ಸೌಂದರ್ಯಾಗೆ ಜಗಪತಿ ಬಾಬು 'ಲವ್ ಲೆಟರ್' ಬರೆದಿದ್ದು ನಿಜವೇ? ದಶಕಗಳ ಕಾಲ ಕಾಡಿದ ರಹಸ್ಯಕ್ಕೆ ಉತ್ತರಿಸಿದ ಆ ನಟ!

Published : Apr 26, 2026, 01:44 PM IST
Jagapathi Babu Soundarya

ಸಾರಾಂಶ

ಇತ್ತೀಚೆಗೆ ನಡೆದ ಒಂದು ಮಸಾಲೆಯುಕ್ತ ಸಂದರ್ಶನದಲ್ಲಿ ಈ ಹಳೆಯ ಪ್ರಶ್ನೆ ಜಗಪತಿ ಬಾಬು ಅವರ ಮುಂದೆ ಬಂತು. "ನೀವು ನಿಜವಾಗಿಯೂ ಸೌಂದರ್ಯಗೆ ಲವ್ ಲೆಟರ್ ಬರೆದಿದ್ದೀರಾ?" ಎಂದು ಕೇಳಿದಾಗ, ಜಗಪತಿ ಬಾಬು ಒಂದು ಕ್ಷಣ ನಕ್ಕು ನಂತರ ಗಂಭೀರವಾದರು. ಮುಂದೆ ಈ ನಟ ಹೇಳಿದ್ದೇನು?

ಕೊನೆಗೂ ಶಾಕಿಂಗ್‌ ಸತ್ಯ ಬಿಚ್ಚಿಟ್ಟ ನಟ ಜಗಪತಿ ಬಾಬು

ಬೆಳ್ಳಿ ಪರದೆಯ ಮೇಲೆ 'ಮಹಾನಟಿ' ಎಂದೇ ಕರೆಸಿಕೊಂಡವರು ನಟಿ ಸೌಂದರ್ಯ. ಅವರ ಮುಗ್ಧ ನೋಟ, ಅದ್ಭುತ ನಟನೆ ಮತ್ತು ಘನತೆಗೆ ಮಾರುಹೋಗದ ಸಿನಿಮಾ ಪ್ರೇಮಿಗಳೇ ಇಲ್ಲ. ಕೇವಲ 32ನೇ ವಯಸ್ಸಿಗೆ ಅವರು ನಮ್ಮನ್ನು ಅಗಲಿದ್ದರೂ, ಇಂದಿಗೂ ಅವರ ಸ್ಥಾನ ಮಾತ್ರ ಯಾರಿಗೂ ತುಂಬಲು ಸಾಧ್ಯವಾಗಿಲ್ಲ. ಆದರೆ, ಅಂದು ಸೌಂದರ್ಯ (Soundarya) ಕೆರಿಯರ್‌ನ ಉತ್ತುಂಗದಲ್ಲಿದ್ದಾಗ ಒಂದು ಸುದ್ದಿ ಇಡೀ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿತ್ತು. ಅದೇ ನಟ ಜಗಪತಿ ಬಾಬು (Jagapathi Babu) ಅವರು ಸೌಂದರ್ಯಗೆ ಪ್ರೇಮ ಪತ್ರ ಬರೆದಿದ್ದಾರೆ ಎಂಬ ವದಂತಿ! ಈಗ ಈ ಬಗ್ಗೆ ಸ್ವತಃ ಜಗಪತಿ ಬಾಬು ಅವರು ಮೌನ ಮುರಿದಿದ್ದಾರೆ.

ಆ ಯಶಸ್ವಿ ಜೋಡಿಯ ಹಿಂದಿತ್ತು ಒಂದು ಗಾಸಿಪ್!

ಟಾಲಿವುಡ್ ಇತಿಹಾಸದಲ್ಲಿ ಜಗಪತಿ ಬಾಬು ಮತ್ತು ಸೌಂದರ್ಯ ಅವರದ್ದು ಅತ್ಯಂತ ಯಶಸ್ವಿ ಮತ್ತು ಮೋಡಿ ಮಾಡುವ ಜೋಡಿ. ಇವರಿಬ್ಬರು ತೆರೆಯ ಮೇಲೆ ಬಂದರೆ ಸಾಕು, ಸಿನಿಮಾ ಹಿಟ್ ಎಂದು ಅಭಿಮಾನಿಗಳು ನಂಬುತ್ತಿದ್ದರು. ಇವರ ನಡುವಿನ ಅದ್ಭುತ ಕೆಮಿಸ್ಟ್ರಿ ನೋಡಿ ಅಂದು ಅನೇಕರು "ಇವರ ನಡುವೆ ಏನೋ ನಡೆಯುತ್ತಿದೆ" ಎಂದು ಮಾತನಾಡಿಕೊಳ್ಳುತ್ತಿದ್ದರು. ಇದೇ ಸಮಯದಲ್ಲಿ ಒಂದು ಗಾಳಿ ಸುದ್ದಿ ಹರಡಿತು - ಜಗಪತಿ ಬಾಬು ಅವರು ಪುಟಗಟ್ಟಲೆ "ಐ ಲವ್ ಯು" ಎಂದು ಬರೆದು ಸೌಂದರ್ಯಗೆ ಕಳುಹಿಸಿದ್ದಾರೆ ಎಂಬ ಮಾತು ಗಾಂಧಿನಗರದಿಂದ ಫಿಲ್ಮ್ ನಗರ್ ವರೆಗೆ ಹಬ್ಬಿತ್ತು.

ಜಗಪತಿ ಬಾಬು ಕೊಟ್ಟ ಕಟುವಾದ ಉತ್ತರ:

ಇತ್ತೀಚೆಗೆ ನಡೆದ ಒಂದು ಮಸಾಲೆಯುಕ್ತ ಸಂದರ್ಶನದಲ್ಲಿ ಈ ಹಳೆಯ ಪ್ರಶ್ನೆ ಜಗಪತಿ ಬಾಬು ಅವರ ಮುಂದೆ ಬಂತು. "ನೀವು ನಿಜವಾಗಿಯೂ ಸೌಂದರ್ಯಗೆ ಲವ್ ಲೆಟರ್ ಬರೆದಿದ್ದೀರಾ?" ಎಂದು ಕೇಳಿದಾಗ, ಜಗಪತಿ ಬಾಬು ಒಂದು ಕ್ಷಣ ನಕ್ಕು ನಂತರ ಗಂಭೀರವಾದರು. "ಅದೆಲ್ಲ ಶುದ್ಧ ಸುಳ್ಳು ಮತ್ತು ಅತ್ಯಂತ ಅಸಂಬದ್ಧ ಮಾತು!" ಎಂದು ವದಂತಿಗಳನ್ನು ನೇರವಾಗಿ ತಳ್ಳಿಹಾಕಿದರು. "ನಾನು ಈ ಚಿತ್ರರಂಗದಲ್ಲಿ 30 ವರ್ಷಗಳಿಂದ ಇದ್ದೇನೆ. ಅಂಥ ಕೆಲಸಗಳನ್ನು ಮಾಡುವುದು ನನಗೆ 'ಚೀಪ್' ಅನಿಸುತ್ತದೆ. ಇದೆಲ್ಲ ಯಾರೋ ಬೇಕಂತಲೇ ಸೃಷ್ಟಿಸಿದ ಕಟ್ಟುಕಥೆ" ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.

ಸೌಂದರ್ಯ ನೆನೆದು ಭಾವುಕರಾದ 'ಜಗ್ಗು ಭಾಯ್':

ಸೌಂದರ್ಯ ಬಗ್ಗೆ ಮಾತನಾಡುತ್ತಾ ಜಗಪತಿ ಬಾಬು ತುಂಬಾ ಭಾವುಕರಾದರು. "ಸೌಂದರ್ಯ ಕೇವಲ ಒಬ್ಬ ಅದ್ಭುತ ನಟಿಯಷ್ಟೇ ಆಗಿರಲಿಲ್ಲ, ಅವರೊಬ್ಬ ಚಿನ್ನದ ಹೃದಯ ಹೊಂದಿದ್ದ ಮನುಷ್ಯರು. ಅಂತಹ ಶುದ್ಧ ಗೆಳೆತನಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡುವುದು ತಪ್ಪು. ನಾನು ಮತ್ತು ಇಡೀ ಉದ್ಯಮ ಇಂದಿಗೂ ಅವರನ್ನು ಮಿಸ್ ಮಾಡಿಕೊಳ್ಳುತ್ತೇವೆ" ಎಂದು ತನ್ನ ಗೆಳತಿಯನ್ನು ಸ್ಮರಿಸಿದ್ದಾರೆ.

ಅಮರ ಈ ಸೌಂದರ್ಯ:

2004ರಲ್ಲಿ ನಡೆದ ಆ ಭೀಕರ ಹೆಲಿಕಾಪ್ಟರ್ ಅಪಘಾತ ಸೌಂದರ್ಯ ಅವರನ್ನು ನಮ್ಮಿಂದ ಕಿತ್ತುಕೊಂಡಿತು. ಆದರೆ 'ಆಪ್ತಮಿತ್ರ'ದಂತಹ ಸಿನಿಮಾಗಳ ಮೂಲಕ ಅವರು ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಈಗ ಜಗಪತಿ ಬಾಬು ಅವರು ನೀಡಿರುವ ಈ ಸ್ಪಷ್ಟನೆಯಿಂದ ದಶಕಗಳ ಕಾಲ ಅಭಿಮಾನಿಗಳನ್ನು ಕಾಡುತ್ತಿದ್ದ ಒಂದು ದೊಡ್ಡ ರಹಸ್ಯಕ್ಕೆ ಕೊನೆಗೂ ತೆರೆ ಬಿದ್ದಂತಾಗಿದೆ. ಸಿನಿಮಾ ಮಂದಿ ಎಷ್ಟೇ ಕಥೆ ಕಟ್ಟಿದರೂ, ಸೌಂದರ್ಯ ಮತ್ತು ಜಗಪತಿ ಬಾಬು ನಡುವೆ ಇದ್ದದ್ದು ಕೇವಲ ಗೌರವಯುತವಾದ ಸ್ನೇಹ ಮಾತ್ರ ಎಂಬುದು ಈಗ ಸಾಬೀತಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Shah Rukh ಬೇಡ ಬೇಡ ಅಂದ್ರು ಮಾತ್ರೆ ಕೊಟ್ಟ, ನಿದ್ದೆಯಿಂದ ಎಚ್ಚರವಾದಾಗ- ಆ ಘಟನೆ ನೆನೆದ ನಟಿ ಕಾಜೋಲ್
ನಿಮ್ಮ ಕಾಫಿ ಕಪ್ ರೆಡಿ ಮಾಡಿಟ್ಟುಕೊಳ್ಳಿ.. 'ಕಾಫಿ ವಿತ್ ಕರಣ್' ಮತ್ತೆ ಬರೋದಕ್ಕೆ ರೆಡಿ! ಈ ಬಾರಿ ಯಾರ ಸರದಿ?