Huma Qureshi Shocking Statement: ಮಿತಿ ಮೀರಿ ಹೋಗಲ್ಲ, ಕ್ಯಾಮೆರಾ ಮುಂದೆ ಬೆ*ತ್ತಲಾಗಲ್ಲ; ವೈರಲ್ ಆಯ್ತು ಟಾಕ್ಸಿಕ್ ಬ್ಯೂಟಿ ಮಾತು!

Published : Jul 11, 2026, 05:09 PM IST
Huma Qureshi

ಸಾರಾಂಶ

ಹೇಳಿ ಕೇಳಿ ಇದು ಕಲರ್‌ಫುಲ್ ಲೋಕ. ಈ ಲೋಕದಲ್ಲಿ ಎಲ್ಲವೂ ರಂಗು ರಂಗಾಗಿರಬೇಕು. ಇಂತಹ ಪ್ರಪಂಚದಲ್ಲಿ ಭದ್ರವಾಗಿ ನೆಲೆಯೂರಬೇಕು ಅಂದ್ರೆ ಸಾಧ್ಯವಾದಷ್ಟು ಕಡಿಮೆ ಬಟ್ಟೆಯನ್ನು ಧರಿಸಬೇಕು, ಮೈ ಪ್ರದರ್ಶನಕ್ಕೆ ಇಡಬೇಕು ಅನ್ನುವ ಕಲ್ಪನೆ ಅನೇಕ ನಾಯಕಿಯರಲ್ಲಿದೆ. ಆದ್ರೆ ಹುಮಾ!?

ವೈರಲ್ ಆಗ್ತಿದೆ ಹುಮಾ ಖುರೇಶಿ ‘ಇತಿ ಮಿತಿ’ ಹೇಳಿಕೆ!

ಒಂದ್ ಕಡೆ ಟಾಕ್ಸಿಕ್ ಸಿನಿಮಾ ಅಬ್ಬರ ಹೆಚ್ಚಾಗಿದೆ. ಇದರ ಮಧ್ಯೆ ಹುಮಾ ಖುರೇಶಿ (Huma Qureshi) ಹೊಸದೊಂದು ಅಬ್ಬರ ಮಾಡುತ್ತಿದ್ದಾರೆ. ಹಣ, ಹೆಸರಿನ ಆಸೆಗೆ ನಾನು ಸಿಕ್ಕ ಸಿಕ್ಕಲ್ಲಿ ಕ್ಯಾಮೆರಾ ಮುಂದೆ ಬಟ್ಟೆ ಬಿಚ್ಚಲ್ಲ ಎಂದು ಹೇಳಿದ್ದಾರೆ. ನಟಿ ಹುಮಾ ಕೊಟ್ಟ ಹೇಳಿಕೆ ಈಗ ಬಣ್ಣದ ಜಗತ್ತಲ್ಲಿ ಸುತ್ತುತ್ತಿದ್ದು, ಹಾಟ್ ಬ್ಯೂಟಿಯರಿಗೆ ಮೆಣಸಿನಕಾಯಿ ಹೊಗೆ ಹಾಕಿದಂತಾಗಿದೆ. ಈ ಬಗ್ಗೆ ಇಂಟ್ರೆಸ್ಟಿಂಗ್ ಕಹಾನಿ ಇಲ್ಲಿದೆ.

ಕ್ಯಾಮರಾ ಎದುರು ಬೆ*ತ್ತಲಾಗಲಾರೆ.. ಟಾಕ್ಸಿಕ್ ಚೆಲುವೆ ಖಡಕ್ ಮಾತು..!

ಹುಮಾ ಖುರೇಶಿ ಹೇಳಿಕೆ.. ಹಾಟ್ ನಟಿಯರಿಗೆ ಮೆಣಸಿನಕಾಯಿ ಹೊಗೆ!

ಹುಮಾ ಖುರೇಷಿ ಬೀಟೌನ್ ನ ವರ್ಸಟೈಲ್ ನಟಿ, ಬಾಲಿವುಡ್‌ನ ರೂಪವತಿ. ಅಭಿನಯದ ವಿಚಾರದಲ್ಲಿ ಇವರದ್ದು ಎತ್ತಿದ ಕೈ. ಗ್ಯಾಂಗ್ಸ್ ಆಫ್ ವಾಸೇಪುರ್, ಏಕ್ ಥಿ ಡಾಯನ್, ಬದ್ಲಾಪುರ್, ಮಹಾರಾಣಿ-1-2 & 3 ಹೀಗೆ ಹುಮಾ ನಟಿಸಿರೋ ಸಿನಿಮಾಗಳು, ಪಾತ್ರಗಳು ಒಂದೆರಡಲ್ಲ. ಹಾರ್ಡ್ ಹಿಟ್ಟಿಂಗ್ ರೋಲ್​ಗಳನ್ನೇ ಮಾಡಿರೋ ಹುಮಾ ಅಭಿನಯ ಸಾಮರ್ಥ್ಯದ ಬಗ್ಗೆ ಯಾರಿಂದಲೂ ಪ್ರಶ್ನೆಮಾಡಲಾಗದು.. ಇಂತಹ ನಟಿ ನಾನು ಕ್ಯಾಮೆರಾ ಎದುರು ಎಂದೂ ಬೆ*ತ್ತಲೆ ಆಗಲ್ಲ ಎಂದಿದ್ದಾರೆ.

ಇತಿ ಮಿತಿ ಕ್ರಾಸ್​ಮಾಡಲ್... ಕ್ಯಾಮೆರಾ ಮುಂದೆ ಬೆತ್ತಲಾಗಲ್ಲ..!

ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ 'ಕಾಲಾ' ಚಿತ್ರದ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಬಂದಿದ್ದ ಹುಮಾ ಖುರೇಶಿ ಸದ್ಯ 'ಟಾಕ್ಸಿಕ್' ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಹೋದಲ್ಲಿ ಬಂದಲ್ಲಿ ಯಶ್ ಗುಣಗಾನ ಮಾಡುತ್ತಿದ್ದಾರೆ. 'ಟಾಕ್ಸಿಕ್' ಕುರಿತು ತುಂಬಾನೇ ಆತ್ಮವಿಶ್ವಾಸದ ಮಾತುಗಳನ್ನು ಕೂಡ ಆಡುತ್ತಿದ್ದಾರೆ. ಇದೇ ಸಮಯದಲ್ಲಿ 'ನನಗೆ ನನ್ನದೇ ಆದ ಇತಿ ಮಿತಿಗಳಿವೆ. ಜವಾಬ್ಧಾರಿಗಳಿವೆ. ಕ್ಯಾಮರಾ ಎದುರು ನಾನು ಯಾವತ್ತು ಬೆ*ತ್ತಲಾಗಲಾರೆ' ಎಂದಿದ್ಧಾರೆ.

ಹೇಳಿ ಕೇಳಿ ಇದು ಕಲರ್‌ಫುಲ್ ಲೋಕ. ಈ ಲೋಕದಲ್ಲಿ ಎಲ್ಲವೂ ರಂಗು ರಂಗಾಗಿರಬೇಕು. ಇಂತಹ ಪ್ರಪಂಚದಲ್ಲಿ ಭದ್ರವಾಗಿ ನೆಲೆಯೂರಬೇಕು ಅಂದ್ರೆ ಸಾಧ್ಯವಾದಷ್ಟು ಕಡಿಮೆ ಬಟ್ಟೆಯನ್ನು ಧರಿಸಬೇಕು, ಮೈ ಪ್ರದರ್ಶನಕ್ಕೆ ಇಡಬೇಕು ಅನ್ನುವ ಕಲ್ಪನೆ ಅನೇಕ ನಾಯಕಿಯರಲ್ಲಿದೆ. ಆದ್ರೆ ಹುಮಾ ಅಂತವರಿಗೆಲ್ಲಾ ಮೆಣಸಿನಕಾಯಿ ಹೊಗೆ ಹಾಕುವಂತಾ ಸ್ಟೇಟ್ಮೆಂಟ್ ಪಾಸ್ ಮಾಡಿ ಹಲವರ ವಿರೋಧ ಕಟ್ಟಿಕೊಂಡು, ಮತ್ತೆ ಹಲವರ ಮನಸ್ಸು ಗೆಲ್ಲುತ್ತಿದ್ದಾರೆ.

'ಸಿನಿಮಾ ಹಂಗಾಮ' ವಿಡಿಯೋ ನೋಡಿ…

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೊಸ ಹೆಂಡ್ತಿ ಜೊತೆ ಹಳೆ ಹೆಂಡ್ತಿನೂ ಕರ್ಕೊಂಡು 100 ಕೋಟಿ ಬಂಗ್ಲೆಗೆ 'ಬೆಂಗಳೂರು ಅಳಿಯ' ಆಮೀರ್​ ಶಿಫ್ಟ್​
ಪದೇ ಪದೇ ಸಂಸಾರದ ಗುಟ್ಟು ವ್ಯಾಧಿ ರಟ್ಟು ಮಾಡೋ ಪತ್ನಿ; No 1 ಹೀರೋಗೆ ಪಬ್ಲಿಕ್‌ನಲ್ಲೇ ಎಲ್ಲ ಹೇಳೋ ಹಾಗಾಯ್ತು