
ಚೆನ್ನೈ(ಫೆ. 05) ಆದಾಯ ತೆರಗೆ ಇಲಾಖೆ ಅಧಿಕಾರಿಗಳ ಕಣ್ಣು ಪಕ್ಕದ ತಮಿಳುನಾಡು ಸಿನಿಮಾ ರಂಗದ ಮೇಲೆ ಬಿದ್ದಿದೆ. ಆದಾಯ ತೆರಿಗೆ ವಂಚನೆ ಆರೋಪದಲ್ಲಿ ತಮಿಳು ನಟ ವಿಜಯ್ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ವಿಜಯ್ ಅಭಿನಯದ 'ಬಿಗಿಲ್' ಸಿನಿಮಾದ ಸಂಬಂಧಪಟ್ಟಂತೆ ಲೆಕ್ಕಾಚಾರದಲ್ಲಿ ತೆರಿಗೆ ವಂಚನೆ ಆಗಿದೆ ಎನ್ನುವುದು ಆದಾಯ ತೆರಿಗೆ ಇಲಾಖೆ ಮೂಲಗಳು ಹೇಳುತ್ತಿರುವ ಮಾಹಿತಿ.
ಬಿಗಿಲ್ ಚಿತ್ರ ಪ್ರೊಡ್ರಯೂಸ್ ಮಾಡಿದ್ ದೆಜಿಎಸ್ ಸಿನಿಮಾಸ್ ಮೇಲೆ ದಾಳಿ ಮಾಡಿದ ಅಧಿಕಾರಿಗಳ ತಂಡ ನಟ ವಿಜಯ್ ಅವರನ್ನು ಪ್ರಶ್ನೆ ಮಾಡಲು ಕರೆದುಕೊಂಡು ಹೋಗಿದ್ದಾರೆ.
ಬಿಗಿಲ್ ಸಿನಿಮಾ ನಿರ್ಮಿಸಿದ್ದ ಎಜಿಎಸ್ ಪ್ರೊಡಕ್ಷನ್ ಸಂಸ್ಥೆ ಹಾಗೂ ಫೈನ್ಸಾಯಿರ್ ಅನ್ಬು ಚೆಲಿಯಾನ್ ಅವರ ಆಸ್ತಿ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ. ಒಟ್ಟು 20 ಕಡೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು ತಮಿಳುನಾಡಿನ ಚಿತ್ರೋದ್ಯಮದಲ್ಲಿ ಸಂಚಲನ ತಂದಿದೆ.
ರಶ್ಮಿಕಾ ಮನೆಯಲ್ಲಿ ಸಿಕ್ಕ ಆಸ್ತಿಗಳ ಲೆಕ್ಕಾಚಾರ
ಕಲ್ಪತಿ ಎಸ್.ಅಘೋರಂ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ದಾಳಿ ಕಾರಣಕ್ಕೆ ವಿಜಯ್ ಮುಂದಿನ ಸಿನಿಮಾ ಮಾಸ್ಟರ್ ಶೂಟಿಂಗ್ ಸಹ ಬಂದ್ ಆಗಿದೆ.
ಕಲ್ಪತಿ ಎಸ್.ಅಘೋರಂ, ಕಲ್ಪತಿ ಎಸ್.ಗಣೇಶ್, ಕಲ್ಪತಿ ಎಸ್.ಸುರೇಶ್ ಈ ಮೂವರು ಎಜಿಎಸ್ ಪ್ರೊಡಕ್ಷನ್ ಮಾಲೀಕರು. ಈ ಮೂವರು ಸೇರಿ ಬಿಗಿಲ್ ಸಿನಿಮಾ ನಿರ್ಮಿಸಿದ್ದರು. ಅಟ್ಲಿ ಈ ಚಿತ್ರ ನಿರ್ದೇಶಿಸಿದ್ದರು.
100 ಕೋಟಿಗೆ ಹೆಚ್ಚು ಬಂಡವಾಳ ಹಾಕಿ ಬಿಗಿಲ್ ಸಿನಿಮಾ ಮಾಡಲಾಗಿತ್ತು. ಹಾಕಿದ ಬಂಡವಾಳಕ್ಕಿಂತ ಹೆಚ್ಚು ಲಾಭವನ್ನು ಚಿತ್ರ ತಂದುಕೊಟ್ಟಿತ್ತು. ಗಳಿಕೆ ಹಾಗೂ ಸಂಭಾವನೆಯಲ್ಲಿ ವ್ಯತ್ಯಾಸವಾಗಿರಬಹುದು. ಈ ಅನುಮಾನದ ಮೇಲೆ ಐಟಿ ಅಧಿಕಾರಿಗಳು ವಿಚಾರಣೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಭಾರೀ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಮಾಧ್ಗಯಮಗಳಲ್ಲಿ ಹರಿದಾಡಿದ್ದೇ ವಿಜಯ್ ಅವರಿಗೆ ಸಂಕಷ್ಟ ತಂದಿತೋ ಗೊತ್ತಿಲ್ಲ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.