಸಕ್ಸಸ್ ಮತ್ತು ಹುಟ್ಟುಹಬ್ಬ ಎರಡು ಒಟ್ಟಿಗೆ ಬಂದಿರುವುದು ರಾಮ್ ಚರಣ್ ಸಂತಸ ಮತ್ತಷ್ಟು ಹೆಚ್ಚಿಸಿದೆ. ರಾಮ್ ಚರಣ್ ಅವರಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಶುಭಾಶಯ ತಿಳಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಸುರಿಮಳೆಯೇ ಬರುತ್ತಿದೆ.
ಅಂದಹಾಗೆ ರಾಮ್ ಚರಣ್ ಹುಟ್ಟುಹಬ್ಬವನ್ನು ಆರ್ ಆರ್ ಆರ್ ಟೀಂ(RRR) ಅದ್ದೂರಿಯಾಗಿ ಆಚರಣೆ ಮಾಡಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಗೆಳೆಯ ರಾಮ್ ಚರಣ್ ಹುಟ್ಟುಹಬ್ಬವನ್ನು ಜೂ.ಎನ್ ಟಿ ಆರ್ ಆಚರಣೆ ಮಾಡಿದ್ದಾರಂತೆ. ತಾರಕ್ ರಾಮ್(Jr NTR) ನಿನ್ನ ರಾತ್ರಿಯೇ (ಮಾರ್ಚ್ 26) ಅದ್ದೂರಿ ಪಾರ್ಟಿ ಏರ್ಪಡಿಸಿದ್ದರು. ಈ ಪಾರ್ಟಿಯಲ್ಲಿ ಅನೇಕ ಕಲಾವಿದರು ಭಾಗಿಯಾಗಿದ್ದರು. ಜೂ.ಎನ್ ಟಿ ಆರ್ ಮನೆ ಎಂಟ್ರಿ ಕೊಡುತ್ತಿರುವಾಗ ಕ್ಯಾಮರಾ ಕಣ್ಣಿಗೆ ಸೆರೆಯಾದ ಅನೇಕ ಕಲಾವಿದರ ಫೋಟೋಗಳು ವೈರಲ್ ಆಗಿವೆ. ರಾಮ್ ಚರಣ್ ಹುಟ್ಟುಹಬ್ಬದ ಜೊತೆಗೆ ಆರ್ ಆರ್ ಆರ್ ಸಕ್ಸಸ್ ಅನ್ನು ಆಚರಣೆ ಮಾಡಿದ್ದಾರೆ.
ಇನ್ನು ವಿಶೇಷ ಎಂದರೆ ಜೂ. ಎನ್ ಟಿ ಆರ್ ಪತ್ನಿ ಪ್ರಣತಿ ಹುಟ್ಟುಹಬ್ಬ ಕೂಡ ಮಾರ್ಚ್ 26ರಂದು. ಹಾಗಾಗಿ ಎಲ್ಲಾ ಸಂಭ್ರಮವನ್ನು ಒಟ್ಟಿಗೆ ಆಚರಣೆ ಮಾಡಿದ್ದಾರೆ. ಈ ಬಗ್ಗೆ ಜೂ.ಎನ್ ಟಿ ಆರ್ ಚಿತ್ರದ ಪ್ರಮೋಷನ್ ವೇಳೆ ಹೇಳಿದ್ದರು. ರಾಮ್ ಚರಣ್ ಹುಟ್ಟುಹಬ್ಬಕ್ಕೂ ಒಂದು ದನ ಮೊದಲು ಪ್ರಣತಿ ಹುಟ್ಟುಹಬ್ಬವಿದೆ ಎಂದಿದ್ದರು. 'ಮಾರ್ಚ್ 26ರ ರಾತ್ರಿವರೆಗೂ ನನ್ನ ಪತ್ನಿ ಪ್ರಣತಿ ಹುಟ್ಟುಹಬ್ಬ ಆಚರಣೆ ಮಾಡುತ್ತೇನೆ. ಮಾರ್ಚ್ 27ರಂದು ರಾಮ್ ಚರಣ್ ಹುಟ್ಟುಹಬ್ಬ ಆಚರಣೆಗೆ ತೆರಳುತ್ತೇನೆ' ಎಂದು ಹೇಳಿದ್ದರು.
'RRR' ಕಲೆಕ್ಷನ್; 2ನೇ ದಿನವೂ ಭರ್ಜರಿ ಗಳಿಕೆ ಮಾಡಿದ ರಾಜಮೌಳಿ ಸಿನಿಮಾ
ಹುಟ್ಟುಹಬ್ಬದ ವಿಶೇಷವಾಗಿ ರಾಮ್ ಚರಣ್ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಎಲ್ಲಾ ಭಾಷೆಯಲ್ಲೂ ಧನ್ಯವಾದ ತಿಳಿಸಿ ಪೋಸ್ಟ್ ಮಾಡಿದ್ದಾರೆ. ಕನ್ನಡದಲ್ಲೂ ರಾಮ್ ಚರಣ್ ಧನ್ಯವಾದ ತಿಳಿಸಿ ಪೋಸ್ಟ್ ಮಾಡಿದ್ದಾರೆ. 'ಎಸ್ ಎಸ್ ರಾಜಮೌಳಿ ಅವರ ಆರ್ ಆರ್ ಆರ್ ಗಾಗಿ ಅಪಾರ ಪ್ರೀತಿ ಮತ್ತು ಮೆಚ್ಚುಗೆಗೆ ಧನ್ಯವಾದಗಳು. ಅತ್ಯಂತ ಉತ್ಸಾಹದಿಂದ ಚಿತ್ರಮಂದಿರಗಳಲ್ಲಿ ಚಿತ್ರವನ್ನು ವೀಕ್ಷಿಸಿದ ಪ್ರತಿಯೊಬ್ಬರಿಗೂ ನನ್ನ ಹೃದಯ ಪೂರ್ವಕ ಧನ್ಯವಾದಗಳು. ಈ ಅದ್ಭುತ ಹುಟ್ಟುಹಬ್ಬದ ಉಡುಗೊರೆಯನ್ನು ನಾನು ನಮ್ರತೆಯಿಂದ ಸ್ವೀಕರಿಸುತ್ತೇನೆ' ಎಂದು ಹೇಳಿದ್ದಾರೆ.
RRR ಅಂದರೇನು? ಸಿನಿಮಾಗೆ ಸಂಬಂಧಿಸಿದ ಕೆಲವು ಇಂಟರೆಸ್ಟಿಂಗ್ ವಿಷಯಗಳು
ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಇಬ್ಬರು ಉತ್ತಮ ಸ್ನೇಹಿತರು. ಆರ್ ಆರ್ ಆರ್ ಸಿನಿಮಾಗೂ ಮೊದಲು ಸಹ ಇಬ್ಬರ ನಡುವೆ ಉತ್ತಮವಾದ ಸ್ನೇಹ ಸಂಬಂಧವಿತ್ತು. ಸಿನಿಮಾ ಬಳಿಕ ಇಬ್ಬರ ಸ್ನೇಹ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ.