
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ (Amitabh Bachchan) ಗೆ 83 ವರ್ಷ. ನಟಿ ರೇಖಾಗೆ 71 ವರ್ಷ. ಇಬ್ಬರೂ 1981ರಲ್ಲಿ ಬಿಡುಗಡೆಯಾದ ಸಿಲ್ಸಿಲಾ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ರು. ಆ ನಂತ್ರ ಇಬ್ಬರು ಮುಖಾಮುಖಿ ಕೂಡ ಆಗ್ಲಿಲ್ಲ. ಇಬ್ಬರು ತಮ್ಮ ದಾರಿಯಲ್ಲಿ ಮುಂದೆ ನಡೆದಿದ್ರೂ ಅಮಿತಾಬ್ ಬಚ್ಚನ್ ಹಾಗೂ ರೇಖಾ (Rekha) ಪ್ರೇಮ ಕಥೆ ಈಗ್ಲೂ ಸುದ್ದಿಯಲ್ಲಿರುತ್ತೆ. ಆಗಾಗ ಅವರಿಬ್ಬರ ಬಗ್ಗೆ ಒಂದೊಂದೇ ವಿಷ್ಯಗಳು ಹೊರಗೆ ಬರ್ತಾ ಇರುತ್ವೆ. ಮದುವೆ ಆದ್ಮೇಲೂ ರೇಖಾ ಕಡೆ ವಾಲಿದ್ದ ಪತಿಯನ್ನು ಸರಿದಾರಿಗೆ ಎಳೆ ತಂದಿದ್ದು ಪತ್ನಿ ಜಯಾ ಬಚ್ಚನ್. ಇದು ಎಲ್ಲರಿಗೂ ತಿಳಿದಿರೋ ವಿಷ್ಯ. ಅಮಿತಾಬ್ ಬಚ್ಚನ್ ಹಾಗೂ ರೇಖಾ ಮಧ್ಯೆ ಏನೋ ಇದೆ ಅಂತ ಮಾತನಾಡ್ತಿದ್ದ ವೇಳೆ ಬಿಡುಗಡೆಯಾಗಿದ್ದು ಸಿಲ್ಸಿಲಾ ಸಿನಿಮಾ. ನಿರ್ದೇಶಕ ಯಶ್ ಚೋಪ್ರಾ ಸಿಲ್ಸಿಲಾ ಸಿನಿಮಾ ಮಾಡಿದ್ದು, ಈಗ್ಲೂ ಇದು ನಿಜ ಕಥೆ ಎನ್ನಲಾಗುತ್ತೆ. ಹೊರಗೆ ಏನು ನಡೀತಾ ಇತ್ತೋ ಅದನ್ನೇ ಸಿನಿಮಾ ಮಾಡಲಾಗಿತ್ತು, ನಿಜ ಜೀವನದಲ್ಲೂ ಜಯಾ – ಬಚ್ಚನ್ ಪತಿ – ಪತ್ನಿ, ರೇಖಾ ಪ್ರೇಯಸಿ. ಸಿನಿಮಾದಲ್ಲೂ ಅದೇ ತೋರಿಸಲಾಗಿದೆ ಎನ್ನುವ ಮಾತಿದೆ. ಈ ಸಿನಿಮಾದಲ್ಲಿ ನಟಿಸಲು ಜಯಾ ಒಂದು ಷರತ್ತು ವಿಧಿಸಿದ್ರು ಎನ್ನುವ ಸುದ್ದಿ ಈಗ ಮತ್ತೆ ಚರ್ಚೆಗೆ ಬಂದಿದೆ.
ಸಂಜಯ್ ಕುಮಾರ್ ಅವರ ಜೀವನಚರಿತ್ರೆ ಬರೆದಿರುವ ಲೇಖಕ ಹನೀಫ್ ಜವೇರಿ ಮತ್ತು ಅವರ ಸೊಸೆ ಜಿಗ್ನಾ ಸಂದರ್ಶನವೊಂದರಲ್ಲಿ ಇದನ್ನು ನೆನಪು ಮಾಡ್ಕೊಂಡಿದ್ದಾರೆ. ವಿಕ್ಕಿ ಲಾಲ್ವಾನಿಗೆ ನೀಡಿದ ಸಂದರ್ಶನದಲ್ಲಿ ಹನೀಫ್ ಜವೇರಿ ಈ ವಿಷ್ಯ ಹೇಳಿದ್ದಾರೆ. ಈ ಸಿನಿಮಾದಲ್ಲಿ ಸ್ಮಿತಾ ಪಾಟೀಲ್ ಮತ್ತು ಪರ್ವೀನ್ ಬಾಬಿ ನಟಿಸಬೇಕಾಗಿತ್ತು. ಆದ್ರೆ ಅಮಿತಾಭ್ ಬಚ್ಚನ್ ಮತ್ತು ರೇಖಾ ಈಗಾಗಲೇ ಶೂಟಿಂಗ್ ಶುರು ಮಾಡಿದ್ರು. ಹೆಂಡತಿ ಸ್ಥಾನಕ್ಕೆ ಜಯಾ ಅವ್ರನ್ನು ಯಶ್ ಚೋಪ್ರಾ ಬಯಸಿದ್ರು. ಸಂಜಯ್ ಕುಮಾರ್, ಜಯಾರನ್ನು ಸಹೋದರಿಯಂತೆ ನೋಡ್ತಿದ್ದ ಕಾರಣ, ಜಯಾರನ್ನು ಒಪ್ಪಿಸುವ ಜವಾಬ್ದಾರಿ ಸಂಜಯ್ ಕುಮಾರ್ ತಲೆಗೆ ಬಂದಿತ್ತು.
ಆ ನುಡಿಯನ್ನು ದೇವರು ಕೊಟ್ಟಿಲ್ಲ, ಕಾಂತಾರದ ಬಗ್ಗೆ ಪ್ರಶ್ನೆಯೇ ಬಂದಿಲ್ಲ: ಪೆರಾರ ಆಡಳಿತ ಮಂಡಳಿ ಸ್ಪಷ್ಟೀಕರಣ!
ಜಯಾ ಆರಂಭದಿಂದಲೂ ಸಿನಿಮಾದಲ್ಲಿ ನಟಿಸಲು ಒಪ್ಪಿಗೆ ನೀಡಿರಲಿಲ್ಲ. ಸಿನಿಮಾದಲ್ಲಿ ಜಯಾ, ಬಚ್ಚನ್ ಪತ್ನಿಯಾಗಿರ್ತಾರೆ, ಕೊನೆಯಲ್ಲಿ ನಟ, ತನ್ನ ಪ್ರೇಯಸಿ ಬಿಟ್ಟು ಪತ್ನಿ ಬಳಿ ಬರ್ತಾರೆ ಎನ್ನುವ ಕಥೆಯನ್ನು ಸಂಪೂರ್ಣವಾಗಿ ಕೇಳಿದ್ಮೇಲೆ ಜಯಾ, ನಟಿಸಲು ಒಪ್ಪಿಕೊಂಡಿದ್ರು. ಆದ್ರೆ ಜಯಾ ಷರತ್ತು ವಿಧಿಸಿದ್ರಂತೆ. ಸಂಜಯ್ ಕುಮಾರ್ ಮಾತಿಗೆ ಒಪ್ಪಿ ಜಯಾ ಸಿನಿಮಾ ಮಾಡಲು ಮುಂದಾದ್ರೂ ಅವರದ್ದೊಂದು ಷರತ್ತಿತ್ತು. ಸಿಲ್ಸಿಲಾ ಸಿನಿಮಾದ ಶೂಟಿಂಗ್ ಇರಲಿ ಬಿಡಲಿ, ಜಯಾ ಸೆಟ್ ನಲ್ಲಿ ಇರ್ತೇನೆ ಎಂದಿದ್ರು. ಇದಕ್ಕೆ ಕಾರಣ ಏನು ಅಂತ ಸಂದರ್ಶಕರು ಕೇಳಿದಾಗ, ರೇಖಾ ಕಾರಣಕ್ಕೆ ಎಂದು ಹನೀಫ್ ಹೇಳಿದ್ದಾರೆ.
ಮುತ್ತಿನಿಂದಲೇ ಮಾಡಿದ ಬ್ಲೌಸ್ ತೊಟ್ಟ ನಟಿ.. ಮಾದಕ ನೋಟಕ್ಕೆ ಮರುಳಾಗದ ಮಹಾ'ಪುರುಷ'ರು ಯಾರು?
ಆ ಟೈಂನಲ್ಲಿ ಅಮಿತಾಬ್ ಬಚ್ಚನ್ ಎಲ್ಲಿಗೆ ಹೋದ್ರೂ ಸುದ್ದಿ ಆಗ್ತಿತ್ತು. ಈ ವಿಷ್ಯ ಜಯಾ ಕಿವಿಗೂ ಬಿದ್ದಿತ್ತು. ಸಿಲ್ಸಿಲಾ ಸಿನಿಮಾ ಶೂಟಿಂಗ್ ವೇಳೆ ಅಮಿತಾಬ್ ಬಚ್ಚನ್ ಬೆನ್ನಿಗೆ ಅಂಟಿಕೊಂಡು ಅವರು ಹೋದಲ್ಲೆಲ್ಲ ಹೋಗ್ತಾ ಇದ್ರು. ಬಚ್ಚನ್, ರೇಖಾ ಪಾಲಾಗಬಾರದು ಎಂಬುದೇ ಜಯಾ ಮುಖ್ಯ ಉದ್ದೇಶವಾಗಿದ್ದು. ಸದಾ ಜಯಾ, ಬಚ್ಚನ್ ಮೇಲೆ ಕಣ್ಣಿಟ್ಟಿದ್ದರು. ನಟಿ ರೇಖಾ ಕೂಡ ಸಿನಿಮಾ ನಂತ್ರ ಇದನ್ನು ಟ್ರಯಾಂಗಲ್ ಲವ್ ಸ್ಟೋರಿ ಎಂದಿದ್ರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.