ಹಾಲಿವುಡ್ ಆಸ್ಕರ್ ವಿನ್ನರ್ ಟಾಮ್ ಹ್ಯಾಂಕ್ಸ್ ಹಾಗೂ ಪತ್ನಿ ರೀಟಾಳಿಗೆ ಕೊರೋನಾ ವೈರಸ್ ಸೋಂಕು. ಭಯವಿಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಅಂಟಿದ ರೋಗದ ಗುಟ್ಟು ಬಿಚ್ಚಿಟ್ಟ ತಾರಾ ದಂಪತಿ.
1984ರಲ್ಲಿ 'ಸ್ಪ್ಲ್ಯಾಶ್' ಚಿತ್ರದ ಮೂಲಕ ಹಾಲಿವುಡ್‌ನಲ್ಲಿ ವೃತ್ತಿ ಆರಂಭಿಸಿದ ಅಮೆರಿಕದ ಖ್ಯಾತ ನಟ ಹಾಗೂ ನಿರ್ದೇಶಕ ಟಾಮ್ ಹ್ಯಾಂಕ್ಸ್ ಹಾಗೂ ಪತ್ನಿ ಇತ್ತೀಚಿಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಇಬ್ಬರಿಗೂ ಜ್ವರ ಕಾಣಿಸಿಕೊಂಡ ಕಾರಣ ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದಾರೆ.
undefined
ಮಾರ್ಚ್ 11ರಂದು ಕೊರೋನಾ ಟೆಸ್ಟ್ ಮಾಡಿಸಿಕೊಂಡ ಜೋಡಿಯ ರಕ್ತ ಪರೀಕ್ಷಾ ವರದಿ ಬಂದಿದ್ದು, ಕೊರೋನಾ ಪಾಸಿಟಿವ್ ಎಂದು ಬಂದಿದೆ. ಇಡೀ ವಿಶ್ವವೇ ರೋಗಕ್ಕೆ ಹೆದರಿದರೂ, 63 ವರ್ಷದ ಈ ದಂಪತಿ ಮಾತ್ರ ಕಿಂಚಿತ್ತೂ ಈ ರೋಗಕ್ಕೆ ಬೆದರದೇ, ಧೈರ್ಯವಾಗಿ ಸಾಮಾಜಿಕ ಜಾಲತಾಣದಲ್ಲಿಯೇ ತಮಗೆ ಅಂಟಿದ ವೈರಸ್ ಬಗ್ಗೆ ಬಹಿರಂಗಗೊಳಿಸಿದ್ದಾರೆ.
ಕೈ ತೊಳೆಯೋದು ಭಾರತೀಯರಿಗೆ ಹೊಸದಲ್ಲ, ಕರೋನಾ ತಡೆಯುವ ಸ್ಯಾನಿಟೈಸರ್ ಹೇಗಿರಬೇಕು?
'ಆಸ್ಟ್ರೇಲಿಯಾದಿಂದ ಬಂದಾಗ ನನಗೆ ಹಾಗೂ ರೀಟಾಳಿಗೆ ಜ್ವರ ಕಾಣಿಸಿಕೊಂಡಿತ್ತು. ಸ್ವಲ್ಪ ಸುಸ್ತಾಗಿ ಚಳಿಯೂ ಆಗಿತ್ತು. ಎಲ್ಲೆಡೆ ಕೊರೋನಾ ಭೀತಿ ಇರುವುದರಿಂದ ನಾವೂ ಟೆಸ್ಟ್ ಮಾಡಿಸಿಕೊಂಡೆವು. ಪಾಸಿಟಿವ್ ಎಂದು ತಿಳಿದು ಬಂದಿದೆ. ವೈದ್ಯರ ಸಲಹೆ ಮೇರೆಗೆ isolated ಸ್ಥಳದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತೇವೆ. ಏನೇ ಇದ್ದರೂ ಅಪ್ಡೇಟ್ ಮಾಡುತ್ತೇನೆ. ಆರೋಗ್ಯ ಕಾಪಾಡಿಕೊಳ್ಳಿ,' ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.
ಯುರೋಪ್‌ನಿಂದ ಬರುವ ಪ್ರವಾಸಿಗರನ್ನು ಅಮೆರಿಕ ಮುಂದಿನ 30 ದಿನಗಳ ಕಾಲ ನಿಷೇಧಿಸಿದೆ.