
ನೆಪೊಟಿಸಂನಿಂದ ಕೆರಿಯರ್ ನಿರ್ಮಿಸಬಹುದು ಎಂದಾಗಿದ್ದರೆ ಅಮಿತಾಭ್ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್ ಹೃತಿಕ್ ರೋಷನ್‌ಗಿಂತ ದೊಡ್ಡ ಸ್ಟಾರ್ ಆಗಿರಬೇಕಿತ್ತು ಎಂದು ಬಾಲಿವುಡ್ ನಟ ವಿಶಾಲ್ ಕೋಟಿಯನ್ ಹೇಳಿದ್ದಾರೆ.
ನೆಪೊಟಿಸಂ ಚರ್ಚೆಯನ್ನು ಉದ್ದೇಶಪೂರ್ವಕವಾಗಿ ಹುಟ್ಟುಹಾಕಲಾಗಿದೆ. ಇದರಿಂದ ಯಾರಿಗೂ ಯಶಸ್ಸು ಸಿಗುವುದಿಲ್ಲ ಎಂದು ಅವರು ಹೇಳಿದ್ದಾರೆ. ನೆಪೊಟಿಸಂ ಇರೋದೇ ಆಗಿದ್ರೆ ಅಭಿಷೇಕದ ಬಚ್ಚನ್ ದೊಡ್ಡ ಸ್ಟಾರ್ ಆಗಿರಬೇಕಿತ್ತು, ಹೃತಿಕ್ ರೋಷನ್ ಅದಕ್ಕಿಂತ ಕೆಳಗಿರಬೇಕಿತ್ತು ಎಂದಿದ್ದಾರೆ.
'ಮುಂಬೈಗೆ ಬಂದಿಳಿಯುತ್ತಿದ್ದೇನೆ, ಧಮ್ ಇದ್ರೆ ತಡೀರಿ'
ಹಿಂದಿ ಚಿತ್ರ ರಂಗ 100 ವರ್ಷಗಳ ಸಮೀಪದಲ್ಲಿದೆ. ಆದರೆ ಈಗ ಹಠಾತ್ತನೆ ನೆಪೊಟಿಸಂ ಚರ್ಚೆ ಹೇಗೆ ಆರಂಭವಾಯ್ತು..? ಕಪೂರ್ ಮತ್ತು ಖಾನ್ ನಟರನ್ನು ವೀಕ್ಷಕರು ಮತ್ತು ಮಾಧ್ಯಮ ಬೆಳೆಸಿದೆ. ಹಾಗಾದರೆ ಈಗ ಚರ್ಚೆ ಏಕೆ..? ಪೃಥ್ವಿರಾಜ್ ಕಪೂರ್ 90 ವರ್ಷಗಳ ಹಿಂದೆ ಸಿನಿಮಾದಲ್ಲಿದ್ರು. ಕಪೂರ್ ಫ್ಯಾಮಿಲಿ ಭಾರತೀಯ ಚಿತ್ರರಂಗದಲ್ಲಿ ಮೊದಲ ಕುಟುಂಬ. ಆದರೆ ಈಗ ಒಮ್ಮೆಲೇ ಈ ಚರ್ಚೆ ಹೇಗೆ ಆರಂಭವಾಯ್ತು..? ಈ ಚರ್ಚೆ ಉದ್ದೇಶಪೂರ್ವಕವಾಗಿ ಹುಟ್ಟುಹಾಕಲಾಗಿದೆ ಎಂದೆನಿಸುತ್ತಿದೆ. ಬಹಳಷ್ಟು ಕಷ್ಟ ಪಟ್ಟು ಕೆಲಸ ಮಾಡುವ ಸ್ಟಾರ್ ಕಿಡ್‌ಗಳಿದ್ದಾರೆ ಎಂದಿದ್ದಾರೆ.
ಪಾಕ್ ಆಯ್ತು ಮುಂಬೈ; ಸಿಡುಕಿದ ಕಂಗನಾಗೆ ಉಲ್ಟಾ ಉತ್ತರ ಕೊಟ್ಟ ರೇಣುಕಾ!
ಟೈಗರ್ ಶ್ರಾಫ್ ಮಾಡುವಂತೆ ಬೇರೆ ಯಾರಾದರೂ ನಾನ್ ಸ್ಟಾರ್ ಕಿಡ್ ಮಾಡಲಿ ನೋಡೋಣ..? ನಾನು ಚಾಲೆಂಜ್ ಮಾಡುತ್ತೇನೆ. ಅಂತವರಿದ್ದರೆ ಅವರ ಕಾಲು ಮುಟ್ಟಿ ನಮಸ್ಕರಿಸಿ ಕೈ ಮುಗಿಯುತ್ತೇನೆ ಎಂದಿದ್ದಾರೆ.
2 ದಶಕಗಳಿಂದ ಚಿತ್ರರಂಗದಲ್ಲಿರುವ ನಟ ವಿಶಾಲ್ ಈ ಬಗ್ಗೆ ಮಾತನಾಡಿ, ಸ್ಟಾರ್ ಕಿಡ್‌ಗಳ ಶ್ರಮವನ್ನು ಇಲ್ಲ ಎಂಬುದು ಸರಿಯಲ್ಲ. ಅಭಿಷೇಕ್ ಬಚ್ಚನ್ ಬ್ರಿಲಿಯಂಟ್ ನಟ. ಆದರೆ ಅಮಿತಾಭ್‌ಗೆ ಹೋಲಿಸಿದರೆ ಅವರಿಗಿಂತ ಮೇಲಾಗಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.