ಜಗತ್ತೇ ಮೆಚ್ಚುವ ಸಿನಿಮಾ ನಿರ್ದೇಶಕ ಎಸ್‌ಎಸ್ ರಾಜಮೌಳಿಯ ಅಚ್ಚುಮೆಚ್ಚಿನ ಸಿನಿಮಾ ಯಾವುದು? ಸೀಕ್ರೆಟ್ ರಿವೀಲ್!

Published : Feb 12, 2026, 07:35 PM IST
SS Rajamouli

ಸಾರಾಂಶ

'ಬಾಹುಬಲಿ' ಹಾಗೂ 'ಆರ್.ಆರ್.ಆರ್' ಸೇರಿದಂತೆ ಪ್ರಪಂಚವೇ ಭಾರತದ ಕಡೆ ತಿರುಗಿ ನೋಡುವಂತೆ ಮಾಡಿದ ಧೀಮಂತ ನಿರ್ದೇಶಕ ಎಸ್‌ಎಸ್ ರಾಜಮೌಳಿಯವರು ಇಷ್ಟಪಡುವ ಸಿನಿಮಾ ಯಾವುದು? ಇಲ್ಲಿದೆ ನೋಡಿ ಜಕ್ಕಣ್ಣ ಖ್ಯಾತಿಯ ನಿರ್ದೇಶಕನ ಫೆವರೆಟ್ ಸಿನಿಮಾ ಲಿಸ್ಟ್..!

'ಬಾಹುಬಲಿ' ಸೃಷ್ಟಿಕರ್ತನ ಫೇವರಿಟ್ ಲಿಸ್ಟ್ ಇಲ್ಲಿದೆ!

ಎಸ್.ಎಸ್. ರಾಜಮೌಳಿ ಅಂದ್ರೆ ಸುಮ್ಮನೆನಾ? 'ಬಾಹುಬಲಿ' ಇರಲಿ, 'ಆರ್.ಆರ್.ಆರ್' ಇರಲಿ, ಪ್ರಪಂಚವನ್ನೇ ಭಾರತದ ಕಡೆ ತಿರುಗಿ ನೋಡುವಂತೆ ಮಾಡಿದ ಧೀಮಂತ ನಿರ್ದೇಶಕ ಇವರು. ಇಂದು ಇಡೀ ಜಗತ್ತು ರಾಜಮೌಳಿ ಅವರ ಸಿನಿಮಾಗಳನ್ನು ನೋಡಿ ಬೆರಗಾಗುತ್ತಿದೆ, ಅನೇಕ ಯುವ ನಿರ್ದೇಶಕರು ಇವರನ್ನು ತಮ್ಮ ರೋಲ್ ಮಾಡೆಲ್ ಎಂದು ಪರಿಗಣಿಸಿದ್ದಾರೆ. ಆದರೆ, ಅಂತಹ ಬೃಹತ್ ಸಿನೆಮಾಗಳನ್ನು ಸೃಷ್ಟಿಸುವ ಮಾಸ್ಟರ್ ಮೈಂಡ್ ರಾಜಮೌಳಿ ಅವರಿಗೆ ಸ್ಫೂರ್ತಿ ನೀಡಿದ ಸಿನಿಮಾಗಳು ಯಾವುವು? ಅವರು ಯಾವ ಚಿತ್ರಗಳನ್ನು ನೋಡಿ ಸಿನೆಮಾ ರಂಗಕ್ಕೆ ಬಂದರು? ರಾಜಮೌಳಿ ಅವರ ಫೇವರಿಟ್ ಲಿಸ್ಟ್ ಹೇಗಿದೆ ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಭಾರತದ ನಂಬರ್ 1 ನಿರ್ದೇಶಕ ರಾಜಮೌಳಿ ಇಷ್ಟಪಡುವ ಸಿನಿಮಾಗಳು ಯಾವುವು?

ರಾಜಮೌಳಿ ಅವರೇ ಹೇಳಿಕೊಂಡಿರುವಂತೆ ಅವರು ಸಿನೆಮಾ ಹುಚ್ಚು ಇರುವ ವ್ಯಕ್ತಿ. ಸಮಯ ಸಿಕ್ಕಾಗಲೆಲ್ಲಾ ಅವರು ಒಳ್ಳೆಯ ಸಿನಿಮಾಗಳನ್ನು ಹುಡುಕಿ ನೋಡುತ್ತಾರೆ. ಭಾರಧ್ವಜ ರಂಗನ್ ಅವರಿಗೆ ನೀಡಿದ ಸಂದರ್ಶನದಲ್ಲಿ ರಾಜಮೌಳಿ ಅವರು ತಮ್ಮ ಆಲ್-ಟೈಮ್ ಫೇವರಿಟ್ ಸಿನಿಮಾ 'ಬೆನ್ ಹರ್' (Ben-Hur) ಎಂದು ಹೇಳಿದ್ದಾರೆ. 1959 ರಲ್ಲಿ ಬಿಡುಗಡೆಯಾದ ಈ ಹಾಲಿವುಡ್ ಎಪಿಕ್ ಸಿನಿಮಾದ ಆಕ್ಷನ್ ದೃಶ್ಯಗಳು, ಆ ಕಾಲದ ಮೇಕಿಂಗ್ ಮತ್ತು ಸಿನಿಮಾದಲ್ಲಿದ್ದ ರಾಜಕೀಯ ಸಂಚುಗಳು ರಾಜಮೌಳಿ ಅವರಿಗೆ ತುಂಬಾ ಇಷ್ಟವಂತೆ. ಈ ಚಿತ್ರದ ಪ್ರಭಾವ ಅವರ 'ಬಾಹುಬಲಿ'ಯಂತಹ ಸಿನಿಮಾಗಳ ಮೇಲೂ ಇರುವುದನ್ನು ನಾವು ಗಮನಿಸಬಹುದು.

ಇನ್ನು ಭಾರತೀಯ ಸಿನಿಮಾಗಳ ವಿಷಯಕ್ಕೆ ಬಂದರೆ, ತೆಲುಗಿನ ಕಲ್ಟ್ ಕ್ಲಾಸಿಕ್ 'ಮಾಯಾಬಜಾರ್' (1957) ಅಂದರೆ ರಾಜಮೌಳಿಗೆ ಎಲ್ಲಿಲ್ಲದ ಪ್ರೀತಿ. ಕೆ.ವಿ. ರೆಡ್ಡಿ ನಿರ್ದೇಶನದ ಈ ಸಿನಿಮಾದ ಫ್ಯಾಂಟಸಿ ಅಂಶಗಳು ಮತ್ತು ಪಾತ್ರಗಳ ವಿನ್ಯಾಸ ಅವರನ್ನು ಸದಾ ಮಂತ್ರಮುಗ್ಧರನ್ನಾಗಿಸುತ್ತದೆಯಂತೆ. ಇವುಗಳ ಹೊರತಾಗಿ, ಸ್ಟಿಫನ್ ಸ್ಪೀಲ್​​ಬರ್ಗ್ ಅವರ 'ಇಂಡಿಯಾನಾ ಜೋನ್ಸ್' ಸರಣಿ ಮತ್ತು ಆರಂಭಿಕ 'ಸ್ಪೈಡರ್ ಮ್ಯಾನ್' ಸಿನಿಮಾಗಳು ಅವರನ್ನು ಸಿನೆಮಾ ಲೋಕದತ್ತ ಸೆಳೆದವಂತೆ. ಸದ್ಯ ಮಹೇಶ್ ಬಾಬು ಅವರೊಂದಿಗೆ ಮಾಡುತ್ತಿರುವ ಹೊಸ ಸಿನಿಮಾ ಕೂಡ 'ಇಂಡಿಯಾನಾ ಜೋನ್ಸ್' ಶೈಲಿಯ ಗ್ಲೋಬ್-ಟ್ರಾಟಿಂಗ್ ಅಡ್ವೆಂಚರ್ ಕಥೆಯನ್ನು ಹೊಂದಿರಲಿದೆ ಎಂದು ಅವರು ಈಗಾಗಲೇ ಸುಳಿವು ನೀಡಿದ್ದಾರೆ.

ಲಿಸ್ಟ್‌ನಲ್ಲಿ ಯಾವ ಸಿನಿಮಾಗಳಿವೆ?

ರಾಜಮೌಳಿ ಕೇವಲ ಸಿನಿಮಾಗಳಷ್ಟೇ ಅಲ್ಲ, ಇತ್ತೀಚಿನ ವೆಬ್ ಸರಣಿಗಳನ್ನೂ ಸಖತ್ ಇಷ್ಟಪಟ್ಟು ನೋಡುತ್ತಾರೆ. ಅವರಿಗೆ 'ಗೇಮ್ ಆಫ್ ಥ್ರೋನ್ಸ್' (Game of Thrones), 'ಬ್ರೇಕಿಂಗ್ ಬ್ಯಾಡ್' ಮತ್ತು 'ನಾರ್ಕೊಸ್' ಸರಣಿಗಳು ತುಂಬಾ ಇಷ್ಟ. ಕಾಲೇಜು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, 'ಗೇಮ್ ಆಫ್ ಥ್ರೋನ್ಸ್' ಮತ್ತು 'ಬ್ರೇಕಿಂಗ್ ಬ್ಯಾಡ್' ಎರಡೂ ಸರಣಿಗಳ ಕೊನೆಯ ಸೀಸನ್ ತಮಗೆ ನಿರಾಸೆ ಮೂಡಿಸಿತು ಎಂದು ಹೇಳಿದ್ದಾರೆ. ಆದರೂ ಈ ಎರಡರಲ್ಲಿ 'ಗೇಮ್ ಆಫ್ ಥ್ರೋನ್ಸ್' ಅವರ ಫೇವರಿಟ್ ಅಂತೆ.

ವಿಶೇಷವೆಂದರೆ, 'ಬಾಹುಬಲಿ 2' ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಬಾಹುಬಲಿ ಮತ್ತು ಬಲ್ಲಾಳ ದೇವನ ನಡುವಿನ ಯುದ್ಧವನ್ನು 'ಗೇಮ್ ಆಫ್ ಥ್ರೋನ್ಸ್'ನ ಪ್ರಸಿದ್ಧ 'ಬ್ಯಾಟಲ್ ಆಫ್ ದಿ ಬಾರ್ಸರ್ಡ್ಸ್' (Battle of the Bastards) ಎಪಿಸೋಡ್‌ನಂತೆ ವೈಭವೀಕರಿಸುವ ಆಸೆ ಅವರಿಗೆ ಇತ್ತಂತೆ. ಅದನ್ನು ಆಧರಿಸಿ ಬರವಣಿಗೆ ಕೂಡ ಮಾಡಿದ್ದರು, ಆದರೆ ಕಥೆಯ ಓಟಕ್ಕೆ ತಕ್ಕಂತೆ ನಂತರದ ದಿನಗಳಲ್ಲಿ ಬದಲಾವಣೆ ಮಾಡಿಕೊಂಡಿದ್ದಾಗಿ ಅವರು ಹೇಳಿದ್ದಾರೆ. ಒಟ್ಟಾರೆಯಾಗಿ, ರಾಜಮೌಳಿ ಅವರ ಈ ಇಷ್ಟದ ಪಟ್ಟಿ ಗಮನಿಸಿದರೆ, ಅವರಿಗೆ ಇತಿಹಾಸ, ಪುರಾಣ ಮತ್ತು ಸಾಹಸಮಯ ಕಥೆಗಳೆಂದರೆ ಎಷ್ಟು ಪ್ರೀತಿ ಎಂಬುದು ಸ್ಪಷ್ಟವಾಗುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆ ಸ್ಟಾರ್ ನಟ ನನ್ನ ಜೀವನವನ್ನೇ ಹಾಳು ಮಾಡ್ಬಿಟ್ಟ; ಬೊಬ್ಬೆ ಹಾಕಿದ 'ಅಣ್ಣಯ್ಯ' ಚಿತ್ರದ ಗಯ್ಯಾಳಿ ಅರುಣಾ ಇರಾನಿ!
ಇಡೀ ಜಗತ್ತು ಕಾಯುತ್ತಿರುವ ರಿಷಬ್ ಶೆಟ್ಟಿ ಮುಂದಿನ ಸಿನಿಮಾದ ಮುಹೂರ್ತಕ್ಕೆ ದಿನಾಂಕ & ಸ್ಥಳ ಎರಡೂ ಫಿಕ್ಸ್!